ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೃಷ್ಟಿ ಮತ್ತು ಕಣ್ಣು

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದೃಷ್ಟಿ ಮತ್ತು ಕಣ್ಣು

ದೇಹದ ನಾಲ್ಕು ಬಗೆಯ ವಿಶಿಷ್ಟ ಇಂದ್ರಿಯಗಳಲ್ಲಿ (ಸ್ಪೆಷಲ್ ಸೆನ್ಸ್) ಒಂದಾದ ಕಣ್ಣಿನ ಕ್ರಿಯೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ವಸ್ತುಗಳ ಆಕಾರ, ಗಾತ್ರ, ವರ್ಣ, ಮತ್ತು ಅವುಗಳ ದೂರ ಹಾಗು ಅನುಭವ (ವಿಷನ್), ಇಷ್ಟೇ ಅಲ್ಲ. ಏಕೆಂದರೆ ದೃಷ್ಟಿಯೆಂಬುದು ಕೇವಲ ಕ್ರಿಯೆಯಿಂದಲೇ ಫಲಿಸುವ ಜ್ಞಾನವಲ್ಲ ಕಣ್ಣುಗಳಲ್ಲಿ ಬಾಹ್ಯವಸ್ತುವಿನ ಸ್ಪಷ್ಟ ರೂಪುಗೊಳ್ಳುವುದು ತಿಳಿದಿದೆ. ಬಾಹ್ಯವಸ್ತುವಿನಿಂದ ತಕ್ಕಷ್ಟು ಪ್ರಕಾಶ ಉದ್ಭವವಾದ ಅಥವಾ ಪ್ರತಿಫಲಿಸಿದ ಬೆಳಕಿನ ಕಿರಣಗಳು ಕಣ್ಣಿನೊಳಗೆ ಹೋಗುವಾಗ ವಕ್ರೀಕರಣಗೊಂಡು (ರಿಫಾಕ್ಷನ್) ಅಕ್ಷಿಪಟಲದ (ರೆಟಿನ) ಮೇಲೆ ಸ್ಪಷ್ಟ ಪ್ರತಿಬಿಂಬ ಮೂಡುತ್ತದೆ ಎಂಬುದು ಸಾಮಾನ್ಯ ವಿವರಣೆ. ಕಣ್ಣುಗಳಿಂದಲೇ ಅನುಭವಕ್ಕೆ ಬರುವ ವಿಶಿಷ್ಟ ಅಲೆಯುದ್ಧದ ಕಾಂತ ಶಕ್ತಿಯ ಅಲೆಗಳನ್ನು ಬೆಳಕು ಎಂದು ಕರೆಯಲಾಗಿದೆ. ವಸ್ತುವಿನಿಂದ ಅಥವಾ ವಸ್ತು ಪ್ರತಿಫಲಿಸಲಿಲ್ಲ ವಿದ್ಯುತ್‍ಕಾಂತ ಶಕ್ತಿಯು ಬಹು ವ್ಯಾಪಕ. ಅವುಗಳಲ್ಲಿ ಸುಮಾರು 380 m( ನಿಂದ 720 m( (m( = 0.00000000 1ಮೀ = 10-9ಮೀ.) ಅಲೆಯುದ್ಧದ ಅಲೆಗಳು ಮಾತ್ರ ಕಣ್ಣಿನಲ್ಲಿ ಪರಿಣಾಮವನ್ನು ಉಂಟುಮಾಡುತ್ತವೆ. ಇವೇ ಬೆಳಕಿನ ಅಲೆಗಳು ದೃಷ್ಟಿಗೆ ಆಗತ್ಯವಾದವು. ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಚರ್ಚಿಸಿದೆ :

1. ದೃಷ್ಟಿಯ ವೈಜ್ಞಾನಿಕ ವಿಶ್ಲೇಷಣೆ. 2. ವರ್ಣದೃಷ್ಟಿ. 3. ದೃಷ್ಟಿ ವೈಪರೀತ್ಯಗಳು. 4. ದೃಷ್ಟಿ ದೋಷಗಳು. 5. ದೃಷ್ಟಿಮಾಪನ. 6. ಕಣ್ಣಿನ ಬಗೆಗಿನ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು 7. ಕಣ್ಣಿನ ಚಿಕಿತ್ಸೆಯಲ್ಲಿ ಆಧುನಿಕ ವಿಧಾನಗಳು 8. ಕಣ್ಣಿನ ಕೆಲವು ಸಾಮಾನ್ಯ ಹಾಗೂ ಪ್ರಮುಖ ಕಾಯಿಲೆಗಳು

1. ದೃಷ್ಟಿಯ ವೈಜ್ಞಾನಿಕ ವಿಶ್ಲೇಷಣೆ : ಅಕ್ಷಿಪಟಲದ ಮೇಲೆ ಮೂಡಿದ ಪ್ರತಿಬಿಂಬ ದೃಷ್ಟಿ ನರಗಳನ್ನು ಪ್ರಚೋದಿಸುತ್ತದೆ. ಈ ಪ್ರಚೋದನೆ ಮಿದುಳಿನ ವಿಶಿಷ್ಟ ಭಾಗಕ್ಕೆ ಒಯ್ಯಲ್ಪಡುತ್ತದೆ. ಆಲ್ಲಿ ಆಗುವ ಪರಿಣಾಮದಿಂದ ದೃಷ್ಟಿಯ ಅನುಭವ ಉಂಟಾಗುತ್ತದೆ. ಅಂದರೆ ನೇತ್ರ ಸಂಬಂಧಿತ, ನರಸಂಬಂಧಿತ ಮತ್ತು ಮನಸಂಬಂಧಿತ ಸೀಮೆಗಳಲೆಲ್ಲ ಸಂವೇದನೆ ಹಾದು ಒಟ್ಟಿನಲ್ಲಿ ಉಂಟುಮಾಡುವ ಪರಿಣಾಮವೇ ದೃಷ್ಟಿ ಎನ್ನಬಹುದು. ಈ ಮೂರು ಸೀಮೆಗಳಲ್ಲಿ ಯಾವುದು ನಿಷ್ಕ್ರಿಯೆಗೊಂಡರೂ ದೃಷ್ಟಿ ನಾಶವಾಗುತ್ತದೆ. ದೃಷ್ಟಿ ಕ್ರಿಯೆಯನ್ನು ಈ ರೀತಿ ವಿವರಿಸಿರುವುದು ಕೂಡ ಸರಿ ಎಂದು ಹೇಳುವ ಹಾಗೆ ಇಲ್ಲ. ಕಣ್ಣು ಗುಡ್ಡೆಯ ಮೇಲೆ ಗುದ್ದಿದರೆ ಏನೋ ಕಂಡಂತೆ ಭಾಸವಾಗುವುದು ಬಹುಜನರ ಅನುಭವ, ರೋಗ, ಅತಿಬಳಲಿಕೆ, ಕೆಲವು ಔಷಧಿಗಳ ಸೇವನೆ ಈ ಸ್ಥಿತಿಯಲ್ಲಿ ಮತ್ತು ಕನಸು ಹಾಗೂ ಮಾನಸಿಕ ಕಲ್ಪನೆಗಳಲ್ಲಿ ವಸ್ತುಗಳನ್ನು ನೋಟಗಳನ್ನು ನೋಡಿದ ಅನುಭವ ಕೂಡ ಸಾಮಾನ್ಯ. ಅದರಿಂದ ಪರಿಸರದಲ್ಲಿ ಬೆಳೆಯುವ ಯಾವುದೇ ವಸ್ತು ಅಥವಾ ನೋಟ ದೃಷ್ಟಿಗೆ ಅಗತ್ಯವಲ್ಲ ಎನ್ನುವುದು, ವ್ಯಕ್ತಿ, ಕಗ್ಗತ್ತಲು, ನೀಲಿ ಆಕಾಶ ಇವುಗಳಲ್ಲಿ ಏನೋ ಕಂಡಂತಾಗುವುದೂ ಹೀಗೇ. ಬಹುಶಃ ದೃಷ್ಟಿಯ ಮಾನಸಿಕ ಅಂಶ ಸಾಮಾನ್ಯವಾಗಿ ಯಾವಾಗಲೂ ತನ್ನ ಕ್ರಿಯೆಯಲ್ಲಿ ಉದ್ಯುತ್ತವಾಗಿದ್ದು ಇದರ ಮೇಲೆ ಬೆಳಕಿನ ಪ್ರತಿಕ್ರಿಯೆಯಾಗಿ ಕಣ್ಣಿನಿಂದ ಪ್ರಾರಂಭವಾದ ನರಪ್ರಚೋದನೆಯ ಪರಿಣಾಮ ಹೇರಲ್ಪಡುವುದೆಂದು ತೋರುತ್ತದೆ. ತತ್ಪಲವಾಗಿ ನೋಡಿದ ವಸ್ತುವಿನ ವರ್ಣದೂರ ಗಾತ್ರ ಇತ್ಯಾದಿ ವೈಶಿಷ್ಟ್ಯಗಳು ಮನಸ್ಸಿನಲ್ಲಿ ಮೂಡಿ ಬಾಹ್ಯಲೋಕದಲ್ಲಿ ಆ ವಸ್ತುವನ್ನು ಕಂಡಂತಾಗುತ್ತದೆ. ದೃಷ್ಟಿಯಿಂದ ತಪಶೀಲಾಗಿ ಹಾಗೂ ವಿವರವಾಗಿ ಹಾಗೂ ವ್ಯಾಪಕವಾಗಿ ಒದಗುವಷ್ಟು ಜ್ಞಾನ ಬೇರೆ ರೀತಿಯಿಂದ ಒದಗುವುದಿಲ್ಲ. ಆದ್ದರಿಂದಲೇ ಅಂಧತ್ವದಿಂದ ಪರಿಣಮಿಸಿದ ಅಸಹಾಯತೆ ಶ್ರವಣನಾಶ ಇಲ್ಲವೇ ಇನ್ನೂ ಯಾವುದಾದರೂ ಸಂವೇದನೆಯ ನಾಶದಿಂದ ಪರಿಣಮಿಸುವ ಅಸಹಾಯತೆಗಿಂತ ಬಹುತೀವ್ರ. ಮಾನವ, ಮಂಗ, ಪಕ್ಷಿ-ಇವುಗಳಲ್ಲಿ ದೃಷ್ಟಿಗೆ ಮೀಸಲಾಗಿರುವ ಮತ್ತು ದೃಷ್ಟಿ ಆಂಗಕ್ಕೆ ಸಂಬಂಧಿಸಿರುವ ಮಿದುಳಿನ ಭಾಗ ಆಗಾಧವಾಗಿದ್ದು ದೃಷ್ಟಿ ಒಂದು ಮುಖ್ಯ ಸಂವೇದನೆ ಆಗಿದೆ. ಆದ್ದರಿಂದ ದೃಷ್ಟಿನಾಶದ ಪರಿಣಾಮ ಇವುಗಳಲ್ಲಿ ಮಿಕ್ಕ ಪ್ರಾಣಿಗಳಿಗಿಂತ ಹೆಚ್ಚು.

ಗೋಚರವಾಗುವ ಪರಿಸರ ಪ್ರತಿಕಣ್ಣಿನಲ್ಲಿಯೂ ಭೌತನಿಯಮಗಳಿಗೆ ಅನುಸಾರವಾಗಿಯೇ ಪ್ರತಿಬಿಂಬಿಸಲ್ಪಡುತ್ತದೆ. ಪ್ರತಿಬಿಂಬ ತಲೆಕೆಳಗಾಗಿಯೂ ದೂರಕ್ಕೆ ತಕ್ಕಂತೆ ಸಣ್ಣದಾಗಿಯೂ ಇರುವುದು. ಬಾಹ್ಯವಸ್ತುವಿನಿಂದ ಪ್ರಸಾರವಾದ ಬೆಳಕಿನ ಕಿರಣಗಳು ಕಣ್ಣಿನ ಮುಂಭಾಗದ ಪಾರದರ್ಶಕ ಪಟಲದಲ್ಲಿ (ಕಾರ್ನಿಯ) ಹಾಯುವಾಗ ಬಹುವಾಗಿ ವಕ್ರೀಕರಿಸಲ್ಪಡುತ್ತವೆ. ಇವು ಮುಂದುವರಿದು ಪಾಪೆಯ (ಪ್ಯೂಪಿಲ್) ಮೂಲಕ ಒಳಹಾದು ಕಣ್ಣಿನ ಮಸೂರವನ್ನು ತಲಪುವಾಗ ಮಸೂರದ ಆಗಿನ ಗಾತ್ರಕ್ಕೆ ತಕ್ಕಂತೆ ಇನ್ನಷ್ಟು ವಕ್ರೀಕೃತವಾಗಿ ಅಂತು ಅಕ್ಷಿಪಟಲದ ಮೇಲೆ ನಾಭಿಸ್ಥವಾಗುತ್ತದೆ. ಇದನ್ನು ಕಣ್ಣಿನ ವಕ್ರೀಕರಣ ಕ್ರಿಯೆ ಬಂದೂ ಅದರ ಸಾಮಥ್ರ್ಯ 58 ಡಯಾಪ್ಪರಗಳಷ್ಟಿದೆ (+58 ಜ) ಎಂದೂ ಹೇಳುತ್ತೇವೆ. ಮಸೂರದ ನಾಭೀದೂರ 1/14 ಮೀಟರಿನಷ್ಟಿದ್ದರೆ ಅದರ ಸಾಮಥ್ರ್ಯ 14 ಜ ; 1/33 ಮೀಟರಿನಷ್ಟಿದ್ದರೆ 22 ಜ ; 2 ಮೀಟರುಗಳಷ್ಟಿದ್ದರೆ 0.5 ಜ ಹೀಗೆ ಮಸೂರದ ವಕ್ರೀಕರಣ ಸಾಮಥ್ರ್ಯವನ್ನು ನೇತ್ರತಜ್ಞರು ನಿರೂಪಿಸಿರುವುದು ವಾಡಿಕೆ. ಇಂಥ ನಿರೂಪಣೆಯಲ್ಲಿ ನಿಮ್ನ ಮಸೂರಗಳಿಗೆ - ಚಿಹ್ನೆಯನ್ನೂ ಪೀನ ಮಸೂರಗಳಿಗೆ + ಚಿಹ್ನೆಯನ್ನೂ ಬಳಸುವುದು ಸಂಪ್ರದಾಯ. ಕಣ್ಣಿನ ಒಟ್ಟೂ +58 ಜ ವಕ್ರೀಕರಣ ಸಾಮಥ್ರ್ಯದಲ್ಲಿ +45 ಜ ಗಳಷ್ಟು ಸಾಮಥ್ರ್ಯ ಪಾರದರ್ಶಕ ಪಟಲದ್ದೇ. ಅಂದರೆ ವಕ್ರೀಕರಣ ಬಹುವಾಗಿ ಪಾರದರ್ಶಕ ಪಟಲದಿಂದಲೇ ಎನ್ನುವುದು ವ್ಯಕ್ತ. ವಾಸ್ತವವಾಗಿ 20 ಅಡಿಗಳಿಗಿಂತಲೂ (ಇದನ್ನು ದೃಷ್ಟಿಕ್ರಿಯೆಯಲ್ಲಿ ಅನಂತರದೂರ ಎಂದು ಗಣಿಸಲಾಗಿದೆ) ಹೆಚ್ಚು ದೂರದಿಂದ ಪ್ರಸಾರವಾದ ಬೆಳಕಿನ ಕಿರಣಗಳು ಪಾರದರ್ಶಕ ಪಟಲದ ವಕ್ರೀಕರಣದಿಂದಲೇ ಅಕ್ಷಿಪಟಲದ ಮೇಲೆ ನಾಭಿಸ್ಥವಾಗುತ್ತವೆ. ಇನ್ನೂ ಹತ್ತಿರದ ಬೆಳಕಿನ ಕಿರಣಗಳು ಅಕ್ಷಿಪಟಲದ ಮೇಲೆ ನಾಭಿಸ್ಥವಾಗಬೇಕಾದರೆ, ಅವುಗಳ ಉಗಮ ದೂರ ಕಡಿಮೆ ಆದಂತೆ ಹೆಚ್ಚು ವಕ್ರೀಯವಾಗಬೇಕು. ಇಂಥ ಅಗತ್ಯ ವಕ್ರೀಕರಣ ಮಸೂರದ ವಿಶಿಷ್ಟ ಕ್ರಿಯೆ. ತೀರ ಸಮೀಪ ದೃಷ್ಟಿಯಲ್ಲಿ (ಸುಮಾರು 3-5 ಅಂಗುಲ) ಮಸೂರದ ಗರಿಷ್ಠ ವಕ್ರೀಕರಣ ಸಾಮಥ್ರ್ಯ ವ್ಯಕ್ತವಾಗಿ ಅದು + 13 ಜ ಗಳಷ್ಟಿರುತ್ತದೆ. ಕಣ್ಣಿನ ಮಸೂರ ಮೆದುವಾಗಿದ್ದು ಕುಗ್ಗುವ ಮತ್ತು ಹಿಗ್ಗುವ ಗುಣವನ್ನು ಹೊಂದಿದೆ. ಅದರ ಅಂಚಿನ ಸುತ್ತ ತಂತುಗಳು ಅದನ್ನು ಬಿಗಿಯಾಗಿ ಎಳೆದು ಸ್ವಲ್ಪ ಬದಿಯಲ್ಲಿ ಕಣ್ಣಿನ ಭಿತ್ತಿಗೆ ಬಂಧಿಸಿವೆ. ಆದ್ದರಿಂದ ಮಸೂರ ತೆಳ್ಳಗಿದ್ದು ಅದರ ವಕ್ರೀಕರಣ ಸಾಮಥ್ರ್ಯ ವ್ಯಕ್ತವಾಗುವಂತಿರುವುದಿಲ್ಲ. ಸಮೀಪ ದೃಷ್ಟಿಯಲ್ಲಿ ಇಂಥ ಸಾಮಥ್ರ್ಯ ವ್ಯಕ್ತವಾಗಬೇಕಾಗುತ್ತದೆ. ಮಸೂರದ ಗಾತ್ರ ಹೆಚ್ಚುವುದರಿಂದ ಇದು ಸಾಧ್ಯ. ಬಿಗಿಹಿಡಿದಿರುವ ತಂತುಗಳು ಸಡಿಲವಾಗಿ ಮಸೂರದ ಮಧ್ಯ ಪ್ರದೇಶ ಉಬ್ಬಿಕೊಂಡು ಮಸೂರದ ವಕ್ರೀಕರಣ ಸಾಮಥ್ರ್ಯ ಹೆಚ್ಚಾಗುತ್ತದೆ. ಹೀಗಾಗುವುದು ನಿಜವೆಂದು ಅನೇಕ ಪ್ರಯೋಗಗಳಿಂದ ತೋರಿಸಲಾಗಿದೆ. ಕಣ್ಣು ಭಿತ್ತಿಗೆ ತಂತುಗಳು ಸುತ್ತಲೂ ಜಂಟಿಸುವ ವರ್ತುಲಾಕಾರವಾದ ವಯಲದಲ್ಲಿ ಸೀಲಿಯರಿ ನಾಮಾಂಕಿತ ಅನೈಚ್ಛಿತ ಸ್ನಾಯು ಪಸರಿಸಿದೆ. ಇದರ ಸಂಕೋಚನದಿಂದ ತಂತುಬಂಧನ ಪ್ರದೇಶ ಮುಂದಕ್ಕೆ ಎಳೆಯಲ್ಪಡುತ್ತದೆ. ತತ್ಫಲವಾಗಿ ತಂತುಗಳು ಸಡಿಲವಾಗುತ್ತವೆ. ಎಷ್ಟು ಸಡಿಲವಾಗಿ ಮಸೂರ ಎಷ್ಟು ದಪ್ಪವಾಗಬೇಕು ಅರ್ಥಾತ್ ಅದರ ವಕ್ರೀಕರಣ ಸಾಮಥ್ರ್ಯ ಎಷ್ಟು ವ್ಯಕ್ತವಾಗಬೇಕು ಎನ್ನುವುದುನ್ನು ಸೀಲಿಯರಿ ಸ್ನಾಯುವಿನ ಸಂಕೋಚನವನ್ನು ಅವಲಂಬಿಸಿದೆ. ಆಗತ್ಯವಾದಷ್ಟೇ ಸಂಕೋಚನವಾಗುವಂತೆ ಅನೈಚ್ಚಿಕವಾದ ನರನಿಯಂತ್ರಣದ ಏರ್ಪಾಡು ಇದೆ. ದೃಷ್ಟಿಯನ್ನು ಪುನಃ ದೂರವಾದ ವಸ್ತುವಿನ ಕಡೆಗೆ ಹೊರಳಸಿದರೆ ಸೀಲಿಯರಿ ಸ್ನಾಯು ಅಗತ್ಯವಾದಷ್ಟು ವ್ಯಾಕೋಚಿಸಿ ವಸ್ತುವಿನ ಪ್ರತಿಬಿಂಬ ಅಕ್ಷಿಪಟಲದ ಮೇಲೆ ಸ್ಪಷ್ಟವಾಗಿ ಮೂಡುವಂತೆ ಮಾಡುತ್ತದೆ. ಸೀಲಿಯರಿ ಸ್ನಾಯುವಿನ ಸಂಕೋಚನ ಸಾಮಥ್ರ್ಯ ಕುಗ್ಗಿ ಹೋದರೆ. ಇಲ್ಲವೇ ಮಸೂರದ ಮೆದುತನ ಕಡಿಮೆ ಆದರೆ ಮೇಲೆ ವಿವರಿಸಿರುವ ಕ್ರಿಯಗೆ ಧಕ್ಕೆ ಆಗಿ ಸಮೀಪದೃಷ್ಟಿ ಕುಂಠಿತವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಕೃತಕ ಮಸೂರ ಅಗತ್ಯವಾಗಿ ಪೀನ ಮಸೂರ ಕನ್ನಡಕÀವನ್ನು ಬಳಸಬೇಕಾಗುತ್ತದೆ. ಇದೇ ಚಾಳೀಸಿನ ಕನ್ನಡಕ.

ಸಮೀಪದೃಷ್ಟಿಯಲ್ಲಿ ನಾವು ನೋಡಿದ ವಸ್ತುವಿನಿಂದ ಪ್ರಸಾರವಾಗುವ ಬೆಳಕಿನ ಕಿರಣಗಳು ಅಧಿಕ ಸಂಖ್ಯೆಯಲ್ಲಿ ಕಣ್ಣಿನ ಒಳಹೋಗಬೇಕಾಗಿಲ್ಲ. ವಾಸ್ತವವಾಗಿ ಹಾಗೆ ಹೋಗುವುದರಿಂದ ಅಕ್ಷಿಪಟಲದಲ್ಲಿ ಪ್ರತಿಬಿಂಬ ಅಸ್ಪಷ್ಟವಾಗುತ್ತದೆ. ಆದ್ದರಿಂದ ಹೆಚ್ಚು ಕಣ್ಣಿನ ಒಳ ಹೋಗದಂತೆ ಕಣ್ಣಿನಪಾಪೆ ಕಿರಿದಾಗುವುದು. ಈ ಪಾಪೆ ನಿಜವಾಗಿ ಪಾಪೆಪೊರೆಯ (ಐರಿಸ್) ಮಧ್ಯದಲ್ಲಿರುವ ರಂಧ್ರ. ಪಾಪಪೂರೆ ಸ್ನಾಯುಯುಕ್ತ : ಪಾಪೆಯ ಅಂಚಿನ ಸುತ್ತಲೂ ಉಂಗುರದಂತೆ ಇರುವ ಸ್ನಾಯು ಒಂದು ಪಟಲದ ಅಡ್ಡಗಲದಲ್ಲಿ ತ್ರಿಜ್ಯದಂತೆ ಎಲ್ಲ ದಿಕ್ಕಿನಲ್ಲಿ ಪಸರಿಸಿರುವ ಸ್ನಾಯು ಇನ್ನೊಂದು ಉಂಗುರ ಸ್ನಾಯು ಸಂಕೋಚಿಸಿದಾಗ ತ್ರಿಜ್ಯ ಸ್ನಾಯು ವ್ಯಾಕೋಚಿಸುವಂತೆಯೂ ತ್ರಿಜ್ಯ ಸ್ನಾಯು ಸಂಕೋಚಿಸಿದಾಗ ಉಂಗುರ ಸ್ನಾಯು ವ್ಯಕೋಚಿಸಿಸುವಂತೆಯೂ ಅನೈಚ್ಛಿತ ನರ ನಿಯಂತ್ರಣ ಇದೆ. ಉಂಗುರ ಸ್ನಾಯುವಿನ ಸಂಕೋಚನದಿಂದ ಪಾಪೆ ಕಿರಿದಾಗುತ್ತದೆ. ತ್ರಿಜ್ಯ ಸ್ನಾಯುವಿನ ಸಂಕೋಚನದಿಂದ ತಾರಕೆಯ ಅಗಲ ಕಿರಿದಾಗಿ ಪಾಪೆ ದೊಡ್ಡದಾಗುತ್ತದೆ. ಸಮೀಪ ದೃಷ್ಟಿಯಲ್ಲಿ ಪಾಪೆ ಕಿರಿದಾಗುವುದೂ ದೃಷ್ಟಿಯನ್ನ ದೂರವಸ್ತು ವೀಕ್ಷಣೆಗೆ ಬದಲಿಸಿದಾಗ ಪಾಪೆ ತಕ್ಕಷ್ಟು ದೊಡ್ಡದಾಗುವುದೂ ಇಂಥ ಆನೈಚ್ಛಿಕ ಕ್ರಿಯೆಯಿಂದ.

ದೃಷ್ಟಿಸುವಾಗ ನಮ್ಮ ಎರಡು ಕಣ್ಣುಗಳೂ ದೃಷ್ಟಿತ ವಸ್ತುವಿನ ದಿಕ್ಕಿಗೆ ಕರಾರುವಕ್ಕಾಗಿ ಚಲಿಸುತ್ತವೆ. ವೀಕ್ಷಿತ ವಸ್ತು ಅನಂತರದೂರದಲ್ಲಿದ್ದರೆ (20 ಅಡಿಗಳಿಗಿಂತ ಹೆಚ್ಚು) ಎರಡು ಕಣ್ಣುಗಳು ಅಕ್ಷಗಳೂ ಒಂದೇ ದಿಕ್ಕಿನಲ್ಲಿರುತ್ತವೆ. ಇದಕ್ಕೆ ಕಣ್ಣುಗಳ ಯುಗ್ಮ ಚಲನವೆಂದು ಹೆಸರು (ಕಾನ್‍ಜುಗೇಟ್ ಮೂವ್‍ಮೆಂಟ್). 20 ಅಡಿಗಳಿಗಿಂತ ಹತ್ತಿರ ಇರುವ ವಸ್ತುಗಳನ್ನು ವೀಕ್ಷಿಸುವಾಗ ಎರಡು ಕಣ್ಣುಗಳೂ ಮೂಗಿನ ಕಡೆಗೆ ಹೊರಳಿಸಲ್ಪಡುತ್ತವೆ. ಎರಡರ ಅಕ್ಷಗಳೂ ದೃಷ್ಟಿತ ವಸ್ತುವಿನಲ್ಲಿ ಸಂಧಿಸುವುವು. ವಸ್ತು ಹತ್ತಿರವಾದಷ್ಟೂ ಅಕ್ಷಗಳ ನಡುವೆ ಇರುವ ಕೋನದ ಮೌಲ್ಯ ಹೆಚ್ಚು ಕಣ್ಣುಗಳ ಅಭಿಸರನೆಯೂ (ಕನ್‍ವರ್ಜೆನ್ಸ್) ಹೆಚ್ಚು. ಅಗತ್ಯ ರೀತಿಯಲ್ಲಿ ಎರಡು ಕಣ್ಣುಗಳ ಯುಗ್ಮ ಚಲನೆ ಮತ್ತು ಅಭಿಸರಣ ಚಲನೆ (ಕನ್‍ವರ್‍ಜೆಂಟ್ ಮೂವ್‍ಮೆಂಟ್) ಏರ್ಪಡುವುದು ಕಣ್ಣುಗುಡ್ಡೆಯ ಹೊರ ಭಿತ್ತಿಯ ಎಡಬಲಭಾಗಗಳಿಗೆ ಬಂಧಿಸಲ್ಪಟ್ಟಿರುವ ಎರಡು ಸ್ನಾಯುಗಳಿಂದ ಕಣ್ಣುಗುಡ್ಡೆಯನ್ನು ಮೇಲಕ್ಕೆ ಕೆಳಕ್ಕೆ ಮತ್ತು ಇನ್ನಿತರ ಅಕ್ಷರಗಳಲ್ಲಿ ಚಲಿಸುವಂತೆ ಮಾಡಲು ಇನ್ನೂ ನಾಲ್ಕು ಸ್ನಾಯುಗಳು ಇವೆ. ಇವು ಕಣ್ಣುಗುಡ್ಡೆಯ ಹೊರಭಿತ್ತಿಯ ಮೇಲೆ ಹಾಗೂ ಕೆಳಗೆ ಬಂಧಿಸಲ್ಪಟ್ಟಿವೆ. ಈ ಆರು ಸ್ನಾಯುಗಳ ಸಂಕೋಚನ ವ್ಯಾಕೋಚನಗಳು ಅಗತ್ಯಕ್ಕೆ ತಕ್ಕಂತೆ ಜರಗುವುವು. ನರಗಳ ನಿಯಂತ್ರಣದಿಂದ ಕಣ್ಣುಗುಡ್ಡೆಯ ಚಲನೆ ಸಾಮಾನ್ಯವಾಗಿ ಐಚ್ಛಿಕವಾಗಿ ಜರಗುವುದಾದರೂ ಅನೇಕ ವೇಳೆ ಅದು ಇಚ್ಛಾತೀತವಾಗಿರುವುದೂ ಉಂಟು. ಒಂದು ಕಣ್ಣು ಚಲಿಸಿದರೆ ಇನ್ನೊಂದು ಕಣ್ಣೂ ಅಗತ್ಯ ರೀತಿಯ ಯುಗ್ಮಚಲನೆಯನ್ನೂ ಅಭಿಸರಣ ಚಲನೆಯನ್ನು ತೋರಿಸುವುದನ್ನು ಐಚ್ಛಿಕವಾಗಿ ತಪ್ಪಿಸುವುದಕ್ಕಾಗುವುದಿಲ್ಲ. ಚಲನೆಯಲ್ಲಿ ಹೇಗೋ ಹಾಗೆಯೇ ಮಸೂರದ ಗಾತ್ರ ಹೆಚ್ಚಾಗುವಿಕೆ - ಕಣ್ಣಿನ ಪಾಪೆ ಕಿರಿದಾಗುವಿಕೆ - ಈ ಕ್ರಿಯೆಗಳಲ್ಲಿ ಎರಡು ಕಣ್ಣುಗಳೂ ಸಮವಾಗಿ ಭಾಗವಹಿಸುತ್ತವೆ. ಎಡ ಹಾಗೂ ಬಲಗಡೆಯ ಸಂಬಂಧಪಟ್ಟ ಎಲ್ಲ ಸ್ನಾಯುಗಳನ್ನೂ ನಿಯಂತ್ರಿಸುವ ನರಗಳು ಮಿದುಳಿನಲ್ಲಿ ತಮ್ಮ ಉಗಮಸ್ಥಾನಗಳಲ್ಲಿ ಪರಸ್ಪರ ಸಂಪರ್ಕಗೊಂಡು ಒಂದನ್ನೊಂದು ಪ್ರಭಾವಿಸುವುದರಿಂದ ಎರಡು ಕಣ್ಣುಗಳಲ್ಲೂ ಏಕಕಾಲಿಕವಾಗಿ ಒಂದೇ ಕ್ರಿಯೆ ಜರಗುತ್ತದೆ.

ಒಟ್ಟಿನಲ್ಲಿ ಎರಡು ಅಕ್ಷಿಪಟಲಗಳ ಮೇಲೂ ಹೊರವಸ್ತುವಿನ ಚಿತ್ರ ಸ್ಪಷ್ಟವಾಗಿ ಮಾಡಬೇಕಾದುದು ಮುಖ್ಯ. ಇದಕ್ಕಾಗಿ ಕಣ್ಣುಗುಡ್ಡೆಯನ್ನು ವಸ್ತುವಿನ ದಿಕ್ಕಿಗೆ ಹೊರಳಿಸುವುದೂ ವಸ್ತುವಿನ ದೂರ ಹಾಗೂ ಹೊಳಪಿಗೆ ತಕ್ಕಂತೆ ಕಣ್ಣಿನ ಪಾಪೆಯ ವ್ಯಾಸವನ್ನು ಸರಿ ಹೊಂದಿರುವುದೂ ವಸ್ತುವಿನ ದೂರಕ್ಕೆ ತಕ್ಕಂತೆ ಕಣ್ಣಿನ ಮಸೂರದ ಗಾತ್ರವನ್ನೂ ಕ್ರಮಪಡಿಸುವುದೂ ಇತ್ಯಾದಿ ಕ್ರಿಯೆಗಳು ಅವಶ್ಯಕವಾಗಿದ್ದು ಅವುಗಳಿಗೆ ಮೀಸಲಾದ ಸ್ನಾಯುಗಳ ಸಂಕೋಚನ ವ್ಯಾಕೋಚನಗಳು ಇಚ್ಛಾತೀತವಾಗಿಯೇ ಜರುಗುತ್ತವೆ. ಜೊತೆಗೆ ಎರಡು ಕಣ್ಣುಗಳಲ್ಲೂ ಇಂಥ ವ್ಯತ್ಯಾಸಗಳು ಏಕಕಾಲಿಕವಾಗಿ ಉಂಟಾಗುವುದರಿಂದ ಅವುಗಳ ಅಕ್ಷಿಪಟಲದ ಅನುರೂಪ ಸ್ಥಾನಗಳಲ್ಲಿ ವಸ್ತುವಿನ ಪ್ರತಿಬಿಂಬ ಮೂಡುತ್ತದೆ. ಇದರಿಂದ ದ್ವೀನೇತ್ರ ದೃಷ್ಟಿಯ (ಬೈನಾಕ್ಯುಲರ್ ವಿಷನ್) ಅನುಕೂಲತೆಗಳೆಲ್ಲವೂ ಲಭಿಸುವಂತಾಗುತ್ತದೆ. ವಸ್ತುವಿನ ದೂರ ಗಾತ್ರಗಳ ನಿಷ್ಕøಷ್ಟ ಅಂದಾಜು, ಅದರ ವಿವರವಾದ ನೋಟ, ಅಸ್ಫುಟವಾಗಿಯಾದರೂ ಕಾಣುವ ಬದಿಯ ಭಾಗದ ವೈಶಾಲ್ಯ-ಇವೇ ಈ ಅನುಕೂಲತೆಗಳು. ವಸ್ತುವಿನ ಘನಕೃತಿಯ ಗ್ರಹಿಕೆಯೇ (ಸ್ಟೀರಿಯಾಪ್ಸಿಸ್) ದ್ವಿನೇತ್ರ ದೃಷ್ಟಿಯ ಪ್ರಮುಖ ಉಪಯುಕ್ತತೆ.

ಅಕ್ಷಿಪಟಲದ ಮೇಲೆ ಮೂಡಿರುವ ಪ್ರತಿಬಿಂಬದ ದ್ಯುತಿಶಕ್ತಿಯಿಂದ ಅಕ್ಷಿಪಟಲದಲ್ಲಿರುವ ಶಂಕು ಹಾಗೂ ದಂಡಕೋಶಗಳಲ್ಲಿ (ಕೋನ್ಸ್ ಅಂಡ್ ರಾಡ್ಸ್) ಪ್ರತಿಕ್ರಿಯೆ ಉಂಟಾಗುತ್ತದೆ. ಶಂಕು ಹಾಗೂ ದಂಡಕೋಶಗಳಲ್ಲಿ ಅನುಕ್ರಮವಾಗಿ ಅಯೊಡಾಪ್ಸಿನ್ ಮತ್ತು ರೋಡಾಪ್ಸಿನುಗಳೆಂಬ ರಾಸಾಯನಿಕಗಳಿವೆ. ವಿಟಮಿನ್ ಂ ಗೆ ಸಂಬಂಧಿಸಿದಂತೆ ರೆಟೆನೀನ್ ಎಂಬ ರಾಸಾಯನಿಕ ಮತ್ತು ಸ್ಕೋಟಾಪ್ಸಿನ್ ಎಂಬ ಪ್ರೋಟೀನಿನ ಸಂಯುಕ್ತವೇ ರೋಡಾಪ್ಸಿನ್. ಅಯಾಡಾಪ್ಸಿನಿನಲ್ಲಿ ಸ್ಕೋಟಾಪ್ಸಸ್ನನ ಬದಲು ಫೋಟಾಪ್ಸಿನ್ ಎಂಬ ಬೇರೆ ಪ್ರೋಟಿನ್ ಉಂಟು ಬೆಳಕು ರ್ಹೋಡಾಪ್ಸಿನ್ ಮತ್ತು ಅಯೊಡಾಪ್ಸಿನುಗಳ ಮೇಲೆ ವರ್ತಿಸಿ ಅವುಗಳ ರಾಸಾಯನಿಕ ವಿಭಜನೆಯನ್ನು ಉಂಟುಮಾಡಬಲ್ಲದೆಂದು ಪ್ರಾಯೋಗಿಕವಾಗಿ ತೋರಿಸಿದ್ದಾರೆ. ರ್ಹೋಡಾಪ್ಸಿನಿನ ಮೇಲೆ ಹೆಚ್ಚು ಸಂಶೋಧನೆಗಳು ನಡೆದಿರುವುದರಿಂದ ಅದನ್ನು ಕುರಿತ ಜ್ಞಾನ ಹೆಚ್ಚಾಗಿದೆ. ಬೆಳಕಿನಲ್ಲಿ ಅಲ್ಲದೆ ಅಕ್ಷಿಪಟಲದಲ್ಲಿ ಹೊರವಸ್ತುವಿನ ಚಿತ್ರ ಮೂಡಿರುವಾಗ ಕೂಡ ರ್ಹೋಡಾಪ್ಸಿನ ರೆಟಿನೀನ್ ಮತ್ತು ಸ್ಕೋಟಾಪ್ಸಿನಾಗಿ ವಿಭಜನೆಗೊಳ್ಳುತ್ತದೆ. ಈ ರಾಸಾಯನಿಕ ವಿಭಜನ ಕ್ರಮದಿಂದ ಉಂಟಾಗುತ್ತದೆ. ಬೆಳಕಿನಿಂದ ದಂಡಕೋಶ ಪ್ರಚೋದಿಸಲ್ಪಡುವುದು ಮುಗಿದ ಕೂಡಲೆ (ಅಂದರೆ ದೃಷ್ಟಿ ಬದಲಾಯಿಸಿದಾಗ, ಕಣ್ಣು ಮುಚ್ಚಿಕೊಂಡಾಗ, ಕತ್ತಲೆಯಲ್ಲಿ ಇತ್ಯಾದಿ) ರ್ಹೋಡಾಪ್ಸಿನ ಪುನಃ ಸಂಯೋಗವಾಗುತ್ತದೆ. ಒಡನೆ ಅಕ್ಷಿಪಟಲದ ಆ ಭಾಗದಲ್ಲಿ ಪುನಃ ನೋಟ ಸಾಧ್ಯವಾಗುತ್ತದೆ. ಈ ಸಂಯೋಜನೆ ಆಗದಿದ್ದರೆ ಸಾಧ್ಯವಿಲ್ಲ. ಪುನಃ ಸಂಯೋಜನೆಗೆ ವಿಟಮಿನ್ ಂ ಬಹು ಉಪಯುಕ್ತ ಆದ್ದರಿಂದ ವ್ಯಕ್ತಿಯ ದೇಹದಲ್ಲಿ ಸಾಕಷ್ಟು ವಿಟಮಿನ್ ಂ ಕೊರತೆ ಪ್ರಸಂಗಗಳಲ್ಲಿ ಮಾನವರಲ್ಲಿ ಮಬ್ಬುಬೆಳಕಿನ ನೋಟ ಕುಂಠಿತವಾಗುತ್ತದೆ. ರ್ಹೋಡಾಪ್ಸಿನ ದಂಡಕೋಶಗಳಲ್ಲಿ ಮಾತ್ರ ಇರುವುದರಿಂದ ಮಬ್ಬುಬೆಳಕಿನ ದೃಷ್ಟಿ ದಂಡಕೋಶಗಳ ಕ್ರಿಯೆಯೇ ಎನ್ನುವುದು ವೃತ್ತ. ನಿಶಾಚರಿಗಳಾದ ಬೆಕ್ಕು. ಗೂಬೆ, ಇತ್ಯಾದಿಗಳ ಅಕ್ಷಿಪಟಲದಲ್ಲಿ ಇರುವುದು ಮುಖ್ಯವಾಗಿ ದಂಡಕೋಶಗಳೇ ಮಬ್ಬುಬೆಳಕಿನಲ್ಲಿ ವಸ್ತುವಿನ ಆಕಾರ ಗಾತ್ರಗಳು ಸ್ಥೂಲವಾಗಿ ತಿಳಿಯುತ್ತವೆಯೇ ವಿನಾ ಅವುಗಳ ಸೂಕ್ಷ್ಮ ವಿನ್ಯಾಸ, ವಿವರಗಳು ವರ್ಣ ಇತ್ಯಾದಿಗಳು ತಿಳಿಯುವುದಿಲ್ಲ. ನೇರದೃಷ್ಟಿಯಲ್ಲಿ ಅಕ್ಷಿಪಟಲದ ಮೇಲೆ ಬಿಂಬ ಮೂಡುವ ಭಾಗದಲ್ಲಿ ದಂಡಕೋಶಗಳಿರುವುದಿಲ್ಲ ರ್ಹೋಡಾಪ್ಸಿನ್ನೂ ಇರುವುದಿಲ್ಲವೆಂಬುದೂ ವ್ಯಕ್ತ. ಆದ್ದರಿಂದ ಮಬ್ಬು ಬೆಳಕಿನಲ್ಲಿ ನೇರದೃಷ್ಟಿಯಿಂದ ವಸ್ತುಗಳ ಇರವನ್ನು ಗ್ರಹಿಸುವುದು ಕಷ್ಟ ಓರೆಗಣ್ಣಿನಿಂದ ವೀಕ್ಷಿಸಿದಾಗ ವಸ್ತುವಿನ ಚಿತ್ರ ಅಕ್ಷಿಪಟಲದಲ್ಲಿ ಹೆಚ್ಚು ದಂಡಕೋಶಗಳೇ ಇರುವ ಕಡೆ ಮೂಡುತ್ತದೆ. ಆದ್ದರಿಂದ ಮಬ್ಬುಬೆಳಕಿನಲ್ಲಿ ಓರೆ ದೃಷ್ಟಿ ಲಾಭದಾಯಕ ಕತ್ತಲು ಕೊಠಡಿಯಲ್ಲಿ ಅಥವಾ ರಾತ್ರಿಕಾಲದಲ್ಲಿ ಓರೆದೃಷ್ಟಿಯಿಂದ ಏನೋ ಸಣ್ಣ ವಸ್ತು ಗೋಚರಿಸಿದಂತಾಗಿ ದೃಷ್ಟಿಯನ್ನು ನೇರವಾಗಿ ಅಲ್ಲಿಗೆ ಬದಲಿಸಿದರೆ ಏನೂ ಕಾಣಿಸಿದಿರುವುದು ಬಹುಜನಕ್ಕೆ ಗೂತ್ತಿದೆ. ಆಕಾಶದಲ್ಲಿ ಅನೇಕ ಮಬ್ಬಾದ ನಕ್ಷತ್ರಗಳು ಈ ರೀತಿ ಗೋಚರವಾಗುವುದನ್ನು ಅದನ್ನು ಎಲ್ಲರೂ ಬಲ್ಲರು. ಚರವಸ್ತುವಿನ ಚಲನೆ ಬಲು ನಿಧಾನವಾಗಿದದ್ದರೆ ಅದನ್ನು ನೇರದೃಷ್ಟಿಯಿಂದ ಅರಿಯುವುದಕ್ಕಿಂತ ಸುಲಭವಾಗಿ ಓರೆದೃಷ್ಟಿಯಿಂದ ಅರಿಯಬಹುದು. ಯಾವುದೇ ವಸ್ತುವನ್ನು ನೇರವಾಗಿ ನೋಡುತ್ತಿದ್ದಾಗ ಅದರ ನೆರೆಯಲ್ಲಿ ಒಂದು ಸಣ್ಣ ಇರುವೆಯೊ ಕೀಟವೊ ಹರಿದಾಡುತ್ತಿದ್ದಂತೆ ಭಾಸವಾಗುವುದು ಮತ್ತು ಅದು ನಿಜವೇ ಎಂದು ನಿರ್ಧರಿಸಿಕೊಳ್ಳಲು ದೃಷ್ಟಿಯನ್ನು ಅದರೆಡೆಗೆ ತಿರುಗಿಸಿದರೆ ಚಲನೆ ಪತ್ತೆಯಾಗದಿರುವುದು ಕೂಡ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಇವೇ ದಂಡಕೋಶಕ್ರಿಯೆಯ ವೈಶಿಷ್ಟ್ಯಗಳು.

ಬೆಳಕಿನ ಉಜ್ಜ್ವಲತೆ ಹೆಚ್ಚಾಗಿದ್ದಾಗ ವಸ್ತುಗಳ ವರ್ಣ, ವಿನ್ಯಾಸ, ಇತ್ಯಾದಿ ವಿವರಗಳನ್ನು ಗ್ರಹಿಸಬಹುದು. ಇದಕ್ಕಾಗಿ ಸಾಮಾನ್ಯವಾಗಿ ಬೆಳಕಿನಲ್ಲಿ ವಸ್ತುಗಳನ್ನು ನೇರದೃಷ್ಟಿಯಿಂದಲೇ ವೀಕ್ಷಿಸಲಾಗುತ್ತದೆ. ಮೇಲೆ ಹೇಳಿರುವಂತೆ ಇಂತ ನೇರ ದೃಷ್ಟಿಯಿಂದ ಅಕ್ಷಿಪಟಲದಲ್ಲಿ ಚಿತ್ರ ಮೂಡುವ ಸ್ಥಳದಲ್ಲಿ ದಂಡಕೋಶಗಳಿರುವುದಿಲ್ಲ. ಬದಲಾಗಿ ಅಲ್ಲಿ ಶಂಕುಕೋಶಗಳು ಮಾತ್ರ ಇರುತ್ತವೆ. ವರ್ಣಾನುಭವ ತಪಶೀಲು ವೀಕ್ಷಣೆ - ಇವು ಶಂಕುಕೋಶಗಳ ಕ್ರಿಯೆ ; ಮತ್ತು ಇವು ತಕ್ಕಷ್ಟು ಪ್ರಕಾಶವಾದ ಬೆಳಕಿನಲ್ಲೇ ಹಾಗೂ ನೇರದೃಷ್ಟಿಯಿಂದಲೇ ಲಭಿಸತಕ್ಕವು. ಅಕ್ಷಿಪಟಲದಲ್ಲಿ ಒಂದು ಶಂಕು ಕೋಶದ ಅಳತೆಯಷ್ಟು ಬಿಂಬವನ್ನು ಮೂಡಿಸಬಲ್ಲ ವಸ್ತುವಿನ ಅಳತೆಯೇ ಬಹುಶಃ ದೃಷ್ಟಿಗೋಚರವಾಗಬಲ್ಲ ಅತ್ಯಂತ ಕಿರಿದಾದದ್ದು. ಈ ಅಳತೆಯ ವಸ್ತು ಅಥವಾ ವಸ್ತು ಭಾಗದಿಂದ ಕಣ್ಣಿನ ನಾಭಿಯಲ್ಲಿ ಅಳವಡುವ ಕೋನ 1/60 ಅಥವಾ 1 ಕೋನಮಿನಿಟ್. ಇಷ್ಟು ಎದುರು ಕೋನವಿರುವ ವಸ್ತು ಕಣ್ಣಿನಿಂದ 2 ಅಡಿ ದೂರದಲ್ಲಿದ್ದರೆ ಅದರ ಅಳತೆ 0.007 ಅಂಗುಲ ಇರಬೇಕು. ಇದೇ ಲೆಕ್ಕದ ಮೇಲೆ ಸುಮಾರು 1 ಮೈಲು ದೂರದಲ್ಲಿರುವ ವಸ್ತು 18 ಅಂಗುಲ ಉದ್ದ ಮತ್ತು ಅಗಲವಿದ್ದರೆ ಮಾತ್ರ ಅದರ ವಿವರ ಗೋಚರವಾಗಿ ಅದನ್ನು ಗುರುತು ಹಿಡಿಯಬಹುದು. ಅಂದರೆ ಈ ವಿವರಣೆ ಸರ್ವಥಾ ವಾಸ್ತವಿಕ ಎನ್ನುವಂತಿಲ್ಲ. ವಿವರ ದೃಗ್ಗೋಚರವಾಗುವಿಕೆಗೆ ದೂರಕ್ಕೆ ತಕ್ಕಂತೆ ವಸ್ತುವಿನ ಕನಿಷ್ಠ ಅಳತೆ ಮಾತ್ರ ಅಗತ್ಯವಷ್ಟೇ ಅಲ್ಲ ; ವಸ್ತುವಿನ ಹೊಳಪು ವಸ್ತುವಿನ ಹಿನ್ನಲೆ ಇವೂ ಮುಖ್ಯ ದೃಷ್ಟಿಯನ್ನು ಮಸಕಾಗಿಸುವ ಇಬ್ಬನಿ, ತೆರೆಮರೆ - ಇವು ತಪಶೀಲು ಸ್ಪಷ್ಟ ದೃಷ್ಟಿಗೆ ಮಾರಕ ಎನ್ನುವುದು ಎಲ್ಲರ ಅನುಭವವೇ. ಸ್ಪಷ್ಟ ಅರಿವಿಗೆ ವಸ್ತುವಿನ ಹಿನ್ನಲೆ ಎಷ್ಟು ಮುಖ್ಯ ಎಂಬುದನ್ನು ಸುಲಭವಾಗಿ ಗ್ರಹಿಸಬಹುದು. ಒಂದು ಕರಿಯ ದಾರ ಕರಿಯ ಬಟ್ಟೆಯ ಮೇಲಿದ್ದರೆ ಬೆಳಕು ಉಜ್ಜ್ವಲವಾಗಿರದಿದ್ದಲ್ಲಿ ದಾರ ದೃಗ್ಗೋಚರವಾಗದೆ ಇರಬಹುದು. ಅದೇ ದಾರ ಬಿಳಿಯ ಬಟ್ಟೆಯ ಮೇಲೆ ಇದ್ದರೆ ಬೆಳಕು ಅಷ್ಟು ಉಜ್ಜ್ವಲವಾಗಿಲ್ಲದಿದ್ದರೂ ದಾರ ಸ್ಪಷ್ಟವಾಗಿ ದೃಗ್ಗೋಚರವಾಗುತ್ತದೆ. ಹಗಲು ಪ್ರಾಣಿಗಳ (ಅಳಿಲು, ಪಾರಿವಾಳ ಇತ್ಯಾದಿ) ಅಕ್ಷಿಪಟಲದಲ್ಲಿ ಮುಖ್ಯವಾಗಿ ಶಂಕು ಕೋಶಗಳೇ ಇವೆ. ಮಾನವರಲ್ಲಿ ಶಂಕು ಹಾಗೂ ದಂಡಕೋಶಗಳು ಎರಡೂ ಇದೆ ಎಂದು ಮೇಲಿನ ವಿವರಣೆಯಿಂದ ಆಗಲೇ ತಿಳಿದಿದೆ.

ಈ ಕೋಶಗಳು ಬಹು ಸಣ್ಣವು ನೇರದೃಷ್ಟಿಯಲ್ಲಿ ಚಿತ್ರ ಮೂಡುವ ಅಕ್ಷಿಪಟದ ಭಾಗ ಮತ್ತು ಅದರ ಸುತ್ತ ಸುಮಾರು 2-3 ಮೀಮೀ. ಕ್ಷೇತ್ರದಲ್ಲಿ ಹೆಚ್ಚಾಗಿ ಶಂಕುಕೋಶಗಳೇ ಇರುತ್ತವೆ. ಅಕ್ಷಿಪಟದವಲಯ ಹೊರಹೊರಗಾದಂತೆ ಶಂಕುಕೋಶಗಳು ಕಡಿಮೆ ಆಗುತ್ತ ದಂಡಕೋಶಗಳು ಹೆಚ್ಚಾಗುವುವು. ಅಕ್ಷಿಪಟದ ಕೇಂದ್ರದಲ್ಲಿ ಕೇವಲ ಶಂಕುಕೋಶಗಳೂ ಅದರ ಅಂಚಿನಲ್ಲಿ ಕೇವಲ ದಂಡ. ಕೋಶಗಳೂ ಇರುತ್ತವೆ. ಮಾನವರ ಅಕ್ಷಿಪಟದಲ್ಲಿ ಒಟ್ಟು 7 ಮಿಲಿಯನ್ ಶಂಕುಕೋಶಗಳೂ 130 ಮಿಲಿಯನ್ ದಂಡ ಕೋಶಗಳು ಇವೆ ಎಂದು ಅಂದಾಜು. ಎರಡು ಬಗೆಯ ಕೋಶಗಳೂ ಇರುವುದರಿಂದ ಮಾನವರಿಗೆ ಉಜ್ಜ್ವಲವಾದ ಬೆಳಕಿನಲ್ಲೂ. ಮುಬ್ಬು ಬೆಳಕಿನಲ್ಲೂ ದೃಷ್ಟಿ ಸಾಧ್ಯ. ವಸ್ತುಗಳ ಸ್ಥೂಲ ಲಕ್ಷಣವೇ ಅಲ್ಲದೆ ವರ್ಣ ವಿವರಗಳು - ಇವುಗಳ ಅರಿವು ಕೂಡ ಸಾಧ್ಯ. ಹಗಲು ಹೊತ್ತು ದೃಷ್ಟಿಕ್ರಿಯೆಯಲ್ಲಿ ಮುಖ್ಯವಾಗಿ ಶಂಕುಕೋಶಗಳೇ ಭಾಗ ವಹಿಸುತ್ತೇವೆ. ದಂಡಕೋಶಗಳು ಹೆಚ್ಚು ಕಡಿಮೆ ನಿಷ್ಕ್ರಿಯಗೊಂಡಿರುತ್ತವೆ. ಏಕೆಂದರೆ ಉಜ್ಜ್ವಲ ಬೆಳಕಿನ ಫಲವಾಗಿ ಅವುಗಳಲ್ಲಿ ರ್ಹೋಡಾಪ್ಸಿನ್ ವಿಭಜನೆ ಗೊಂಡಿರುತ್ತದೆ. ಪುನಃ ಸಂಯೋಜನೆಗೆ ಪರಿಸ್ಥಿತಿ ಅನುಕೂಲವಾಗಿರುವುದಿಲ್ಲ. ಹಠಾತ್ತಾಗಿ ಬೆಳಕಿನ ಉಜ್ಜ್ವಲತೆ ತಗ್ಗಿದರೆ ಇಲ್ಲವೇ ವ್ಯಕ್ತಿ ದಟ್ಟನೆ ಕತ್ತಲೆ ಕೋಣೆಯೊಳ ಹೊಕ್ಕರೆ ಕೂಡಲೇ ಯಾವ ವಸ್ತುವೂ ದೃಷ್ಟಿಗೆ ಬೀಳುವುದಿಲ್ಲ. ಏಕೆಂದರೆ ಶಂಕುಗಳು ಮಬ್ಬು ಬೆಳಕಿನಲ್ಲಿ ಪ್ರಚೋದಿತವಾಗುವುದಿಲ್ಲ. ದಂಡಗಳು ನಿಷ್ಕ್ರೀಯೆಗೊಂಡಿರುತ್ತವೆ. ಆದರೆ ಶ್ರೀಘ್ರದಲ್ಲೆ ರ್ಹೋಡಾಪ್ಸಿನ್ನಿನ ಪುನಃ ಸಂಯೋಜನೆ ಪ್ರಾರಂಭವಾಗಿ ದಂಡಕೋಶಗಳು ದೃಷ್ಟಿಕ್ರಿಯೆಯಲ್ಲಿ ತಮ್ಮ ಕರ್ತವ್ಯವನ್ನು ವಹಿಸಿಕೊಳ್ಳುವಂತಾಗುತ್ತದೆ. ಪರಿಸರದ ಉಜ್ಜ್ವಲತೆ 0.1 ಲ್ಯಾಮ್ ಬರ್ಟಿನಷ್ಟು ಇದ್ದಾಗ ಅರ್ಥಾತ್, ದೃಷ್ಟಿಸಿದ ವಸ್ತುವಿನ ಪ್ರಭೆ 1 ಘಂಟೆ ಕ್ಯಾಂಡಲ್ಲಿಗೆ ಸಮವಾಗಿದ್ದಾಗ ದಂಡಕೋಶಗಳ ಕರ್ತವ್ಯ ಪ್ರಾರಂಭವಾಗುವುದೆಂದು ಪ್ರಾಯೋಗಿಕವಾಗಿ ತೋರಿಸಲಾಗಿದೆ. ದಂಡಕೋಶಗಳಲ್ಲಿ ರ್ಹೋಡಾಪ್ಸಿನ್ ಪುನಃ ಸಂಯೋಜನೆ ಆಗುತ್ತಿರುವಂತೆಯೇ ಒಂದೆರಡು ಮಿನಿಟುಗಳಲ್ಲೆ ಕತ್ತಲಿನಲ್ಲಿ ವಸ್ತುಗಳು ಸ್ಥೂಲವಾಗಿ ಗೋಚರಿಸುವುದಕ್ಕೆ ಪ್ರಾರಂಭವಾಗಿ 5 - 10 ಮಿನಿಟುಗಳಲ್ಲಿ ತಕ್ಕಮಟ್ಟಿಗೆ ಚೆನ್ನಾಗಿಯೇ ಕಾಣುವಂತಾಗುವುದು. ಕಣ್ಣು ಮಬ್ಬು ಬೆಳಕಿಗೆ ಹೊಂದಿಕೊಳ್ಳುವುದು. ಅದಕ್ಕೆ ಆಗತ್ಯವಾದ ಕಾಲಾವಧಿ, ಇವನ್ನು ವಿಶೇಷವಾಗಿ ವ್ಯಾಸಂಗಿಸಲಾಗಿದೆ. ವಿಟಮಿನ್ ಂ ಕೊರತೆ ಇರುವ ವ್ಯಕ್ತಿಗಳಲ್ಲಿ ಕತ್ತಲೆ ದೃಷ್ಟಿಗೆ ಹೊಂದಿಕೊಳ್ಳುವ ಕಾಲ ಮಿಕ್ಕವರಿಗಿಂತ ಹೆಚ್ಚು ಎನ್ನುವುದು ವ್ಯಕ್ತವಾಗಿಯೇ ಇದೆ. ಕತ್ತಲೆದೃಷ್ಟಿ ಲಭಿಸಬೇಕಾದರೆ ಇವರಿಗೆ ಸುಮಾರು ¼ ಗಂಟೆ -1/2 ಗಂಟೆಯೇ ಬೇಕಾದೀತು. ವಾಸ್ತವವಾಗಿ ವ್ಯಕ್ತಿಗಳಲ್ಲಿ ವಿಟಮಿನ್ ಂ ಕೊರತೆ ಇದೆಯೇ ಎಂದು ಪರೀಕ್ಷಿಸಲು ಅವರು ಕತ್ತಲೆ ದೃಷ್ಟಿಲಾಭಕ್ಕಾಗಿ ಎಷ್ಟು ಕಾಲ ತೆಗೆದುಕೊಳ್ಳುತ್ತಾರೆ ಎಂದು ನಿರ್ಧರಿಸುವುದು ರೂಢಿ ಛಾಯಾ ಚಿತ್ರಕಾರರು, ಎಕ್ಸ್‍ಕಿರಣತಜ್ಞರು, ರಾತ್ರಿ ಸಂಚರಿಸುವ ಕ್ಷಿಪ್ರ ವಾಹನ ಚಾಲಕರು ಮುಂತಾದವರು ಕತ್ತಲೆ ದೃಷ್ಟಿಗೆ ಬಹು ಶೀಘ್ರವಾಗಿ ಹೊಂದಿಕೊಳ್ಳಬೇಕಾಗಿರುವುದು ಆಗತ್ಯ. ಹೆಚ್ಚು ಉಜ್ಜ್ವಲತೆ ಇಲ್ಲದ ಕೆಂಪು ಬೆಳಕು ದೃಷ್ಟಿಯಿಂದ ಕತ್ತಲು ದೃಷ್ಟಿಗೆ ಹೆಚ್ಚು ಕಡಿಮೆ ತತಕ್ಷಣವೇ ಹೊಂದಿಕೊಳ್ಳಬಹುದಾಗಿದೆ. ಆದ್ದರಿಂದ ಇಂಥ ಉದ್ಯೋಗಿಗಳು ಬೆಳಕಿನಲ್ಲಿ ಮಾಡಬೇಕಾದ ಕೆಲಸಗಳನ್ನು ಕೆಂಪು ದೀಪದ ಬೆಳಕಿನಲ್ಲಿ ಮಾಡುವುದೂ ಬೆಳಕಿನಲ್ಲಿ ಕೆಲಸ ಮಾಡುವಾಗ ಸದಾ ಕೆಂಪುಗಾಜಿನ ಕನ್ನಡಕವನ್ನು ಬಳಸುವುದೂ ಬಲು ಅನುಕೂಲ ಎಂದು ಕಂಡುಬಂದಿದೆ.

ಅಕ್ಷಿಪಟದಲ್ಲಿ ಶಂಕುಗಳಲ್ಲಿ ನರಕೋಶಗಳೊಡನೆ ಸಂಪರ್ಕಿಸಿರುವುದು ಕಡಿಮೆ ಸಮೀಪದಲ್ಲಿ ನೆಟ್ಟದೃಷ್ಟಿಯಿಂದ ಸಣ್ಣವಸ್ತುವಿನ ಚಿತ್ರಮಾಡುವ ಕಡೆಯಂತೂ ಇಂಥ ಸಂಪರ್ಕ ಇಲ್ಲವೇ ಇಲ್ಲವೆನ್ನಬಹುದು ಆದರೆ ದಂಡಕೋಶಗಳು ನೆರೆಯ ದಂಡ ಹಾಗೂ ಶಂಕುಗಳೊಡನೆ ಬಹಳ ರೀತಿಯಲ್ಲಿ ಸಂಪರ್ಕ ಹೊಂದಿವೆ. ಇಂಥ ಸಂಪರ್ಕಗಳಿಂದ ಪ್ರತಿಬಿಂಬ ಮೂಡಿರುವ ಕಡೆ ಇರುವ ಶಂಕು ದಂಡಕೋಶಗಳಲ್ಲಿ ಮಾತ್ರವಲ್ಲದೆ ನೆರೆಯ ಅಸಂಖ್ಯಾತ ಕೋಶಗಳಲ್ಲೂ ಪ್ರತಿಕ್ರಿಯೆ ಉಂಟಾಗುತ್ತದೆ. ಇವುಗಳಲ್ಲಿ ಕೆಲವು ಮೂಲಪ್ರತಿಕ್ರಿಯೆಯನ್ನು ವರ್ಧಿಸುವಂಥವು. ಇನ್ನು ಕೆಲವು ಅದನ್ನು ಅಡಗಿಸುವಂಥವು. ಈ ಕ್ರಿಯೆಗಳೆಲ್ಲ ಜರುಗಿಕೊನೆಗೆ ಪ್ರತಿಬಿಂಬ ಮೂಡಿದ ಸ್ಥಳದಿಂದುದ್ಭವಿಸಿದ ನರಪ್ರಚೋದನೆ ಅಲ್ಲಿಯ ನರತಂತುಗಳ ಮೂಲಕ ಮುಂದುವರಿಯುತ್ತದೆ. ಕಣ್ಣುಗುಡ್ಡೆಯ ಹಿಂಬದಿಯಲ್ಲಿ ಅಕ್ಷಿಪಟದ ಎಲ್ಲ ಭಾಗಗಳಿಂದ ಹೊರಡುವ ನರತಂತೂಗಳೂ ಸೇರಿ ಕಂತೆಗಟ್ಟಿಕೊಂಡು ದೃಷ್ಟಿನರವಾಗುತ್ತದೆ (ಆಪ್ಟಿಕ್ ನರ್ವ್). ಮುಂದೆ ಇದು ಮಿದುಳಿನ ನಿರ್ದಿಷ್ಟ ಭಾಗವನ್ನು ತಲುಪುತ್ತದೆ. ಬಲ ಅಕ್ಷಿಪಟದ ಒಳಾರ್ಧದಿಂದ ಹೊರಟ ನರತಂತುಗಳಿಂದಾದ ಬಲನರದ ಭಾಗವೂ ಎಡ ಅಕ್ಷಿಪಟದ ಒಳಾರ್ಧದಿಂದ ಹೊರಟ ನರತಂತುಗಳಿಂದಾದ ಎಡ ದೃಷ್ಟಿನರದ ಭಾಗವೂ ಮಸ್ತಿಷ್ಕದ ಅಡಿಯಲ್ಲಿ ಒಂದನ್ನೊಂದು ಅಡ್ಡಹಾದು ಬಲಗಣ್ಣಿನದು ಎಡಗಡೆಗೂ ಎಡಗಣ್ಣಿನದು ಬಲಗಡೆಗೂ ಸಾಗಿ ಅಲ್ಲಿ ಆಯಾ ಕಣ್ಣಿನ ದೃಷ್ಟಿ ನರದ ಮಿಕ್ಕ ಅರ್ಧಭಾಗದೊಡನೆ ಸೇರಿಕೊಳ್ಳುತ್ತದೆ. ಆನಂತರ ಈ ಮಿಶ್ರನರದಿಂದ ಒಂದು ಅಂಶ ಬೇರ್ಪಟ್ಟು ನೆರೆಯಲ್ಲಿರುವ ಮಧ್ಯ ಮಿದುಳಿನ ಭಾಗವಾದ ಆ ಕಡೆಯ ಉನ್ನತ ಕಾಲಿಕ್ಯುಲಸ್ಸನ್ನು ತಲಪುವುದು. ಮಿಕ್ಕನರತಂತುಗಳು ಧ್ಯಾಲಮಸ್ಸಿನ ಭಾಗವಾದ ಆ ಕಡೆಯ ಹೊರಜೆನಿಕ್ಯುಲೇಟ್ ಕಾಯವನ್ನು ಸೇರಿ ಅಲ್ಲಿ ಅಂತ್ಯಗೊಳ್ಳುವುವು. ಅಲ್ಲಿಂದ ಹೊಸನರತಂತುಗಳು ಪ್ರಾರಂಭವಾಗಿ ಹಿರಿಮಸ್ತಿಷ್ಕದ ಹಿಂಬದಿಯಲ್ಲಿ ನಿರ್ದಿಷ್ಟ ಸ್ಥಾನವನ್ನು ತಲುಪುವುವು. ಇವೆಲ್ಲವನ್ನೂ ಕಳೆದ ಶತಮಾನದ ಅಂತ್ಯ ಮತ್ತು ಆದಿಯಲ್ಲಿ ಅನೇಕ ವಿಜ್ಞಾನಿಗಳು ಹಲವಿಧವಾದ ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಅಕ್ಷಿಪಟದಿಂದ ಹೊರಟ ಹಲವಿಧವಾದ ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಅಕ್ಷಿಪಟದಿಂದ ಹೊರಟ ಪ್ರತಿಯೊಂದು ನರತಂತುವೂ ಹೊರಜೆನಿಕ್ಯುಲೇಟ್ ಕಾಯದಲ್ಲಿ ನಿರ್ದಿಷ್ಟ ನರಕೋಶದ ನೆರೆಯಲ್ಲಿ ಅಂತ್ಯಗೊಳ್ಳುವುದನ್ನೂ ಆ ನರಕೋಶದಿಂದ ಹೊರಟ ಹೊಸನರತಂತು ಮಸ್ತಿಷ್ಕದಲ್ಲಯೂ ನಿರ್ದಿಷ್ಟ ನರಕೋಶದೊಡನೆಯೇ ಸಂಪರ್ಕಗೂಂಡು ಅದನ್ನು ಮಾತ್ರ ಪ್ರಚೋದಿಸುವುದನ್ನೂ ಇದೇ ರೀತಿ ವಿಶದಗೊಳಿಸಲಾಗಿದೆ. ಎರಡು ಅಕ್ಷಿಪಟಗಳ ಎಡಾರ್ಧಗಳ ಪ್ರತಿಯೊಂದು ಬಿಂದುವೂ ಹಿರಿಮಸ್ತಿಷ್ಕದ ಎಡಾರ್ಧದಲ್ಲಿ ಪ್ರತಿನಿಧಿಸಲ್ಪಟ್ಟಿದೆ. ಅದೇ ರೀತಿ ಅಕ್ಷಿಪಟಗಳ ಬಲಾರ್ಧದ ಪ್ರತಿಬಿಂದುವೂ ಹಿರಿಮಸ್ತಿಷ್ಕದ ಬಲಾರ್ಧದಲ್ಲಿ ಅನುಗುಣವಾದ ಕೋಶದಲ್ಲಿ ಮಾತ್ರ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಅಕ್ಷಿಪಟಗಳ ಎಡಾರ್ಧಗಳಲ್ಲಿ ನಮ್ಮ ಬಲಭಾಗಕ್ಕಿರುವ ವಸ್ತುಗಳ ಚಿತ್ರ ಮೂಡುತ್ತದೆ ಎನ್ನುವುದು ಭೌತಶಾಸ್ತ್ರ ಸಿದ್ಧಾಂತಕ್ಕೆ ಅನುಗುಣವಾದ ವ್ಯಕ್ತ ವಿಷಯ. ಆದ್ದರಿಂದ ನಮ್ಮ ಬಲಕ್ಕಿರುವ ವಸ್ತುಗಳು ಹಿರಿಮಸ್ತಿಷ್ಕದ ಎಡಾರ್ಧದಿಂದಲೂ ಎಡಕ್ಕಿರುವ ವಸ್ತುಗಳು ಬಲಾರ್ಧದಿಂದಲೂ ಗ್ರಹಿಸಲ್ಪಡುತ್ತವೆ. ನೆಟ್ಟದೃಷ್ಟಿಯಿಂದ ವೀಕ್ಷಿಸಲ್ಪಡುವ ಯಾವುದೇ ವಸ್ತುವೂ ಮಸ್ತಿಷ್ಕದ ಎರಡು ಭಾಗಗಳಿಂದಲೂ ಗ್ರಹಿಸಲ್ಪಡುತ್ತದೆ ಎನ್ನುವುದಕ್ಕೆ ಆಧಾರ ಇದೆ. ಮಸ್ತಿಷ್ಕದ ದೃಷ್ಟಿಭಾಗದಲ್ಲಿ ಪ್ರತಿಕ್ರಿಯೆಯಾಗಿ ಕಾಣಬರುವ ಮಾರ್ಪಾಡುಗಳು ತಿಳಿಯುವುವು. ಅಕ್ಷಿಪಟಗಳಲ್ಲಿ ವಸ್ತುವಿನ ಚಿತ್ರ ಭೌತಶಾಸ್ತ್ರ ಸಿದ್ಧಾಂತರೀತ್ಯ ತಲೆಕೆಳಗಾಗಿ ಮೂಡಿದರೂ ವಸ್ತು ನೆಟ್ಟಗಿರುವಂತೆಯೇ ಹೇಗೋ ಭಾಸವಾಗುತ್ತದೆ. ಶೈಶವ್ಯದಿಂದಲೂ ವಸ್ತುಗಳನ್ನು ದೃಷ್ಟಿಸಿ ಅವುಗಳ ಸ್ವರೂಪವನ್ನು ಗ್ರಹಿಸಲು ಇತರ ಸಂವೇದನೆಗಳನ್ನೂ ಬಳಸಿಕೊಂಡು ದೃಷ್ಟಿಲಾಭ ಪಡೆಯುವುದನ್ನು ರೂಢಿಸಿಕೊಳ್ಳುವುದರಿಂದ ಬಹುಶಃ ಇದು ಸಾಧ್ಯವಾಗಿದೆ. ಗ್ರಹಿಕೆ ಈ ರೀತಿ ಪೂರ್ವಾನು ಭವದಿಂದ ಕಲಿತದ್ದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ - ಸುಮಾರು 60 ಮೀಟರ್ ದೂರದಲ್ಲಿರುವ ಒಂದು ಬಂಡಿಯಾ 1/4 ಮೀಟರ್ ದೂರದಲ್ಲಿ ಅದರಂತೆಯೇ ಇರುವ ಆಟದ ಸಾಮಾನಿನ ಬಂಡಿಯಾ ಅಕ್ಷಿಪಟದಲ್ಲಿ ಬಹುಶಃ ಒಂದೇ ಅಳತೆಯ ಚಿತ್ರವನ್ನು ಮೂಡಿಸುತ್ತವೆ. ಅದರೆ ಒಂದು ನಿಜವಾದ ಬಂಡಿ ಅದು ಸುಮಾರು ಇಷ್ಟು ಉದ್ದ ಆಗಲ ಎತ್ತರವಾಗಿದೆ ಎಂದೂ ಇನ್ನೊಂದು ಪುಟಾಣಿ ಆಟದ ಸಾಮಾನೆಂದೂ ಗ್ರಹಿಸಲಾಗುತ್ತದೆ. ಮಸ್ತಿಷ್ಕದ ಎಡಬಲ ಎರಡು ಭಾಗಗಳಲ್ಲೂ ಆಗುವ ಪ್ರತಿಕ್ರಿಯೆಗಳು ಹೇಗೋ ಮಿಲಾಯಿಸುತ್ತವೆ . ಇದರಿಂದ ಎರಡು ಕಣ್ಣುಗಳಿಂದ ವೀಕ್ಷಿಸಿದರೂ ಎರಡು ಅಕ್ಷಿಪಟಗಳ ಮೇಲೂ ಪ್ರತಿಬಿಂಬ ಮೂಡಿ ನರಪ್ರಚೋದನೆ ಉಂಟಾಗಿ ಮಿದುಳಿನ ಎರಡು ಭಾಗಗಳಿಗೆ ತಲುಪಿದರೂ ನೋಡಿದ ವಸ್ತು ಎರಡಾಗಿ ಕಾಣದೆ ಒಂದೇ ಆಗಿ ಕಾಣಿಸುತ್ತದೆ. ಎರಡು ಕಣ್ಣುಗಳ ದೃಷ್ಟಿಯೂ ಮಾನಸಿಕವಾಗಿ ಹೀಗೆ ಒಂದು ಗೂಡುವುದರಿಂದಲೇ ವಸ್ತುವಿನ ಗಾತ್ರ ಗ್ರಹಿಕೆ ಅರ್ಥಾತ್ ಘನಾ ಕೃತಿಯ ಅರಿವು ಸಾಧ್ಯವಾಗುವುದು. ಮಾನಸಿಕ ಮಿಲನವಾಗದೆ ವಸ್ತು ಎರಡಾಗಿ ಕಂಡರೆ - ಕಲೆವು ವೇಳೆ ಹೀಗಾಗುವುದುಂಟು - ವಸ್ತುವಿನ ಗಾತ್ರ ಗ್ರಹಿಕೆ ಸಾಧ್ಯವಾಗುವುದಿಲ್ಲ. ಎಡಬಲಗಳು ಎರಡು ಅಕ್ಷೀಪಟಲಗಳಲ್ಲಿಯೂ ಸಂವಾದೀ ಸ್ಥಾನಗಳಲ್ಲಿ ಹೂರವಸ್ತುವಿನ ಪ್ರತಿಬಿಂಬಗಳು ಉಂಟಾದರೆ ಅವು ಮಾನಸಿಕವಾಗಿ ವೀಲನವಾಗಬಲ್ಲವು. ಹೀಗೆ ಅಕ್ಷೀಸಂವಾದೀ ಸ್ಥಾನಗಳಲ್ಲಿ ಪ್ರತಿಬಿಂಬಗಳು ಉಂಟಾಗದಿದ್ದರೆ ಅವು ಮಿಲನವಾಗದೆ ವಸ್ತು ಎರಡಾಗಿ ಕಾಣಿಸುತ್ತದೆ. ಇನ್ನೊಂದು ಸಂಗತಿ ಎಂದರೆ ಪ್ರತಿಬಿಂಬಗಳು ಒಂದನ್ನೊಂದು ಪೂರ್ಣವಾಗಿ ಹೋಲುವುದಿಲ್ಲ. ಎಡಗಣ್ಣಿನಲ್ಲಿ ಪ್ರತಿಬಿಂಬಿತವಾದ ಹೊರವಸ್ತುವಿನ ಎಡಭಾಗಕ್ಕಿಂತಲೂ ಹೆಚ್ಚು ಭಾಗ ಬಲಗಣ್ಣಿನಲ್ಲಿ ಪ್ರತಿಬಿಂಬಿತವಾಗುತ್ತದೆ. ಅಂದರೆ ಎಡಗಣ್ಣಿನಲ್ಲಿ ವಸ್ತುವಿನ ಹೆಚ್ಚುವರಿ ಎಡಭಾಗವೂ ಪ್ರತಿಬಿಂಬಿತವಾಗಿ ಎರಡು ಕಣ್ಣುಗಳಲ್ಲಿ ಮೂಡಿರುವ ಪ್ರತಿಬಿಂಬಗಳೂ ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತವೆ. ಎರಡು ಕಣ್ಣುಗಳಲ್ಲಿ ಮೂಡುವ ಪ್ರತಿಬಿಂಬಗಳ ಮಾನಸಿಕ ವೀಲನಕ್ಕೆ ಅವುಗಳ ಇಷ್ಟರ ಮಟ್ಟಿನ ಭಿನ್ನತೆ ಅವು ಸಂವಾದೀ ಸ್ಥಾನಗಳಲ್ಲಿ ಇರಬೇಕು. ಈ ಭಿನ್ನತೆ ಅಗಾಧವಾಗಿದ್ದರೆ ಅಥವಾ ಪ್ರತಿಬಿಂಬಗಳು ಪೂರ್ಣವಾಗಿ ಹೊಲುವಂತಿದ್ದರೆ ಆಗಲೂ ಮಾನಸಿಕ ಮಿಲನ ಕಷ್ಟಸಾಧ್ಯ, ಇಲ್ಲವೇ ಅಸಾಧ್ಯ. ಮಾನಸಿಕ ಮಿಲನವಾಗದೇ ಹೋದ ಎಲ್ಲ ಸಂದರ್ಭಗಳಲ್ಲೂ ನೋಡಿದ ವಸ್ತು ಎರಡಾಗಿ ಕಾಣಿಸುತ್ತದೆ. ಆದರೆ ಶೀಘ್ರದಲ್ಲೆ ಒಂದು ಕಣ್ಣಿನಿಂದ ಒದಗುವ ದೃಷ್ಟಿಯ ಅನುಭವ ಅಡಗಿ ವಸ್ತು ಎರಡಾಗಿ ಕಾಣಿಸುವುದು ತಪ್ಪುತ್ತದೆ. ಹೀಗೆ ಅಡಗುವಾಗ ಒಂದು ಪ್ರತಿಬಿಂಬ ಬಲ ಗಣ್ಣಿನದು, ಇನ್ನೊಂದು ಪ್ರತಿಬಿಂಬ ಎಡಗಣ್ಣಿನದು ಅಡಗುತೀರುವುದರಿಂದ ವಸ್ತುವನ್ನು ಆಯಾ ಕಾಲದಲ್ಲಿ ಎಡಗಣ್ಣಿನಿಂದ ಅಥವಾ ಬಲಗಣ್ಣಿನಿಂದ ಮಾತ್ರ ನೋಡಿದಂತೆ ಭಾಸವಾಗುತ್ತದೆ. ಇದಕ್ಕೆ ದ್ವಿನೇತ್ರ ಪೈಪೋಟಿ (ಬೈನಾಕ್ಯುಲರ್ ರೈವಲ್ರಿ) ಎಂದು ಹೆಸರು. ಕೊನೆಗೆ ಯಾವುದೋ ಒಂದು ಕಣ್ಣು ಹೆಚ್ಚು ಸಾಮಥ್ರ್ಯ ಉಳ್ಳದ್ದು, ದೃಷ್ಟಿಕ್ರಿಯೆಯನ್ನು ಮುಂದುವರಿಸುತ್ತದೆ. ವಾಸ್ತವವಾಗಿ ಇದು ಏಕನೇತ್ರದೃಷ್ಟಿಯೇ. ಇಂಥ ಪರಿಸ್ಥಿತಿಯಲ್ಲಿ ವಸ್ತುವಿನ ಗಾತ್ರಗ್ರಹಿಕೆ ಸ್ಥೂಲ, ಕರಾರುವಾಕ್ಕಾಗಿರುವುದಿಲ್ಲ. ಮಾನಸಿಕ ಮಿಲನಕ್ಕೆ ಅಗತ್ಯವಾಗಿರುವುದು ಛಾಯಾಚಿತ್ರವನ್ನಲ್ಲ, ಘನಾಕೃತಿಯುಕ್ತವಾಗಿ ಕಂಡುಬರುವ ನೈಜವಸ್ತುವನ್ನು ಎಂಬ ಭಾವನೆ ಬರುತ್ತದೆ. ಏಕೆಂದರೆ ಚಿತ್ರಗಳು ಹೀಗೆ ಮಾನಸಿಕವಾಗಿ ಮಿಲನವಾದಾಗ ಚಿತ್ರದಲ್ಲಿರುವ ವಸ್ತುಗಳ ಗಾತ್ರ, ಆವುಗಳ ಹಿಂದೆ ಅಥವಾ ಮುಂದೆ ಇರುವ ಇತರ ವಸ್ತುಗಳ ಅಂತರ ಇವು ಕಂಡುಬಂದಂತೆ ಭಾಸವಾಗುತ್ತದೆ. ಘನದರ್ಶಕ (ಸ್ವೀರಿಯೋಸ್ಕೋಪ್) ಎಂಬ ವಿಕ್ಷಣಾ ಪೆಟ್ಟಿಗೆಯ ತಯಾರಿಕೆಯಲ್ಲಿ ಅಳವಡಿಸಿಕೊಂಡಿರುವುದು ಈ ತತ್ವವನ್ನೇ. ಮೇಲೆ ವಿವರಿಸಿರುವ ದೃಷ್ಟಿಕ್ರಿಯೆ ನವಜಾತಶಿಶುವಿನಲ್ಲಿ ಕಂಡು ಬರುವುದಿಲ್ಲ. ಆ ಮಗುವಿನಲ್ಲೂ ಕಣ್ಣು ದೊಡ್ಡವರಂತೆಯೇ ವಿನ್ಯಾಸಗೊಂಡಿರುವುದಾದರೂ ಈ ಮಾತು ನಿಜ. ಮಗು ಕೈಕಾಲುಗಳ ಬಳಕೆಯನ್ನು ಕಲಿತು ಕೊಳ್ಳುವಂತೆಯೇ ಕಣ್ಣಿನ ಬಳಕೆಯನ್ನೂ ಕಲಿತುಕೊಳ್ಳಬೇಕು. ಹೀಗೆಂದು ಹೇಳಿದರೆ ಆಶ್ಚರ್ಯವಾಗಿ ಕಾಣಬಹುದು. ಆದರೆ ಮಗುವಿನಲ್ಲಿ ನೆಟ್ಟನೋಟಸ್ಥಾಪನೆ ಆಗ ಬೇಕಾದರೆ ಕೆಲವು ವಾರಗಳು ಬೇಕು ಎನ್ನುವುದು ಎಳೆಮಕ್ಕಳ ಪಾಲನೆಯಲ್ಲಿ ತೊಡಗಿರುವುವವರೆಲ್ಲರಿಗೂ ಗೊತ್ತು. ನೆಟ್ಟದೃಷ್ಟಿಯಿಂದಲೇ ದ್ವಿನೇತ್ರ ದೃಷ್ಟಿಲಾಭ ಸಾಧ್ಯ ಎನ್ನುವುದನ್ನು ಮೇಲೆ ಹೇಳಿದೆ. ನೆಟ್ಟದೃಷ್ಟಿಗಾಗಿ ಕಣ್ಣುಗುಡ್ಡೆಗಳನ್ನು ಹೊರಳಿಸುವ ಸ್ನಾಯುಗಳ ಸಂಕೋಚನ ಪ್ರಾಬಲ್ಯದ ಅರ್ಥವನ್ನು ಮಗು ಗ್ರಹಿಸಿ ಅದಕ್ಕೆ ತಕ್ಕಂತೆ ಪಾಪೆ ಮಸೂರಗಳಿಗೆ ಸಂಬಂಧಪಟ್ಟ ನಿರಂಕುಶ ಕ್ರಿಯೆಗಳನ್ನು ರೂಢಿಸಿಕೊಳ್ಳುವುದೆಂದು ತೋರುತ್ತದೆ. ಇದರಿಂದ ಅಕ್ಷಿಪಟಲದಲ್ಲಿ ಸ್ಪಷ್ಟಚಿತ್ರ ಮೂಡುವಂತಾಗುತ್ತದೆ. ಆದರೂ ಇಂಥ ಸ್ಪಷ್ಟ ಚಿತ್ರದಿಂದ ಅಕ್ಷೀಪಟದಲ್ಲಿ ಉದ್ಭವವಾಗುವ ನರಪ್ರಚೋದನೆ ಮಿದುಳಿನಲ್ಲಿ ಅರ್ಥವತ್ತಾಗಿ ಪ್ರತಿಕ್ರಿಯೆಯನ್ನ ಹೇಗೆ ಉಂಟುಮಾಡುವುದೆಂಬುದು ಆಶ್ಚರ್ಯದ ಸಂಗತಿಯೇ ಸರಿ. ಮಿದುಳಿನ ಮಿಕ್ಕ ಭಾಗಗಳು ಅವುಗಳ ಅರ್ಥವತ್ತಾದ ಕ್ರಿಯೆಯನ್ನು ರೂಢಿಸಿಕೊಳ್ಳುವುದು ಇನ್ನೂ ತಡ. ಆದರೆ ಸ್ಪರ್ಶ, ಶ್ರವಣ ಮುಂತಾದ ಇತರ ಸಂವೇದನೆಗಳನ್ನು ರೂಢಿಸಿಕೊಂಡ ಮೇಲೆ ದೃಷ್ಟಿಕ್ರಿಯೆ ಹೆಚ್ಚು ಹೆಚ್ಚು ಉಪಯುಕ್ತವಾಗುತ್ತ ಬಂದು ಮಗು ದೃಷ್ಟಿಕಲಿಕೆಯನ್ನು ಪೂರ್ಣಗೊಳಿಸಿಕೊಳ್ಳುತ್ತದೆ.

2 ವರ್ಣ ದೃಷ್ಟಿ: ಸೂರ್ಯ ರಶ್ಮಿಯನ್ನು ಅಶ್ರಗದ (ಪ್ರಿಸ್ಮ) ಮೂಲಕ ವಿಭಜಿಸಿದಾಗ ಉಂಟಾಗುವ ವರ್ಣಪಟಲ (ಸ್ಪೆಕ್ಟ್ರಮ್) ದಲ್ಲಿ 7 ವರ್ಣಗಳಿವೆ. ಎಂದು ವಿವರಿಸಿದ್ದರೂ ವಾಸ್ತವವಾಗಿ ಅದನ್ನು ದೃಷ್ಟಿಸಿ ಸುಮಾರು 130 ವಿವಿಧ ವರ್ಣಗಳನ್ನು (ಹ್ಯೂ) ಗುರುತಿಸಬಹುದು. ವರ್ಣಪಟಲದಲ್ಲಿ ಇಲ್ಲದ ಕೆನ್ನೀಲಿ ಅಥವಾ ಊದಾಬಣ್ಣಗಳಲ್ಲಿ (ಪರ್ಪಲ್) ಸುಮಾರು 20 ವಿಧಗಳನ್ನು ಗುರುತಿಸಬಹುದು. ಪ್ರತಿಯೊಂದು ಬಿಳಿ ಬಣ್ಣದೊಡನೆ ಹೆಚ್ಚಾಗಿ ಅಥವಾ ಕಡಿಮೆಯಾಗಿ ಸೇರಿ ಅದರ ಸಂತೃಪ್ತತೆ (ಸ್ಯಾಚುರೇಷನ್) ತಗ್ಗಿರಬಹುದು. ಈ ಎಲ್ಲಾ ರೀತಿಯ ವ್ಯತ್ಯಾಸಗಳಿಂದ ದೃಷ್ಟಿಗೆ ಪ್ರತ್ಯೇಕವಾಗಿ ಗೋಚರವಾಗುವ ಬಣ್ಣಗಳು ಕೋಟ್ಯಾನುಕೋಟಿ. ಬೆಳಕೂ, ಬೆಳಕಿನಲ್ಲಿ ಕಾಣಿಸುವವಲ್ಲೆವೂ ದ್ಯುತ್ ಕಾಂತ ಶಕ್ತಿಯ ವಿಶಿಷ್ಟ ಅಲೆಯುದ್ದದ ಅಲೆಗಳ ಪ್ರಭಾವ ಎಂದೂ, ಈ ಅಲೆಗಳ ಅಲೆಯುದ್ದ 380 m u ಗಿಂತ ಕಡಿಮೆಯಾಗಿಯೂ 720 m u ಹೆಚ್ಚಾಗಿಯೂ ಇರುವುದಿಲ್ಲವೆಂದೂ ಹಿಂದೆ ಹೇಳಿದೆ. ಅಲೆಯುದ್ದ ಸುಮಾರು 380-400 m u ಇರುವುದು ಅತಿ ನೇರಳೇ ಬಣ್ಣದ (ವಯೊಲೆಟ್) ಅನುಭವವನ್ನು ಉಂಟುಮಾಡುತ್ತದೆ. ಅಲೆಯುದ್ದ ಹೆಚ್ಚು ಹೆಚ್ಚಾದಂತೆ ಕಾಣಿಸುವ ಬಣ್ಣ ನೀಲಿ, ಹಸಿರು, ಹಳದಿ ಆಗಿ ಕಿತ್ತಲೆ ಹಣ್ಣಿನ ಸಿಪ್ಪೆ ಬಣ್ಣದ್ದಾಗಿ, ಕೊನೆಗೆ ಅಲೆಯುದ್ದ 670 m u ಗಿಂತ ಹೆಚ್ಚಾದಾಗ ಅಚ್ಚಕೆಂಪಾಗಿ ಕಾಣಿಸುತ್ತದೆ. ಅಲೆಯುದ್ದ 380 m u ಗಿಂತ ಕಡಿಮೆ ಮತ್ತು 720 m u ಗಿಂತ ಹೆಚ್ಚು ಇರುವ ವಿದ್ಯುತ್ ಕಾಂತ ಅಲೆಗಳು ಕಣ್ಣಿನೊಳ ಹೊಕ್ಕರೂ ಅಕ್ಷಿಪಟದಲ್ಲಿ ರ್ಹೋಡಾಪ್ಸಿನ್ನನ್ನಾಗಲಿ ಅಯೋಡಾಪ್ಸಿನ್ನನ್ನಾಗಲೀ ವಿಭಜನೆ ಮಾಡಲಾರವು. ಅರ್ಥಾತ್ ಅವು ದುಗ್ಗೋಚರವಾಗುವುದಿಲ್ಲ. ಅವುಗಳ ಉಗಮಸ್ಥಾನ ಒಂದು ವಸ್ತುವಾಗಿ ದೃಷ್ಟಿಗೆ ಬೀಳಿವುದಿಲ್ಲ. ಸೂರ್ಯರಶ್ಮಿ ಅಚ್ಚ ಬಿಳಿ ಎಂದು ವಿವರಿಸುವುದು ವಾಡಿಕೆ. ಆಗಸದಲ್ಲಿ ತೋರಿಬಂದ ಮೇಲೆ ಇದು ವರ್ಣಪಟಲವಾಗಿ ಕಾಣಿಸುವುದರಿಂದ ವರ್ಣಪಟಲದ ಎಲ್ಲ ಅಲೆಯುದ್ದದ ಅಲೆಗಳೂ ನೈಸರ್ಗಿಕ ಪರಿಮಾಣದಲ್ಲಿ ಒಟ್ಟಾಗಿ ಅಕ್ಷಿ ಪಟವನ್ನು ಪ್ರಚೋದಿಸುತ್ತವೆ ಎಂಬುದೂ ಹಾಗೆ ಪ್ರಚೋದಿಸಿದಾಗ ಬಿಳಿಬಣ್ಣ ಅನುಭವಕ್ಕೆ ಬರುವುದೆಂಬುದೂ ವ್ಯಕ್ತ. 19ನೆಯ ಶತಮಾನದಲ್ಲಿ ಬಣ್ಣ, ವರ್ಣದೃಷ್ಟಿ ಮುಂತಾದವನ್ನು ವಿಶೇಷವಾಗಿ ವ್ಯಾಸಂಗಿಸಿದ ತಾಮಸ್ ಯಂಗ್ ಮತ್ತು ಹೆಲ್ಮ್ ಹೋಲ್ಟ್ಸ ಎಂಬ ವಿಜ್ಞಾನಿಗಳು ಸಮಪ್ರಮಾಣದಲ್ಲಿ ಕೆಂಪು ಹಸಿರು, ನೀಲಿ, ಬಣ್ಣಗಳು ಒಟ್ಟಿಗೇ ಅಕ್ಷಿಪಟವನ್ನು ಪ್ರಚೋದಿಸಿದಾಗ ಬಿಳುಪಾಗಿ ಕಾಣಿಸುವುದೆಂದೂ ಇವುಗಳಲ್ಲಿ ಎರಡು ಅಥವಾ ಮೂರು ಬಣ್ಣಗಳನ್ನು ವಿವಧ ಪ್ರಮಾಣಗಳಲ್ಲಿ ಸೇರಿಸಿ ವರ್ಣಪಟಲದ ಎಲ್ಲಾ ವರ್ಣಗಳನ್ನೇ ಅಲ್ಲದೆ ಊದಾ ವರ್ಣಗಳನ್ನು ಪಡೆಯಬಹುದೆಂದು ತೋರಿಸಿ ಈ ವರ್ಣಗಳಿಗೆ ಪ್ರಾಥಮಿಕ ವರ್ಣಗಳೆಂದು (ಪ್ರೈಮರಿ ಕಲರ್ಸ್) ಹೆಸರಿಸಿದರು. ದೃಷ್ಟಿಸಿದಾಗ ಪ್ರಾಥಮಿಕ ವರ್ಣಗಳು ವ್ಯಕ್ತಿಗೆ ಪ್ರತ್ಯೇಕವಾಗಿ ಅನುಭವಕ್ಕೆ ಬರುವುದು ಹೇಗೆ ಎಂದು ವಿವಿರಿಸಿದರೆ ಬಿಳುಪೂ ಸೇರಿ ಮಿಕ್ಕ ವಣಗಳೂ ಹೇಗೆ ಅನುಭವಕ್ಕೆ ಬರುತ್ತವೆ ಎನ್ನುವುದು ವಿಷದವಾಗುತ್ತವೆ ಎನ್ನುವ ಸತ್ಯವನ್ನು ಇವರು ಮನಗಂಡು ಅಕ್ಷಿಪಟಲದಲ್ಲಿ ಕೆಂಪು ಹಸಿರು, ನೀಲಿ ಬಣ್ಣದ ದ್ಯುತಿಯಿಂದಲೇ ಪ್ರತ್ಯೇಕವಾಗಿ ಪ್ರಚೋದಿತವಾಗಬಲ್ಲ ಮೂರೂಬಗೆಯ ಕೋಢಗಳು (ಅವು ಶಂಕು ಕೋಶಗಳೇ ಆಗಿರಬೇಕು ಎನ್ನುವುದು ವ್ಯಕ್ತ) ಇರಬೇಕೆಂಬ ತೀರ್ಮಾನಕ್ಕೆ ಬಂದರು. ಯಾವುದಾದರೂ ಒಂದು ಬಗೆಯ ಶಂಕುಕೋಶ ಮಾತ್ರ ಪ್ರಚೋದಿತವಾದರೆ ಅದಕ್ಕೆ ತಕ್ಕ ಪ್ರಾಥಮಿಕ ಅನುಭವವಾಗುತ್ತದೆ. ಮೂರೂ ಬಗೆಯವೂ ಒಟ್ಟಿಗೆ ಪ್ರಚೋದನೆ ಗೊಂಡರೆ ಬಿಳಿಬಣ್ಣವೆಂದೂ ಎರಡು ಅಥವಾ ಮೂರು ಬಗೆಯ ಶಂಕು ಕೋಶಗಳೂ ವಿವಿಧ ಸಂಖ್ಯೆಯಲ್ಲಿ ಪ್ರಚೋದನೆಗೊಂಡರೆ ಮಿಕ್ಕೆಲ್ಲ ವರ್ಣಗಳ ಅನುಭವ ಉಂಟಾಗುವುದೆಂದು ಇವರು ವಿವರಿಸಿದರು. ಅಂದರೆ ಯಾವುದೇ ವರ್ಣದ ಅನುಭವ ಆಗಬೇಕಾದರೂ ಕನಿಷ್ಠವಾಗಿ ಎರಡು ಮೂರು ಶಂಕುಗಳ ಪ್ರಚೋದನೆಗೊಳ್ಳಬೇಕೆಂದೂ ವರ್ಣಾನುಭವ ದೊರೆಯುವ ಅಕ್ಷಿ ಪಟದ ಭಾಗದಲ್ಲಿ ಮೂರು ಬಗೆಯ ಶಂಕುಗಳು ಸಮಸಂಖ್ಯೆಯಲ್ಲಿ ಸಮಾಂತರದಲ್ಲಿ ಇರಬೇಕೆನ್ನುವುದೂ, ಮೂರುಬಗೆಯ ಶಂಕು ಕೋಶಗಳಲ್ಲಿರುವ ಪ್ರಕಾರದಿಂದ ವಿಭಜನೆಗೊಳ್ಳಬಲ್ಲ ರಾಸಾಯನಿಕಗಳು ಬೇರೆ ಬೇರೆ ಆಗಿರಬೇಕೆನ್ನುವುದೂ ಯಂಗ್-ಹೆಲ್ಮ ಹೋಲ್ಟ್ಸ್‍ರ ವರ್ಣ ದೃಷ್ಟಿ ವಿವರಣೆಯಿಂದ ತರ್ಕಿಸಿ ತಿಳಿಯಬಹುದಾದ ವಿಷಯಗಳು. ಇವು ಎಷ್ಟರ ಮಟ್ಟಿಗೆ ನಿಜವೆಂಬುದನ್ನು ನಿಖರವಾದ ಪ್ರಯೋಗಗಳಿಂದ ಸಾಧಿಸಲು ಸಾದ್ಯವಾಗಿಲ್ಲ. ಅಲ್ಲದೆ ಈ ವಿವರಣೆಯ ಪ್ರಕಾರ ಕರೀ ಬಣ್ಣದ ಅನುಭವ ಉಂಟಾಗುವುದು ಹೇಗೆ ಎನ್ನುವುದು ತಿಳಿಯುವಂತಿಲ್ಲ. ಆದರೂ ವರ್ಣದೃಷ್ತಿಯ ಈ ವಿವರಣೆಯೇ ಹೆರಿಂಗ್ ಮುಂತಾದ ಇತರ ವಿಜ್ಞಾನಿಗಳ ವಿವರಣೆಗಳಿಗಿಂತ ಸಮಂಜಸವಾಗಿದೆ. ಹಲವಾರು ಪ್ರಯೋಗಗಳು ವಿವಿಧ ವರ್ಣಾಂಧತೆಗಳು ಇತ್ಯಾದಿಗಳಿಂದ ಸ್ಥೂಲವಾಗಿಯದರೂ ಯಂಗ್-ಹೆಲ್ಮ ಹೋಲ್ಟ್ಸ್‍ರ ವರ್ಣ ದೃಷ್ಟಿ ವಿವರಣೆ ಸರಿಯಾಗಿರಬೇಕು ಎನ್ನಿಸಿದೆ. ವರ್ಣ ದೃಷ್ಟಿ ಲೋಪವಾಗಿರುವ ಸ್ಥಿತಿ ವರ್ಣಾಂಧತೆ, ಪೂರ್ಣ ವರ್ಣಾಂಧತೆ ಅತ್ಯಪರೂಪ. ಇಂಥವರು ಯಾವ ಬಣ್ಣವನ್ನೂ ಗುರುತಿಸಲಾರರು. ಎಲ್ಲವೂ ಬೇರೆ ಬೇರೆ ರೀತಿಯ ಬೂದು ಬಣ್ಣದ್ದಾಗಿ ಇವರಿಗೆ ಕಾಣಿಸುತ್ತದೆ. ಭಾಗಶಃ ವರ್ಣಾಂಧತೆ ಹೆಚ್ಚು ಸಾಮನ್ಯ. ಗಂಡಸರೇ ಹೆಚ್ಚಾಗಿ ವರ್ಣಾಂಧರು, ವರ್ಣಾಂಧತೆ ಅನುವಂಶಿಕ ಎನ್ನುವುದಕ್ಕೆ ಆಧಾರವಿದೆ. ಜನತೆಯಲ್ಲಿ ಸುಮಾರು 6-8% ಗಂಡಸರು ವರ್ಣಾಂಧರಾಗಿರುತ್ತಾರೆಂದು ತಿಳಿದಿದೆ. ಇವರ ಪೈಕಿ ಅನೇಕರಿಗೆ ಕೆಂಪು ಬಣ್ಣ ಇಲ್ಲವೇ, ಹಸಿರು ಬಣ್ಣ ಒಂದನ್ನು ಗುರುತಿಸುವುದಕ್ಕೆ ಆಗುವುದಿಲ್ಲ. ಇವುಗಳಿಗೂ ವರ್ಣ ಪಟಲದಲ್ಲಿನ ಇವುಗಳ ಅಕ್ಕಪಕ್ಕದ ಬಣ್ಣಗಳಿಗೂ ವ್ಯತ್ಯಾಸ ಗೊತ್ತಾಗುವುದಿಲ್ಲ. ಕೆಲವರು ಹಸಿರು ಕೆಂಪು ವರ್ಣಗಳ ವ್ಯತ್ಯಾಸವನ್ನು ಗ್ರಹಿಸಲಾರರು. ನೀಲಿ ವರ್ಣಾಂಧತ್ವ ಅಪರೂಪ. ಜೀವನದಲ್ಲಿ ವರ್ಣಾಂಧತ್ವ ದೋಷದಿಂದ ಗಣನೀಯ ಅನನುಕೂಲತೆ ಏನೂ ಇಲ್ಲ. ಇಂಥವರು ಬಣ್ಣ ಏನೆಂದು ಖಚಿತವಾಗಿ ಗುರುತಿಸಲಾರರಾದರೂ ಏನೋ ವ್ಯತ್ಯಾಸ ಇರುವುದೆಂದು ಗ್ರಹಿಸಿ ಪೂರ್ವಾನುಭವದಿಂದ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಉದ್ಯೋಗಗಳಲ್ಲಿ ವರ್ಣಗಳನ್ನು ಗುರುತಿಸುವುದು ಮುಖ್ಯವಾದಾಗ ವರ್ಣಾಂಧತೆ ಮುಖ್ಯ ದೋಷವೇ. ಬಣ್ಣಬಣ್ಣದ ಹೂ ಗಿಡಗಳ ಅಲಂಕರಿಕ ವ್ಯೂಹ ನಿರ್ಮಾಣದಲ್ಲಿ ನಿರತರಾದ ತೋಟಗಾರರು ವರ್ಣಚಿತ್ರಗಳನ್ನು ಬರೆಯಬೇಕಾದ ಚಿತ್ರಲೇಖಕರು ಮುಂತಾದ ವರ್ಣ ವ್ಯವಹಾರಿಗಳು ಬಾಗಶಃ ವರ್ಣಾಂಧರಾದರೂ ಅನಾನುಕೂಲವೇ. ರೈಲು, ವಿಮಾನ ನಾವೆ, ವಿಶಿಷ್ಟ ಪ್ರಾಮುಖ್ಯ ಇರುವುದು ತಿಳಿದಿರುವ ವಿಷಯ. ಇವನ್ನು ಗುರುತಿಸಲಾರದ ವ್ಯಕ್ತಿಗಳು ಅಂಥ ಸಂಸ್ಥೆಗಳಲ್ಲಿ ಹಾಗೂ ನಿಯಂತ್ರಣದಲ್ಲಿ ಕಾರ್ಯನಿರತರಾಗಿದ್ದರೆ ಅನಾಹುತ ಸಂಭವಿಸಬಹುದು. ವ್ಯಕ್ತಿಯಲ್ಲಿ ವರ್ಣಾಂಧತೆ ಇದೆಯೇ ಇಲ್ಲವೇ ಎಂದು ಕಂಡುಹಿಡಿಯಲೂ, ಇದ್ದರೆ ಅದು ಯಾವ ಬಗೆಯದು ಎನ್ನುವುದನ್ನು ನಿರ್ಣಯಿಸಲು ವಿಶಿಷ್ಟವಾದ ವರ್ಣರಂಜಿತ ನಕಾಶೆಗಳೂ ಇತರ ಸಲಕರಣೆಗಳೂ ಇವೆ. ಯಂಗ್-ಹೆಲ್ಮ ಹೋಲ್ಟ್ಸ್‍ರ ವಿವರಣೆಯಂತೆ ವರ್ಣಾಂಧತೆ ಯಾವುದೋ ಒಂದು ಅಥವಾ ಎರಡು ಬಗೆಯ ಶಂಕುಗಳ ಅಭಾವದಿಂದ ಉಂಟಾಗಿರುತ್ತದೆ ಎಂದು ಅರಿಯಬಹುದು. ವರ್ಣಾಂಧತೆ ಚಿಕಿತ್ಸಾತೀತ.

ದೃಷ್ಟಿವೈಪರೀತ್ಯಗಳು: ತಕ್ಕಷ್ಟು ಹೊಳಪಾದ ವಸ್ತುವನ್ನು ದೃಷ್ಟಿಸಿ ನೋಡಿ ಅನಂತರ ಕಣ್ಣು ಮುಚ್ಚಿಕೊಂಡರೆ ಇಲ್ಲವೇ ನೀಲಿ ಆಕಾಶದೆಡೆಗೋ ಇನ್ನೇನೂ ಇರದ ಬಿಳಿಗೋಡೆಯ ಕಡೆಗೋ ದೃಷ್ಟಿಹರಿಸಿದರೆ ವಸ್ತುವನ್ನು ಇನ್ನೂ ಕ್ಷಣಕಾಲ ನೋಡುತ್ತಿದ್ದೇವೇನೋ ಎನ್ನಿಸುತ್ತದೆ. ವಸ್ತು ಇಲ್ಲದಿರುವುದರಿಂದ ಅಕ್ಷಿಪಟದಲ್ಲಿ ಪ್ರತಿಬಿಂಬವೂ ಇರುವುದಿಲ್ಲ. ಆದರೂ ವಸ್ತು ಹಾಗೂ ಪ್ರತಿಬಿಂಬ ಇದ್ದಾಗಿನ ಅನುಭವವೇ ಕ್ಷಣಕಾಲವಾದರೂ ಮುಂದುವರಿಯುವುದು ಹೇಗೆ ಎಂದು ಖಚಿತವಾಗಿ ತಿಳಿಯದು. ಬಹುಶಃ ಶಂಕುಕೋಶಗಳಲ್ಲಿ ವಸ್ತುವೀಕ್ಷಣೆಯಿಂದ ಆದ ರಾಸಾಯನಿಕ ಬದಲಾವಣೆ ಮತ್ತು ನರಪ್ರಚೋದನೆಗಳು ಅಕ್ಷಿಪಟದಲ್ಲಿ ಪ್ರತಿಬಿಂಬವಿಲ್ಲದಿದ್ದರೂ ಕ್ಷಣಕಾಲ ಮುಂದುವರಿಯುವುವೆಂದು ತೋರುತ್ತದೆ. ಆದ್ದರಿಂದ ಅಲ್ಲಿ ಪ್ರತಿಬಿಂಬ ಇದೆಯೇನೋ ಎಂದು ಭಾಸವಾಗುತ್ತದೆ. ಇಂಥ ಕಾಲ್ಪನಿಕ ಪ್ರತಿಬಿಂಬಕ್ಕೆ ಅನುಬಿಂಬ (ಆಫ್ಟರ್ ಇಮೇಜ್) ಎಂದು ಹೆಸರು. ಅಕ್ಷಿಪಟದಲ್ಲಿ ಅನುಬಿಂಬವಿರುವಂತೆ ಭಾಸವಾಗುತ್ತಿದ್ದರೂ ಅದೇ ಸ್ಧಳದಲ್ಲಿ ಬೇರೆ ವಸ್ತುವಿನ ಪ್ರತಿಬಿಂಬ ಪ್ರತ್ಯಕ್ಷವಾಗಿ ಮೂಡಿ ಅದು ಅರಿವಿಗೆ ಬರುವುದು ಸಾಧ್ಯ.

ಹೊಸ ಪ್ರತಿಬಿಂಬ ಅನುಬಿಂಬದ ಅನುಭವವನ್ನೇ ಮುಂದುವರಿಸಬಹುದಾದ್ದರಿಂದ ಕಣ್ಣನ್ನು ಶೀಘ್ರವಾಗಿ ಚಲಿಸುತ್ತ ಓದುವುದು, ಚುರುಕಾಗಿ ಕೆಲಸ ಮಾಡುವುದು ಇವೆಲ್ಲ ಸಾಧ್ಯವಾಗಿದೆ. ಅಲ್ಲದೆ ಅನುಬಿಂಬದಿಂದ ಪ್ರಭಾವಿತವಾದ ಅಕ್ಷಿಪಟದ ಭಾಗ ಇನ್ನೊಂದು ಪ್ರತಿಬಿಂಬ ಮೂಡಿದಾಗ ಸೂಕ್ಷ್ಮತರವಾಗಿ ಪರಿವರ್ತಿಸುವುದೂ ತಿಳಿದಿದೆ. ಅನುಬಿಂಬದಿಂದ ಅಕ್ಷಿಪಟದ ಆ ಭಾಗ ಮಾತ್ರ ಈ ರೀತಿ ಪ್ರಭಾವಗೊಳ್ಳುವುದಲ್ಲದೆ ಅದರ ನೆರೆಯ ಪ್ರಾಂತ್ಯವೂ ಪ್ರಭಾವಗೊಂಡಿರುತ್ತದೆ ಇದರಿಂದ ಅನುಬಿಂಬದ ಅನುಭವ ವಿಶಿಷ್ಟ ಪೂರ್ಣವಾಗಿರುತ್ತದೆ. ಉದಾಹರಣೆಗೆ ಉಜ್ವ್ವಲವಾದ ಒಂದು ಕೆಂಪು ಶಿಲುಮೆಯನ್ನು ದೃಷ್ಟಿಸಿನೋಡಿದೆವೆನ್ನೋಣ ಕೂಡಲೆ ಕಣ್ಣು ಮುಚ್ಚಿಕೊಂಡರೆ ಹಸಿರು ಶಿಲುಮೆಯನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ದೃಷ್ಟಿಪಟಲದ ಮೇಲೆ ಅನುಬಿಂಬದ ಪ್ರಭಾವ ಇರುವುದೇ ಇದರ ಕಾರಣ. ಆದರೆ ಕಣ್ಣನ್ನು ಕೆಂಪು ಗೋಡೆಯ ಕಡೆ ತಿರುಗಿಸಿದರೆ ಹಸಿರು ಶಿಲುಮೆ ಕಂಡಂತಾಗುವುದೇ ಅಲ್ಲದೆ ಆ ಕಾಲದಲ್ಲಿ ಶಿಲುಮೆಯ ಸುತ್ತಲೂ ಸಹಜ ಪ್ರತಿಬಿಂಬವಾಗಿ ಕೆಂಪುಗೋಡೆ ಅದು ಇರುವಷ್ಟು ಕೆಂಪಾಗಿ ಕಾಣುವುದಿಲ್ಲ.

ಚಿತ್ರ-3

ಇದೇ ರೀತಿ ಹಸಿರು ಬಣ್ಣದ ಹಿನ್ನೆಲೆಯಲ್ಲಿರುವ ಕೆಂಪು ನಕ್ಷತ್ರವನ್ನು ವೀಕ್ಷಿಸುತ್ತಿರುವಾಗ ಹಿನ್ನೆಲೆಯ ಹಸಿರೂ ನಕ್ಷತ್ರದ ಕೆಂಪೂ ಅವು ಇರುವುದಕ್ಕಿಂತಲೂ ಹೆಚ್ಚು ಹೊಳಪಿನಿಂದ ಕಾಣಬರುವುದೆನ್ನುವುದು ಅದೇ ಹಸಿರು ಅದೇ ಕೆಂಪನ್ನು ಬಿಳಿ ಹಿನ್ನೆಲೆಯಲ್ಲಿ ನೋಡಿದರೆ ಗೊತ್ತಾಗುತ್ತದೆ. ಈ ದೃಷ್ಟಿ ವೈಪರೀತ್ಯಕ್ಕೆ ಅನುಬಿಂಬದ ಪ್ರಭಾವ ಕಾರಣವಲ್ಲ. ವಸ್ತು ಮತ್ತು ಅದರ ಹಿನ್ನೆಲೆಗಳ ವ್ಯತ್ಯಾಸ ಇರುವುದಕ್ಕಿಂತಲೂ ಹೆಚ್ಚಾಗಿದ್ದಂತೆ ಭಾಸವಗುವುದರ ಮತ್ತು ಅನುಬಿಂಬದ ಪ್ರಭಾವವಿರುವುದರ ಕಾರಣ ಶಂಕುಕೋಶಗಳು ತಮ್ಮ ನರಕೋಶಗಳೊಡನೆ ಸಂಪರ್PÀಗೊಂಡಿದ್ದು ಅವುಗಳಿಂದ ಪ್ರಭಾವಿತವಾಗುವುದೇ ಅನುಬಿಂಬದ ಪ್ರಭಾವದಿಂದ ಛಲಿಸುವ ದೃಷ್ಟಿವೃಪರೀತ್ಯಕ್ಕೆ ಅನುಕ್ರಮ ವೈದೃಶ್ಯ ಎಂದೂ (ಸಕ್ಸೆಸಿವ್ ಕಾನ್ಟ್ರಾಸ್ಟ್) ಅಸದೃಶ್ಯ ಹಿನ್ನೆಲೆಯಿಂದ ಫಲಿಸುವ ದೃಷ್ಟಿ ವೈಪರೀತ್ಯಕ್ಕೆ ಏಕಕಾಲಿಕ ವೈದ್ಯಶ್ಯ ಎಂದು (ಸೈಮೆಲ್ಟೇನಿಯಸ್ ಕಾನ್‍ಟ್ರಾಸ್ಟ್) ಹೆಸರು. ದೃಷ್ಟಿ ಭ್ರಾಂತಿ (ಆಪ್ಟಿಕ್ ಇಲ್ಯೂಷನ್) ಇನ್ನೊಂದು ದೃಷ್ಟಿ ವೈಪರೀತ್ಯ. ಇದರಲ್ಲಿ ವಸ್ತು ಅಥವಾ ಚಿತ್ರ ಹೇಗಿದೆಯೋ ಹಾಗೆ ಕಾಣದೆ ಬೇರೆ ಆಗಿರುವಂತೆ ಕಾಣಿಸುತ್ತದೆ. ನೋಡಿದ ವಸ್ತು ಚಿತ್ರದಲ್ಲಿ ಲಘಕೋನ ಇರುವುದಕ್ಕಿಂತ ಚೂಪಾಗಿಯೋ ಅಧಿಕಕೋನ ಇರುವುದಕ್ಕಿಂತ ಅಗಲವಾಗಿಯೂ ಇರುವಂತೆ ಮಿದುಳಿನಲ್ಲಿ ಸಾಮಾನ್ಯವಾಗಿ ಗ್ರಹಿಸಲ್ಪಡುವುದರಿಂದ ಅನೇಕ ದೃಷ್ಟಿಭ್ರಾಂತಿಗಳು ಉಂಟಾಗುತ್ತವೆ. ದೃಷ್ಟಿಸಿದ ವಸ್ತುವಿನ ಅರ್ಥಗ್ರಹಿತೆ ದೃಷ್ಟಿ ವೈಪರೀತ್ಯವಾಗಿ ಪರಿಣಮಿಸಬಹುದು. ನೋಡಿದ ಚಿತ್ರ ಅಪೂರ್ಣವಾಗಿದ್ದರೂ ಹಿಂದಿನ ಅನುಭವದ ಫಲವಾಗಿ ಪೂರ್ಣವಾಗಿದೆಯೆಂದೇ ಗ್ರಹಿಸುವುದು, ವಸ್ತುವಿನ ಆವರಣವನ್ನು ಗಮನಿಸಿ ವಸ್ತು ಏನೆಂದು ಗ್ರಹಿಸುವುದು ಮತ್ತು ಹಿಂದಿನ ಅನುಭವದ ಫಲವಾಗಿ ಪೋರ್ಣವಾಗಿದೆಯೆಂದೇ ಗ್ರಹಿಸುವುದು, ವಸ್ತುವಿನ ಆವರಣವನ್ನು ಗಮನಿಸಿ ವಸ್ತು ಏನೆಂದು ಗ್ರಹಿಸುವುದು ಮತ್ತು ಹಿಂದಿನ ಅನುಭವಕ್ಕೆ ಅನುಸಾರವಾಗಿಯೇ ಒಂದು ಚಿತ್ರವನ್ನು ಅರ್ಥ ಮಾಡಿಕೊಳ್ಳುವುದು ಇವೆಲ್ಲ ಎಲ್ಲರಲ್ಲೂ ಒಂದೇ ರೀತಿಯಲ್ಲಿ ಇರುವುದಿಲ್ಲ.

4 ದೃಷ್ಟಿ ದೋಷಗಳು: ದೃಷ್ಟಿದೋಷಗಳು ಬಹುವಾಗಿ ಕಣ್ಣಿನಲ್ಲಿ ವಕ್ರೀಕರಣಕ್ಕೆ ಸಂಬಂಧಪಟ್ಟವು. ಇಂಥ ದೋಷಗಳಿರುವವರಲ್ಲ್ಲಿ ಅಕ್ಷಿಪಟದ ಮೇಲೆ ಬಾಹ್ಯ ವಸ್ತುಗಳ ಪ್ರತಿಬಿಂಬ ಸ್ಪಷ್ಟವಾಗಿ ಮೂಡುವುದಿಲ್ಲ. ಶಾಲಾ ಪ್ರವೇಶ ಮಾಡುವ 5-6ವರ್ಷದ ಮಕ್ಕಳನ್ನೇ ಗಣಿಸಿದರೆ 5% ಮಕ್ಕಳಲ್ಲಿ ಇಂಥ ದೃಷ್ಟಿದೋಷ ಇರುವುದೆಂದು ತಿಳಿಯುತ್ತದೆ. ಪ್ರೌಢಶಾಲೆಗೆ ಹೋಗುವ ಬಾಲಕರ ಪೈಕಿ 25% ಬಾಲಕರÀಲ್ಲೂ, ಕಾಲೇಜು ವಿದ್ಯಾರ್ಥಿಗಳಲ್ಲಿ 30% ವಿದ್ಯಾರ್ಥಿಗಳಲ್ಲೂ ದೃಷ್ಟಿದೋಷ ಕಂಡುಬರುತ್ತದೆ. ಅಂದರೆ ವಯಸ್ಸಾದಂತೆ ದೃಷ್ಟಿದೋಷ ಕಾಣಿಸಿ ಕೊಳ್ಳುವುದು ಹೆಚ್ಚು ಎಂದಾಯಿತು. 60 ವರ್ಷ ವಯಸ್ಸು ಮೀರಿದವರಲ್ಲಿ ಪ್ರಾಯಶಃ ಎಲ್ಲರಲ್ಲೂ ದೃಷ್ಟಿದೋಷವಿರುವುದೆಂದು ಅಂದಾಜಿಸಲಾಗಿದೆ. ಇದನ್ನು ಪತ್ತೆ ಮಾಡಲು ಸ್ನೆಲ್ಲೆನ್ನನ ಪರೀಕ್ಷಾನಕ್ಷೆ ಅಥವಾ ಇದರಂಥ ಚಿತ್ರಪಟವನ್ನು ಬಳಸುತ್ತಾರೆ.

ಇದರ ವಿವರಗಳನ್ನು ಮುಂದಿನ ದೃಷ್ಟಿಮಾಪನ ವಿಭಾಗದಲ್ಲಿ ತಿಳಿಸಲಾಗಿದೆ.

ಸಾಮಾನ್ಯ ದೃಷ್ಟಿದೋಷ: ಬಹಳ ಸಾಮಾನ್ಯ ದೃಷ್ಟಿದೋಷವೆಂದರೆ 40 ವರ್ಷದ ಸುಮಾರಿಗೆ ಹತ್ತಿರದ ವಸ್ತುಗಳನ್ನು ನೋಡಲು ತೊಂದರೆಯಾಗುತ್ತದೆ. ಓದುವುದು ಬರೆಯುವುದು ಕಷ್ಟವಾಗುತ್ತದೆ ಎಂದು ಪ್ರಾರಂಭವಾಗುವ ದೂರದೃಷ್ಟಿ ಚಾಳೀಸಿನ ತೊಂದರೆ ಎಂದು ಕರೆಯಲ್ಪಡುವ ಈ ದೋಷದಲ್ಲಿ ಕಣ್ಣಿನ ಒಳಗಿರುವ ಮಸೂರವು ಗಟ್ಟಿಯಾಗಿ ಕಣ್ಣಿನ ಸಣ್ಣ ಮಾಂಸಗಳಿಂದ ರೂಪಾಂತರಗೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆಗ ಸೂಕ್ತ ಪೀನ ಮಸೂರವನ್ನು ಕನ್ನಡಕದ ರೂಪದಲ್ಲಿ ತೊಡುವುದರಿಂದ ತೊಂದರೆಯನ್ನು ನಿವಾರಿಸಬಹುದು.

ಲಕ್ಷಣಗಳಾವುವು? : ವಿವಧ ದೃಷ್ಟಿದೋಷವಿರುವವರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ; ತಲೆನೋವು, ಬಹಳ ಹೊತ್ತು ಕಣ್ಣಿಗೆ ಕೆಲಸ ಕೊಟ್ಟಾಗ ಸುಸ್ತಾಗುವುದು. ಕಣ್ಣಿನ ಒಳಬಾಗದಲ್ಲಿ ನೋವು. ಬೆಳಕನ್ನು ಹೆಚ್ಚುಹೊತ್ತು ನೋಡಲು ಆಗದೇ ಇರುವುದು ಮತ್ತು ಮುಖ್ಯವಾಗಿ ದೃಷ್ಟಿ ಕಡಿಮಯಾಗಿರುವುದು. ಈ ಎಲ್ಲಾ ತೊಂದರೆಗಳ ಕಾರಣ ಎಂದರೆ: ಅಕ್ಷಿಪಟಲದ ಮೇಲೆ ಅಸ್ಪಷ್ಟ ಆಕೃತಿ ಮೂಡುವುದರಿಂದ ಕಣ್ಣಿನ ವಿವಧ ಸಣ್ಣ ಮಾಂಸಗಳು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಿ ಉಂಟಾಗಿರುವ ತೊಂದರೆಯನ್ನು ಸರಿಮಾಡಲು ಪ್ರಯತ್ನಿಸುತ್ತದೆ.

ಕೆಲವುಬಾರಿ ದೃಷ್ಟಿದೋಷಗಳು ಅನುವಂಶಿಕವಾಗಿರುತ್ತವೆ. ಬಹಳ ದೊಡ್ಡ ಪ್ರಮಾಣದ ದೃಷ್ಟಿದೋಷ ಇರುವವರಲ್ಲಿ ಹೆಚ್ಚಿನ ಸಂದರ್ಬಗಳಲ್ಲಿ ಕಣ್ಣಿನಲ್ಲಿ ಬೇರೆ ಕಾಯಿಲೆಗಳಿರಬಹುದು. ಉದಾಃ ರಾತ್ರಿ ದೃಷ್ಟಿ ಮಾಂದ್ಯ.

ಹುಟ್ಟಿನಿಂದ ಕಣ್ಣು ಬಹಳ ಸಣ್ಣದಿರುವುದು. ಕಣ್ಣು ಯಾವಾಗಲೂ ಅದರುತ್ತಿರುವುದು. ಅಕ್ಷಿಪಟಲ ಕಳಚುವಿಕೆ (ರೆಟಿನಲ್ ಡಿಟ್ಯಾಚ್ ಮೆಂಟ್) ಇತ್ಯಾದಿ.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ತಲೆನೋವು ಎಂದಾಕ್ಷಣ ಕನ್ನಡಕ ಹಾಕಿದರೆ ತಲೆನೋವು ಹೋಗುತ್ತದೆ ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ. ಆದರೆ ಅದು ಸರಿಯಲ್ಲ. ತಲೆನೋವಿಗೆ ವಿವಿಧ ಕಾರಣಗಳಿವೆ. ಕಣ್ಣಿನ ತೊಂದರೆ ಇಲ್ಲದೆ ಮೂಗಿನಲ್ಲಿ ತೊಂದರೆ ನರದೋಷಗಳು, ಮೈಗ್ರೇನ್ ತಲೆನೋವು- ಹೀಗೆ ಹತ್ತು ಹಲವು ಕಾರಣಗಳಿವೆ. ದೃಷ್ಟಿದೋಷದ ಕಾರಣದಿಂದ ತಲೆನೋವು ಉಂಟಾಗಿದ್ದರೆ ಸೂಕ್ತ ಕನ್ನಡಕ ಹಾಕಿದರೆ ತಲೆನೋವು ನಿವಾರಣೆ ಆಗುತ್ತದೆ. ಆದರೆ ಬೇರೆ ಸಂದರ್ಬಗಳಲ್ಲಿ ಅಲ್ಲ. 
ದೃಷ್ಟಿದೋಷದ ಪ್ರಬೇದಗಳು: ಮುಖ್ಯವಾದ ದೃಷ್ಟಿದೋಷವೆಂದರೆ ಸಮೀಪ ದೃಷ್ಟಿ (ಮಯೋಪಿಯಾ), ದೂರ ದೃಷ್ಟಿ (ಹೈಪರ್ ಮೆಟÉ್ರೂೀಪಿಯಾ), ಅಸಮನಿಟ್ಟ (ಅಸ್ಟಿಗ್ಮ್ಯಾಟಿಸಮ್).

ಈ ಎಲ್ಲಾ ದೃಷ್ಟಿದೋಷಗಳಲ್ಲಿ ಇರುವ ಮುಖ್ಯದೋಷ ಎಂದರೆ, ಸಾಮಾನ್ಯ ಎಲ್ಲರಲ್ಲಿಯಂತೆ ಬೆಳಕಿನ ಕಿರಣಗಳು ಬೆಳಕನ್ನು ಗ್ರಹಿಸುವ ಅಕ್ಷಿ ಪಟಲದ ಮೇಲೆ ಕೇಂದ್ರೀಕರಣಗೊಳ್ಳುವದಿಲ್ಲ. ಅದಕ್ಕೆ ಕಾರಣ ಕೆಳಗಿನ ಯಾವ ಒಂದು ಅಂಶವೂ ಆಗಿರಬಹುದು.

1. ಕಣ್ಣು ಗುಡ್ಡೆ ತೀರಾ ಸಣ್ಣದಿರಬಹುದು. ಅಥವಾ ತೀರಾ ದೊಡ್ಡದಿರಬಹುದು. 
2. ಕಾರ್ನಿಯ ಮತ್ತು ಮಸೂರಗಳ ಕಿರಣಗಳನ್ನು ವಕ್ರೀಭವಿಸುವ ಭಾಗಗಳು ಅಸಾಮಾನ್ಯವಾಗಿ ಡೊಂಕಾಗಿರಬಹುದು.
3. ಕಿರಣಗಳನ್ನು ವಕ್ರೀಭವಿಸುವ ಭಾಗಗಳ- ವಕ್ರೀಭವನ ಸೂಚಕವು ವ್ಯತ್ಯಾಸವಾಗಿರಬಹುದು.
4. ಮಸೂರವು ತನ್ನ ಸಾಮಾನ್ಯ ಜಾಗದಲ್ಲಿ ಇಲ್ಲದೇ ಇರುವುದು.

ಸಮೀಪ ದೃಷ್ಟಿ: ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗಲು ಆರಂಬಿಸುವಾಗ ಬೋರ್ಡಿನಲ್ಲಿ ಬರೆದದ್ದು ಕಾಣಿಸುವುದಿಲ್ಲ ಎನ್ನುವಾಗ, ಈ ರೀತಿಯ ದೃಷ್ಟಿದೋಷ ಪಾಲಕರಿಗೆ ಗೊತ್ತಾಗುತ್ತದೆ. ಇದರಲ್ಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಮುಂಬಾಗದಲ್ಲಿ ಕೇಂದ್ರೀಕರಣ ಗೊಳ್ಳುತ್ತದೆ. ಕೆಲವು ಮಕ್ಕಳಿಗೆ ಹುಟ್ಟುವಾಗಲೇ ಈ ರೀತಿಯ ದೃಷ್ಟಿದೋಷ ಇರುತ್ತದೆ. ಕೆಲವರಿಗೆ ಈ ರೀತಿಯ ದೃಷ್ಟಿದೋಷ ಬಹಳಬೇಗ ಹೆಚ್ಚಾಗುತ್ತಾ ಹೋಗುತ್ತದೆ. ಇಂಥವರಲ್ಲಿ ಕಣ್ಣಿನ ಅಕ್ಷಿಪಟಲವು ಕ್ಷೀಣವಾಗುವ ಚಿಹ್ನೆಗಳು ಕಾಣಿಸಿಕೊಂಡು, ದೃಷ್ಟಿಯ ಪತನವಾಗುತ್ತಾ ಹೋಗುತ್ತದೆ. ಸಮೀಪ ದೃಷ್ಟಿಯ ಮುಖ್ಯಕಾರಣಗಳೆಂದರೆ -ಕಣ್ಣಿನ ಬೆಳವಣಿಗೆಯನ್ನು ನಿಯಂತ್ರಿಸುವ ತಳಿಶಾಸ್ತ್ರದ

ಕಾರಣಗಳು (ಜೆನೆಟಿಕ್ ಫ್ಯಾಕ್ಟರ್ಸ) ಆಹಾರದಲ್ಲಿ ಸತ್ವಹೀನತೆ, ನಿಶ್ಯಕ್ತಿ ಮಾಡುವ ರೋಗಗಳು, ದೇಹದ ನಾಳವಿಲ್ಲದ ಅಂಗಗಳ (ಎಂಡೋಕ್ರೈನ್ ಗ್ಲ್ಯಾಂಡ್ಸ) ವ್ಯತ್ಯಾಸಗಳು. ಸಾಮನ್ಯರು ತಿಳಿದಂತೆ ಹೆಚ್ಚು ಹತ್ತಿರದ ಕೆಲಸ ಮಾಡಿದರೆ ಈ ರೀತಿಯ ದೋಷ ಬರುತ್ತದೆ ಎಂಬ ಭಾವನೆ ತಪ್ಪು.

ಈ ದೋಷದ ಇನ್ನೊಂದು ಮುಖ್ಯ ಅಂಶÀವೆಂದರೆ ಬೇರೆ ಎಲ್ಲರಿಗಿಂತ ಈ ರೀತಿಯ ದೃಷ್ಟಿದೋಷ ಇರುವವರಲ್ಲಿ ಮುಂದೆ ತೀವ್ರ ರೀತಿಯ ತೊಡಕಿನ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಉದಾ: ಕಣ್ಣಿನ ಅಕ್ಷಿಪಟಲ ಕಳಚುವಿಕೆ. (ರೆಟಿನಲ್ ಡಿಟ್ಯಾಚ್ ಮೆಂಟ್), ತೆರೆದ ಕೋನದ ಗ್ಲೂಕೋಮಾ, ಇತ್ಯಾದಿ.

ಚಿಕಿತ್ಸೆ: ದೋಷ ಗೊತ್ತಾದ ಕೂಡಲೆ ಸೂಕ್ತ ಕನ್ನಡಕ ತೊಟ್ಟು ದೋಷವನ್ನು ನಿವಾರಿಸಬಹುದು. ಅಲ್ಲದೆ ಸೂಕ್ತ ಆಹಾರ ಜೀವ ಸತ್ವಗಳು, ಹಾಲು ತರಕಾರಿ ಹೆಚ್ಚು ಉಪಯೋಗಿಸಬೇಕು.

ದೂರದೃಷ್ಟಿ: ಇದರಲ್ಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಹಿಂಬಾಗದಲ್ಲಿ ಕೇಂದ್ರೀಕರಣ ಗೊಳ್ಳುತ್ತದೆ. ತಲೆನೋವು, ಹೆಚ್ಚು ಓದಿದರೆ ಕಣ್ಣು ಗುಡ್ಡೆಯ ನೋವು ಎಂಬ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಣ್ಣ ಮಕ್ಕಳು ಒಂದು ಕಣ್ಣು ಒಳಗೆ ಬರುವ ಮೆಳ್ಳಗಣ್ಣು (ಕನ್ವರ್ಜೆಂಟ್ ಸ್ಕ್ವಿಂಟ್) ದೋಷ ಇರುವ ಮಕ್ಕಳಲ್ಲಿ ಸಹಿತ ಈ ರೀತಿಯ ದೃಷ್ಟಿದೋಷ ಇರಬಹುದು. ಚಾಳೀಸಿನ ತೊಂದರೆ ಯ ದೃಷ್ಟಿದೋಷವೂ ಈ ಗುಂಪಿಗೇ ಸೇರುತ್ತದೆ. ಕಣ್ಣಿನ ಪೊರೆಯ ಶಸ್ತ್ರಕ್ರಿಯೆಯ ಅನಂತರ ಕಾಣಿಸಿಕೊಳ್ಳುವ ದೋಷವು ಇದೇ ಗುಂಪಿಗೆ ಸೇರುತ್ತದೆ.

ಚಿಕಿತ್ಸೆ: ಸೂಕ್ತ ಕನ್ನಡಕ ಧರಿಸುವುದು.

ಅಸಮ ದೃಷ್ಟಿ: ಸಾಮಾನ್ಯವಾಗಿ 15 ರಿಂದ 30 ವರ್ಷದವರಲ್ಲಿ ಎಲ್ಲ ದೃಷ್ಟಿದೋಷಗಳಿಗಿಂತ ಹೆಚ್ಚು ಕಾಣಿಸಿಕೊಳ್ಳುವ ಈ ದೋಷದಲ್ಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಒಂದೇ ಕೇಂದ್ರದ ಮೇಲೆ ಕೇಂದ್ರೀಕರಣಗೊಳ್ಳದೆ, ರೋಗಿಗೆ ಮುಖ್ಯವಾಗಿ ತಲೆನೋವು ಮತ್ತು ಮತ್ತು ತೀವ್ರ ಪ್ರಮಾಣದ ಕಣ್ಣಿನ ನೋವನ್ನು ಕೊಡುತ್ತದೆ.

ಚಿಕಿತ್ಸೆ: ಕಣ್ಣಿಗೆ ಔಷಧ ಹಾಕಿ ವಿವರವಾಗಿ ಪರೀಕ್ಷಿಸಿ ಸೂಕ್ತ ಕನ್ನಡಕ ತೊಡುವುದು.

ಇತ್ತೀಚಿನ ವರ್ಷಗಳಲ್ಲಿ ದೃಷ್ಟಿದೋಷಗಳನ್ನು ನಿವಾರಿಸಲು ಕನ್ನಡಕಗಳು, ಕಾಂಟ್ಯಾಕ್ಟ್ ಲೆನ್ಸ್ ಗಳೇ ಅಲ್ಲದೆ ಲ್ಯಾಸಿಕ್ ಸರ್ಜರಿ ಅಥವಾ ಚಿಕಿತ್ಸೆ ಬಂದಿದೆ. ಸ್ವಲ್ಪ ಪ್ರಮಾಣದಲ್ಲಿ ಜನಪ್ರಿಯವೂ ಆಗುತ್ತಿದೆ. ಈ ಚಿಕಿತ್ಸೆಯ ಬಗೆಗೆ ಸ್ವಲ್ಪ ವಿವಾದವೂ ಇದೆ.

ದೃಷ್ಟಿಯ ಮಾಪನ: ಒಂದು ವ್ಯಕ್ತಿ ನೇತ್ರ ವೈದ್ಯನಲ್ಲಿ ಬಂದು ನನಗೆ ಇತ್ತೀಚೆಗೆ ದೃಷ್ಟಿ ಕಡಿಮೆಯಾಗಿದೆಯೆಂದು ಅನ್ನಿಸುತ್ತದೆ. ಕಡಿಮೆಯಾಗಿದ್ದರೆ ಎಷ್ಟು ಕೆಡಿಮೆಯಾಗಿದೆ ಹೇಳುತ್ತೀರಾ? ಎಂದು ಕೇಳಿದಾಗ ನೇತ್ರ ವೈದ್ಯ ಬಂದ ವ್ಯಕ್ತಿಯ ಸರಿಯಾದ ದೃಷ್ಟಿಯ ಮಾಪನ ಮಾಡಬೇಕಾಗುತ್ತದೆ. ಹಾಗಾದರೆ ದೃಷ್ಟಿಯ ಮಾಪನ

ಮಾಡುವುದು ಹೇಗೆ?

ಅಂತಹ ಸಂದರ್ಬದಲ್ಲಿ ಮುಖ್ಯವಾಗಿ ಎರಡು ರೀತಿಯ ದೃಷ್ಟಿಯ ಮಾಪನ ಅಗತ್ಯ.

ವ್ಯಕ್ತಿಯ ದೂರ ದೃಷ್ಟಿಯ ಮಾಪನದಲ್ಲಿ ವ್ಯಕ್ತಿ ಫಲಕದಿಂದ ಸಾಮಾನ್ಯವಾಗಿ 6 ಮೀಟರ್ ಅಥವಾ 30 ಅಡಿ ದೂರದಲ್ಲಿರುತ್ತಾನೆ. ಸಾಮಾನ್ಯವಾಗಿ ಈ ದೂರದಿಂದ ಬರುವ ಬೆಳಕಿನ ರೇಖೆಗಳು ಸಮಾನಾಂತರವಾಗಿರುತ್ತವೆ ಎಂಬ ದೃಷ್ಟಿಯಿಂದ ಮತ್ತು ಪರೀಕ್ಷೆಗೆ ಅನುಕೂಲವಾಗಲೆಂಬ ವ್ಯಾವಹಾರಿಕ ದೃಷ್ಟಿಯಿಂದ 30 ಅಡಿ ದೂರವನ್ನು ಆಯ್ದು ಕೊಳ್ಳಲಾಗಿದೆ. ಅಲ್ಲದೆ ಈ ದೂರದಲ್ಲಿ ಂಛಿಛಿomoಜಚಿಣioಟಿ ಇರುವುದಿಲ್ಲ. ಫಲಕದಲ್ಲಿ ಅಕ್ಷರಗಳು ಮೇಲಿನಿಂದ ಕೆಳಗೆ ಪ್ರಮಾಣದಲ್ಲಿ ಸಣ್ಣದಾಗುತ್ತಾ ಹೋಗುತ್ತವೆ.

ಈ ಅಕ್ಷರಗಳನ್ನು ಉಪಯೋಗಿಸುವಲ್ಲಿಯೂ ಬಹಳಷ್ಟು ಲೆಖ್ಖಾಚಾರವಿದೆ. ಯಾವುದೇ ಪ್ರಮಾಣದ ಅಕ್ಷರ ಕಣ್ಣಿನೊಳಗೆ ಒಂದು ನಿರ್ದಿಷ್ಟ ಬಿಂದು (ಓoಜಚಿಟ Poiಟಿಣ) ವಿನಲ್ಲಿ 1 ಮಿನಟ್ ದೃಷ್ಟಿಯ ಕೋನವನ್ನು (ಗಿisuಚಿಟ ಂಟಿgಟe) ಉಂಟುಮಾಡಬೇಕೆಂಬ ನಿಯಮದ ಮೇಲೆ ಆಯ್ದ ಅಕ್ಷರಗಳನ್ನು ಮಾತ್ರ ಈ ಫಲಕದಲ್ಲಿ ಉಪಯೋಗಿಸಲಾಗುತ್ತದೆ. ಸಾಮಾನ್ಯ ಎಲ್ಲರ ದೂರ ದೃಷ್ಟಿ 6/6 ಇರಬೇಕು. ವ್ಯಕ್ತಿ ಮೇಲಿನ ದೊಡ್ಡ ಅಕ್ಷರವನ್ನು ಮಾತ್ರ ಓದಲು ಸಾದ್ಯವಾದರೆ ನಾವು ಅವನ ದೃಷ್ಟಿ 6/60 ಎಂದು ದಾಖಲಿಸುತ್ತೇವೆ. ಅಂದರೆ ಅಂತಹ ವ್ಯಕ್ತಿ, ಸಾಮಾನ್ಯ ಆರೋಗ್ಯವಂತ ಮನುಷ್ಯ -60 ಮೀಟರ್ ದೂರದಲ್ಲಿ ಓದಬಹುದಾದ ಅಕ್ಷರವನ್ನು 6 ಮೀಟರ್ ದೂರದಲ್ಲಿ ಓದಲು ಸಾದ್ಯ ಎಂದು ಅರ್ಥ. ಫಲಕದ ಎರಡನೆಯ ಸಾಲಿನ ಅಕ್ಷರ ಆ ವ್ಯಕ್ತಿ ಓದಿದಾಗ 6/36 ಎಂದು ದಾಖಲಿಸುತ್ತೇವೆ. ಹೀಗೆಯೇ ಪ್ರತಿಯೊಂದು ಸಾಲಿನ ಅಕ್ಷರಗಳಿಗೂ ನಿರ್ದಿಷ್ಟವಾದ ದೂರದ ಸೂಚಕವಿರುತ್ತದೆ. ಹಾಗಾಗಿ ಮೇಲಿನಿಂದ ಕೆಳಗೆ ಹೇಳುವುದಾದರೆ ನಾವು ದಾಖಲಿಸಬಹುದಾದ ದೃಷ್ಟಿಯ ಪ್ರಮಾಣ ಹೀಗಿದೆ. 6/60, 6/36, 6/24, 6/18, 6/12, 6/9, 6/6, ಹೀಗೆ ನಾವು ದೃಷ್ಟಿಯ ಪ್ರಮಾಣವನ್ನು ದಾಖಲಿಸುವಾಗ ಎಡಗಣ್ಣು ಮತ್ತು ಬಲಗಣ್ಣುಗಳ ದೃಷ್ಟಿಯನ್ನು ಬೇರೆ ಬೇರೆಯಾಗಿಯೇ ಪರೀಕ್ಷಿಸುತ್ತೇವೆ. ಏಕೆಂದರೆ ಎಷ್ಟೋ ಸಂದರ್ಬಗಳಲ್ಲಿ ಆಗುವಂತೆ ಎರಡೂ ಕಣ್ಣುಗಳಿಗೂ ದೃಷ್ಟಿಯಲ್ಲಿ ವ್ಯತ್ಯಾಸವಿರಬಹುದು. ಯಾವುದೇ ಕಣ್ಣಿನಲ್ಲಿ ದೃಷ್ಟಿಯ ಪ್ರಮಾಣ 6/6 ಕ್ಕಿಂತ ಕಡಿಮೆ ಇದ್ದರೆ ಅದರ ಕಾರಣವನ್ನು ನೇತ್ರ ವೈದ್ಯ ಹುಡುಕಲೇ ಬೇಕಾಗುತ್ತದೆ. ವಿವಿಧ ದೃಷ್ಟಿ ದೋಷಗಳು, ಕಣ್ಣಿನ ವಿವಿಧ ಕಾಯಿಲೆಗಳು - ಅದರಲ್ಲಿಯೂ ಮುಖ್ಯವಾಗಿ ಕಣ್ಣಿನ ಪೊರೆ (ಮೋತಿ ಬಿಂದು), ಗ್ಲೂಕೋಮಾ, ಕಣ್ಣಿನ ದೃಷ್ಟಿ ನರದ ಕಾಯಿಲೆಗಳು, ಅಕ್ಷಿಪಟಲದ ಕಾರಣಗಳು-ಹೆಚ್ಚಿನ ಸಂದರ್ಬಗಳಲ್ಲಿ ದೂರದೃಷ್ಟಿ ಕಡಿಮೆಯಗಲು ಕಾರಣವಾಗುತ್ತವೆ.

ಎರಡನೆಯ ದೃಷ್ಟಿ ಮಾಪನ ಎಂದರೆ ವ್ಯಕ್ತಿಯ ಸಮೀಪ ದೃಷ್ಟಿಯನ್ನು ಅಳೆಯುವುದು. ಇದರಲ್ಲಿ ಒಳ್ಳೆಯ ಬೆಳಕಿನಲ್ಲಿ ವ್ಯಕ್ತಿ ಸಾಮನ್ಯವಾಗಿ ಹತ್ತಿರ ಓದುವಷ್ಟು ದೂರದಲ್ಲಿ ವಿವಿಧ ಸಣ್ಣ ಪ್ರಮಣದ ಅಕ್ಷರಗಳನ್ನು ಓದಿಸುತ್ತೇವೆ. ಈ ಓದುವ ಅಥವಾ ಹತ್ತಿರ ಕೆಲಸ ಮಾಡುವ ದೂರ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರಬಹುದು. ಉದಾಹರಣೆಗೆ: ಬ್ಯಾಂಕಿನಲ್ಲಿ ಆಫೀಸಿನಲ್ಲಿ ಕೆಲಸ ಮಾಡುವವರಿಗೆ 50 ರಿಂದ 80 ಸೆಂಟಿ ಮೀಟರಿನ ದೂರದಲ್ಲಿ ಅಕ್ಷರಗಳು ಸರಿಯಾಗಿ ತೋಚಿದರೆ ಸಾಕು. ಅದೇ ಚಿನ್ನದ ಕೆಲಸಮಾಡುವವರಿಗೆ, ಶ್ರೀಗಂಧ ಅಥವಾ ಇತರ ಮರದ ಕುಶಲ ಕೆಲಸ ಮಾಡುವವರಿಗೆ ಇನ್ನೂ ಸಣ್ಣ ವಸ್ತುಗಳು ಇನ್ನೂ ಹತ್ತಿರದಲ್ಲಿ ಸ್ಪಷ್ಟವಾಗಿ ತೋರಬೇಕಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಸಮೀಪ ದೃಷ್ಟಿಯ ಪರೀಕ್ಷೆಯನ್ನು ಮಾಡುತ್ತೇವೆ.

ಸಾಮನ್ಯವಾಗಿ ಪ್ರತಿಯೊಬ್ಬ ವ್ಯಕ್ತಿ ದೂರ ನೋಡಿ, ತಕ್ಷಣವೇ ಹತ್ತಿರ ನೋಡಿದಾಗ ಸರಿಯಾಗಿ ಕಾಣಿಸಲು ಕಣ್ಣಿನ ನೈಸರ್ಗಿಕ ಮಸೂರಕ್ಕೆ ಸಂಬಂಧ ಪಟ್ಟ ಸ್ನಾಯುಗಳು ಸಂಕುಚಿತಗೊಳ್ಳಬೇಕಾದ ಅವಶ್ಯಕತೆಯಿದೆ. ಆದರೆ ವ್ಯಕ್ತಿ 40 ವರ್ಷದವನಾದಾಗ (ಇದು ಒಂದೆರಡು ವರ್ಷ ಹೆಚ್ಚು ಅಥವಾ ಕಡಿಮೆಯಿರಬಹುದು) ನೈಸರ್ಗಿಕ ಮಸೂರದ ಈ ಸ್ನಾಯುಗಳು ಮಾಡುತ್ತಿದ್ದ ಕೆಲಸ ಮಾಡಲು ನಾವು ಪೀನ ಮಸೂರವನ್ನು ಕನ್ನಡಕದ ರೂಪದಲ್ಲಿ ಕೊಡುತ್ತೇವೆ. ಆಗ ಮಸಕಾದ ಅಕ್ಷರಗಳು ವ್ಯಕ್ತಿಗೆ ಸ್ಪಷ್ಟವಾಗುತ್ತದೆ. ಈ ರೀತಿಯ ದೃಷ್ಟಿ ದೋಷ ನಿದಾನವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಸಾಮನ್ಯವಾಗಿ 60-65 ವರ್ಷದ ಸುಮಾರಿಗೆ ವ್ಯಕ್ತಿಗೆ ಕಣ್ಣಿನ ಪೊರೆ ತನ್ನ ಬೆಳವಣಿಗೆಯನ್ನು ಶುರು ಮಾಡುವವರೆಗೂ ಈ ರೀತಿಯ ದೃಷ್ಟಿ ದೋಷ ಮುಂದುವರೆಯುತ್ತದೆ. ವ್ಯಕ್ತಿಗೆ ಕಣ್ಣಿನ ಪೊರೆಯ ಆರಂಭದ ಹಂತಗಳಲ್ಲಿ ಇದಕ್ಕೆ ವಿರುದ್ದವಾದ ದೃಷ್ಟಿ ದೋಷ ಕಾಣಿಸಿಕೊಳ್ಳುವುದರಿಂದ ಆಗ ವ್ಯಕ್ತಿಗೆ ಕನ್ನಡಕ ಇಲ್ಲದೆ ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸಲು ಆರಂಬವಾಗುತ್ತದೆ. ಇದನ್ನೇ ಕೆಲವರು ಚಾಳೀಸು ಹರಿಯುವುದು ಎಂದು ಬಣ್ಣಿಸುತ್ತಾರೆ. ಆದರೆ ಆಗ ದೂರದ ವಸ್ತುಗಳು ಮಸುಕಾಗಲಾರಂಬಿಸುತ್ತದೆ. ಕಣ್ಣಿನ ಬಗೆಗಿನ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು

ಭಾರತದಂತಹ ದೇಶದಲ್ಲಿ ಯಾವುದೇ ವಿಚಾರದ ಬಗ್ಗೆ ನಂಬಿಕೆಗಳು ಹಾಗೂ ಮೂಢನಂಬಿಕೆಗಳು ಇದ್ದೇ ಇರುತ್ತವೆ. ಅದೂ ಆರೋಗ್ಯದ ವಿಚಾರದಲ್ಲಿ ಆಯಾ ಪ್ರಾಂತ್ಯ, ಸ್ಧಳಕ್ಕನುಗುಣವಾಗಿ, ಒಂದು ಜನಾಂಗದ ಸಾಮಾಜಿಕ, ಶೈಕ್ಷಣಿಕ ಮಟ್ಟಕ್ಕನುಸಾರವಾಗಿ ಇವು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಸ್ತರದಲ್ಲಿ ಇರುತ್ತದೆ.

ಅಜ್ಞಾನ, ಕುರುಡು ನಂಬಿಕೆ, ಬಡತನ, ಜನಸಂಖ್ಯಾ ಹೆಚ್ಚಳ ಈ ಎಲ್ಲಾ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ನಮ್ಮ ಗ್ರಾಮೀಣ ಜನತೆ ಯಾವುದೇ ದೈಹಿಕ ವ್ಯತ್ಯಾಸ ಅಥವಾ ಸೋಂಕು ಅಥವಾ ಕಾಯಿಲೆಯಾದಾಗ ಇನ್ನೊ ಭೂತ, ದೆವ್ವ, ಪಿಶಾಚಿ ಎಂದು ಯಾವುದೋ ಕಲ್ಲಿಗೆ, ಯಾವುದೋ ಮರದ ಬುಡಕ್ಕೆ ಅಥವಾ ಯಾವುದೋ ಗುಡಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿಸಿ ಎಲ್ಲವೂ ಸರಿಯಾಗುತ್ತದೆ ಎಂದು ಕಾಯಿಲೆಯ ಆರಂಭದ ಬಹು ಮುಖ್ಯ ಸಮಯವನ್ನು ಅನಗತ್ಯವಾಗಿ ವ್ಯಯಿಸಿ, ಕಾಯಿಲೆ ಉಲ್ಬಣಾವಸ್ಧೆಯ ಹಂತದಲ್ಲಿ ವೈದ್ಯರಲ್ಲಿಗೆ ಬಂದು ದಿಢೀರ್ ಎಂದು ಕಾಯಿಲೆ ವಾಸಿಯಾಗಬೇಕೆಂದು ನಿರೀಕ್ಷಿಸುತ್ತಾರೆ. ಉದಾ: ಕಾರ್ನಿಯದ ತೀವ್ರ ಸೋಂಕು — 25 ವರ್ಷದ ಯುವತಿಗೆ. ಆಕೆಗೆ ನಿಂಬೆಹಣ್ಣನ್ನು ಮಂತ್ರಿಸುವುದರಿಂದ ಹಿಡಿದು ಯಾವುದೋ ಪೂಜಾರಿ ಹೇಳಿದ ಎಂದು ಎಂತದೋ ವಿಶೇಷ ಪೂಜೆ ಮಾಡಿಸಿ ತಮ್ಮಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡು, ಕೊನೆಯ ಪ್ರಯತ್ನವಾಗಿ ನೇತ್ರವೈದ್ಯರಲ್ಲಿಗೆ ಬಂದರೆ ಅಷ್ಟರಲ್ಲಿ ಸೋಂಕು ತೀವ್ರವಾಗಿ ಚಿಕಿತ್ಸಯನ್ನು ಬಹಳದಿನ ಮಾಡಬೇಕಾಗುತ್ತದೆ. ವೆಚ್ಚವೂ ಜಾಸ್ತಿಯಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕಣ್ಣನ್ನು ಕಾಯಿಲೆಪೂರ್ವದ ಸ್ಧಿತಿಗೆ ತರಲು ಸಾಧ್ಯವಾಗುವುದಿಲ್ಲ. ಇದೇ ಯುವತಿ ಕಾಯಿಲೆ ಆರಂಭದ ದಿನವೇ ಸೂಕ್ತ ನೇತ್ರ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಆರಂಭಿಸಿದ್ದರೆ ಒಂದೇ ವಾರದಲ್ಲಿಯೇ ಪೂರ್ಣ ಪ್ರಮಾಣದ ಗುಣ ಸಾಧ್ಯ. ಖರ್ಚು ಕಡಿಮೆ, ನಷ್ಟವೂ ಕಡಿಮೆ. 30 ವರ್ಷದ ಗಂಡಸು, ಕಣ್ಣು ಒಂದು ವಾರದಿಂದ ಕೆಂಪಾಗಿದೆ. ಬಹುಶ: ಉಷ್ಣದಿಂದ ಹೀಗಾಗಿದೆ ಎಂಬ ನಂಬಿಕೆಯಿಂದ ಈತ ಒಂದು ವಾರ ತಡವಾಗಿ ನೇತ್ರ ವೈದ್ಯನಲ್ಲಿ ಬಂದರು.ಆಗಲೇ ಒಂದು ಕಣ್ಣನ್ನು ಆಂಶಿಕವಾಗಿ ಮಂಜುಮಾಡಿತ್ತು ಆ ಕಾಯಿಲೆ. ಅದನ್ನು ಕಡಿಮೆ ಮಾಡಲು ದಿನಕ್ಕೆ ನಾಲ್ಕು ಮಾತ್ರ ಸೇವಿಸುವಂತೆ ಸೂಚಿಸಿದರೆ, ಅಲೋಪತಿಯ ಮಾತ್ರೆಗಳು ದೇಹಕ್ಕೆ ಉಷ್ಣವಾಗುತ್ತದೆ ಎಂಬ ತನ್ನದೇ ತರ್ಕದಲ್ಲಿ ದಿನಕ್ಕೆ ಒಂದು ಮಾತ್ರೆ ಮಾತ್ರ ಸೇವಿಸಿ ಒಂದು ವಾರದ ನಂತರ ವೈದ್ಯರಲ್ಲಿಗೆ ಬಂದಾಗ, ಕಾಯಿಲೆ ತೀರ ಉಲ್ಬಣಾವಸ್ಧೆಗೆ ಹೋಗಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಿ, ತೀವ್ರ ತರದ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಒದಗಿತು.

35 ವರ್ಷದ ಒಬ್ಬರಿಗೆ ಒಂದು ಕಣ್ಣು ಕೆಂಪಾಯಿತು ಆಗ ಊರಿನಲ್ಲಿ ಮಂದಿಗೆ ಕಣ್ಣು ಕೆಂಪಾಗಿದ್ದು ವಿವಿಧ ಔಷಧಿಗಳನ್ನು ಉಪಯೋಗಿಸುತ್ತಿದ್ದರು. ಕಣ್ಣಿನ ಹೊರಗಿನ ಪದರದ ಸೋಂಕಾದ ಕಂಜಂಕ್ವಿವೈಟಿಸ್ ಇರಬೇಕೆಂದು ಇವರೂ ಅದೇ ಔಷಧಗಳನ್ನು ಉಪಯೋಗಿಸತೊಡಗಿದರು. 10 ದಿನಗಳ ನಂತರ ಕಣ್ಣು ವಿಪರೀತ ಕೆಂಪಾಗಿ, ದೃಷ್ಟಿ ಕಡಿಮೆಯಾದಾಗ ವೈದ್ಯರಲ್ಲಿಗೆ ಓಡಿದರು. ಅದು ತಾರಕೆಸುತ್ತಿನುರಿತ ಎಂಬ ಗಂಭೀರ ಕಾಯಿಲೆ ಎಂದು ತೀವ್ರ ತರದ ಚಿಕಿತ್ಸೆಗೆ ತೂಡಗಿದರು. ಜನಸಾಮಾನ್ಯರಲ್ಲಿ ಕಣ್ಣು ಕೆಂಪಾಗಿದೆ ಎಂದ ಕೂಡಲೇ 'ಕಂರಂಕ್ವಿವೈಟಿಸ್ ಎಂದು ಅಲಕ್ಷಿಸಿ, ತೀವ್ರ ತರದ ಚಿಕಿತ್ಸೆಗೆ ತೂಡಗಿದರು. ಜನಸಾಮಾನ್ಯರಲ್ಲಿ ಕಣ್ಣು ಕೆಂಪಾಗಿದೆ ಎಂದ ಕೂಡಲೇ 'ಕಂಜಂಕ್ಟಿವೈಟಿಸ್ ಎಂದು ಅಲಕ್ಷಿಸಿ, ತೀವ್ರ ತರಹದ ಪರಿಣಾಮಗಳನ್ನು ಎದುರಿಸಿದ ಉದಾಹರಣೆಗಳು ಹೇರಳವಾಗಿವೆ.

ತಪ್ಪುಕಲ್ಲನೆ: ಹಾಗೆ 'ಕೆಂಗಣ್ಣು 'ಕೆಂಪುಕಣ್ಣು 'ಕೋಳಿಕಣ್ಣು 'ಮದ್ರಸ್ ಕಣ್ಣು ಎಂದು ವಿವಿಧ ರೀತಿಯಲ್ಲಿ ಕರೆಯಲ್ಪಡುವ ಕಣ್ಣಿನ ಕೆಂಪು-ಕಣ್ಣಿನ ಹೊರಗಿನ ಪದರದ ಸೋಂಕಾದ ಕಂಜಂಕ್ವಿವೈಟಿಸ್ ಕಾಯಿಲೆಯ ತತ್ಸಮವಾದ ಹೊರಗಿನ ಪದರದ ಬಳಸಲ್ಪಡುತ್ತಿದೆ. ಅದು ಶುದ್ಧ ತಪ್ಪು. ಏಕೆಂದರೆ 'ಕೆಂಗಣ್ಣು ಒಂದು ರೋಗ ಲಕ್ಷಣವೇ ಹೊರತು ಅದೇ ಒಂದು ಕಾಯಿಲೆಯಲ್ಲ. (ಉದಾ: 'ಜ್ವರ ಹೇಗೆ ಕಾಯಿಲೆಯಲ್ಲಿ-ರೋಗ ಲಕ್ಷಣ ಮಾತ್ರ ಎಂದು ನಾವು ಹೋಳುತ್ತೇವೆಯೋ ಹಾಗೆ) ಕಂಜಂಕ್ವಿವೈಟಿಸ್ ಒಂದು ಕಾಯಿಲೆ. ಕೆಂಗಣ್ಣು ಕಂಜಂಕ್ವಿ ವೈಟಿಸ್ ಒಂದು ಕಾಯಿಲೆಯಲ್ಲದೆ ಇನ್ನು ಎಷ್ಟೋ ವ್ಯಾಧಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾ: ಮೇಲೆ ತಿಳಿಸಿದ ಗ್ಲೊಕೊಮಾ, ತಾರಕೆಸುತ್ತಿನುರಿತ, ಕಾರ್ನಿಯದ ಮೇಲಿನ ಸೋಂಕಾದ್ದರಿಂದ ಏನೂ ತೀವ್ರ ಚಿಕಿತ್ಸೆ ಇಲ್ಲದೆ ಅದು ತನ್ನಷ್ಟಕ್ಕೆ ಗುಣವಾಗುವ ಸಾಧ್ಯತೆಗಳು ಬಹಳ. ಆದರೆ ಉಳಿದ ಕಾಯಿಲೆಗಳಾದ ಗ್ಲೊಕೊಮಾ, ತಾರಕೆಸುತ್ತಿನುರಿತ, ಕಾರ್ನಿಯದ ಮೇಲಿನ ಹುಣ್ಣು - ಇವೆಲ್ಲವುಗಳಲ್ಲಿ ಶೀಘ್ರವಾದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಸಿಗದಿದ್ದರೆ ಕಣ್ಣಿನ ರಚನೆ ಮತ್ತು ಕೆಲಸಕ್ಕೆ ತೀವ್ರ ರೀತಿಯ ತೊಡಕನ್ನು ಉಂಟು ಮಾಡುತ್ತವೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಅಂತಹ ಕಣ್ಣು ಪೂರ್ಣ ಪ್ರಮಾಣದ ಅಥವಾ ಆಂಶಿಕ ಅಂಧತ್ವ ಪಡೆಯುತ್ತದೆ.

ಅಪಾಯಕಾರಿ: ಇನ್ನೊಂದು ಪ್ರಮುಖ ವಿಚಾರವೆಂದರೆ ಯಾವುದೇ ಕಾಯಿಲೆಗೆ ಸ್ವಯಂ ಔಷಧ ಮಾಡಿಕೊಳ್ಳುವುದು ಅಪಾಯಕಾರಿ. ಇದು ಅಲ್ಲದೇ ಬೇರೆ, ಯಾವುದೋ ಸಂದರ್ಭದಲ್ಲಿ ಬೇರೆ ಯಾರಿಗೋ ಕೊಟ್ಟ ಔಷಧಿಯನ್ನು ಉಪಯೋಗಿಸುವುದು ಇನ್ನೊ ಅಪಾಯಕಾರಿ. ಅಲ್ಲದೇ ಮೂರ್ಖತನ ಕೂಡ. ಕೆಂಗಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳ ಬಗ್ಗೆ ಹೇಳುವುದಾದರೆ-ಅವುಗಳ ಚಿಕಿತ್ಸಾಕ್ರಮ ತೀರಾ ಭಿನ್ನ ಮತ್ತು ವಿರುದ್ಧ ದಿಕ್ಕಿನವು. ಏಕೆಂದರೆ ತಾರಕೆಸುತ್ತಿನುರಿತ ಮತ್ತು ಕಾರ್ನಿಯದ ಮೇಲಿನ ಹುಣ್ಣು ಕಾಯಿಲೆಗಳಿಗೆ ಅಗತ್ಯವಾಗಿ ಕೊಡಬೇಕಾದ ಅಟ್ರೋಪೀನ್ ಔಷಧವನ್ನು ಗ್ಲೊಕೋಮಾದಲ್ಲಿ ಕೊಟ್ಟರೆ. ಪರಿಣಾಮ-ಶೀಘ್ರ ಅಂಧತ್ವ, ಗ್ಲೊಕೋಮಾದಲ್ಲಿ ಅಗತ್ಯ ಕೊಡಬೇಕಾದ ಔಷಧಿ-ಪೈಲೋಕಾರ್‍ನ್ನು ತಾರಕೆಸುತ್ತಿನುರಿತ, ಕಾರ್ನಿಯದ ಹುಣ್ಣುಗಳಿಗೆ ಕೊಟ್ಟರೆ ಆಯಾ ಕಾಯಿಲೆಗಳು ತೀವ್ರ ರೀತಿಯಲ್ಲಿ ಉಲ್ಬಣಿಸುತ್ತವೆ. ಹಾಗಾಗಿ ಈ ಎಲ್ಲಾ ಕಾಯಿಲೆಗಳಲ್ಲಿಯೋ ನಿಖರವಾದ ರೋಗ ಪತ್ತೆ ಹಚ್ಚುವಿಕೆ ಅತ್ಯಾವಶ್ಯ.

ಮೆಳ್ಳಗಣ್ಣು ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಎಷ್ಟೋ ವೇಳೆ ನಮ್ಮಲ್ಲಿ ಇದನ್ನು ಶುಭ ಸೂಚಕ ಎಂಬ ನಂಬಿಕೆಯಲ್ಲಿ ತೀವ್ರವಾಗಿ ಅಲಕ್ಷ್ಯ ಮಾಡುತ್ತಾರೆ. 6 ರಿಂದ 8 ವರ್ಷಗಳ ಒಳಗೆ ಚಿಕಿತ್ಸೆ ಮಾಡಿದರೆ ಎಷ್ಟೋ ವೇಳೆ ಕಣ್ಣು ಕುರುಡಾಗುವುದನ್ನು ತಪ್ಪಿಸಬಹುದು.

ಕಣ್ಣಿನ ಭಾಗದಲ್ಲಿ ಯಾವುದೇ ಬಿಳಿಯ ಬಣ್ಣದ ಲಕ್ಷಣ ಕಾಣಿಸಿಕೊಂಡರೋ ಅದನ್ನು 'ಹೂ ಕೂರುವುದು ಎಂಬ ತಪ್ಪು ನಂಬಿಕೆಯಿಂದ ವಿವಿಧ ಸಸ್ಯಗಳ ರಸಗಳನ್ನು ಕಣ್ಣಿಗೆ ಬಿಟ್ಟು ಕಾಯಿಲೆ ಉಲ್ಬಣಗೊಳಿಸಿಕೊಂಡು ವೈದ್ಯರಲ್ಲಿ ಬರುತ್ತಾರೆ. ಈ ತರಹದ ಬಿಳಿಯ ಬಣ್ಣಕ್ಕೆ ಹೆಚ್ಚಿನ ವೇಳೆ ಕಾರ್ನಿಯದ ಭಾಗದ ಗಾಯ, ಹುಣ್ಣು ಕಾರಣವಾದರೂ ಕೆಲವೊಮ್ಮೆ ಕಣ್ಣಿನ ಪೊರೆ ತೀರ ಬೆಳೆದು, ಬೆಳ್ಳಗಾದಾಗ ಅದನ್ನು ಸಹಿತ 'ಹೂ ಕೂರುವುದು ಎಂದು ಬ್ರಾಂಡ್ ಮಾಡಲಾಗುತ್ತದೆ. ಆದರೆ ಈ ಪೊರೆಗೆ ಶಸ್ತ್ರಕ್ರಿಯೆ ಮಾಡಿ ನಿವಾರಿಸಿ ದೃಷ್ಟಿಕೊಡಬಹುದು.

ಕನ್ನಡಕಗಳ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿವೆ. ಹೆಚ್ಚಿನವರಲ್ಲಿ 40 ವರ್ಷಗಳ ನಂತರ ಬರುವ ಹತ್ತಿರದ ವಸ್ತುಗಳು ಕಾಣುವುದಿಲ್ಲ ಎಂಬ ತೊಂದರೆಯಲ್ಲಿ ಮಾತ್ರ ಇದರ ಉಪಯೋಗ ಎಂಬ ತಪ್ಪು ಕಲ್ಪನೆಯಿದೆ. ಇನ್ನೊ ತೀವ್ರ ತರದ ದೂರದ ದೃಷ್ಟಿ ದೋಷ ಇರುವವರು ಮಾತ್ರ ಇದನ್ನು ಉಪಯೋಗಿಸಬೇಕು ಎಂಬ ಭಾವನೆ ಇದೆ. ಆದರೆ ಇವೆರಡೂ ತಪ್ಪು. ಇದಿಷ್ಟೆ, ಅಲ್ಲದೆ ಇನ್ನೊ ಹಲವು ಬಗೆಯ ದೃಷ್ಟಿದೋಷಗಳಲ್ಲಿ, ತಲೆನೋವು ಬರಿಸುವ ತೊಂದರೆಗಳಲ್ಲಿ ಇದನ್ನು ಉಪಯೋಗಿಸಬೇಕಾಗುತ್ತದೆ. ಕನ್ನಡಕವನ್ನು ಉಪಯೋಗಿಸುತ್ತಾ ಹೋದರೆ ಅದಕ್ಕೆ ಅಂಟಿಕೊಳ್ಳಬೇಕಾಗುತ್ತದೆ ಎಂದು ಹಲವರ ಭಾವನೆ. ಆದರೆ ಅದನ್ನು ಉಪಯೋಗಿಸಬೇಕಾದ ಅನಿವಾರ್ಯತೆ ಇರುವವರು ಅದನ್ನು ನಿಯಮಿತವಾಗಿ ಉಪಯೋಗಿಸಲೇಬೇಕು. ಇಲ್ಲದಿದ್ದರೆ ಅವರಿಗೆ ದೃಷ್ಟಿ ಕಡಿಮೆಯಾಗುವುದಲ್ಲದೆ. ಕಣ್ಣಿನ ಮಾಂಸಖಂಡಗಳಿಗೆ ತೊಂದರೆಯಾಗಿ ವಿವಿಧ ರೀತಿಯ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಕನ್ನಡಕÀ ಧರಿಸಿದರೆ ಸೌಂದರ್ಯ ಹಾಳಾಗುತ್ತದೆ-ಕಣ್ಣಿನ ಸುತ್ತ ಕಪ್ಪು ಬಣ್ಣ ಬರುತ್ತದೆ ಎಂದು ಹಲವರು ಧರಿಸದೇ ತೊಂದರೆ ಮಾಡಿಕೊಳ್ಳತ್ತಾರೆ.

ಕನ್ನಡದ ನಿಯಮಿತವಾಗಿ ಧರಿಸುವವರು ಕನ್ನಡಕ ಕೆಲವು ಹೊತ್ತಿಗೆ ತೆಗೆದಾಗ ಕಣ್ಣು ಬಹಳ ಮಬ್ಬಾಗುತ್ತದೆ. ಹಾಗಾಗಿ ಕಣ್ಣಿಗೆ ಏನೋ ತೊಂದರೆಯಾಗಿದೆ ಎಂಬ ಸಂಶಯಪಡುತ್ತಾರೆ. ಇದು ತಪ್ಪು, ದೃಷ್ಟಿಯನ್ನು ಹೆಚ್ಚು ಮಾಡುವ ಕನ್ನಡಕಗಳ್ನನು ತೆಗೆದಾಗ, ದೃಷ್ಟಿ ಕಡಿಮೆಯಾಗುವುದು ತೀರಾ ಸ್ವಾಭಾವಿಕ.

ಸಿಹಿಮೂತ್ರ ರೋಗ, ಏರು ರಕ್ತದೊತ್ತಡ ಮೊದಲಾದ ದೈಹಿಕ ಕಾಯಿಲೆಗಳಿರುವ ರೋಗಿಗಳು ನಿಯಮಿತವಾಗಿ ತಮ್ಮ ಆಯಾ ಕಾಯಿಲೆಗಳ ಪರೀಕ್ಷೆಗಳ ಜೊತೆಗೆ, ಕನಿಷ್ಠ 6 ತಿಂಗಲಿಗೊಮ್ಮೆಯಾದರೂ ವಿವರವಾದ ನೇತ್ರ ಪರೀಕ್ಷೆ, ಮಾಡಿಸಬೇಕಾಗುತ್ತದೆ. ಆರಂಭದಲ್ಲಿ ಒಂದೆರಡು ಬಾರಿ ಈ ರೀತಿಯ ಪರೀಕ್ಷೆ ಮಾಡಿಸಿ, ನಂತರ ನಿರ್ಲಕ್ಷ್ಯ ಮಾಡುವ ಪ್ರವೃತ್ತಿ ಬಹಳವಿದೆ. ಇದರಿಂದ ರೋಗಿಗೆ ಬಹಳ ಹಾನಿ ಆಗುತ್ತದೆ ಎಂದು ತಿಳಿಯಬೇಕು.

ಕಣ್ಣಿನ ಕೆಲವು ಕಾಯಿಲೆಗಳಾದ ಗ್ಲೊಕೊಮಾ, ತಾರಕೆಸುತ್ತನುರಿತ, ಮಕ್ಕಳಲ್ಲಿ ಮೆಳ್ಳಗಣ್ಣು-ಇವುಗಳಲ್ಲಿ ಬಹಳ ದೀರ್ಘಕಾಲದವರೆಗೆ ಪದೇ ಪದೇ ಮಾಡುತ್ತಿರಬೇಕಾಗುತ್ತದೆ. ಇದನ್ನು ತೀರಾ ನಿಯಮಿತವಾಗಿ ಪಾಲಿಸುವುದು ರೋಗಿಯ ದೃಷ್ಟಿಯಿಂದ ಬಹಳ ಒಳ್ಳೆಯದು.

ಕಣ್ಣಿಗೆ ಅಪಘಾತವಾಗಿ ಕಾರ್ನಿಯಕ್ಕೆ ಏಟು ಬಿದ್ದು ಹೊಲಿಗೆ ಹಾಕಬೇಕಾದಾಗ ಸ್ವಲ್ಪ ಪ್ರಮಾಣದ ದೃಷ್ಟಿಯ ನಷ್ಟ ಸ್ವಾಭಾವಿಕ. ಆದರೆ ಹೆಚ್ಚಿನ ರೋಗಿಗಳು, ಅವರ ಸಂಬಂಧಿಕರು, ಮೊದಲು ಎಷ್ಟೇ ಹೇಳಿದ್ದರೂ ನಂತರದ ಪರಿಣಾಮವನ್ನು ಸ್ವೀಕರಿಸಲು ಸಿದ್ಧವಿರುವುದಿಲ್ಲ. ಅಪಘಾತವಾದಾಗ ಅದರ ಪರಿಣಾಮಕ್ಕೆ ಅನುಗುಣವಾಗಿ ಒಂದು ಹಂತದ ನಷ್ಟ ಆಗಿಯೇ ಆಗುತ್ತದೆ. ಅದರ ಬಗ್ಗೆ ವೈದ್ಯರು ವಿವರಿಸಿದಾಗ ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು.

ಎಲ್ಲಕ್ಕಿಂತ ಹೆಚ್ಚಾಗಿ ನಿಯಮಿತವಾಗಿ. ಆಯಾಯ ಕಾಯಿಲೆಗೆ ಅನುಗುಣವಾಗಿ ಬಳಸಬೇಕಾದ ಔಷಧದ ಪ್ರಮಾಣದ ಬಗ್ಗೆ ತಮ್ಮದೇ ವಿಶ್ಲೇಷಣೆ ಮಾಡಿ, ಬಳಸಿ ತೀವ್ರ ತರದ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದೂ ಇದೆ.

ಒಟ್ಟಿನಲ್ಲಿ ಯಾವುದೇ ಕಾಯಿಲೆಯ ಚಿಕಿತ್ಸೆಗೆ ರೋಗಿಯ ಸಹಕಾರ ತೀರಾ ಅವಶ್ಯಕ. ತಜ್ಞ ವೈದ್ಯರ ಸಲಹೆಯಂತೆ ನಡೆಯುವುದು ರೋಗಿಯ ಹಿತ ದೃಷ್ಟಿಯಿಂದ ಒಳ್ಳೆಯದು.

ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳು ಹಾಗೂ ಅವುಗಳ ವಿಶ್ಲೇಷಣೆ:

ತಪ್ಪುಕಲ್ಪನೆ - 1 ಕನ್ನಕವನ್ನು ಯಾವಾಗಲೂ ಧರಿಸುವುದರಿಂದ ಕನ್ನಡದ ನಂರ್ ಕಡಿಮೆಯಾಗುತ್ತದೆ. ವಸ್ತುಸ್ಧತಿ-ಕನ್ನಡಕವನ್ನು ಯಾವಾಗಲೂ ಧರಿಸುವುದರಿಂದ ಕನ್ನಡಕದ ನಂಬರ್ ಕಡಿಮೆಯಾಗುವುದಿಲ್ಲ. ಆದರೆ ಆತನಿಗೆ ಉತ್ತಮಗುಣಮಟ್ಟದ ದೃಷ್ಟಿ ಲಭ್ಯವಾಗುವುದಲ್ಲದೇ ಅದರಿಂದ ಆತನ ಕಣ್ಣಿಗೆ ಆಯಾಸವಾಗುವುದು ಕಡಿಮೆಯಾಗುತ್ತದೆ. ತಪ್ಪುಕಲ್ಪನೆ - 2 ಸುಮಾರು 40 ವರ್ಷ ಸುಮಾರಿಗೆ ಬರುವ ಚಾಳೀಸು ತೊಂದರೆಗೆ (ಸಮೀಪದಲ್ಲಿ ಸಣ್ಣ ಅಕ್ಷರಗಳು ಕಾಣಿಸುವುದಿಲ್ಲ) ಅಥವಾ ತುಂಬಾ ದೂರದ ವಸ್ತುಗಳು ಕಾಣಿಸುವುದಿಲ್ಲ ಎಂಬ ದೃಷ್ಟಿದೋಷವಿರುವವರಲ್ಲಿ ಮಾತ್ರ ಕನ್ನಡಕಗಳು ಉಪಯೋಗವಾಗುತ್ತವೆ. ವಸ್ತುಸ್ಧಿತಿ — ಕನ್ನಡಕಗಳು ಇನ್ನಿತರ ದೃಷ್ಟಿದೋಷಗಳಾದ ಅಸಮನಿಟ್ಟಾ (ಚಿsಣigmಚಿಣism) ಮತ್ತು ಹೆಚ್ಚಿನ ನಂಬರಿನ ದೂರದೃಷ್ಟಿದೋಷಗಳಲ್ಲೂ ಸಹಿತ ಅವಶ್ಯಕ. ಈ ಎರಡೂ ದೃಷ್ಟಿದೋಷಗಳಲ್ಲಿ ಕನ್ನಡಕ ಧರಿಸದಿದ್ದರೆ, ವಿಪರೀತ ತಲೆನೋವು ಬರುವ ಸಾಧ್ಯತೆ ಇದೆ.

ತಪ್ಪುಕಲ್ಪನೆ - 3 ಕಣ್ಣಿನ ಕೆಲವು ವ್ಯಾಯಾಮ ಮಾಡುವುದರಿಂದ ಹಾಗೂ ಕೆಲವು ಸಸ್ಯಜನ್ಯ ಔಷಧಿಗಳನ್ನು ಕಣ್ಣಿಗೆ ಹಾಕುವುದರಿಂದ ಕನ್ನಡಕದ ನಂಬರುಗಳನ್ನು ಕಡಿಮೆ ಮಾಡಬಹುದು ಹಾಗೂ ಕಾಲಕ್ರಮೇಣ ಕನ್ನಡಕ ಹಾಕುವುದನ್ನೇ ನಿಲ್ಲಿಸಬಹುದು.

ವಸ್ತುಸ್ಧಿತಿ - ಈ ಮೇಲಿನ ಅಂಶಗಳನ್ನು ಸಾಬೀತು ಪಡಿಸುವ ವೈಜ್ಞಾನಿಕ ಪುರಾವೆಗಳಲ್ಲಿ ಕನ್ನಡಕದ ನಂಬರುಗಳನ್ನು ಕಡಿಮೆ ಮಾಡುವ ಯಾವ ಉಪಾಯಗಳೂ ಈ ವರೆಗೆ ಇಲ್ಲ.

ತಪ್ಪುಕಲ್ಪನೆ - 4 'ಎ' ಅಂಗಾಂಶವನ್ನು ಮಾತ್ರೆಯ ರೂಪದಲ್ಲಿ ಅಥವಾ 'ಎ' ಅಂಗಾಂಶ ಹೆಚ್ಚಿರುವ ತರಕಾರಿಗಳಾದ ಕ್ಯಾರೆಟ್ ಸೇವಿಸುವುದರಿಂದ ಕಣ್ಣಿನ ಎಲ್ಲಾ ತೊಂದರೆಗಳನ್ನು ಸರಿಮಾಡಿಸಿಕೊಳ್ಳಬಹುದು.

ವಸ್ತುಸ್ಧಿತಿ- 'ಎ' ಅಂಗಾಂಶ ಕಡಿಮೆ ಇರುವವರಲ್ಲಿ ಮಾತ್ರ 'ಎ' ಅಂಗಾಂಶವನ್ನು ಮಾತ್ರೆ ಅಥವಾ ತರಕಾರಿ ರೂಪದಲ್ಲಿ ಕೊಡಬೇಕಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ 'ಎ' ಅಂಗಾಂಶ ಕಡಿಮೆ ಇರುವ ಹುಡುಗರು ಅಥವಾ ರೋಗಿಗಳು ತುಂಬಾ ಕಡಿಮೆ. ಅನಗತ್ಯವಾಗಿ 'ಎ' ಅಂಗಾಂಶ ಸೇವಿಸುವುದರಿಂದ ಅದು ಯತೃತ್ತಿನಲ್ಲಿ ಶೇಖರಗೊಂಡು ಬೇರೆ ಬೇರೆ ರೀತಿಯ ಭೌತಿಕ ತೊಂದರೆಗಳನ್ನು ಕೊಡುವ ಸಾಧ್ಯತೆ ಇದೆ. ಸೂಕ್ತ ಕಣ್ಣಿನ ವೈದ್ಯರ ಸಲಹೆ ಇಲ್ಲದೆ 'ಎ' ಅಂಗಾಂಶವನ್ನು ಹೆಚ್ಚು ಸೇವಿಸಬಾರದು.

ತಪ್ಪುಕಲ್ಪನೆ - 5 ಓರೆಗಣ್ಣು, ಮೆಳ್ಳಗಣ್ಣು ಅಥವಾ ಕೋಸುಗಣ್ಣು ಶುಭ ಸೂಚಕ. ಹಾಗಾಗಿ ಇದನ್ನು ಚಿಕಿತ್ಸೆ ಮಾಡದೇ ಬಿಟ್ಟರೆ ಒಳ್ಳೆಯದು.

ವಸ್ತುಸ್ಧಿತಿ - ಈ ಅಭಿಪ್ರಾಯ ಸಂಪೂರ್ಣ ತಪ್ಪು. ಸುಮಾರು ಶೇಕಡಾ 50 ರಷ್ಟು ಮೆಳ್ಳಗಣ್ಣನ್ನು ಸರಿಯಾದ ಕನ್ನಡಕ ಧರಿಸುವುದರಿಂದಲೇ ಚಿಕಿತ್ಸೆ ಮಾಡಬಹುದು. ಮೆಳ್ಳಗಣ್ಣಿನ ಚಿಕಿತ್ಸೆ ಮಗುವಿಗೆ 6 ರಿಂದ 8 ವರ್ಷ ಆದಾಗ ಫಲಪ್ರದವಾಗುತ್ತದೆ. ಇಲ್ಲದಿದ್ದರೆ ದೃಷ್ಟಿವಿಹೀನವೂ ಆಗುತ್ತದೆ. ಹಾಗಾಗಿ ಮೆಳ್ಳಗಣ್ಣಿಗೆ ಸೂಕ್ತ ಚಿಕಿತ್ಸೆ ಆದಷ್ಟು ಬೇಗನೆ ಕೈಗೊಳ್ಳುವುದು ತೀರಾ ಅವಶ್ಯಕ. ತಪ್ಪುಕಲ್ಪನೆ - 6. ತಣ್ಣೀರಿನಿಂದ ತೊಳೆಯುವುದರಿಂದ ಹಾಗೂ ನೀರನ್ನು ಒಳಗೆ ಚಿಮುಕಿಸುವುದರಿಂದ ಕಣ್ಣನ್ನು ಬಹಳ ಸ್ವಚ್ಛವಾಗಿಟ್ಟುಕೊಳ್ಳಬಹುದು.

ವಸ್ತುಸ್ಧತಿ - ಹಾಗೆ ಮಾಡುವ ಅವಶ್ಯಕತೆ ಇಲ್ಲ. ಕೆಲವೊಮ್ಮೆ ಅಪಾಯಕಾರಿ ಕೂಡ. ಕಣ್ಣಿಗೆ ಬೇಕಾಗುವ ದ್ರವದ ಅಂಶ ಕಣ್ಣಿರಿನಿಂದ 24 ಗಂಟೆಯೂ ತಡೆಯಿಲ್ಲದೆ ಲಭ್ಯವಾಗುತ್ತಿರುತ್ತದೆ. ಕೆಲವೊಮ್ಮೆ ನೀರಿನಲ್ಲಿರುವ ಬ್ಲೀಚಿಂಗ್ ಪೌಡರ್ ಕಣ್ಣಿನಲ್ಲಿ ಸ್ವಲ್ಪ ಪ್ರಮಾಣದ ರಾಸಾಯನಿಕ ಕ್ರಿಯೆಯನ್ನೂ ಉಂಟುಮಾಡಬಹುದು.

ತಪ್ಪುಕಲ್ಪನೆ - 7 ನಿಂಬೆರಸ. ಜೇನುತುಪ್ಪ ಮತ್ತು ಕೆಲವು ಸಸ್ಯಜನ್ಯ ಎಣ್ಣೆಗಳು ಕೆಂಗಣ್ಣನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲದು. ವಸ್ತುಸ್ಧಿತಿ - ಇದು ಸತ್ಯವಲ್ಲ. ಕೆಂಗಣ್ಣಿನ ರೋಗ ಲಕ್ಷಣವಿದ್ದಾಗ, ಯಾವ ಕಾಯಿಲೆಯಿಂದ ಕೆಂಗಣ್ಣಾಗಿದೆ ಎಂದು ಮೊದಲು ಪತ್ತೆ ಹಚ್ಚಬೇಕು. ಆ ಕಾಯಿಲೆಯ ಮೇರೆಗೆ ಅದನ್ನು ಚಿಕಿತ್ಸೆ ಮಾಡಬೇಕು.

ತಪ್ಪುಕಲ್ಪನೆ-8 ಹಲ್ಲುಗಳನ್ನು ಕೀಳಿಸಿದರೆ. ಕಣ್ಣಿಗೆ ಸೋಂಕಾಗಬಹುದು ಅಥವಾ ದೃಷ್ಟಿ ಕಡಿಮೆಯಾಗಬಹುದು. ವಸ್ತುಸ್ಧಿತಿ - ಇದು ಸತ್ಯವಲ್ಲ. ಹಲ್ಲು ಕೀಳಿಸುವುದರಿಂದ ಕಣ್ಣಿಗೆ ಸೋಂಕಾಗುವುದೂ ಇಲ್ಲ. ದೃಷ್ಟಿ ಕಡಿಮೆಯಾಗುವುದೂ ಇಲ್ಲ. ತಪ್ಪುಕಲ್ಪನೆ - 9 ಅಲೋಪತಿಯಲ್ಲದ ಬೇರೆ ಔಷಧಿಗಳನ್ನು ಹಾಕುವುದರಿಂದ ಕಣ್ಣಿನ ಪೊರೆಯನ್ನು ಗುಣಪಡಿಸಬಹುದು. ವಸ್ತುಸ್ಧಿತಿ - ಇದುವರೆಗೂ ಕಣ್ಣಿನ ಪೊರೆ ಗುಣಪಡಿಸಲು ಶಸ್ತ್ರಕ್ರಿಯೆ ಅಲ್ಲದೆ ಬೇರೆ ರೀತಿಯ ಚಿಕಿತ್ಸೆ ಇಲ್ಲ. ತಪ್ಪುಕಲ್ಪನೆ - 10 ಕಣ್ಣಿನ ಪೊರೆ ಸಂಪೂರ್ಣ ಬೆಳೆದಾಗ ಮಾತ್ರ ಶಸ್ತ್ರಕ್ರಿಯೆ ಮಾಡಬೇಕು.

ವಸ್ತುಸ್ಧಿತಿ - ಕೆಲವು ವರ್ಷಗಳ ಮೊದಲು ಈ ಪರಿಸ್ಧಿತಿ ಇತ್ತು. ಈಗ ಮಾಡುತ್ತಿರುವ ಆಧುನಿಕ ಕಣ್ಣಿನ ಪೊರೆ ಶಸ್ತ್ರಕ್ರಿಯೆಗಳಲ್ಲಿ, ಕಣ್ಣಿನ ಪೊರೆ ಸಂಪೂರ್ಣ ಬೆಳೆಯುವವರೆಗೆ ಕಾಯುವ ಅವಶ್ಯಕತೆ ಇಲ್ಲ. ಕಣ್ಣಿನ ದೃಷ್ಟಿ ಗಮನಾರ್ಹವಾಗಿ ಕಡಿಮೆಯಾದಾಗ ಶಸ್ತ್ರಕ್ರಿಯೆ ಮಾಡಬಹುದು.

ತಪ್ಪುಕಲ್ಪನೆ - 11. ಸೂರ್ಯನನ್ನು ನೇರವಾಗಿ ನೋಡುವುದು ಹಾಗೂ ಮುಂಚಾನೆ ಸೂರ್ಯನ ಕಿರಣಗಳನ್ನು ದಿಟ್ಟಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವಸ್ತುಸ್ಧಿತಿ - ತೀರಾ ಅವೈಜ್ಞಾನಿಕ. ಹಾಗೆ ಮಾಡಲೇ ಕೂಡದು. ಸೂರ್ಯನ ಬೆಳಕಿನಲ್ಲಿರುವ ಅಲ್ಟ್ರಾ ವಯೋಲೆಟ್ ಮತ್ತು ಇನ್ಫ್ರಾರೆಡ್ ಕಿರಣಗಳು ಕಣ್ಣಿನ ಹೊರಭಾಗದ ಪಾರದರ್ಶಕ ಪಟಲ (ಕಾರ್ನಿಯಾ) ಹಾಗೂ ಕಣ್ಣನೊಳಗಿರುವ ಅಕ್ಷಿಪಟಲ (ರೆಟಿನಾ) ಎರಡಕ್ಕೂ ಅಪಾಯಕಾರಿ. ನಿಜವಾಗಿ ಹೇಳುವುದಾದರೆ ಶಕ್ತಿಯುತವಾದ ಸೂರ್ಯನ ಕಿರಣಗಳು (ಸೂರ್ಯಗ್ರಹಣದ ಸಮಯದಲ್ಲಿರುವಂತೆ) ನೇರವಾಗಿ ಕಣ್ಣಿನ ಅಕ್ಷಿಪಟಲದ ಮಧ್ಯಭಾಗ ಮ್ಯಾಕೈಲವನ್ನು ಸುಟ್ಟು ಅಥವಾ ನಾಶಮಾಡಿ ಗಮನಾರ್ಹವಾದ ಅಂಧತ್ವ ಉಂಟುಮಾಡುತ್ತದೆ.

ತಪ್ಪುಕಲ್ಪನೆ-12 ಕಣ್ಣಿನ ಕಸಿ ಶಸ್ತ್ರಕ್ರಿಯೆಯಿಂದ ಯಾವುದೇ ಅಂಧತ್ವ ಗುಣ ಪಡಿಸಬಹುದು ಹಾಗೂ ಈ ಶಸ್ತ್ರಕ್ರಿಯೆಯಲ್ಲಿ ಇಡೀ ಕಣ್ಣು ಅಥವಾ ಕಣ್ಣುಗುಡ್ಡೆಯನ್ನೇ ಕಸಿ ಮಾಡುತ್ತಾರೆ.

ವಸ್ತುಸ್ಧಿತಿ - ಕಣ್ಣಿ£ ಕಸಿ ಶಸ್ತ್ರಕ್ರಿಯೆಯಿಂದ ಕಣ್ಣಿನ ಹೊರಭಾಗ ಪಾರದರ್ಶಕ ಪಟಲ ಕಾರ್ನಿಯಾದಲ್ಲಿರುವ ಅಂಧತ್ವವನ್ನು ಮಾತ್ರ ಗುಣಪಡಿಸಬಹುದು. ಇಡೀ ಕಣ್ಣುಗುಡ್ಡೆಯನ್ನು ಕಸಿ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಕಣ್ಣನ್ನು ದಾನಿ (ಶವ) ಯಿಂದ ಶಸ್ತ್ರಕ್ರಿಯೆ ಮಾಡಿ ತೆಗೆಯುವಾಗ ದೃಷ್ಟಿ ನರವಾದ ಆಪ್ಟಿಕ್ ನರವನ್ನು ಕತ್ತರಿಸಿಯೇ ಹೊರ ತೆಗೆಯಬೇಕಾಗುತ್ತದೆ. ಕಣ್ಣಿನ ಚಿಕಿತ್ಸೆಯಲ್ಲಿ ಆಧುನಿಕ ವಿಧಾನಗಳು

ಪ್ರತಿಯೊಬ್ಬ ದೃಷ್ಟಿಯಲ್ಲಿ ಉಂಟಾದ ತೊಂದರೆಯನ್ನು ಸರಿಪಡಿಸುವಲ್ಲಿ ಮತ್ತು ಭವಿಷ್ಯದಲ್ಲಿ ಈ ರೀತಿಯ ತೊಂದರೆ ಬರದೆ ಇರುವಂತೆ ಮಾಡುವಲ್ಲಿ ಹಲವಾರು ಅಧುನಿಕ ಚಿಕಿತ್ಸಾ ವಿಧಾನಗಳು ಬಳಕೆಗೆ ಬಂದಿವೆ.

ಅವುಗಳಲ್ಲಿ ಮುಖ್ಯವಾದವುಗಳೆಂದರೆ-ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಕಣ್ಣಿನೊಳಗೆ ಅಳವಡಿಸಿರುವ ಕೃತಕ ಮಸೂರ, ಈ ಕೃತಕ ಮಸೂರ ಚಿಕಿತ್ಸೆಗೆ ಇತ್ತೀಚೆಗೆ ಉಪಯೋಗವಾಗುತ್ತಿರುವ ಫೇಕೋಎಮಲ್ಸಿಫಿಕೇಷನ್ ಮತ್ತು ಹೊಲಿಗೆರಹಿತ ಸಣ್ಣಗಾಯದ ಶಸ್ತ್ರಕ್ರಿಯೆ, ಕ್ಲಿಷ್ಟಕರ ಕಣ್ಣಿನ ಕಾಯಿಲೆಗಳಿಗೆ ವರದಾನವಾದ ವಿಟ್ರೆಕ್ಟಮಿ ಶಸ್ತ್ರಕ್ರಿಯೆ, ಅಕ್ಷಿಪಟಲ ಬೇರ್ಪಡುವಿಕೆಗೆ ಚಿಕಿತ್ಸೆಯಾಗಿ ಮಾಡುವ ಶಸ್ತ್ರಕ್ರಿಯೆ, ಕಣ್ಣಿನ ವಿವಿಧ ಕಾಯಿಲೆಗಳಲ್ಲಿ ಬಹಳ ಉಪಯೋಗವಾಗುವ ಅರ್ಗಾನ್ ಲೇಸರ್ ಚಿಕಿತ್ಸೆ, ಯಾಗ್ ಲೇಸರ್ ಚಿಕಿತ್ಸೆ ಮತ್ತು ಸಮಿÁಪದೃಷ್ಟಿ ದೋಷಕ್ಕೆ ಇತ್ತೀಚೆಗೆ ಬಳಕೆಯಾಗುತ್ತಿರುವ ಎಕ್ಸೈಮರ್ ಲೇಸರ್ ಮತ್ತು ಲ್ಯಾಸಿಕ್ ಚಿಕಿತ್ಸೆ, ಇತ್ಯಾದಿ.

ಕಣ್ಣಿನೊಳಗೆ ಇರಿಸುವ ಮಸೂರ (ಇಂಟ್ರಾಅಕ್ಯುಲರ್ ಲೆನ್ಸ್) ಕಣ್ಣಿನ ಪೊರೆಯ ಬಗೆಗೆ ಹಿಂದಿನ ಲೇಖನದಲ್ಲಿ ತಿಳಿಸಲಾಗಿದೆ. ಇದರ ಚಿಕಿತ್ಸೆ-ಎಂದರೆ ಶಸ್ತ್ರಕ್ರಿಯೆಯೇ ಸರಿ. 1980-81 ರವರೆಗೆ ಕಾಯಿಲೆಗೆ ತುತ್ತಾದ ನೈಸರ್ಗಿಕ ಮಸೂರವನ್ನು ತೆಗೆದು ನಂತರ ಸೂಕ್ಷ್ಮ ರೇಷ್ಮೆ ಅಥವಾ ನೈಲಾನ್ ನೂಲೆಳೆಗಳಿಂದ ಈ ಗಾಯವನ್ನು ಹೊಲಿಯಲಾಗುತ್ತಿತ್ತು. ಹೀಗೆ ನೈಸರ್ಗಿಕ ಮಸೂರವನ್ನು ಕಣ್ಣಿನೊಳಗಿಂದ ತೆಗೆದಿದ್ದರಿಂದ ಉಂಟಾದ ದೃಷ್ಟಿದೋಷವನ್ನು ಸರಿಪಡಿಸಲು ಇದುವರೆಗೆ ಎರಡು ವಿಧಾನಗಳಿದ್ದವು. ಕಣ್ಣಿನ ಹೊರಗೆ ದಪ್ಪಗಾಜು (ಸುಮಾರು +10 ಡೈಯಾಪ್ಟರ್ ಪವರ್) ಇರುವ ಪೀನಮಸೂರಗಳನ್ನು ಕನ್ನಡಕದ ರೂಪದಲ್ಲಿ ತೊಡುವುದು. ಅಥವಾ ಕಣ್ಣಿನ ಹೊರಗಿನ ಪಾರದರ್ಶಕ ಪಟಲ ಕಾರ್ನಿಯದ ಮೇಲೆ ಧರಿಸಬಹುದಾದ ಸ್ಷರ್ಷ ಅಥವಾ ಸಂಪರ್ಕ ಮಸೂರ (ಕಾಂಟಾಕ್ಟ್ ಲೆನ್ಸ್) ಗಳನ್ನು ತೊಡುವುದು.

ಅದರೆ ಇದೀಗ ಜನಪ್ರಿಯವಾಗಿರುವ ಹೊಸ ವಿಧಾನದಲ್ಲಿ ಶಸ್ತ್ರಕ್ರಿಯೆಯ ಮುಂದುವರಿದ ಹಂತವಾಗಿ ಮಸುಕಾದ ನೈಸರ್ಗಿಕ ಮಸೂರವನ್ನು ತೆಗೆದ ನಂತರ, ಅದೇ ಜಾಗದಲ್ಲಿ ಅದರ ಬದಲು ಕೃತಕ (ಪ್ಲಾಸ್ಟಿಕ್ ಅಥವಾ ನೈಲಾನ್) ಮಸೂರವನ್ನು ಇರಿಸಲಾಗುತ್ತದೆ. ಅದನ್ನು ತೂರಿಸಿದ ನಂತರ 1993-94ರವರೆಗೆ ಸೂಕ್ಷ್ಮನೂಲೆಳೆಗಳಿಂದ ಗಾಯವನ್ನು ಹೊಲಿಯಲಾಗುತ್ತಿತ್ತು. ಅದರೆ ನಂತರದಲ್ಲಿ ಗಾಯವನ್ನು ಮೊದಲಿನ 8 ರಿಂದ 11 ಮಿ.ಮಿÁ . ಬದಲು 3 ಅಥವಾ 3ಳಿ ಮಿ. ಮಿÁ ಗಾಯಕ್ಕೆ ಕಡಿಮೆ ಮಾಡಿದ್ದರಿಂದ ಹೊಲಿಗೆಯ ಅಗತ್ಯತೆ ಇರುವುದಿಲ್ಲ. ಈಗ ನಡೆಯುತ್ತಿರುವ ಹೆಚ್ಚಿನ ಶಸ್ತ್ರಕ್ರಿಯೆಗಳು ಈ ರೀತಿಯ “ಸಣ್ಣ ಗಾಯದ ಹೊಲಿಗೆ ರಹಿತ” ಶಸ್ತ್ರಕ್ರಿಯೆಗಳಾಗಿವೆ.

ಹೀಗೆ ಕೃತಕ ಮಸೂರವನ್ನು ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಕಣ್ಣಿನೊಳಗೆ ಕೂರಿಸುವ ಅಗತ್ಯವೇನಿದೆ ಎಂದು ವಿಶ್ಲೇಷಿಸೋಣ. ಅಂದರೆ ಉಳಿದ ವಿಧಾನಗಳೆರಡೂ ರೋಗಿಗೆ ಸಂಪೂರ್ಣ ಸಮಾಧಾನ ತರುವಂತಹುದಲ್ಲ ಮತ್ತು ರೋಗಿಯ ಕಾಯಿಲೆ ಪೂರ್ವದ ದೃಷ್ಟಿಯಂತಹುದೇ ಗುಣಮಟ್ಟದ ದೃಷ್ಟಿಯನ್ನು ಕೊಡುವುದಿಲ್ಲ ಎಂದು ಹೇಳಬಹುದು.

ಸಂಪರ್ಕ ಮಸೂರಗಳ ಮತ್ತು ಕಣ್ಣಿನೊಳಗೆ ಕೂರಿಸುವ ಕೃತಕ ಮಸೂರಗಳ ನಿರ್ಮಾಣದಲ್ಲಿ ಒಂದೇ ರೀತಿಯ ಪ್ಲಾಸ್ಟಿಕ್ ಬಳಸುವುದಾದರೂ ಅವುಗಳು ಕೂರುವ ಸ್ಥಾನಗಳೇ ಬೇರೆ ಬೇರೆ. ಹಾಗೂ ಇನ್ನೂ ಅನೇಕ ವ್ಯತ್ಯಾಸಗಳನ್ನು ಗಮನಿಸಬೇಕು. ಸಂಪರ್ಕ ಮಸೂರಗಳನ್ನು ವ್ಯಕ್ತಿಯೇ ಕಣ್ಣಿನ ಹೊರಭಾಗದ ಪಾರದರ್ಶಕ ಪಟಲ ಕಾರ್ನಿಯಾದ ಮೇಲೆ ಕೂರಿಸಿಕೊಳ್ಳುತ್ತಾನೆ. ಅದರೆ ಕಣ್ಣೊಳಗಿನ ಕೃತಕ ಮಸೂರವನ್ನು ನೇತ್ರತಜ್ಞ ಶಸ್ತ್ರಕ್ರಿಯೆ ಮಾಡಿ ಮಾತ್ರ ಕೂರಿಸಬಹುದು. ಸಂಪರ್ಕ ಮಸೂರವನ್ನು ವ್ಯಕ್ತಿ ದಿನಕ್ಕೊಮ್ಮೆ ಅಥವಾ ವಾರಕ್ಕೆ ಒಮ್ಮೆಯಾದರೂ ತೆಗೆದು ನಿರ್ದಿಷ್ಟವಾದ ದ್ರಾವಣದಿಂದ ಸ್ವಚ್ಛಮಾಡಿ ಮತ್ತೆ ಪುನಃ ಧರಿಸುತ್ತಾನೆ. ಅದರೆ ನೇತ್ರತಜ್ಞ ಕೂರಿಸುವ ಕೃತಕ ಮಸೂರವನ್ನು ಒಮ್ಮೆ ಕಣ್ಣೊಳಗೆ ಕೂರಿಸಿದ ನಂತರ ತೆಗೆಯು ಪ್ರೆಶ್ನೆಯೇ ಇಲ್ಲ. ತೆಗೆಯಲೇಬೇಕಾದ ಸಂದರ್ಭ ಬಂದರೆ ಪುನಃ ಶಸ್ತ್ರಕ್ರಿಯೆ ಮಾಡಿ ನೇತ್ರ ತಜ್ಞನೇ ತೆಗೆಯಬೇಕಾಗುತ್ತದೆ. ಸಂಪರ್ಕ ಮಸೂರವನ್ನು ಕಣ್ಣಿನ ಪೊರೆ ಶಸ್ತ್ರಕ್ರಿಯೆ ಮಾಡಿದ ನಂತರ ಉಂಟಾಗುವ ದೃಷ್ಟಿ ದೋಷವೇ ಅಲ್ಲದೆ, ಉಳಿದ ಇತರ ದೃಷ್ಟಿ ದೋಷಗಳಲ್ಲಿಯೂ ಬಳಸಬಹುದು. (ಈ ಉಪಯೋಗವೇ ಹೆಚ್ಚು.) ಅದರೆ ಕೃತಕ ಮಸೂರ ಪೊರೆ ಶಸ್ತ್ರಕ್ರಿಯೆಯ ನಂತರ ಮಾತ್ರ ಉಪಯೋಗವಾಗುತ್ತದೆ.

ಫೇಕೋಎಮಲ್ಸಿಫಿಕೇಷನ್: ಇದು ಇತ್ತೀಚಿನ ಬೆಳವಣಿಗೆ ಹಾಗೂ ಇದು ನವೀನ ತಂತ್ರ. ಮೊದಲಿನ ಎಲ್ಲ ಶಸ್ತ್ರಕ್ರಿಯಾಪದ್ಧತಿಗಳಲ್ಲಿ ಕಣ್ಣಿನ ಪೊರೆಯನ್ನು ಇಡಿಯಾಗಿ-ಅದರ ಹೊರಪದರವನ್ನು ಭೇದಿಸಿ ಅಥವಾ ಅದರ ಎಲ್ಲಾ ಪದರಗಳೊಡನೆ-ಹೊರತೆಗೆಯಲಾಗುತ್ತಿತ್ತು. ಹಾಗಾಗಿ ಇದಕ್ಕೆ ದೊಡ್ಡ ಗಾಯ-8ರಿಂದ 11 ಮಿ. ಮಿÁ ನಷ್ಟು ಬೇಕಾಗುತ್ತಿತ್ತು. ಅದರೆ ಈ ನವೀನ ತಂತ್ರದಲ್ಲಿ, ಕಣ್ಣಿನ ಪೊರೆಯ ಹೊರಪದರವನ್ನು ಮಾತ್ರ ಭೇದಿಸಿ, ಉಳಿದ ಪೊರೆಯ ಮುಖ್ಯ ಅಂಶವನ್ನು (ನ್ಯೂಕ್ಲಿಯಸ್) ಸಣ್ಣ ಸಣ್ಣ ತುಣುಕುಗಳನ್ನು ಮಾಡಿ ಹೊರತೆಗೆಯಲಾಗುತ್ತದೆ. ಹಾಗಾಗಿ ಈ ಶಸ್ತ್ರಕ್ರಿಯೆಗೆ ಕೇವಲ 3 ಅಥವಾ 3ಳಿ ಮಿ. ಮಿÁ ಗಾಯ ಮಾತ್ರ ಸಾಕು. ಇಂತಹ ಸಣ್ಣ ಗಾಯದಿಂದ ಏನು ಮಹಾ ದೊಡ್ಡ ಉಪಕಾರ? ಎಂಬ ಸಂದೇಹ ನಿಮ್ಮನ್ನು ಕಾಡಬಹುದು. ಈ ರೀತಿಯ ಸಣ್ಣ ಗಾಯವನ್ನು ಬೇರೆ ಹೊಸರೀತಿಯ ತಂತ್ರಜ್ಞಾನದಿಂದ ಮಾಡುವುದರಿಂದ ಮೊದಲಿನ ಹಾಗೆ ಗಾಯವನ್ನು ಮುಚ್ಚಲು ಉಪಯೋಗಿಸುವ ಹೊಲಿಗೆಗಳ ಅಗತ್ಯವೇ ಇಲ್ಲ! ಹೊಲಿಗೆಗಳೇ ಬೇಕಿಲ್ಲವೇ? ಗಾಯ ಎಲ್ಲಿಯಾದರೂ ಬಿರುಕು ಬಿಟ್ಟರೇ? ಎಂಬ ಪ್ರೆಶ್ನೆ ಏಳುವುದು ಸಹಜ. ಅದರೆ ಸರಿಯಾಗಿ ಇದಕ್ಕಾಗಿಯೇ ಮಾಡಿದ ಗಾಯ ಬಿಟ್ಟುಕೊಳ್ಳುವ ಪ್ರೆಶ್ನೆಯೇ ಇಲ್ಲ. ಸುಮಾರು 1000 ಮಿ. ಮಿÁ (ಒಂದು ಸಾವಿರ) ಪಾದರಸದಷ್ಟು ಒತ್ತಡವನ್ನೂ ಇದು ತಡೆದುಕೊಳ್ಳುತ್ತದೆ. ಎಂದು ವಿವಿಧ ಪ್ರಯೋಗಗಳಿಂದ ಕಂಡು ಹಿಡಿದಿದ್ದಾರೆ. ಇದಕ್ಕೆ ಸ್ವಲ್ಪ ದುಬಾರಿಯಾದ ಯಂತ್ರ-ಫೇರೋಎಮಲ್ಸಿಫಿಕೇಷನ್ ಯಂತ್ರ ಅಗತ್ಯವಿದೆ. ಅದರೆ ಈಗೀಗ ಈ ವೆಚ್ಚವನ್ನು ಕಡಿಮೆಮಾಡಲು ಈ ಯಂತ್ರದ ಬದಲು ಬೇರೆ ಸಣ್ಣ ಸಣ್ಣ ಉಪಕರಣಗಳನ್ನು ಉಪಯೋಗಿಸಿ-ಇದೇ ತಂತ್ರಜ್ಞಾನದ ಶಸ್ತ್ರಕ್ರಿಯೆ. ʽಸಣ್ಣಗಾಯದ ಹೊಲಿಗೆ ರಹಿತ ಶಸ್ತ್ರಕ್ರಿಯೆʼ ಹೆಚ್ಚಿನ ನೇತ್ರತಜ್ಞರು ಮಾಡುತ್ತಿದ್ದಾರೆ.

ಈ ತಂತ್ರಜ್ಞಾನದ ಉಪಯೋಗ ಎಂದರೆ ಸಣ್ಣ ಗಾಯವಾದ್ದರಿಂದ ಬೇಗ ವಾಸಿಯಾಗಿ ಶಸ್ತ್ರಕ್ರಿಯೆ ಮಾಡಿಸಿಕೊಂಡ ವ್ಯಕ್ತಿ ಕೆಲವೇ ದಿನಗಳಲ್ಲಿ ತನ್ನ ದೈನಂದಿನ ಕೆಲಸಕ್ಕೆ ಹಾಜರಾಗಬಹುದು. ಶಸ್ತ್ರಕ್ರಿಯೆಯ ನಂತರ ಮೊದಲಿನ ಹಾಗೆ ಕಣ್ಣಿಗೆ ಪಟ್ಟ ಕಟ್ಟಿಕೊಂಡು ಹಾಸಿಗೆಯಲ್ಲಿ ವಾರಗಟ್ಟಲೆ ಮಲಗುವ ಪಾಡು ಇದರಲ್ಲಿ ಇಲ್ಲ.

ವಿಟ್ರೆಕ್ಟಮಿ: ಕಣ್ಣೀನ ಕೆಲವು ಕ್ಲಿಷ್ಟಕರವಾದ ಮತ್ತು ಸಂಕೀರ್ಣವಾದ ಬಹಳ ಕಾಲ ಚಿಕಿತ್ಸೆ ಸಾಧ್ಯವೇ ಇಲ್ಲ ಎಂಬ ಹಲವಾರು ಕಣ್ಣಿನ ಕಾಯಿಲೆಗಳಲ್ಲಿ ಉಪಯೋಗವಾಗುತ್ತಿರುವ ಮತ್ತು ಪೂರ್ಣ ಅಂಧತ್ವ ಹೊಂದಿದೆ ಎಂದು ತಿಳಿಯಲಾದ ಕಣ್ಣನ್ನು-ದೃಷ್ಟಿ ಕಾಣುವಂತೆ ಮಾಡುವ ಒಂದು ವಿಶಿಷ್ಟ ಶಸ್ತ್ರಕ್ರಿಯೆ ಎಂದರೆ ವಿಟ್ರೆಕ್ಟಮಿ ಅಥವಾ ಕಾಚೀರಸದ ಶಸ್ತ್ರಕ್ರಿಯೆ. ಕಾಚೀರಸವು (ವಿಟ್ರಿಯಸ್) ಕಣ್ಣೀನ ನೈಸರ್ಗಿಕ ಮಸೂರದ ಹಿಂಭಾಗದಲ್ಲಿ ಅಕ್ಷಿಪಟಲಕ್ಕೂ ಮಸೂರಕ್ಕೂ ಮಧ್ಯೆ ಸೇತುವೆಯೋಪಾದಿಯಲ್ಲಿ ಬಹಳಷ್ಟು ಜಾಗವನ್ನು ಅಕ್ರಮಿಸಿರುವ ಲೋಳೆಯ ರೀತಿಯ ಅಂಶಿಕ ದ್ರವ. ಇದು ಕಣ್ಣಿನ ಅಕೃತಿಗೆ ರೂಪ ಕೊಡುವಲ್ಲಿ ಬಹಳಷ್ಟು ಕಾರಣವಾಗುತ್ತದೆ. ಅರೋಗ್ಯವಂತ ಕಣ್ಣಿನಲ್ಲಿ ಈ ದ್ರವದ ಭಾಗ ಬೆಳಕನ್ನು ಸುಲಭವಾಗಿ ಒಳಸಾಗಿಸುವಂತೆ ಪರಿಶುದ್ಧವಾಗಿರುತ್ತದೆ. ಕಣ್ಣಿನ ಪೊರೆ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಕೆಲವೊಮ್ಮೆ ಪೊರೆಗಟ್ಟಿದ ಮಸೂರವನ್ನು ತೆಗೆಯುವಾಗ ಮಸೂರದ ಜೊತೆ ಹಿಂದೆ ಅಂಟಿಕೊಂಡಿರುವ ಕಾಚೀರಸವು ಕಣ್ಣಿನ ಮುಂಭಾಗಕ್ಕೆ ಬರುತ್ತದೆ. ಅಂತಹ ಕಣ್ಣಿನಲ್ಲಿ ಹೆಚ್ಚಿನ ಸಂದರ್ಭದಲ್ಲಿ ವಿವಿಧ ರೀತಿಯ ತೊಂದರೆಗಳು ಉಂಟಾಗುವುದು ಅಲ್ಲದೆ ಶಸ್ತ್ರಕ್ರಿಯೆಯ ನಂತರ ಸಾಮಾನ್ಯವಾಗಿ ದೊರೆಯಬೇಕಾದ ಪೂರ್ಣ ಪ್ರಮಾಣದ ದೃಷ್ಟಿ ದೊರೆಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತೊಂದರೆಗೆ ಅಥವಾ ಕಾಯಿಲೆಗೆ ಈಡಾದ ಕಾಚೀರಸವನ್ನು ಸೂಕ್ತ ಶಸ್ತ್ರಕ್ರಿಯೆಯ ಮೂಲಕ ತೆಗೆದು ಹಾಕಿ ಅದರ ಬದಲು ಸೂಕ್ತ ಬೇರೆ ದ್ರವಗಳನ್ನು ತುಂಬಿಸುವುದರಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದು ಮತ್ತು ಅಂಧತ್ವ ಹೊಂದಿದ ಕಣ್ಣುಗಳನ್ನು ಕಾಣುವಂತೆ ಮಾಡಬಹುದು. ಎಂಬ ಅಂಶವನ್ನು 1968ರ ಹೊತ್ತಿಗೆ ಕ್ಯಾಸ್ಕರ್ ಎಂಬ ತಜ್ಞ ಕಂಡುಹಿಡಿದ. ಅದರೆ ಅಗ ಕಣ್ಣಿನ ಹೊರ ಪದರವಾದ ಕಾರ್ನಿಯಾವನ್ನೇ ತೆಗೆದು, ಅರೋಗ್ಯವಂತ ಮಸೂರವನ್ನು ತೆಗೆದು ನಂತರ ಶಸ್ತ್ರಕ್ರಿಯೆ ಮಾಡಬೇಕಿತ್ತು. ಈಗಿನ ಸುಧಾರಿತ ಪದ್ಧತಿಯಲ್ಲಿ ಕಣ್ಣನ್ನು ಪದರವಾಗಿ ತೆಗೆಯದೆ (ಹಾಗೆ ತೆಗೆದಾಗ ಹಲವು ರೀತಿಯ ಶಸ್ತ್ರಕ್ರಿಯೆಯ ನಂತರದ ತೊಡಕುಗಳು ಬರುವ ನಿರೀಕ್ಷೆ ಇದೆ.) ಕಣ್ಣಿನ ಎರಡೂ ಬದಿಯಲ್ಲಿ ರಂಧ್ರ ಕೊರೆದು, ಸೂಕ್ತ ಪೆನ್ಸಿಲ್ ಅಕಾರದ ಉಪಕರಣಗಳನ್ನು ಕಣ್ಣಿನ ಒಳ ತೂರಿಸಿ ʽವಿಟ್ರಯೋಫಾಜ್ʼ ಎಂಬ ಯಂತ್ರವನ್ನುಪಯೋಗಿಸಿ ಉಪಕರಣದ ತುದಿಯಲ್ಲಿರುವ ತೀರಾ ಸೂಕ್ಷ್ಮವಾದ ಅಧುನಿಕ ಚಾಕುವಿನಿಂದ ಕಾಚೀರಸವನ್ನು ಹಂತಹಂತವಾಗಿ ಕತ್ತರಿಸಲಾಗುತ್ತಿದೆ. ಹೀಗೆ ಕತ್ತರಿಸುವ ಕ್ರಿಯೆಯನ್ನು ನೇತ್ರತಜ್ಞ ಸೂಕ್ತ ಮಸೂರದ ಮೂಲಕ ಮೇಲಿನಿಂದ ನೋಡುತ್ತಾ ಕತ್ತರಿಸಬಹುದು. ಅಲ್ಲದೆ ಮತ್ತೊಂದು ಬದಿಯಿಂದ, ಕತ್ತರಿಸಿ ಹೊರಗೆ ಬಂದ ಕಾಚೀರಸದ ಬದಲು ಸೂಕ್ತ ದ್ರವವನ್ನು ಅದೇ ಸಮಯದಲ್ಲಿ ಒಳಹೋಗಿಸಿ ಕಣ್ಣಿನ ಅಕಾರ ಮತ್ತು ಒತ್ತಡ ಏನು ಬದಲಾವಣೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ಈ ರೀತಿಯ ಶಸ್ತ್ರಕ್ರಿಯೆ ಮೊದಲೇ ತಿಳಿಸಿದಂತೆ ಕಣ್ಣಿನ ಪೊರೆ ಶಸ್ತ್ರಕ್ರಿಯೆ ನಂತರ ಕಾಚೀರಸದ ತೊಂದರೆ ಉಂಟಾದಾಗ, ಕಾಚೀರಸದಲ್ಲಿಯೇ ಮೂಲಭೂತವಾಗಿ ತೊಂದರೆ ಎಂದರೆ ರಕ್ತಸ್ರಾವ (ಸಿಹಿಮೂತ್ರ ರೋಗವಿದ್ದವರಲ್ಲಿ ಹೆಚ್ಚು) ಅಥವಾ ಇನ್ನಿತರ ಕಾಯಿಲೆಗಳು, ಕೆಲವು ರೀತಿಯ ಅಕ್ಷಿಪಟಲ ಬೇರ್ಪಡುವಿಕೆ (ರೆಟಿನಲ್ ಡಿಟ್ಯುಚ್‍ಮೆಂಟ್)ಯ ಸಂದರ್ಭದಲ್ಲಿ ಹಾಗೂ ಕಣ್ಣಿನ ವಿವಿಧ ಅಪಘಾತಗಳಾದಾಗ-ಕಾಚೀರಸದಲ್ಲಿ ಹೊರಗಿನ ವಸ್ತು ಇದ್ದರೆ ತೆಗೆಯಲು, ಕಣ್ಣಿನ ಸೋಂಕು ಎಂಡಾಫ್ತಾಲ್ಮೈಟಿಸ್‍ನಲ್ಲಿ ಮತ್ತು ಚಿಕ್ಕಮಕ್ಕಳಲ್ಲಿ ಕಂಡು ಬರುವ ಜನನಾಗತ ಕಣ್ಣಿನ ಪೊರೆಯನ್ನು ತೆಗೆಯಲು ಮತ್ತು ಇನ್ನೂ ಹಲವಾರು ಸಂದರ್ಭಗಳಲ್ಲಿ ಸಹಾಯವಾಗುತ್ತದೆ.

ಅಕ್ಷಿಪಟಲ ಬೇರ್ಪಡುವಿಕೆ (ರೆಟನಲ್ ಡಿಟ್ಯಾಚ್‍ಮೆಂಟ್) ಗೆ ಶಸ್ತ್ರಕ್ರಿಯೆ.

ಕಣ್ಣಿನ ಶಸ್ತ್ರಕ್ರಿಯೆಯಲ್ಲಿ ಉಂಟಾದ ಇನ್ನೊಂದು ಕ್ರಾಂತಿಕಾರಕ ಬದಲಾವಣೆ ಎಂದರೆ ಅಕ್ಷಿಪಟಲದ ಬೇರ್ಪಡುವಿಕೆಗೆ ಶಸ್ತ್ರಕ್ರಿಯೆಯಲ್ಲಿ ಉಂಟಾದ ಪ್ರಗತಿ. ಅಕ್ಷಿಪಟಲ ಬೇರ್ಪಡುವಿಕೆ ಎಂದರೆ ಅಕ್ಷಿಪಟಲದ ಹೊರಗಿನ ಮತ್ತು ಒಳಗಿನ ಪದರಗಳು ವಿವಿಧ ಕಾರಣಗಳಿಂದ ಬೇರೆ ಬೇರೆಯಾಗುವುದು. ಇದರ ಪರಿಣಾಮ ಎಂದರೆ ಬೆಳಕನ್ನು ಗ್ರಹಿಸಿ ಗುರುತಿಸುವ ಕ್ರಿಯೆ ಇಲ್ಲವಾಗಿ ಅಂತಹ ವ್ಯಕ್ತಿಯಲ್ಲಿ, ಹೆಚ್ಚಿನ ಸಂದರ್ಭಗಳಲ್ಲಿ ದಿಢೀರ್ ಅಂಧತ್ವ ಉಂಟಾಗುತ್ತದೆ. ಇಂತಹ ಕಾಯಿಲೆಗ ಬಹಳ ಕಾಲ ಸೂಕ್ತವಾದ ಚಿಕಿತ್ಸೆ ಅಥವಾ ಶಸ್ತ್ರಕ್ರಿಯೆಯೇ ಲಭ್ಯವಿರಲಿಲ್ಲ. ಹೀಗೆ ಅಂಧತ್ವ ಹೊಂದಿದ ದಪ್ಪ ಪಟ್ಟ ಕಟ್ಟಿ (ಕೆಲವೊಮ್ಮೆ ಎರಡು ಕಣ್ಣುಗಳೂ ಮುಚ್ಚುವಂತೆ) ಅ ವ್ಯಕ್ತಿಯನ್ನು ಹಾಸಿಗೆಯಲ್ಲಿಯೇ ಮಲಗಿಸಿ-ಬೇರ್ಪಟ್ಟ ಅಕ್ಷಿಪಟಲದ ಪದರಗಳು ತನ್ನಿಂದ ತಾನೇ ಏನಾದರೂ ಸೇರುತ್ತವೆಯೋ ಎಂದು ನಿಸರ್ಗವನ್ನು ಅಥವಾ ದೈವವನ್ನು ಯಾಚಿಸುವುದು ಚಿಕಿತ್ಸೆಯಾಗಿತ್ತು. ಅದರೆ 1920-25ರಲ್ಲಿ ಜೂಲ್ಸ್ ಗೋನಿನ್ ಎಂಬ ಪಾಶ್ಯಾತ್ಯ ತಜ್ಞ ಕಂಡುಹಿಡಿದ ಕೆಲವು ಅಂಶಗಳು, ಬೇರ್ಪಟ್ಟ ಅಕ್ಷಿಪಟಲದ ಪದರಗಳನ್ನು ಜೋಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆವು. ಇವೇ ಅಂಶಗಳು ಈಗ ಕೈಗೊಳ್ಳುತ್ತಿರುವ ʽಕ್ರಯೋ ಶಸ್ತ್ರಕ್ರಿಯೆʼ ʽಡಯಾಥರ್ಮಿʼ, ಕಣ್ಣಿನ ಗುಡ್ಡೆಯ ಸುತ್ತ ಕೃತಕ ವಸ್ತುಗಳ ಪಟ್ಟಿಯನ್ನಿಟ್ಟು ಹೊಲಿಯುವುದು ಮೊದಲಾದ ಶಸ್ತ್ರಕ್ರಿಯೆಗಳಿಗೆ ಬುನಾದಿಯಾದವು.

ಲೇಸರ್ ಚಿಕಿತ್ಸೆ: ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಲೇಸರ್ ಬಗ್ಗೆ ನೀವು ಕೇಳಿದ್ದೀರಾ? ಐಚಿseಡಿ ಎಂದರೆ ಐighಣ ಚಿmಠಿಟiಜಿiಛಿಚಿಣioಟಿ bಥಿ sಣimuಟಚಿಣeಜ emissioಟಿ oಜಿ ಡಿಚಿಜiಚಿಣioಟಿ. ಅಂದರೆ ಇದರ ಬಾವಾರ್ಥ ಪ್ರಚೋದಿತ ವಿಕಿರಣತೆಯ ಬಿಡುಗಡೆಯಿಂದ ಬೆಳಕಿನ ಹೆಚ್ಚಳ.

ಸ್ಥೂಲವಾಗಿ ಹೇಳುವುದಾದರೆ ಅದು ಒಂದು ಭಾರಿ ಪ್ರಮಾಣದ ಶಕ್ತಿಯನ್ನು ಒಳಗೊಂಡ ಬೆಳಕಿನ ಮೂಲ (ಅಕರ). ಈ ಲೇಸರ್‍ನಲ್ಲಿ ಹಲವು ಬಗೆಯ ಅನಿಲಗಳು ಉಪಯೋಗಿಸಲ್ಪಡುತ್ತವೆ. ಅದರೆ ನೇತ್ರ ಚಿಕಿತ್ಸೆಗೆ ಉಪಯೋಗಿಸುವ ಲೇಸರ್ ಉಪಕರಣದಲ್ಲಿ ಅರ್ಗಾನ್ ಅನಿಲವು ಹೆಚ್ಚಾಗಿ ಬಳಸಲ್ಪಡುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಕಣ್ಣಿನ ರೋಗಗಳಿಗೆ ಬೇಕಾಗುವ ಅಲೆ ಉದ್ದ (ವೇವ್ ಲೆಂಗ್ತ್)ದ ಕಿರಣಗಳನ್ನು ಇದು ಒದಗಿಸುತ್ತದೆ. ಅರ್ಗಾನ್ ಅಲ್ಲದೆ ಉಪಯೋಗಿಸಲ್ಪಟುವ ಇನ್ನೊಂದು ಅನಿಲ ಕ್ರಿಪ್ಟಾನ್. ಮತ್ತೊಂದು ಜನಪ್ರಿಯ ಲೇಸರ್ ಎಂದರೆ ಡೈ ಓಡ್‍ಲೇಸರ್.

ಮುಖ್ಯವಾದ ಉಪಯೋಗಗಳು: ಅಕ್ಷಿಪಟಲದ ಕಾಯಿಲೆಯಾದ ಮಧುಮೇಹ ಕಣ್ಜಾಲಬೇನೆ, ಈಲ್ಸ್ ಕಾಯಿಲೆ. ಒಂದು ರೀತಿಯ ಅಕ್ಷಿಪಟಲದ ಬೀಗು (ಸೆಂಟ್ರಲ್ ಸೀರಸ್ ರೆಟಿನೋಪತಿ) ಕಣ್ಜಾಲ ಅಭಿದಮನಿಯ ಮುಚ್ಚುವಿಕೆ ಇತ್ಯಾದಿ. ಅಲ್ಲದೆ ಈ ಕೆಳಗಿನ ಕಾಯಿಲೆಗಳಲ್ಲೂ ಲೇಸರ್ ಉಪಯೋಗಿಸಲ್ಟಡುತ್ತದೆ. ಕೆಲವು ವಿಧದ ಕಣ್ಜಾಲ ನೆನಗಂತಿ (ರೆಟಿನೋಬ್ಲಾಸ್ಟೋಮಾ) ಅಕ್ಷಿಪಟಲ ಕಳಚುವಿಕೆಯ ಮೊದಲ ಹಂತ. ಗ್ಲೊಕೊಮಾದಲ್ಲಿ ಫೆರಿಫರಲ್ ಐರಿಡೆಕ್ಟಮಿ, ಟ್ರಟೇಕ್ಯುಲೋಪ್ಲಾಸ್ಮ್ವಿ. ಈ ಉಪಕರಣದ ಮುಖ್ಯ ಅನುಕೂಲವೆಂದರೆ ಶಸ್ತ್ರಕ್ರಿಯೆ ಇಲ್ಲ. ರೋಗಿಯು ಅಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೊರ ರೋಗಿಯಾಗಿ ಚಿಕಿತ್ಸೆ ಪಡೆಯಬಹುದು. ಅರಿವಳಿಕೆಯನ್ನು ಕೊಡದಿದ್ದರೂ, ನೋವು ವೇದನೆ ಇಲ್ಲ. ಯಾಗ್ ಲೇಸರ್: ಶಸ್ತ್ರಕ್ರಿಯೆಯಾಗಿ ಕೆಲವು ಸಮಯದ ನಂತರ ಕೃತಕ ಮಸೂರದ ಹಿಂಭಾಗದಲ್ಲಿ ಅಳಿದುಳಿದ ಕಣ್ಣಿನ ಪೊರೆಯ ಅಂಶ-ಪರದೆ ರೀತಿಯಲ್ಲಿ ಕಟ್ಟುವುದೂ ಒಂದು ಅವಗುಣ. ಈ ಅವಗುಣವನ್ನು ನಿವಾರಿಸಲು ಅತ್ಯಾಧುನಿಕ ಉಪಕರಣವೊಂದು ಬಳಕೆಗೆ ಬಂದಿದೆ. ಅದೇ ʽಯಾಗ್ ಲೇಸರ್ʼ ಅತ್ಯಂತ ವೇಗದಲ್ಲಿ ಚಲಿಸುವ ಈ ಕಿರಣ ಪರದೆ ರೀತಿಯಲ್ಲಿ ಪೊರೆಯ ಅಂಶವನ್ನು ನಾಶಗೊಳಿಸಿ ದೃಷ್ಟಿ ಹೆಚ್ಚಾಗಲು ನೆರವಾಗುತ್ತದೆ.

ಲ್ಯಾಸಿಕ್ ಸರ್ಜರಿ ಅಥವಾ ಚಿಕಿತ್ಸೆ: ಕನ್ನಡಕ ಅಥವಾ ಸ್ಪರ್ಷ ಮಸೂರವಿಲ್ಲದೆ ಸ್ಪಷ್ಟವಾಗಿ ನೋಡಬೇಕೆಂಬ ದೃಷ್ಟಿದೋಷ ಇದ್ದವರ ಕನಸನ್ನು ನನಸಾಗಿಸಿದೆ ಈ ಚಿಕಿತ್ಸೆ ಈ ಚಿಕಿತ್ಸೆ ಲ್ಯಾಸಿಕ್ ಎಂದರೆ ಐಚಿseಡಿ ಂssisಣeಜ Iಟಿ-Siಣu ಏeಡಿಚಿಣomiಟeusis. ಅಂದರೆ ಒಂದು ರೀತಿಯ ಲೇಸರ್ ಉಪಯೋಗಿಸಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯದ ಮೇಲೆ ಚಿಕಿತ್ಸೆ ಮಾಡಲಾಗುತ್ತದೆ.

ಕನ್ನಡಕ ಧರಿಸುವುದು ದೃಷ್ಟಿದೋಷಕ್ಕೆ ಸುಲಭ ಚಿಕಿತ್ಸೆ, ಹಲವು ಕಾರಣಗಳಿಂದಾಗಿ ಎಲ್ಲರಲ್ಲಿ ಇದು ಸಾಧ್ಯವಿಲ್ಲ. ದೊಡ್ಡ ಪ್ರಮಾಣದ ದೃಷ್ಟಿದೋಷಗಳು, ಎರಡೂ ಕಣ್ಣಿನಲ್ಲಿರಬಹುದಾದ ಭಿನ್ನ ರೀತಿಯ ದೃಷ್ಟಿದೋಷಗಳು. ಕನ್ನಡಕಕ್ಕೆ ಉಂಟಾಗುವ ಅಲರ್ಜಿ-ಹೀಗೆ ಹಲವು ಕಾರಣಗಳನ್ನು ನಾವು ಪಟ್ಟಿಮಾಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಅದರಲ್ಲಿಯೂ ಸ್ಕೂಲ್, ಕಾಲೇಜ್‍ಗೆ ಹೋಗುವ ವಿದ್ಯಾರ್ಥಿಗಳು (ಅದರಲ್ಲಿಯೂ ಯುವತಿಯರು) ಹಾಗೂ ವಿವಿಧ ಉದ್ಯೋಗದಲ್ಲಿರುವ ಮಹಿಳೆಯರು ಕನ್ನಡಕ ಧರಿಸಲು ಇಷ್ಟಪಡುವುದಿಲ್ಲ. ಇದನ್ನು ಬಂಡವಾಳವಾಗಿಟ್ಟುಕೊಂಡು ಹಲವು “ಪೊಳ್ಳು ಚಿಕಿತ್ಸೆ”ಗಳು ಹುಟ್ಟಿಕೊಂಡಿವೆ. ಪ್ರಚಲಿತದಲ್ಲಿವೆ. ವಿವಿಧ ರೀತಿಯ ಕಣ್ಣಿನ ವ್ಯಾಯಾಮಗಳು ಕಣ್ಣಿಗೆ ಹಾಕುವ ವಿವಿಧ ಸಸ್ಯಜನ್ಯ ಹನಿಔಷಧಿಗಳು-ಹೀಗೆ ಹಲವು ಇವೆ. ಅದರೆ ಇವಾವೂ ವ್ಶೆಜ್ಞಾನಿಕವಾಗಿ ದೃಷ್ಟಿದೋಷಗಳನ್ನು ಚಿಕಿತ್ಸೆ ಮಾಡುವ ಮಾರ್ಗಗಳು ಎಂದು ಸಾಬೀತಾಗಿಲ್ಲ. ಅದರೆ ವೈದ್ಯ ವಿಜ್ಞಾನಿಗಳು ಈ ದಿಸೆಯಲ್ಲಿ ಹಲವಾರು ವರ್ಷಗಳಿಂದ ಯೋಚಿಸಿ. ಹಲವು ಚಿಕಿತ್ಸೆಗಳನ್ನು ಜಾರಿಗೆ ತಂದರು. 2-3 ದಶಕಗಳ ಹಿಂದೆ ಜನಪ್ರಿಯವಾಗಿದ್ದ ʽರೇಡಿಯಲ್ ಕೆರಟಾಟಮಿʼ ಎಂಬ ಚಿಕಿತ್ಸೆ ನಂತರ ಕ್ರಯೋಸರ್ಜರಿ ಚಿಕಿತ್ಸೆ, ನಂತರ ಈಗ ಪ್ರಚಲಿತವಿರುವ-ಎಕ್ಸೈಮರ್ ಲೇಸರ್‍ನಿಂದ ಕೈಗೊಳ್ಳುವ ಲ್ಯಾಸಿಕ್ ಸರ್ಜರಿ ಅಥವಾ ಚಿಕಿತ್ಸೆ.

ಲ್ಯಾಸಿಕ್ ಚಿಕಿತ್ಸೆಯನ್ನು ಎರಡು ಹಂತದಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ - ಇಡೀ ಕಣ್ಣಿನ ದೃಷ್ಟಿದೋಷವನ್ನು ಕರಾರುವಾಕ್ಕಾಗಿ ಲೆಖ್ಖ ಹಾಕುವುದು ಹಾಗೂ ಕಣ್ಣಿನಲ್ಲಿರಬಹುದಾದ ʽಅಪ್ಟಿಕಲ್ ಅಬರೇಷನ್ - ಅಂಶವನ್ನು ಅಳೆಯುವುದು. ಈ ಅಂಶ ವೇವ್‍ಫ್ರಂಟ್ ಅಬರೋಮೆಟ್ರಿʼ - ಎಂಬ ಹೊಸ ಸಾಧನದಿಂದ ಅಳೆಯಲ್ಪಡುತ್ತದೆ. ಹೀಗೆ ಲೆಕ್ಕಹಾಕಿ, ಅಳೆದ ಅಂಶಗಳೆಲ್ಲಾ ವಿಶೇಷ ಕಂಪ್ಯೂಟರ್‍ನಲ್ಲಿ ದಾಖಲಾಗುತ್ತದೆ. ಈ ಅಂಶಗಳು ಎಕ್ಸೈಮರ್ ಲೇಸರ್ ಯಂತ್ರಕ್ಕೆ ವರ್ಗಾವಣೆಯಾಗುತ್ತದೆ. ಎರಡನೆಯ ಹಂತದಲ್ಲಿ ಅಯಾ ದೃಷ್ಟಿದೋಷಕ್ಕನುಗುಣವಾಗಿ ಅಗತ್ಯವಿರುವ ಲೇಸರ್ ಕಿರಣವನ್ನು ಕಾರ್ನಿಯದ ಮೇಲೆ ಹಾಯಿಸಲಾಗುತ್ತದೆ. ಈ ಚಿಕಿತ್ಸೆ ಕೆಲವೇ ಸೆಕೆಂಡುಗಳಲ್ಲಿ ಮುಗಿದು ಹೋಗುತ್ತದೆ. ಯಾವ ರೀತಿಯ ನೋವು, ವೇದನೆ ಅಗುವುದಿಲ್ಲ.

ಈ ಲ್ಯಾಸಿಕ್ ಚಿಕಿತ್ಸೆಯಿಂದ ಸಾಮಾನ್ಯವಾಗಿ +6 ರಿಂದ -14.00ಆ ರವರೆಗಿನ ಹೆಚ್ಚಿನ ಎಲ್ಲ ರೀತಿಯ ದೃಷ್ಟಿದೋಷಗಳಿಗೂ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗುತ್ತದೆ. 18 ವರ್ಷ ದಾಟಿದ ದೃಷ್ಟಿದೋಷ ಬಹಳಷ್ಟು ದಿನಗಳಿಂದ ಒಂದೇ ರೀತಿಯಲ್ಲಿರುವ ಯಾರು ಬೇಕಾದರೂ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಈ ಲ್ಯಾಸಿಕ್ ಚಿಕಿತ್ಸೆಯಲ್ಲಿ ತುಂಬಾ ಮೇಲ್ಮಟ್ಟದ ದುಬಾರಿ ತಂತ್ರಜ್ಞಾನದ ಹಲವಾರು ಯಂತ್ರಗಳು ಉಪಯೋಗಿಸಲ್ಪಡುವುದರಿಂದ, ಬೇರೆ ಬೇರೆ ಕೇಂದ್ರಗಳಲ್ಲಿ ಒಂದು ಕಣ್ಣಿನ ಚಿಕಿತ್ಸೆಗೆ 10 ರಿಂದ 15 ಸಾವಿರ ರೂ. ಗಳವರೆಗೂ ವೆಚ್ಚ ಬೀಳುತ್ತದೆ. ನಮ್ಮ ರಾಜ್ಯದ ಬೆಂಗಳೂರಿನಲ್ಲಿ 3-4 ಕೇಂದ್ರಗಳಲ್ಲಿ ಹಾಗೂ ಹೊರ ರಾಜ್ಯದ ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಲ್ಕತ್ತಾಗಳಲ್ಲಿಯೂ ಈ ಚಿಕಿತ್ಸೆ ಲಭ್ಯ. ಕನ್ನಡಕ ಹಾಕಲು ಇಷ್ಟವಿಲ್ಲದವರು ಈ ಚಿಕಿತ್ಸೆಯ ಬಗ್ಗೆ ಪ್ರಯತ್ನಿಸಬಹುದು.

ಮೇಲೆ ತಿಳಿಸಿದ ಹಲವು ಪ್ರಗತಿಗಳೇ ಅಲ್ಲದೆ ಸ್ಪರ್ಶಮಸೂರ (ಅoಟಿಣಚಿಛಿಣ ಟeಟಿs) ವಿಧಗಳಲ್ಲಿ ಬಹಳಷ್ಟು ಪ್ರಗತಿ ಅಗಿದೆ. ಅರಂಭದಲ್ಲಿ ಕೇವಲ ಗಟ್ಟಿ ಮಸೂರಗಳು, ಪ್ರತಿದಿನ ರಾತ್ರಿ ತೆಗೆದು ಬೆಳಿಗ್ಗೆ ಧರಿಸುವ ಮಸೂರಗಳು ಮಾತ್ರ ಬಳಕೆಯಲ್ಲಿದ್ದವು. ಈಗ ತೀರ ತೆಳುವಾದ ಮೃದು ಮಸೂರಗಳು, ಅಂಶಿಕ ಮೃದು ಮಸೂರಗಳು ಬಂದಿರುವುದಲ್ಲದೇ, ಈ ಎರಡೂ ವಿಧದ ಮಸೂರಗಳಲ್ಲಿ 4 ರಿಂದ 10 ದಿನಗಳು ಕೆಲವೊಮ್ಮೆ 2 ವಾರಗಳವರೆಗೆ ಸತತವಾಗಿ ಧರಿಸುವಂತಹ ಮಸೂರಗಳೂ ಬಳಕೆಗೆ ಬಂದಿವೆ.

ಈ ಮೇಲಿನ ಎಲ್ಲಾ ಪ್ರಗತಿಗಳು ಕಣ್ಣಿನ ಚಿಕಿತ್ಸೆಯಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಉಂಟುಮಾಡಿದೆ ಎಂದರೆ ತಪ್ಪಲ್ಲ. 8. ಕಣ್ಣಿನ ಕೆಲವು ಸಾಮಾನ್ಯ ಹಾಗೂ ಪ್ರಮುಖ ಕಾಯಿಲೆಗಳು

ಇವುಗಳೆಂದರೆ ಕಣ್ಪೊರೆ ಅಥವಾ ಮೋತಿಬಿಂದು (ಕೆಟರಾಕ್ಟ್), ಗ್ಲೊಕೊಮಾ, ಸಿಹಿಮೂತ್ರರೋಗ ಕಣ್ಣಿನಲ್ಲಿ ಉಂಟುಮಾಡುವ ತೊಂದರೆಗಳು, ಕಣ್ಣೀರಿನ ಚೀಲಕ್ಕೆ ಉಂಟಾಗುವ ಸೋಂಕು-ಡಾಕ್ರಿಯೋಸಿಸ್ಟೈಟಿಸ್, ಕೋಡ್ಪರೆಯ ಮೇಲೆ ಅಗುವ ಹುಣ್ಣು (ಕಾರ್ನಿಯಲ್ ಅಲ್ಸರ್), ಕೋಡ್ಪರೆಯ ಸೋಂಕು) (ಕಂಜಕ್ವಮೈಟಿಸ್), ಎ ಅನ್ನಾಂಗದ ಕೊರತೆ, ಕಣ್ಣಿನ ಕ್ಯಾನ್ಸರ್ ರಟಿನೋಬ್ಲಾಸ್ಟೋಮಾ ಹಾಗೂ ಮೆಳ್ಳಗಣ್ಣು ಅಥವಾ ಕೋಸುಗಣ್ಣು ಅಥವಾ ಮಾಲಗಣ್ಣು ಮತ್ತು ತಾರಕೆಯ ಸೋಂಕು. (ಐರಿಡೋಸೈಕ್ಲೈಟಿಸ್)

ಕಣ್ಣೊರೆ ಅಥವಾ ಮೋತಿಬಿಂದು (ಕೆಟರಾಕ್ಟ್) : ಸಾಮನ್ಯವಾಗಿ 60-65 ವರ್ಷಗಳ ನಂತರ ಕಾಣಿಸಿಕೊಳ್ಳುವ ಈ ಕಾಯಿಲೆಯ ಮಕ್ಕಳಲ್ಲಿಯೂ ಕೆಲವು ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಗ ಇದನ್ನು ಜನನಾಗತ ಕಣ್ಪೊರೆ (ಕಂಜನೈಟಲ್ ಕೆಟರಾಕ್ಟ್) ಎಂದು ಕರೆಯುತ್ತಾರೆ.

ವಯಸ್ಸಾದವರಲ್ಲಿ ಈ ಕಾಯಿಲೆಯು ಸಾಮಾನ್ಯವಾಗಿ ದೂರದ ವಸ್ತುಗಳು ಸರಿಯಾಗಿ ಕಾಣಿಸುವುದಿಲ್ಲ. ವಸ್ತುಗಳು ಮಂಜು ಮಂಜಾಗುತ್ತವೆ. ವಸ್ತುಗಳನ್ನು ಮೋಡದ ಮುಖಾಂತರ ನೋಡಿದಂತೆ ತೋರುತ್ತದೆ. ಕಣ್ಣಿನ ಹೊರಭಾಗದ ದೃಷ್ಟಿಯ ಕ್ಷೇತ್ರ ಕಡಿಮೆಯಾಗುತ್ತಾ ಬರುತ್ತದೆ. ಇವೇ ಮೊದಲಾದ ತೊಂದರೆಗಳು ರೋಗಿಯನ್ನು ಕಾಡುತ್ತವೆ. ಈ ಕಾಯಿಲೆಯಲ್ಲಿ ಸಮಾನ್ಯವಾಗಿ ರೋಗಿಗೆ ಯಾವುದೇ ರೀತಿಯ ನೋವು ಇರುವುದಿಲ್ಲ ಮತ್ತು ಬೇರೆಯಾವುದೇ ತೊಂದರೆ ಇರುವುದಿಲ್ಲ. ದೃಷ್ಟಿ ನಿದಾನವಾಗಿ ಮಂದವಾಗುತ್ತಾ ಬಂದ ಹಾಗೇ ಹೆಚ್ಚಿನ ರೋಗಿಗಳು ಇದು ಕನ್ನಡಕ ಬದಲಾವಣೆಯಿಂದ ಸುಧಾರಿಸಬಹುದು" ಎಂಬ ನಿರೀಕ್ಷೆಯಿಂದ ನೇತ್ರ ವೈದ್ಯರಲ್ಲಿ ಬರುತ್ತಾರೆ. ಅಗ ನೇತ್ರ ವೈದ್ಯನು "ಕನ್ನಡಕ ಬದಲಾವಣೆಯಿಂದ ಪ್ರಯೋಜನವಾಗುವುದಿಲ್ಲ. ಸೂಕ್ತ ಸಮಯದಲ್ಲಿ ಶಸ್ತ್ರಕ್ರಿಯೆ ಮಾಡಬೇಕು-" ಎಂದು ಹೇಳಿದಾಗ ಬಹಳಷ್ಟು ರೋಗಿಗಳಿಗೆ ಸಮಾಧಾನವಾಗುವುದಿಲ್ಲ.

ಕಣ್ಪೊರೆಗೆ ಬೇರೆ ಎಲ್ಲ ಕಣ್ಣಿನ ರೋಗಗಳಿಗಿಂತ ಜಾಸ್ತಿ ಪ್ರಾಮುಖ್ಯತೆ ಏಕೆ ಎಂದರೆ-ಇದರಿಂದ ಉಂಟಾಗುವ ಅಂಧತ್ವವನ್ನು ಸೂಕ್ತ ಶಸ್ತ್ರಕ್ರಿಯೆಯಿಂದ ನಿವಾರಿಸಬಹುದು. ಕಣ್ಣಿನ ಒಳಭಾಗದಲ್ಲಿರುವ ಮಸೂರ (ಲೆನ್ಸ್) ಕಾಲಕ್ರಮೇಣವಾಗಿ ತನ್ನ ಬೆಳಕನ್ನು ಪಸರಿಸುವ ಶಕ್ತಿಯಲ್ಲಿ ಕುಂದು ಉಂಟಾಗುತ್ತಾ ಹೋಗುತ್ತದೆ. ಯಾಕಾಗಿ ಈ ತರಹದ ಕಾಯಿಲೆ ಉಂಟಾಗುತ್ತದೆ? ಎಂಬ ಪ್ರಶ್ನೆಗೆ ಇಂದಿಗೂ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಸೂರ್ಯನ ಬೆಳಕಿನಲ್ಲಿರುವ ಸಣ್ಣ ಪ್ರಮಾಣದ ವಿಕಿರಣದ ಕಿರಣಗಳಿಂದ ಉಂಟಾಗುತ್ತದೆಯೆಂಬುದು ಪ್ರಬಲವಾದವಾದವಾದರೂ ಇನ್ನು ಹಲವು ಹತ್ತು ಕಾರಣಗಳು ಈ ಕಾಯಿಲೆಗೆ ಕಾರಣಕರ್ತ ಎಂದು ಮತ್ತೆ ಕೆಲವರಿಂದ ವಾದಿಸಲ್ಪಡುತ್ತದೆ. ಯಾವುದೇ ಕಾರಣವಿದ್ದರೂ ಇದಕ್ಕೆ ಚಿಕಿತ್ಸೆ ಮಾತ್ರ ಶಸ್ತ್ರಕ್ರಿಯೆ. ಯಾವುದೇ ಔಷಧದಿಂದ ಪೊರೆಯನ್ನು ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಶಸ್ತ್ರಕ್ರಿಯ ಮಾಡುವಾಗ ಕಣ್ಣಿನ ಒಳಗೆ ಕೃತಕ ಮಸೂರವನ್ನು ಇಡುವ ಕ್ರಮ ತೀರಾ ಇತ್ತೀಚನದು.

ಗ್ಲೊಕೊಮಾ : ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಪ್ರಮುಖ ಕಾಯಿಲೆಯೆಂದರೆ "ಗ್ಲೊಕೊಮ". ಈ ಕಾಯಿಲೆಯಲ್ಲಿ ಹಲವು ವಿಧಗಳಿದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗೆ ಕಾಯಿಲೆ ಇದೆ ಎಂದು ಗೊತ್ತಾಗುವ ಹೊತ್ತಿಗೆ. ಅವನ ಒಂದು ಕಣ್ಣಿನ ನರವನ್ನು ಹಾಳು ಮಾಡಿರುತ್ತದೆ. ಎರಡೂ ಕಣ್ಣಿನಲ್ಲಿಯೂ ಕಾಣಿಸಿಕೊಳ್ಳುವ ಈ ಕಾಯಿಲೆಯ 65-70 ವರ್ಷಗಳ ನಂತರ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯ ಪ್ರಾಮುಖ್ಯತೆ ಏನೆಂದರೆ ಒಂದು ಬಾರಿ ಕಾಯಿಲೆಯಿಂದ ಕಣ್ಣಿನ ನರ ಹಾಳಾಗಿ ನಷ್ಟವಾದ ದೃಷ್ಟಿ ಮತ್ತು ವಾಪಸ್ ಬರುವುದಿಲ್ಲ. ಅದ್ದರಿಂದ ಅದಷ್ಟು ಬೇಗ ಈ ಕಾಯಿಲೆಯನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪ್ರಾರಂಭಿಸಿದರೆ ರೋಗಿ ಕುರುಡನಾಗುವುದನ್ನು ತಪ್ಪಿಸಬಹುದು. ಹೆಚ್ಚಿನ ರೋಗಿಗಳಲ್ಲಿ ಯಾವುದೇ ರೀತಿಯ ನೋವು ತೊಂದರೆ ಇರುವುದಿಲ್ಲವಾದ್ದರಿಂದ-ಅವರು ನೇತ್ರ ವೈದ್ಯರಲ್ಲಿ ಪರೀಕ್ಷೆಗೆ ಬರುವಾಗ ಬಹಳಷ್ಟು ವಿಳಂಬವಾಗಿರುತ್ತದೆ. ಅದ್ದರಿಂದ ಎಲ್ಲ 50 ವರ್ಷ ದಾಟಿದವರೂ ಸಹಿತ ಅಗಾಗ ನೇತ್ರ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಇನ್ನೊಂದು ರೀತಿಯ ಗ್ಲೊಕೊಮಾದಲ್ಲಿ ತೀವ್ರ ನೋವು ಇರುತ್ತದೆ. ದೃಷ್ಟಿ ಒಮ್ಮೆಲೇ ಕಡಿಮೆಯಾಗುತ್ತದೆ. ಇದು ಹೆಂಗಸರಲ್ಲಿ ಹೆಚ್ಚು. ಇದನ್ನು ಕಿರಿದಾದ ಕೋನದ ಗ್ಲೊಕೊಮಾ ಎನ್ನುತ್ತಾರೆ. ಸೂಕ್ತ ಔಷಧದಿಂದ ಮೊದಲು ಚಿಕಿತ್ಸೆ ಮಾಡಿ ನಂತರ ಇದಕ್ಕೆ ಶಸ್ತ್ರಕ್ರಿಯ ಮಾಡಬೇಕು.

ಗ್ಲೊಕೊಮಾ ಕಾಯಿಲೆಯಲ್ಲಿ ಉಂಟಾಗುವ ತೊಂದರೆ ಎಂದರೆ ಕಣ್ಣಿನ ಒತ್ತಡ ಹೆಚ್ಚಾಗುವುದು.

ಸಿಹಿಮೂತ್ರರೋಗ (ಮಧುಮೇಹ) ಮತ್ತು ಕಣ್ಣು : ಕಾಯಿಲೆಗಳಲ್ಲಿ 'ರಾಜ ಕಾಯಿಲೆ ಎಂದು ಒಂದು ಕಾಲದಲ್ಲಿ ಬಣ್ಣಿಸಲ್ಪಡುತ್ತಿದ್ದ ಮಧುಮೋಹ ರೋಗ ಮುಖ್ಯವಾಗಿ ಪರಿಣಾಮ ಬೀರುವ ಅಂಗಗಳೆಂದರೆ ಮೂತ್ರಪಿಂಡ, ಕಣ್ಣು (ಕಣ್ಣಿನ ವಿವಿಧ ಕಾಯಿಲೆಗಳು) ದೇಹದ ವಿವಿಧ ಸಣ್ಣ ರಕ್ತನಾಳಗಳು, ಹೃದಯ ನರಗಳು, ಕಾಲು ಅಥವಾ ಕೈ (ಡಯಾಬಿಟಕ್ ಗ್ಯಾಂಗ್ರಿನ್‍ಗೆ) ಒಳಗಾಗುವುದು.

ದೇಹದ ಅತಿ ಅಮೂಲ್ಯವಾದ ಅಂಗವಾದ ಕಣ್ಣಿನ ಮೇಲೆ ಮಧು ಮೇಹದ ಮುಖ್ಯ ಪರಿಣಾಮಗಳೆಂದರೆ: 1. ಮಧುಮೇಹ ಅಕ್ಷಿಪಟಲ ಅಥವಾ ಕಣ್ಜಾಲಬೇನೆ 2. ಮಧುಮೇಹದ ಮೋತಿಬಿಂದು ಅಥವಾ ಕಣ್ಪೊರೆ. 3. ಸಮೀಪದೃಷ್ಟಿ ಅಥವಾ ದೂರ ದೃಷ್ಟಿ ದೋಷಗಳು 4. ಕಾಚೀರಸದಲ್ಲಿ ರಕ್ತ ಹೆಪ್ಪುಗಟ್ಟುವಿಕೆ. 5. ಕಣ್ಣಿನ ಹೊರಗಿನ ಮಾಂಸಗಳ ಬಲಹೀನತೆ ಅಥವಾ ಲಕ್ವ. 6. ಅಪ್ಟಿಕ್ ನರದುರಿತ. 7. ಮಧುಮೇಹ ತಾರಕೆ ಸುತ್ತಿನುರಿತ.

ಮಧುಮೇಹ ಅಕ್ಷಿಪಟಲ ಅಥವಾ ಕಣ್ಜಾಲ ಬೇನೆ : ಸಾಮಾನ್ಯವಾಗಿ ವಯಸ್ಸಾದ ರೋಗಿಗಳಲ್ಲಿ ಕಾಣೀಸಿಕೊಳ್ಳುವ ಈ ರೋಗವು ಚಿಕ್ಕ ವಯಸ್ಸಿನಲ್ಲಿ ಮಧುಮೇಹದಿಂದ ಕಾಣಿಸಿಕೊಳ್ಳವ ಈ ರೋಗವು ಚಿಕ್ಕ ವಯಸ್ಸಿನಲ್ಲಿ ಮಧುಮೇಹದಿಂದ ಬಳಲುವವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಮಧುಮೇಹ ಹತ್ತು ವರ್ಷಕ್ಕಿಂತ ಹಳೆಯದಾದಾಗ ಸಾಮಾನ್ಯವಾಗಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಮೋತಿಬಿಂದು ಗ್ಲೊಕೊಮ ರೋಗಗಳನ್ನು ಹೊರತುಪಡಿಸಿದರೆ ಅಂಧತ್ವಕ್ಕೆ ಹೆಚ್ಚಿನ ಕಾರಣ-ಮಧುಮೇಹ ಕಣ್ಜಾಲ ಬೇನೆ. ವಿಶೇಷವಾಗಿ ಇದು ಎರಡು ಕಣ್ಣನ್ನು ಏಕ ಕಾಲದಲ್ಲಿ ಅವರಿಸುವುದರಿಂದ ಎಷ್ಟು ರೋಗ ಈ ರೋಗಕ್ಕೆ ಚಿಕಿತ್ಸೆ ಮಾಡಲು ಸಾಧ್ಯವೋ ಅಷ್ಟು ಒಳ್ಳೆಯದು. ಇಲ್ಲಿ ಗಮನಿಸಬೇಕಾದ ಅಂಶಗಳಂದರೆ-ಮಧುಮೋಹ ಕಾಯಿಲೆಯ ತೀವ್ರತೆಗೂ ಮತ್ತು ಅದರಿಂದ ಉಂಟಾಗುವ ರೆಟನೋಪತಿಗೂ ಸಂಬಂಧವಿಲ್ಲದೆ ಇರುವುದು. ಅಲ್ಲದೆ ವಿವಿಧ ಚಿಕಿತ್ಸಾ ಕ್ರಮಗಳಿಂದ ರೋಗವು ಸಂಪೂರ್ಣ ಹತೋಟಿಯಲ್ಲಿದ್ದರೂ ಕೂಡ 'ರೆಟಿನೋಪತಿ' ಕಾಣಿಸಿಕೊಳ್ಳುಬಹುದು.

ಈ ರೋಗವು ಮುಖ್ಯವಾಗಿ ಅಕ್ಷಪಟಲದ ಸಣ್ಣ ರಕ್ತನಾಳಗಳಿಗೆ ತೊಂದರೆಯನ್ನುಂಟುಮಾಡುತ್ತದೆ. ರಕ್ತಸುರಿತ (ಹೆಮೋರೆಜ್) ಮತ್ತು ಒಸರುಗಳು ಶೇಖರಗೊಳ್ಳುವುದರಿಂದ ದೃಷ್ಟಿ ಬಹಳ ಕ್ಷೀಣಿಸುತ್ತದೆ. ಈ ಸಂದರ್ಭದಲ್ಲಿ ಚಿಕಿತ್ಸೆ ಮಾಡದೆ ಬಿಟ್ಟರೆ ಅಕ್ಷಿಪಟಲದ ತಂತುಗೊಡಿಕೆಯಿಂದ ಅಕ್ಷಿಪಟಲದ ಕಳಚುವಿಕೆಯಂತಹ ಗಂಭೀರ ಪರಿsಸ್ಥಿತಿಗೆ ಹೋಗುಬಹುದು. ಇಲ್ಲದಿದ್ದರೆ ಕಾಚೀ ರಸದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಗ್ಲೊಕೊಮಾ ಕಾಯಿಲೆ ಮುಂದುವರಿದು ಕಣ್ಣು ಕುರುಡಾಗಿ, ಭಾರೀ ನೋವು ಬರಲು ಪ್ರಾರಂಭವಾದರೆ ಕೊನೆಯಲ್ಲಿ 'ಅತಿವೇನೆಯ ಕುರುಡು ಕಣ್ಣು" ಅಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಯ ನೋವನ್ನು ನಿವಾರಿಸಲು ಕಣ್ಣನ್ನೇ ಸಂಪೂರ್ಣ ಶಸ್ತ್ರಕ್ರಿಯ ಮಾಡಿ ತೆಗೆಯಬೇಕಾದ ತೀವ್ರತರ ಚಿಕಿತ್ಸೆ ಮಾಡುವ ಅನಿವಾರ್ಯ ಪ್ರಸಂಗ ಬರುತ್ತದೆ.

ರೆಟಿನೋಪತಿಯ ಚಿಕಿತ್ಸೆ : ಮಧುಮೇಹ ಹತೋಟಿಯಲ್ಲಿಡುವುದು, ಅಹಾರದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಮಾಡುವುದು ಮತ್ತು ಸಸ್ಯಗಳಿಂದ ತಯಾರಾದ ಎಣ್ಣೆ ಉಪಯೋಗಿಸುವುದು. ಇದಕ್ಕೆ ಸರಿಯಾದ ಚಿಕಿತ್ಸೆ, ಯಶಸ್ವಿ ಚಿಕಿತ್ಸೆ ಎಂದರೆ ಲೇಸರ್ ಕಿರಣಗಳಿಂದ ಅಕ್ಷಿಪಟಲದಲ್ಲಿ ಹೊಸ ರಕ್ತನಾಳವನ್ನು ಮುಚ್ಚಿಕೊಳ್ಳುವಂತೆ ಮಾಡುವುದು ಮತ್ತು ರಕ್ತ ಸುರಿತವನು ಕಡಿಮೆ ಮಾಡವುದು.

ಮಧುಮೇಹ ಕಣ್ಜಾಲ ಬೇನೆಯಲ್ಲಿ ಲೇಸರ್‍ನ ಕಾರ್ಯವಿಧಾನ : ಅಕ್ಷಿ ಪಟಲದ ಹೊರ ಪ್ರದೇಶದಲ್ಲಿರುವ ಅಮ್ಲಜನಕ ಕಡಿಮೆಯಿರುವ (ಅನಾಕ್ಸಿಯಾ) ಭಾಗಗಳನ್ನು ಸುಟ್ಟು ಮಧ್ಯಭಾಗದ ಅಕ್ಷಿಪಟಲಕ್ಕೆ ಸರಿಯಾದ ರಕ್ತವು ಪೊರೈಕೆಯಾಗುವಂತೆ ನೋಡಿಕೊಳ್ಳುವುದು ಅಲ್ಲದೆ ಇದು ಅಪಯಕಾರಿಯಾದ ಅಂದರೆ ಕಾಯಿಲೆಯಿಂದ ಉಂಟಾಗುವ ಹೊಸ ರಕ್ತನಾಳವನ್ನು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಈ ಹೊಸ ರಕ್ತನಾಳಗಳನ್ನು ಹಾಗೆಯೇ ಬಿಟ್ಟರೆ. ಹೆಚ್ಚು ರಕ್ತ ಸೋರುವಿಕೆಯುಂಟಾಗಿ, ಕಣ್ಣಿನೊಳಗೆ ರಕ್ತಸ್ರಾವಮಾಗಿ ಕೊನೆಯಲ್ಲಿ ಅತಿವೇನೆಯ ಕುರುಡು ಕಣ್ಣು ಅಗುತ್ತದೆ.

ಮಧುಮೇಹ ಮೋತಿಬಿಂದು ಅಥವಾ ಕಣ್ಪೊರೆ : ಇದರಲ್ಲಿ ಎರಡು ವಿಧ 1. ನಿಧಾನವಾಗಿ ಬೆಳೆಯುವ ಸಾಧಾರಣವಾಗಿ 60-65 ವರ್ಷಗಳ ನಂತರ ಬಿರುವ ಮೋತಿಬಿಂದು ಕಾಯಿಲೆಯು 40-45ರ ಪ್ರಾಯದಲ್ಲಿಯೇ ಬರುತ್ತದೆ.

2. ಎರಡು-ಮೂರು ವಾರಗಳಲ್ಲಿಯೇ ಅತೀ ಶೀಘ್ರವಾಗಿ ಕಾಣಿಸಿ ಕೊಳ್ಳುವ, 15 ರಿಂದ 25 ವರ್ಷದೊಳಗಿನವರಲ್ಲಿ ತೋರುವ ಮೋತಿಬಿಂದು (ಡಯಬಿಟಸ್ ಕೆಟರಾಕ್ಟ್) ಚಿಕಿತ್ಸೆ : ರೋಗ ನಿಯಂತ್ರಣ ನಂತರ ಶಸ್ತ್ರಕ್ರಿಯೆಯಿಂದ ಮೋತಿಬಿಂದು ನಿವಾರಣೆ. ಸವಿೂಪ ದೃಷ್ಟಿ ಅಥವಾ ದೂರದೃಷ್ಟಿ : ಈ ದೃಷ್ಟಿ ದೋಷಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣ ವ್ಯತ್ಯಾಸ ಅದಂತೆ ಕಣ್ಣಿನ ಮಸೂರದಲ್ಲಿ ಉಂಟಾಗುವ ಬದಲಾವಣೆಯಿಂದ ಸಂಭವಿಸುತ್ತವೆ. ಕಣ್ಣಿನ ಹೊರಗಿನ ಮಾಂಸಗಳ ಬಲಹೀನತೆ ಅಥವಾ ಲಕ್ವ : ಸಾಮಾನ್ಯವಾಗಿ ನಡು ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ತೊಂದರೆ ಬಹಳ ವಿರಳ. ಮೂರು, ನಾಲ್ಕು ಮತ್ತು ಆರನೆಯ ಕಪಾಲದ ನರಗಳಿಗೆ (ಕ್ರೇನಿಯಲ್ ನವ್ರ್ಸ್) ಹೆಚ್ಚು ಪರಿಣಾಮ ಬೀರುವ ಈ ಕಾಯಿಲೆಯು ಆ ನರಗಳಿಗೆ ಸಂಬಂಧಪಟ್ಟ ಕಣ್ಣಿನ ಹೊರಗಿನ ಮಾಂಸಗಳ ಬಲಹೀನತೆಗೆ ಕಾರಣವಾಗುತ್ತದೆ. ಅದ್ದರಿಂದ ರೋಗಿಗೆ ಕೋಸುಗಣ್ಣು ಉಂಟಾಗಿ ಒಂದು ವಸ್ತು ಎರಡವಾಗಿ ಕಾಣುವ ತೊಂದರೆ ಉಂಟಾಗುತ್ತದೆ. ಇದರ ವಿಶೇಷತೆಗಳೆಂದರೆ ಈ ಕಾಯಿಲೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಕೇಂದ್ರ ನರಮಂಡಲದ ಯಾವುದೇ ಚಿನ್ಹೆಯಾ ಇಲ್ಲದಿರುವುದು ಕಣ್ಪಾಪೆ (ಪ್ಯೂಪಿಲ್) ಏನೂ ಆಗದಿರುವುದು ಮತ್ತು ಕೆಲವು ತಿಂಗಳಲ್ಲಿ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆಯಾ ಇಲ್ಲದೆ, ತನ್ನಷ್ಟಕ್ಕೆ ತಾನೆ ಗುಣವಾಗಿ, ಕಾಯಿಲೆಯು ಪೂರ್ವದ ಸ್ಥಿತಿಗೆ ಬರುವುದು.

ಅಪ್ಟಿಕ್ ನರದುರಿತ (ನ್ಯೂರೈಟಿಸ್) : ಬೇರೆ ಯಾವ ತೊಂದರೆಯೂ ಇಲ್ಲದೆ ರೋಗಿಗೆ ಒಮ್ಮೆಲೇ "ಒಂದು ಕಣ್ಣು ಕಾಣುವುದಿಲ್ಲ" ಎಂದು ಶುರುವಾಗುವ "ರಿಟ್ರೋಬಲ್ಪಾರ ನ್ಯೂರೈಟಿಸ್‍ನಿಂದ ಮೊದಲ್ಗೊಂಡು ರೋಗಿಗೆ ಕುರುಡುತನ ತಂದುಕೊಡಬಹುದಾದ ಅಪ್ಟಿಕ್ ಅಟ್ರೋಫಿಯಂತಹ ಗಂಭೀರವಾದ ಪರಿಣಾಮದಲ್ಲಿ ಕೊನೆಗೊಳ್ಳುವುದರಿಂದ ಮೊದಲ ಹಂತದಲ್ಲಿಯೇ ರೋಗ ಪತ್ತಿಹಚ್ಚುವಿಕೆ ಮತ್ತು ಚಿಕಿತ್ಸೆ ಅತ್ಯವಶ್ಯಕ. ಏಕರೆಂದರೆ "ರಿಟ್ರೋಬಲ್ಪಾರ್ ನ್ಯೂರೈಟಿಸ್" ಹಂತದಲ್ಲಿಯೇ ರೋಗ ಪತ್ತೆ ಹಚ್ಚಲ್ಪಟ್ಟು ಚಿಕಿತ್ಸೆಗೆ ತೊಡಗಿದರೆ ಈ ರೋಗದಿಂದ ಸಂಪೂರ್ಣ ಗುಣ ಸಾಧ್ಯ.

ಸಿಹಿಮೂತ್ರರೋಗದಿಂದ ಕಣ್ಣೀನ ವಿವಿಧ ಬೇನೆಗಳು ಬರುತ್ತವೆ ಎಂಬ ಬಗ್ಗೆ ಜನಸಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಎಷ್ಟೋ ಸಂದರ್ಭಗಳಲ್ಲಿ ತೀವ್ರಕರವಾದ ಕಣ್ಣಿನ ಬೇನೆಯಿಂದ ನರಳುತ್ತಿರುವ ರೋಗಿಗಳಿಗೆ, ಮೂತ್ರ, ರಕ್ತ ಪರೀಕ್ಷ ಮಾಡಿಸಲು ನೇತ್ರ ವೈದ್ಯ ಸಲಹೆ ಮಾಡಿದಾಗ ಅಚ್ಚರಿ ವ್ಯಕ್ತಪಡಿಸುತ್ತಾರೆ. ಮೊದಲ ಹಂತದಲ್ಲಿಯೆ ಗುರುತಿಸಲ್ಪಟ್ಟು ಚಿಕಿತ್ಸೆಗೆ ತೊಡಗಿದರೆ ಗುಣವಾಗುವ ಎಷ್ಟೋ ರೋಗಗಳು, ರೋಗಿಯ ಅಜ್ಞಾನ ಅಂಧಶ್ರದ್ಧೇಯಿಂದಾಗಿ ಚಿಕಿತ್ಸೆ ಪಡೆಯದೆ, ಅಂಧತ್ವಕ್ಕೆ ದಾರಿ ಮಾಡಿಕೊಡುತ್ತವೆ. ಇಂತಹ ಸಂದರ್ಭಗಳಲ್ಲಿ, ಸೂಕ್ತ ಕಾಲದಲ್ಲಿ ನೇತ್ರ ವೈದ್ಯರ ಸಲಹೆ ಪಡೆಯಾವಂತೆ ರೋಗಿಯ ಮನಮೊಲಿಸುವಲ್ಲಿ ಕುಟುಂಬ ವೈದ್ಯನ ಪಾತ್ರ ಹಿರಿದು.

ಕಣ್ಣಿನ ನೀರಿನ ಚೀಲಕ್ಕೆ ಉಂಟಾಗುವ ಸೋಂಕು (ಡಾಕ್ರಿಯೋಸಿಸ್ವೈಟಿಸ್) : ಸಾಮಾನ್ಯವಾಗಿ ಕಣ್ಣೀರು ಮೂಗಿನ ಭಾಗಕ್ಕೆ ಸತತವಾಗಿ ಸಾಗಿಸಲ್ಪಡುತ್ತದೆ. ಅದರೆ ಕೆಲವು ಸಂದರ್ಭಗಳಲ್ಲಿ ಈ ದಾರಿ ಕಟ್ಟಲ್ಪಟ್ಟು ಕಣ್ಣಿನ ನೀರಿನ ಚೀಲವು ಸೋಂಕಿಗೆ ಒಳಗಾಗುತ್ತದೆ. ರೋಗಿಗೆ ಮೊದಲು ಕಣ್ಣೀರು ಹೆಚ್ಚು ಬರುತ್ತದೆ ಎಂದು ಪ್ರಾರಂಭವಾಗುವ ಈ ಕಾಯಿಲೆ ನಂತರ ನೀರಿನ ಜೊತೆ ಬಿಳಿಯ ಬಣ್ಣದ ಕೀವು ಸಹಿತ ಬರುವುದರಿಂದ, ರೋಗಿಯ ಸತತ ತೊಂದರೆಗೊಳಗಾಗುತ್ತಾನೆ. ಈ ಕಾಯಿಲೆಯ ಪ್ರಾಮುಖ್ಯತೆ ಎಂದರೆ ರೋಗವು ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಮಾಡಲ್ಪಡದಿದ್ದರೆ. ಬಹಳ ದಿನಗಳಿಂದ ಇರುವ ಸೋಂಕು ಕಣ್ಣಿನ ಪ್ರಮುಖ ಅಂಗವಾದ ಕೋಡ್ಪರೆ (ಕಾರ್ನಿಯ)ಯಲ್ಲಿ ಏನಾದರೂ ಗಾಯ ಅಥವಾ ಹುಣ್ಣು ಆದರೆ ರೋಗಿಯ ಕಣ್ಣನ್ನೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಚಿಕಿತ್ಸೆ-ಸೂಕ್ತ ಶಸ್ತ್ರಕ್ರಿಯೆಯಿಂದ ಕಣ್ಣೀರು ಹೋಗಲು ಬೇರೆದಾರಿ ಉಂಟುಮಾಡುವುದು ಅಥವಾ ಕಣ್ಣೀರಿನ ಚೀಲವನ್ನು ತೆಗೆದುಹಾಕುವುದು.

ಕೋಡ್ಪರೆಯ ಮೇಲೆ ಅಗುವ ಹುಣ್ಣು (ಕಾರ್ನಿಯಲ್ ಅಲ್ಸರ್) : ಕಣ್ಣಿನ ಮುಂಭಾಗದಲ್ಲಿ ಇರುವ ಭಾಗವಾದ ಕೋಡ್ಪರೆಯು ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣಿಗೆ ಬೀಳುವ ಧೂಳು, ಕಸ ಅಥವಾ ಲೋಹದ ಪದಾರ್ಥಗಳು ಮುಂತಾದ ಹೊರಗಿನ ವಸ್ತುಗಲು ಬಂದು ಬೀಳುವ ಭಾಗವಾಗಿರುತ್ತದೆ. ಹಳ್ಳಿಯಲ್ಲಿ ರೈತರು ಗದ್ದೆ ಕೆಲಸ ಮಾಡುವಾಗ ಭತ್ತ, ರಾಗಿ, ಗೋಧಿ ಮೊದಲಾದ ಧಾನ್ಯಗಳ ಸಿಪ್ಪೆ ಅಥವಾ ತೆನೆಗಳು ಅಗಾಗ ರೈತನ ಕಣ್ಣಿಗೆ ಬಿದ್ದು ಗಾಯವನ್ನು ಉಂಟುಮಾಡುವ ಸಾಧ್ಯತೆಗಳು ಬಹಳ. ಹಾಗೆಯೇ ಗಣಿಗಳಲ್ಲಿ ಅಥವಾ ಕೈಗಾರಿಕೋದ್ಯಮಗಳಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಸಣ್ಣ ಲೋಹದ ತುಂಡುಗಳು ಅಥವಾ ಇತರ ಕಸಗಳು ಕೋಡ್ಪರೆಯಲ್ಲಿ ಗಯವನ್ನುಂಟು ಮಾಡುತ್ತವೆ. ಯಾವ ವಯಸ್ಸಿನವರಲ್ಲಿಯಾ ಕಾಣಿಸಿ ಕೊಳ್ಳಬಹುದಾದ ಈ ತೊಂದರೆಯ ಪ್ರಾಮುಖ್ಯತೆ ಎಂದರೆ ಬಹಳ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಮಾಡಲ್ಪಟ್ಟರೆ ಕಣ್ಣಿಗೆ ಅಗಬಹುದಾದ ಹಾನಿಯನ್ನು ಬಹಳಷ್ಟು ತಡೆಗಟ್ಟಬಹುದು.

ಕೋಡ್ಪರೆಯ ಸೋಕು (ಕಂಜಂಕೈವ್ಯೆಟಿಸ್) : ಕಣ್ಣು ಕೆಂಪಾಗುತ್ತದೆ, ಕಣ್ಣಿನಲ್ಲಿ ಬೆಳಿಗ್ಗೆ ಏಳುವಾಗ ಬಿಳಿಯ ದ್ರವ ಬರುತ್ತದೆ ಎಂದು ಶುರುವಾಗುವ ಈ ತರಹದ ಕೆಂಗಣ್ಣು ಯಾರಲ್ಲಿಯೂ ಶುರವಾಗಬಹುದು ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆಗೆ ಕಾರಣ-ವೈರಸ್‍ಗಳು ಮತ್ತು ಕೆಲವು ಸಂದರ್ಭಗಳಲ್ಲಿ ವಿವಿಧ ಬ್ಯಾಕ್ಟೀರಿಯಾಗಳು. ಈ ಕಾಯಿಲೆಯ ಪ್ರಾಮುಖ್ಯತೆ ಎಂದರೆ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಕಾಯಿಲೆ ಎಂದರೆ ಸೋಂಕು ರೋಗ. ಅದ್ದರಿಂದ ರೋಗಿಯ ಬಟ್ಟೆಗಳು ಮತ್ತು ಇತರ ಸಾಮಾನ್ಯ ವಸ್ತುಗಳನ್ನು ಇತರರು ಉಪಯೋಗಿಸಬಾರದು. ಕೆಂಗಣ್ಣು ಎಷ್ಟೋ ಸಂದರ್ಭಗಳಲ್ಲಿ ರೋಗಿಯ ಮನೆಯವರಿಂದ ಅಥವಾ ಅಕ್ಕಪಕ್ಕದವರಿಂದ ಯಾವ ಯಾವುದೋ ಔಷಧಗಳಿಂದ ಎಂದರೆ, ಬೇರೆ ಯಾರಿಗೋ ಬೇರೆ ಯಾವುದೋ ಕಾಯಿಲೆಗೆ ಕೊಟ್ಟ ಔಷಧಗಳನ್ನು ಉಪಯೋಗಿಸುವುದರಿಂದ ಬರುತ್ತದೆ. ಇದು ಭಾರೀ ತಪ್ಪು, ಕಣ್ಣು ಕೆಂಪದಾಗ ರೋಗಿ ಖಂಡಿತ ನೇತ್ರ ವೈದ್ಯರಲ್ಲಿ ಪರೀಕ್ಷಸಲ್ಪಡಬೇಕು. ಏಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಇಂತಹ ರೀತಿಯಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಾದ ಕಿರಿದಾದ ಕೋನದ ಗ್ಲೊಕೊಮಾ, ತಾರಕೆ ಸುತ್ತಿನುರಿತ (ಐರಿಡೋ ಸೈಕ್ಲೈಟಿಸ್) ಮುಂತಾದ ಹಾನಿಕಾರಕ ಕಾಯಿಲೆಗಳು ಪ್ರಥಾಮಿಕ ಹಂತದಲ್ಲಿಯೇ ಗುರುತಿಸಲ್ಪಟ್ಟರೆ ಕಣ್ಣಿಗೆ ಉಂಟಾಗಬಹುದಾದ ತೀವ್ರತರ ನಷ್ಟವನ್ನು ಕಡಿಮೆ ಮಾಡಬಹುದು. ಎ' ಅನ್ನಾಂಗದ ಕೊರತೆ : ಅಹಾರದಲ್ಲಿ 'ಎ' ಅನ್ನಾಂತವು ಕಡಿಮೆಯಾದರೆ ರಾತ್ರಿ ಕಣ್ಣು ಕಾಣುವುದಿಲ್ಲ. ಕತ್ತಲಿನಲ್ಲಿ ದೃಷ್ಟಿ ಕಡಿಮೆ ಎಂದು ಶುರುವಾಗುವ ಈ ಕಾಯಿಲೆ 'ರಾತ್ರಿ ದೃಷ್ಟಿ ಮಾಂದ್ಯದ ಗುಂಪಿಗೆ ಸೇರಲ್ಪಡುತ್ತದೆ. ಅಲ್ಲದೆ ಈ ಕಾಯಿಲೆಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ತೊಂದರೆ ಎಂದರೆ ರೋಗಿಯ ಕಣ್ಣೀರಿನ ತೊಂದರೆ ಪ್ರಥಮಿಕ ಹಂತದಲ್ಲಿಯೇ ಗುರುತಿಸಲ್ಪಟ್ಟಿರೆ, ಸೂಕ್ತ ಔಷಧಗಳಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ಮಾಡಬಹುದಾದ ಈ ಕಾಯಿಲೆ ನಿವಾರಿಸಬಹುದಾದ ಅಂಧತ್ವ ಗುಂಪಿಗೆ ಸೇರುತ್ತದೆ. ಭಾರತ ಸರ್ಕಾರವು ಈ ಕಾಯಿಲೆಯ ನಿವಾರಣೆಗಾಗಿ ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದೆ. ಪ್ರಾಥಮಿಕ ಅರೋಗ್ಯ ಘಟಕ ಅಥವಾ ಕೇಂದ್ರಗಳ ಮೂಲಕ ಅರೋಗ್ಯ ಕಾರ್ಯಕರ್ತಕ ಮುಖಾಂತರ 'ಎ' ಅನ್ನಾಂಗದ ಗುಳಿಗೆಗಳು ಕೊಡಲ್ಪಟ್ಟು-ಈ ಕಾಯಿಲೆಯ ನಿವಾರಣೆಯ ಕಾರ್ಯ ಭರದಿಂದ ಸಾಗುತ್ತದೆ. ಕಣ್ಣಿನ ಕ್ಯಾನ್ಸರ್ (ರೆಟಿನೋಬ್ಲಾಸ್ಟೋಮಾ) : ಸಾಮಾನ್ಯವಾಗಿ 5 ವರ್ಷಗಳ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆಯು ಮಗುವಿನ ದೃಷ್ಟಿಗೆ ತೊಂದರೆ ಉಂಟುಮಾಡುವುದಲ್ಲದೆ ಜೀವಕ್ಕೆ ಮಾರಕವಾಗಲುಬಹುದು. ಮತ್ತೊಂದು ಮುಖ್ಯವಾದ ಅಂಶವೆಂದರೆ-ಎರಡೂ ಕಣ್ಣಿಗೂ ಒಟ್ಟಿಗೆ ಅಥವಾ ಒಂದು ಕಣ್ಣಿಗೆ ಮೊದಲು ಮತ್ತು ಇನ್ನೊಂದು ಕಣ್ಣಿಗೆ ನಂತರ ಎಂದು ಕಾಣಿಸಿಕೊಳ್ಳಬಲ್ಲದು. ಕಣ್ಣಿನಲ್ಲಿ ಬಿಳಿಯ ಅಥವಾ ಹಳದಿಯ ವಸ್ತುವಿನಂತೆ ಏನೋ ಕಾಣುತ್ತದೆ. ಅಥವಾ ಬೆಕ್ಕಿನ ಕಣ್ಣಿನ ರೀತಿಯಲ್ಲಿ ಕಾಣುತ್ತದೆ (ಮಗುವಿನ ಕಣ್ಣು) ಎಂಬ ತೊಂದರೆಯಿಂದ ಪಾಲಕರು ನೇತ್ರ ವೈದ್ಯರಲ್ಲಿ ತೋರಿಸುತ್ತಾರೆ. ಪ್ರಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಲ್ಪಟ್ಟಿರೆ-ಕ್ಯಾನ್ಸರ್‍ಗೆ ಒಳಗದ ಕಣ್ಣನ್ನು ಸಂಪೂರ್ಣದಲ್ಲಿಯೇ ಪತ್ತೆ ಹಚ್ಚಲ್ಪಟ್ಟರೆ-ಕ್ಯಾನ್ಸರ್‍ಗೆ ಒಳಗಾದ ಕಣ್ಣನ್ನು ಸಂಪೂರ್ಣ ತೆಗೆದುಹಾಕಿ ಇನ್ನೊಂದು ಕಣ್ಣನ್ನು ಉಳಿಸಲು ಪ್ರಯತ್ನ ಮಾಡಬಹುದು. ಅದರೆ ಎಷ್ಟೋ ಸಂದರ್ಭಗಳಲ್ಲಿ ರೋಗ ಮುಂದುವರಿಯಲ್ಪಟ್ಟಾಗ ಪಾಲಕರು ನೇತ್ರ ವೈದ್ಯರಲ್ಲಿ ಬರುವುದರಿಂದ ಚಿಕಿತ್ಸೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೋಗವು ಇನ್ನೂ ಮುಂದುವರಿದು ಮದುಳಿಗೆ ರೋಗ ದುರದೃಷ್ಟಕರವಾದ ಕೊನೆ ಒದಗುತ್ತದೆ. ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಬರದ ಪರಿಸ್ಥಿತಿಯಲ್ಲಿ ಕ್ಷ-ಕಿರಣದ ಚಿಕಿತ್ಸೆಯ ಮೂಲಕ ಅಥವಾ ವಿವಿಧ ಔಷಧಗಳನ್ನು ಚುಚ್ಚು ಮದ್ದಿನ ರೂಪದಲ್ಲಿ ದೇಹಕ್ಕೆ ಕೂಡುವುದರ ಮೂಲಕ ಚಿಕಿತ್ಸೆ ಮಾಡಬೇಕಾದ ಅನಿವಾರ್ಯ ಪರಿಸಿತಿ ಬರುತ್ತದೆ. ಅಲ್ಲದೆ ಈ ರೋಗ ರೋಗಿಯ ಮುಂದಿನ ಪೀಳಿಗೆಗೂ ಹಟ್ಟುವ ಸಾಧ್ಯತೆ ಪ್ರಬಲವಾಗಿದೆ. ತಾರಕೆಯ ಸೋಂಕು ಅಥವಾ ತಾರಕಸುತ್ತಿನುರಿತ (ಐರಿಡೋಸೈಕ್ಲೈಟಿಸ್) : ತಾರಕೆಯ ಅಥವಾ ತಾರಕೆಸುತ್ತಿನುರಿತ 'ಕಣ್ಣಿನ ಒಂದು ಗಂಭಿರ ಕಾಯಿಲೆ. ಏಕಂದರೆ ಇದು ಕಣ್ಣಿನ ಇತರ ಕಾಯಿಲೆಗಳಾದ ಕಂಜಂಕ್ಷಿಮೈಟಿಸ್ ಮತ್ತು ಗ್ಲೊಕೊಮಾ ಕಾಯಿಲೆಗಳ ರೀತಿಯಲ್ಲಿ ಕಾಣಿಸಿಕೊಂಡು ರೋಗಿ ನೇತ್ರ ಮೈದ್ಯನಲ್ಲಿ ಬಂದು ಕಾಯಿಲೆ ಪತ್ತೆ ಅಗುವ ಹೊತ್ತಿಗೆ ಬಹಳಷ್ಟು ಹಾನಿ ಉಂಟು ಮಾಡಿರುತ್ತದೆ. ಎಷ್ಟೋ ವೇಳೆ ಕಾಯಿಲೆ ತೀರ ಮುಂದುವರಿದ ಹಂತದಲ್ಲಿದ್ದಾಗ ರೋಗಿ ನೇತ್ರ ವೈದ್ಯರಲ್ಲಿ ಬಂದರೆ ಕಾಯಿಲೆಯನ್ನು ಸೂಕ್ತ ರೀತಿಯಲ್ಲಿ ಪತ್ತೆ ಹಚ್ಚಿದರೂ ಮತ್ತು ಸರಿಯಾದ ಚಿಕಿತ್ಸೆ ಕೊಟ್ಟರೂ, ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಒಬ್ಬ ವ್ಯಕ್ತಿಯ ಕಣ್ಣು ಕಪ್ಪು, ಮೊತ್ತೊಬ್ಬರ ಕಣ್ಣು ಕೆಂಪು, ಇನ್ನೊಬ್ಬನದು ಬಿಳಿ ಎಂದು ಜನರ ಕಣ್ಣಿನ ಬಣ್ಣವನ್ನು ಅ ವ್ಯಕ್ತಿ ಹೊಂದಿದ ತಾರಕೆ ಆಥವಾ ಕರಿಯಾಲಿಯ ಬಣ್ಣದ ಮೇಲೆ ವರ್ಣಿಸುತ್ತಾರೆ. ತಾರಕ ಅಥವಾ ಕರಿಯಾಲಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾದ ಹಿಂಭಾಗದಲ್ಲಿ ಒಂದು ರೀತಿಯ ಪರದೆಯ ರೀತಿಯಲ್ಲಿರುತ್ತದೆ. ಇದರ ಮಧ್ಯ ಭಾಗದಲ್ಲಿ ದುಂಡಗಿನ ಸಣ್ಣ ರಂಧ್ರವಿರುತ್ತದೆ. ಹೊರಗಿನಿಂದ ಒಳಗೆ ಬೆಳಕು ಸಾಗಿಸುವ ಈ ರಂಧ್ರವನ್ನೇ ನಾವು ಕಣ್ಣಿನ ಪಾಪೆ (ಪ್ಯೂಪಿಲ್) ಎನ್ನುತ್ತೇವೆ: ಅರೋಗ್ಯವಂತ ವ್ಯಕ್ತಿಯಲ್ಲಿ ಈ ಪಾಪೆ ಬೆಳಕಿನ ವಿವಿಧ ತೀಕ್ಷ್ಣತೆಗಳನ್ನನುಸರಿಸಿ ಬೇಕಾದಷ್ಟು ಬೆಳಕನ್ನು ಮಾತ್ರ ಒಳಗೆ ಸಾಗಿಸಲು ಅನುಕೂಲವಾಗುವಂತೆ ಹಿಗ್ಗುವ ಮತ್ತು ಕುಗ್ಗುವ ಗುಣ ಹೊಂದಿರುತ್ತದೆ. ಈ ಹಿಗ್ಗುವ ಮತ್ತು ಕುಗ್ಗುವ ಕೆಲಸ ಮಾಡುವ ಅಂಗಾಂಶವೇ ತಾರಕೆ ಅಥವಾ ಕರಿಯಾಲಿ. ತಾರಕೆಯ ಮುಂಭಾಗದ ಕಾಯಿಲೆಗಳಲ್ಲಿ ವಿವಿಧ ರೀತಿಯಲ್ಲಿ ತಾರಕೆ ಸೋಂಕಿಗೆ ಒಳಗಾಗಿ ಈ ರೀತಿಯ ಹಿಗ್ಗುವ ಅಥವಾ ಕುಗ್ಗುವ ತನ್ನ ಗುಣವನ್ನು ಕಳೆದುಕೊಂಡು ವಿವಿಧ ಪ್ರಮಾಣದ ಅಂಧತ್ವಕ್ಕೆ ಕಾರಣವಾಗುತ್ತದೆ. ಕಾಯಿಲೆಯ ತೀವ್ರತತೆ ಹೆಚ್ಚಾದಾಗ ತಾರಕೆ ಸಂಪೂರ್ಣವಾಗಿ ಕುಗ್ಗಿ. ಕಣ್ಣಿನ ಪಾಪೆ ಕಾಣಿಸದಂತೆ ಅದರಲ್ಲಿ ಕಾಯಿಲೆಯಿಂದ ಉಂಟಾದ ವಿವಿಧ ರೀತಿಯ ಬಸರುಗಳು ತುಂಬಿಕೊಳ್ಳುತ್ತವೆ. ಅರಂಭಿಕ ಹಂತದಲ್ಲಿ ತೀಕ್ಷ್ಣ ಬೆಳಕು ಅಥವಾ ಬಿಸಿಲನ್ನು ನೋಡಲು ತೊಂದರೆ ಎಂದು ಅರಂಭವಾಗುತ್ತದೆ. ನಂತರ ಕೆಲವೊಮ್ಮೆ ಕಣ್ಣು ಕೆಂಪಾಗುತ್ತದೆ. ಕಣ್ಣಿನಲ್ಲಿ ನೀರು ಬರುತ್ತದೆ. ಕಣ್ಣು ನಿಧಾನವಾಗಿ ಮಂಜಾಗಲು ತೊಡುಗುತ್ತದೆ. ಅರಂಭದಲ್ಲಿ ಕೇವಲ ಒಂದು ಕಣ್ಣಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಲಕ್ಷಣಗಳು ನಿಧಾನವಾಗಿ ಕೆಲವು ದಿನಗಳ ನಂತರ ಮತ್ತೊಂದು ಈ ಲಕ್ಷಣಗಳು ನಿಧಾನವಾಗಿ ಕೆಲವು ದಿನಗಳ ನಂತರ ಮತ್ತೊಂದು ಕಣ್ಣಿನಲ್ಲಿಯೂ ಕಾಣಿಸಿಕೊಳ್ಳುಬಹುದು. ಈ ಹಂತದಲ್ಲಿ ಸೂಕ್ಷ್ಮದರ್ಶಕದಿಂದ (ಸ್ಲಿಟ್-ಲ್ಯಾಂಪ್ ಬಯೋವೈಕ್ರೋಸ್ಕೊಪ್) ಪರೀಕ್ಷಿಸಿದಾಗ ಕಣ್ಣಿನ ಪಾರದರ್ಶಕ ಪಟಲದ ಹಿಂಭಾಗದಲ್ಲಿ ಸಣ್ಣ ಸಣ್ಣ ತುಣುಕುಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನ ಪಾಪೆಯ ಭಾಗದಲ್ಲಿ ಒಸರುಗಳು ಸೇರಿಕೊಂಡು ತಾರಕೆಯ ಬೆಳಕಿಗೆ ಸ್ಪಂದಿಸುವ ಗುಣ ನಷ್ಟವಾಗಿ ತಾರಕೆ ರೋಗಕ್ಕೆ ತುತ್ತಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೆಲವೊಮ್ಮೆ ಪಾರದರ್ಶಕ ಪಟಲದ ಹಿಂಭಾಗದಲ್ಲಿ 'ಬಿಳಿಯ ಕೀವು (ಹೈಪೋಪಯನ್) ಕಟ್ಟಿಕೊಂಡು ಕೆಳಭಾಗದಲ್ಲಿ ಶೇಖರ ಗೊಂಡಿರುತ್ತದೆ. ಈ ಹಂತದಲ್ಲಿ ಅ ಕಣ್ಣಿನ ದೃಷ್ಟಿ ಗಮನಾರ್ಹವಾಗಿ ಕಡಿಮೆಯಾಗಿರುತ್ತದೆ. ಕೆಲವೊಮ್ಮೆ ಕಣ್ಣಿನ ಅಕ್ಷಿಪಟಲದ ಮಧ್ಯಭಾಗದಲ್ಲಿ ಮಚ್ಚೆ (ಮ್ಯಾಕ್ಯುಲ)ಯಲ್ಲಿ ಅಗುವ ತೊಂದರೆಯಿಂದ ದೃಷ್ಟಿಪತನ ಗಮನಾರ್ಹವಾಗಿರುತ್ತದೆ. ಮೇಲಿನ ಲಕ್ಷಣಗಳು ಮುಂಭಾಗದ ತಾರಕೆ ಸುತ್ತಿನುರಿತದಲ್ಲಿದ್ದರೆ ಹಿಂಭಾಗದ ತಾರಕೆ ಸುತ್ತಿನುರಿತದಲ್ಲಿ ರೋಗ ಲಕ್ಷಣಗಳು ಬಹಳ ಕಡಿಮೆ ಇರುತ್ತದೆ. ಮುಖ್ಯವಾಗಿ ಯಾವುದೋ ಒಂದು ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾಗುತ್ತ ಬರುತ್ತದೆ. ಕೆಲವರಲ್ಲಿ ಕಣ್ಣನ್ನು ಬದಿಗೆ ಹೊರಳಿಸಿದಾಗ ದೃಷ್ಟಿಯ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಗಳು ಓಡಾಡುತ್ತಿರುವಂತೆ ಕಾಣುತ್ತದೆ. ಕೆಲವರು ಕಣ್ಣಿನ ಎದುರಿಗೆ ಪರದೆ ಕಟ್ಟಿದ ಹಾಗಿದೆ ಎನ್ನುತ್ತಾರೆ. ಈ ಎರಡರಲ್ಲಿ ಯಾವ ರೀತಿಯ ಲಕ್ಷಣ ಕಾಣಿಸಿಕೊಂಡರೂ, ನೇತ್ರ ವೈದ್ಯ ಕಾಯಿಲೆಯ ಮೂಲಕಾರಣ ಹುಡುಕಬೇಕಾಗುತ್ತದೆ. ವಿವಿಧ ರಕ್ತ ಪರೀಕ್ಷೆ. ಮೂತ್ರ ಪರೀಕ್ಷೆ, ಕಪ ಬರುತ್ತದ್ದರೆ ಅದರ ಪರೀಕ್ಷೆ ಹೀಗೆ ಹಲವು ಪರೀಕ್ಷೆಗಳನ್ನು ಕೈಗೊಂಡರೂ ರೋಗದ ಸರಿಯಾದ ಕಾರಣ ಹುಡುಕುವಲ್ಲಿ ವೈದ್ಯ ವಿಫಲನಾಗುವ ಸಂದರ್ಭಗಳೇ ಜಾಸ್ತಿ. ಕೆಲವೊಮ್ಮೆ ದೈಹಿಕ ಕಾಯಿಲೆಗಳಾದ ಸಿಫಿಲಿಸ, ಗೊನೋರಿಯಾ, ಕ್ಷಯ, ಕುಷ್ಟ ರೋಗಗಳು ತಾರಕೆಸುತ್ತಿನುರಿತ ಕಾಯಿಲೆಗೆ ಕಾರಣವಾಗುವ ಸಂದರ್ಭಗಳಿವೆ. ಅಂತಹ ಸಂದರ್ಭಗಳಲ್ಲಿ ಕಾಯಿಲೆಗಳಾವುವೂ ರೋಗಿಯ ತಾರಕೆಸುತ್ತಿನುರಿತಕ್ಕೆ ಕಾರಣವಾಗಿಲ್ಲದೆ ಇದ್ದಾಗ ಚಿಕಿತ್ಸೆ ಕಷ್ಟ. ಅಗ ವೈದ್ಯ ರೋಗಿಯ ದೇಹದಲ್ಲಿ ಎಲ್ಲೋ ಸೋಂಕಿನ ಅಂಶವಿದ್ದು ಅದು ಈ ಲಕ್ಷಣಗಳಿಗೆ ಕಾರಣವೆಂದು ಗಣಿಸಿ. ದೈಹಿಕ ಸೋಂಕಿಗೆ ಚಿಕಿತ್ಸೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ದೈಹಿಕವಾಗಿ ಯಾವ ರೀತಿಯ ಸೋಂಕು ಇಲ್ಲದಿದ್ದರೂ ಹಿಂದೆ ಅದ ಯಾವುದೋ ಸೋಂಕಿಗೆ ಅಲರ್ಜಿ ಈ ಕಾಯಿಲೆಗೆ ಕಾರಣವಾಗಿರುವ ಸಂಭವ ಜಾಸ್ತಿ. ಅಗ ಸಹಿತ ಚಿಕಿತ್ಸೆಯನ್ನು ದೈಹಿಕ ಸೋಂಕಿನ ರೀತಿಯಲ್ಲಿಯೇ ಮಾಡಬೇಕಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸಗೆ ತೊಡಗಿದರೆ ಫಲಿತಾಂಶ ಉತ್ತಮ ಕಣ್ಣಿಗೆ ಸ್ಟೀರಾಯ್ಡ ಔಷಧ ಮತ್ತು ಕೆಲವೊಮ್ಮೆ ಅಂಟಿಬಯೋಟಿಕ್ ಔಷಧಗಳನ್ನು ಹೆಚ್ಚಿದ ಅವಧಿಯವರೆಗೆ ಕೊಡಬೇಕಾಗುತ್ತದೆ. ಈ ಕಾಯಿಲೆಯ ಚಿಕಿತ್ಸೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಚಿಕಿತ್ಸೆಯ ಫಲಿತಾಂಶ ಬಹಳ ನಿಧಾನ. ಇದನ್ನು ಎಷ್ಟೋ ವೇಳೆ ನೇತ್ರ ವೈದ್ಯ ರೋಗಿಗೆ ಮನದಟ್ಟು ಮಾಡಿದರೂ ಹಲವೊಮ್ಮೆ ರೋಗಿ ಕಾಯಿಲೆಯ ನಿಧಾನಗತಿಯ ಬಗ್ಗೆ ಸಂಶಯ ಹೊಂದಿ ವೈದ್ಯರನ್ನು ಬದಲಾಯಿಸಿ ಬೇರೆ ವೈದ್ಯರಲ್ಲಿ ತೋರಿಸಿಕೊಳ್ಳುತ್ತಾರೆ. ಎನಿದ್ದರೂ ಫಲಿತಾಂಶ ಒಂದೇ ಮತ್ತೊಂದು ಅಂಶವೆಂದರೆ ರೋಗ ಒಂದು ಹಂತಕ್ಕೆ ಬಂದಾಗ ಕಾಯಿಲೆ ಗುಣವಾಯಿತು ಎಂದು ರೋಗಿ ಔಷಧವನ್ನು ನಿಲಿಸುವ ಸಾಧ್ಯತೆಯಿದೆ. ಅಗ ಕಾಯಿಲೆ ಪುನಃ ವಿಲ್ಬಣಗೊಂಡು ರೋಗಿ ವೈದ್ಯನಲ್ಲಿ ಬಂದಾಗ ಮತ್ತೊಮ್ಮೆ ಹೆಚ್ಚಿನ ಪ್ರಮಾಣದ ಸ್ವೀರಾಯ್ಡ್ ಔಷಧಿಯನ್ನು ದೈಹಿಕವಾಗಿ ಕೊಡುವುದಲ್ಲಿದೆ. ಕೆಲವೊಮ್ಮೆ ಕಣ್ಣಿಗೆ ಇಂಜೆಕ್ಷನ್ ರೂಪದಲ್ಲಿ ಔಷಧಿಯನ್ನು ಕೊಡಬೇಕಾದ ಅನಿವಾರ್ಯತೆ ಬರುತ್ತದೆ. ಈ ಕಾಯಿಲೆಯಲ್ಲಿ ಚಿಕಿತ್ಸೆ ಸರಿಯಾಗಿ ಅಗದಿದ್ದಾಗ ಅಥವಾ ಕೆಲವೊಮ್ಮೆ ಚಿಕಿತ್ಸೆ ಸರಿ ಇದ್ದರೂ ಕಾಯಿಲೆ ತೀವ್ರ ಪ್ರಮಾಣದಲ್ಲಿದ್ದಾಗ ಇದರ ಮುಂದಿನ ಪರಿಣಾಮಗಳು ತೀರ ಗಂಭೀರ, ತಾರಕೆಯು ವಿವಿಧ ರೀತಿಯಲ್ಲಿ ಕುಗ್ಗಿ ಪಾರದರ್ಶಕ ಮಸೂರಕ್ಕೂ ಕಾಯಿಲೆ ಅವರಿಸಿ ಮಸೂರವನ್ನು ಅಪಾರದರ್ಶಕ ಮಾಡಿ ತಾಕರೆಸುತ್ತಿನುರಿತದಿಂದ ಕಣ್ಣಿನ ಪೊರೆ (ಕಾಂಪ್ಲಿಕೇಟಡ್ ಕೆಟರಾಕ್ಟ್) ಬರುವಂತೆ ಮಾಡುವುದಲ್ಲದೆ. ಕಾಯಿಲೆ ಇನ್ನೂ ಮುಂದುವರೆದರೆ ಕಣ್ಣಿನ ಒಳಗಿನ ಅಂಗಾಂಶಗಳನ್ನೆಲ್ಲಾ ನಿಷ್ಕ್ರಿಯಗೊಳಿಸಿ ಇಡೀ ಕಣ್ಣನ್ನು ಅಂಧತ್ವಕ್ಕೆ ತಳ್ಳಿ ಕಣ್ಣು ಸಣ್ಣದಾಗುತ್ತಾ ಹೋಗುತ್ತದೆ (ಥೈಸಿಸ್ ಬಲ್‍ಬೈ) ಇಂತಹ ಮುಂದುವರಿದ ಯಾವುದೇ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಹಾಗಾಗಿ ಈ ಕಾಯಿಲೆಯ ಪತ್ತೆ ಎಷ್ಟು ಬೇಗ ಅಗುತ್ತದೆ ಮತ್ತು ಚಿಕಿತ್ಸೆ ಎಷ್ಟು ತೀವ್ರವಾಗಿರುತ್ತದೆ ಎಂಬುದು ಭವಿಷ್ಯದ ಫಲಿತಾಂಶದ ದೃಷ್ಟಿಯಿಂದ ತೀರಾ ಮುಖ್ಯ. ಮೆಳ್ಳಗಣ್ಣು ಮೆಳ್ಳಗಣ್ಣು ಅಥವಾ ಕೋಸುಗಣ್ಣು ಎಂದರೆ- ವ್ಯಕ್ತಿಯ ಎರಡೂ ಕಣ್ಣುಗಳು ಒಂದೇ ಅಕ್ಷದಲ್ಲಿ ಇಲ್ಲದೇ ಇರುವುದು. ಇನ್ನೂ ಸುಲಭವಾಗಿ ಹೇಳುವುದಾದರೆ ಸಾಮಾನ್ಯವಾಗಿ ನೇರವಾಗಿರಬೇಕಾದ ಎರಡೂ ಕಣ್ಣುಗಳು ವಿವಿಧ ಕಾರಣಗಳಿಂದ ನೇರವಾಗಿಲ್ಲದೆ ಇರುವುದು. ಅಥವಾ ಒಂದು ಕಣ್ಣು ಓರೆಯಾಗಿರುವುದು. ಹೀಗೆ ಓರೆಯಾಗಿರುವ ಕಣ್ಣಿನ ಪ್ರಮಾಣ ಬಹಳವಿದ್ದಾಗ ಸುಲಭವಾಗಿ ಕೋಸುಗಣ್ಣು ಎಂದು ಗೊತ್ತಾಗುತ್ತದೆ. ಈ ಪ್ರಮಾಣ ಗಮನಾರ್ಹವಾಗಿ ಇಲ್ಲದಿದ್ದಾಗ ವಿವಿಧ ಪರೀಕ್ಷೆಗಳಿಂದ ಮಾತ್ರ ಮೊಳ್ಳೆಗಣ್ಣನ್ನು ಪತ್ತೆ ಹಚ್ಚಬಹುದು. ಮುಖ್ಯವಾಗಿ ನಾವು ಮೆಳ್ಳಗಣ್ಣನ್ನು-ಕಣ್ಣಿನ ಮಾಂಸಗಳಿಗೆ ಸಂಬಂಧಪಟ್ಟು ನರದ ಕ್ಷೀಣತೆಯಿಂದ ಉಂಟಾಗುವ ಮೆಳ್ಳೆಗಣ್ಣು ಮತ್ತು 'ಸಹಾಗಾಮಿ ಮೆಳ್ಳೆಗಣ್ಣು ಎಂದು ಎರಡು ವಿಧಗಳಾಗಿ ವಿಂಗಡಿಸುತ್ತೇವೆ. ಕಣ್ಣು ವಿವಿಧ ದಿಕ್ಕಿನಲ್ಲಿ ಚಲಿಸಲು ಅನುಕೂಲವಾಗದಂತೆ ಅದರ ಸುತ್ತ ಏಳು ಮಾಂಸ (ಸ್ನಾಯು)ಗಳಿವೆ. ಈ ಮಾಂಸಗಳು- ಮೆದುಳಿನ ಮೂಲದಿಂದ ಬರುವ 3, 4 ಮತ್ತು ಆರನೇ ಕಪಾಲದ ನರಗಳಿಂದ ತಮ್ಮ ಚಲನೆಯ ಶಕ್ತಿಯನ್ನು ಪಡೆಯುತ್ತವೆ. ಯಾವುದೇ ಕಾರಣಗಳಿಂದ ಈ ಕಪಾಲದ ನರಗಳು ಶಕ್ತಿಗುಂದಿದರೆ ಅಥವಾ ನಿಶ್ಯಕ್ತಿ ಹೊಂದಿದರೆ ಅದಕ್ಕೆ ಸಂಬಂಧಪಟ್ಟ ಕಣ್ಣಿನ ಮಾಂಸಗಳು ತಾನಾಗಿಯೇ ತಮ್ಮ ಚಲನಾ ಶಕ್ತಿಯನ್ನು ಕಳೆದುಕೊಂಡು ನಿಶ್ಚಲವಾಗುತ್ತದೆ. ಆಗ ಸಂಬಂಧಪಟ್ಟ ಕಣ್ಣಿನ ಚಲನೆ ಆ ದಿಕ್ಕಿನಲ್ಲಿ ಕುಂಠಿತವಾಗುತ್ತದೆ. ಹಾಗಿದ್ದಾಗ ಸರಿ ಇರುವ ಇನ್ನೊಂದು ಕಣ್ಣು ಅದೇ ದಿಕ್ಕಿಗೆ ಚಲಿಸಿದಾಗ ಮೆಳ್ಳೆಗಣ್ಣಾಗಿ ಕಾಣಿಸುತ್ತದೆ. ಸಹಗಾಮಿ ಮೆಳ್ಳೆಗಣ್ಣು : ಅತಿ ಹೆಚ್ಚು ಕಾಣಿಸಿಕೊಳ್ಳುವ ಈ ರೀತಿಯ ಮೆಳ್ಳೆಗಣ್ಣಿನಲ್ಲಿ ಎರಡೂ ಕಣ್ಣುಗಳೂ ಎಲ್ಲಾ ದಿಕ್ಕಿನಲ್ಲಿ ಚಲಿಸಿದಾಗಲೂ ಒಂದೇ ಪ್ರಮಾಣದಲ್ಲಿ ಚಲಿಸುತ್ತವೆ. ಮೆಳ್ಳಗಣ್ಣಿಗೆ ಹಲವಾರು ಅಂಶಗಳು ಕಾರಣವಾಗಿರಬಹುದು. ಕೆಲವೊಮ್ಮೆ ಯಾವುದೋ ಒಂದು ಕಾರಣದಿಂದ ಮೆಳ್ಳೆಗಣ್ಣು ಆಗಿದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಕೂಲಂಕಷ ಪರೀಕ್ಷೆ ಮಾಡಿದಾಗ ಹಲವು ಕಾರಣಗಳು ಗೋಚರಿಸುತ್ತವೆ. ಎರಡು ಕಣ್ಣುಗಳ ಅವಶ್ಯಕತೆ ಇದೆಯೇ? ನಿಜವಾದ ಕಾರಣಗಳನ್ನು ತಿಳಿಯುವ ಮೊದಲು ಕಣ್ಣುಗಳೆರಡು ಇದ್ದರೂ ನಮಗೆ ಕಾಣುವ ವಸ್ತು ಒಂದೇ. ಹಾಗಿದ್ದಾಗ ಎರಡು ಕಣ್ಣುಗಳ ಅವಶ್ಯಕತೆ ಏನು? ಒಂದು ಕಣ್ಣೇ ಸಾಲದೇ? ಇರುವ ಎರಡು ಕಣ್ಣುಗಳಲ್ಲಿ ಒಂದು ಅಂಧವಾಗಿ ಉಪಯೋಗರಹಿತವಾದರೂ-ಇನ್ನೊಂದು ಕಣ್ಣು ಇದೆಯಲ್ಲಿ-ನೋಡಲಿಕ್ಕೆ ತೊಂದರೆಯಿಲ್ಲ ಎಂಬ ಸಮಾಧಾನದಲ್ಲಿರಬಹುದಲ್ಲ. ಈ ಎಲ್ಲ ಸಂಶಯಗಳು, ಸಂದೇಹಗಳು ಏಳುವುದು ಸಹಜ ಹಾಗೂ ಸ್ವಾಭಾವಿಕ. ಸುಲಭದಲ್ಲಿ ಹೇಳುವುದಾದರೆ ಒಂದು ಕಣ್ಣು ಮತ್ತೊಂದು ಕಣ್ಣಿಗೆ ಪೂರಕ. ಅಲ್ಲದೆ ಎರಡೂ ಕಣ್ಣಿನಿಂದ ಒಟ್ಟಿಗೆ ನೋಡುವಾಗ ಕಾಣುವಷ್ಟು ದೃಷ್ಟಿಯ ಕ್ಷೇತ್ರದ ವಿಸ್ತಾರ ಒಂದೇ ಕಣ್ಣಿನಿಂದ ಕಾಣುವುದಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಎರಡು ಕಣ್ಣುಗಳು "ಎರಡೂ ಕಣ್ಣೂಗಳಿಂದ ಉಂಟಾಗುವ ಏಕದೃಷ್ಟಿ"ಗಾಗಿ ಬೇಕು. ಇದರಲ್ಲಿ ಪ್ರಮುಖವಾದ 3 ಹಂತಗಳಿವೆ. 1. ಏಕಕಾಲದಲ್ಲಿ ಗ್ರಹಿಸುವ ದೃಷ್ಟಿ ಗ್ರಹಣ. 2. ಒಂದುಗೂಡುವಿಕೆ. 3. ಆಳದ ಕಲ್ಪನೆ ಕೊಡುವ ಸ್ವೀರಿಯೋಪ್ಸಿಸ್. ಎರಡೂ ಕಣ್ಣುಗಳಿಂದ ಉಂಟಾಗುವ ಏಕದೃಷ್ಟಿಗೆ ಸಂಬಂಧ ಪಟ್ಟಂತೆ ಮತ್ತು ಕಣ್ಣಿನ ಚಲನೆಗೆ ಸಂಬಂಧಪಟ್ಟಂತೆ ಮಾಂಸಗಳ ಸರಿಯೋಜನೆ-ಇವುಗಳ ಬೆಳವಣಿಗೆ ಮಗುವಿಗೆ 5 ವರ್ಷ ಆಗುವರೆಗೆ ಪೂರ್ಣವಾಗುವುದಿಲ್ಲ. ಮತ್ತು 8 ವರ್ಷ ಆಗುವರೆಗೆ ಪ್ರತಿಷ್ಠಾಪನೆಗೊಳ್ಳುವುದಿಲ್ಲ. ಆದ್ದರಿಂದ ಬೆಳವಣಿಗೆಯ ಈ ಹಂತದಲ್ಲಿ ಅಂದರೆ 5 ವರ್ಷದ ಒಳಗೆ ಎರಡೂ ಕಣ್ಣೊಳಗೆ ಇರುವ ಪರಸ್ಪರ ಸಂಯೋಜನೆಯನ್ನು ದೂರಮಾಡುವ ಯಾವುದೇ ಅಂಶವೂ ಮೆಳ್ಳಗಣ್ಣಿಗೆ ಕಾರಣವಾಗಬಹುದು. ಕಾರಣಗಳು :- 1. ಹೊಂದಾಣಿಕೆ ಮತ್ತು ಒಗ್ಗೂಡುವಿಕೆಯಲ್ಲಿ ಆಗುವ ವ್ಯತ್ಯಾಸಗಳು. 2. ಕಣ್ಣಿನ ದೃಷ್ಟಿದೋಷೆಗಳು. 3. ಯಾವುದೇ ಕಣ್ಣಿನ ಮಾಂಸಕ್ಕೆ ಸಂಬಂಧಪಟ್ಟ ನರದ ನಿಷ್ಕ್ರಿಯತೆ. 4. ವಿವಿಧ ಕಾರಣಗಳಿಂದ ಎರಡೂ ಕಣ್ಣುಗಳಲ್ಲಿರುವ ದೃಷ್ಟಿಯ ಪ್ರಮಾಣ ಬೇರೆ ಬೇರೆಯಾಗಿರುವುದು. 5. ಯಾವುದೇ ಕಾರಣಕ್ಕಾಗಿ ಕಣ್ಣನ್ನು ಬಹಳ ಕಾಲ ಮುಚ್ಚಿರುವುದು. 6. ಅಕ್ಷಪಟಲ-ಮೆದುಳಿನ ಮಧ್ಯದ ನರಗಳ ಬೆಳವಣಿಗೆಯಲ್ಲಿನ ವ್ಯತ್ಯಾಸಗಳು. 7 ತಳಿ ಸಂಬಂಧ, ಕುಟುಂಬ ಸಂಬಂಧ, ಹಾಗೂ ಮಾನಸಿಕ ಕಾರಣಗಳು. ದೈನಂದಿನ ಜೀವನದಲ್ಲಿ ಕಾಣುವ ಮೆಳ್ಳಗಣ್ಣು, ಮಗು ದೂರ ನೋಡುವಾಗ ಮಾತ್ರ ಇರಬಹುದು. ಅಥವಾ ಹತ್ತಿರ ನೋಡುವಾಗ ಮಾತ್ರ ಇರಬಹುದು. ಯಾವುದೋ ಕೆಲವು ಹೊತ್ತು ಇರಬಹುದು. ಇಲ್ಲವೆ ಯಾವಾಗಲೂ ಇರಬಹುದು. ಎರಡೂ ಕಣ್ಣುಗಳು ಒಳಮುಖವಾಗಿರುವ ಮೆಳ್ಳೆಗಣ್ಣು ಆಗಿರಬಹುದು. (ಮಕ್ಕಳಲ್ಲಿ ಇದು ಹೆಚ್ಚು) ಅಥವಾ ಒಂದು ಕಣ್ಣು ಮಾತ್ರ ಹೊರಗೆ ಹೋಗುವ ಮೆಳ್ಳಗಣ್ಣು ಆಗಿರಬಹುದು. ಚಿಕಿತ್ಸೆ: ನೋಡಲು ಎರಡೂ ಕಣ್ಣುಗಳು ಒಂದೇ ಅಕ್ಷದಲ್ಲಿರಬೇಕು ಮತ್ತು 'ಎರಡೂ ಕಣ್ಣುಗಳಿಂದ ಉಂಟಾಗುವ ಏಕದೃಷ್ಟಿಯ ಪುನಃ ಸ್ಥಾಪನೆಯಾಗಬೇಕು-ಈ ಎರಡೂ ಉದ್ದೇಶಗಳು ಈಡೇರಿದಾಗ ಮಾತ್ರ ಮೆಳ್ಳೆಗಣ್ಣಿಗೆ ಚಿಕಿತ್ಸೆ ಪರಿಪೂರ್ಣ ಎಂದೆನ್ನುತ್ತೇವೆ. ಇದನ್ನು ನೆರವೇರಿಸಲು ನಾವು 1. ಕೋಸಾಗಿರುವ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವಂತೆ ನೋಡಿಕೊಳ್ಳುವುದೇ ಅಲ್ಲದೆ ದೃಷ್ಟಿಯ ಕೇಂದ್ರೀಕರಣ ಸರಿಯಾಗುವಂತೆ ನೋಡಿಕೊಳ್ಳಬೇಕು. 2. ಎರಡೂ ಕಣ್ಣುಗಳಿಂದ ಉಂಟಾಗುವ ಏಕದೃಷ್ಟಿಯ ಪುನಃ ಸ್ಥಾಪನೆಯನ್ನು ಹಂತ ಹಂತವಾಗಿ ನೆರವೇರಿಸುವುದು. 3. ಕಣ್ಣಿನ ಕೆಲಸದ ದೃಷ್ಟಿಯಲ್ಲಿ ತೀರಾ ಕಡಿಮೆ ಮಹತ್ವದ ದೈಹಿಕ ಊನತೆ ಅಂದರೆ ಕೋಸಾಗಿರುವ ಕಣ್ಣನ್ನು ನೇರ ಗೊಳಿಸುವುದು.

ಈ ಎಲ್ಲಾ ವಿಷಯಗಳನ್ನು ಪರಿಪೂರ್ಣವಾಗಿ ಚಿಕಿತ್ಸೆ ಮಾಡಬೇಕಾದರೆ ಮಗುವನ್ನು 6-8 ವರ್ಷಗಳ ಒಳಗೇ ಚಿಕಿತ್ಸೆಗೆ ಒಳಪಡಿಸಬೇಕು, ಆದ್ದರಿಂದ ಈ ಕಾಯಿಲೆಯ ಚಿಕಿತ್ಸೆಯಲ್ಲಿ ಪಾಲಕರ ಮತ್ತು ಶಾಲೆಯ ಉಪಾಧ್ಯಾಯರುಗಳ ಜವಾಬ್ದಾರಿ ಬಹಳ. 8 ವರ್ಷಗಳಾದ ನಂತರ ನಡೆಸುವ ಯಾವುದೇ ಚಿಕಿತ್ಸೆ ಪರಿಪೂರ್ಣ ಚಿಕಿತ್ಸೆಯಾಗುವುದಿಲ್ಲ. ಏಕೆಂದರೆ ಆಗ ನಾವು ಎರಡು ಕಣ್ಣುಗಳನ್ನು ನೇರಗೊಳಿಸುವುದೇ ಹೊರತು-ಅತಿ ಮುಖ್ಯವಾದ ಎರಡೂ ಕಣ್ಣುಗಳಿಂದ ಉಂಟಾಗುವ ಏಕದೃಷ್ಟಿಯನ್ನು ವಾಪಸ್ ಪಡೆಯಲಾರೆವು. ಈ ಅವಧಿಯ ನಂತರ ಯಾರೇ ಮೆಳ್ಳೆಗಣ್ಣಿಗೆ ಚಿಕಿತ್ಸೆ ಪಡೆದರೂ ಹೆಚ್ಚಿನ ಸಂದರ್ಭದಲ್ಲಿ ಅವರ ಒಂದೇ ಕಣ್ಣು ಶಕ್ತಿಯುತವಾಗಿರುತ್ತದೆ. ಮತ್ತು ಅವರಿಗೆ ಅಳ ಮತ್ತು ಗಾತ್ರದ ಕಲ್ಪನೆಯನ್ನು ಸ್ಪಷ್ಟವಾಗಿ ಕೊಡುವುದು ಎರಡೂ ಕಣ್ಣುಗಳ ಏಕದೃಷ್ಟಿ ಇರುವುದಿಲ್ಲ ಎಂಬುದು ವಸ್ತುಸ್ಥಿತಿ. ಚಿಕಿತ್ಸಾ ಕ್ರಮಗಳೆಂದರೆ: 1. ದೃಷ್ಟಿದೋಷದ ತೊಂದರೆ ಇರುವಾಗ ಕನ್ನಡಕ ತೊಡುವುದು 2. ಕಡಿಮೆ ಶಕ್ತಿಯುತವಾದ ಕಣ್ಣಿಗೆ ಸರಿಯಾದ ಪ್ರಚೋದನೆ ನೀಡಲು ಹೆಚ್ಚು ಶಕ್ತಿಯುತವಾದ ಕಣ್ಣನ್ನು ಉದ್ದೇಶಪೂರ್ವಕವಾಗಿ ಮುಚ್ಚುವುದು (ಪ್ಯಾಚಿಂಗ್) 3. ಎರಡೂ ಕಣ್ಣುಗಳ ಸಂಯೋಜನೆಯನ್ನು ಹೆಚ್ಚಿಸಲು ಕಣ್ಣಿನ ಮಾಂಸಗಳಿಗೆ ವಿವಿಧ ರೀತಿಯ ವ್ಯಾಯಾಮ ಹೇಳಿಕೊಡುವುದು.

4. ಕಣ್ಣುಗಳ ಅಕ್ಷವನ್ನು ಸರಿಪಡಿಸಲು ಶಸ್ತ್ರಕ್ರಿಯೆ. ಪರಿಷ್ಕರಣೆ ಡಾ|| ಎಚ್. ಎಸ್. ಮೋಹನ್