ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರಮಿಡಾಚಾರ್ಯ

ವಿಕಿಸೋರ್ಸ್ದಿಂದ

ದ್ರಮಿಡಾಚಾರ್ಯ - ಇವರಾರೆಂದು ನಿಷ್ಕøಷ್ಟವಾಗಿ ತಿಳಿದಿಲ್ಲ. ಆದರೆ ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯರಿಗೂ ಮೊದಲು ಇವರು ಬ್ರಹ್ಮ ಸೂತ್ರಗಳಿಗೆ ಒಂದು ಭಾಷ್ಯವನ್ನು ಬರೆದಿದ್ದಾರೆಂದು ಪ್ರತೀತಿ. ಇವರ ಭಾಷ್ಯ ವಿಶಿಷ್ಟಾದ್ವೈತ ಪರವಾದುದೆಂದು ರಾಮಾನುಜರು ಭಾವಿಸುತ್ತಾರೆ. ಶ್ರೀ ಭಾಷ್ಯದಲ್ಲಿ ಅವರು ತಮಗೆ ಸ್ಫೂರ್ತಿ ನೀಡಿದ ಪೂರ್ವಾಚಾರ್ಯರನ್ನು ಹೆಸರಿಸುವಾಗ ಭಾರುಚಿ, ಬೋಧಾರ್ಯ ಮೊದಲಾದವರೊಡನೆ ದ್ರಮಿಡಾಚಾರ್ಯರ ಹೆಸರನ್ನೂ ಉಲ್ಲೇಖಿಸಿದ್ದಾರೆ. ರಾಮಾನುಜರು ಉಲ್ಲೇಖಿಸುವ ದ್ರಮಿಡ ಭಾಷ್ಯಕ್ಕೆ ಆಕರವಾದ ಪ್ರತ್ಯೇಕವಾದ ಗ್ರಂಥ ಇನ್ನೂ ಸಿಕಿಲ್ಲವೆಂದು ವಿದ್ವಾಂಸರ ಅಭಿಪ್ರಾಯ. (ಎಂ.ವೈ.)