ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರವಭಾರ ವಿಜ್ಞಾನ

ವಿಕಿಸೋರ್ಸ್ದಿಂದ

ದ್ರವಭಾರ ವಿಜ್ಞಾನ - ಚಲನೆಯಲ್ಲಿರುವ ನೀರು ಹಾಗೂ ಇತರ ದ್ರವಗಳ ವರ್ತನೆಯ ಅಧ್ಯಯನ (ಹೈಡ್ರಾಲಿಕ್ಸ್). ಚರದ್ರವ ವಿe್ಞÁನ ಪರ್ಯಾಯ ಪದ. ಸೀಮಿತ ಮೈಗಳಿಗೆ (ಬೌಂಡೆಡ್ ಸರ್ಫೇಸಸ್) ಅಥವಾ ವಸ್ತುಗಳಿಗೆ ಎದುರಾಗಿ ನಿಶ್ಚಲವಾಗಿರುವ ಅಥವಾ ಅವುಗಳಿಗೆ ಸಂಬಂಧಿಸಿದಂತೆ ಚಲನೆಯಲ್ಲಿರುವ ಎಲ್ಲ ದ್ರವಗಳ ಗುಣಧರ್ಮ. ವರ್ತನೆ ಹಾಗೂ ಪರಿಣಾಮಗಳನ್ನು ಇದರಲ್ಲಿ ಅಭ್ಯಸಿಸಲಾಗುವುದು. ಅನಿಲಗಳ ಸಾಂದ್ರತಾ ವ್ಯತ್ಯಾಸಗಳು ಅಥವಾ ಉಷ್ಣತಾ ಪರಿಣಾಮಗಳು ಇಲ್ಲವೇ ವೇಗಗಳು ಅತ್ಯಲ್ಪ ಇರುವಾಗ ಹಾಗೂ ಅವುಗಳ ಸಂಪೀಡನಶೀಲತೆ (ಕಂಪ್ರೆಸಿಬಿಲಿಟಿ) ಉಪೇಕ್ಷಣೀಯವಾಗಿರುವಾಗ ಅವುಗಳಿಗೆ ಚರದ್ರವ ವಿe್ಞÁನದ ನಿಯಮಗಳನ್ನು ಅನ್ವಯಿಸಬಹುದು. (ನೋಡಿ- ತರಲಬಲವಿe್ಞÁನ) (ಬಿ.ಎ.ಪಿ)