ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೈವ, ದೈವಾಯತ್ತವಾದ
ಗೋಚರ
ದೈವ, ದೈವಾಯತ್ತವಾದ - ದೈವ ಎಂದರೆ ಪರವಸ್ತು, ಅದೃಷ್ಟ, ನಿಯತಿ, ವಿಧಿ (ಫೇಟ್). ಎಲ್ಲ ಘಟನೆಗಳೂ ಒಂದು ಗೊತ್ತಾದ ರೀತಿಯಲ್ಲೇ ನಡೆಯಬೇಕೆಂದು ವಿಧಿ ಗೊತ್ತುಮಾಡಿರುವುದೆಂದು ಹೇಳುವುದೇ ದೈವಾಯತ್ತವಾದ. ಇದನ್ನು ನಿಯತಿವಾದ ಅದೃಷ್ಟವಾದ ಎಂದೂ ಹೇಳುವುದಿದೆ (ಫೇಟಲಿಸಂ). ಎಲ್ಲಕ್ಕೂ ದೈವಬಲವೇ ಕಾರಣವೆಂದು ತಿಳಿಯುವುದು ಒಂದು ರೀತಿಯಾದರೆ ಎಲ್ಲಕ್ಕೂ ಪುರುಷಬಲವೇ ಕಾರಣ, ದೈವವೆಂಬುದು ಪೌರುಷಕ್ಕೆ ಅಧೀನವೆಂದು ಹೇಳುವುದು ಇನ್ನೊಂದು ರೀತಿ. ಇದನ್ನು ಪೌರುಷವಾದವೆನ್ನುತ್ತಾರೆ.
(ನೋಡಿ- ಅದೃಷ್ಟವಾದ)
(ಡಿ.ಕೆ.ಎಚ್.)