ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿಜ

ವಿಕಿಸೋರ್ಸ್ದಿಂದ

ದ್ವಿಜ ಎರಡು ಜನ್ಮ ಉಳ್ಳವ. ತಾಯಿಯ ಗರ್ಭದಿಂದ ಮೊದಲನೆಯ ಜನ್ಮ. ಉಪನಯನ ಸಂಸ್ಕಾರದಿಂದ ಎರಡನೆಯ ಜನ್ಮ - ಹೀಗೆ. ಉಪನಯನ ಸಂಸ್ಕಾರ ಬ್ರಾಹ್ಮಣ ಕ್ಷತ್ರಿಯ ವೈಶ್ಯ - ಈ ಮೂರು ವರ್ಣದವರಿಗೂ ಉಂಟು. ಆದುದರಿಂದ ಈ ಮೂರು ವರ್ಣದವರೂ ದ್ವಿಜರೇ. ಈ ದ್ವಿಜತ್ವ ಉಪನಯನ ಸಂಸ್ಕಾರಾನಂತರ ಬರುತ್ತದೆ. ಈ ಮೂರು ವರ್ಣದಲ್ಲಿ ಹುಟ್ಟಿದ ಮಾತ್ರದಿಂದಲೇ ದ್ವಿಜನೆಂದು ಹೇಳಲಾಗುವುದಿಲ್ಲ. ಈ ದ್ವಿಜತ್ವ ಪ್ರಾಪ್ತಿಯ ಕಾಲ ಸಾಮಾನ್ಯವಾಗಿ ಬ್ಯಾಹ್ಮಣರಿಗೆ 8 ನೆಯ ವರ್ಷದ ಮೇಲೆ 16 ವರ್ಷದೊಳಗೆ, ಕ್ಷತ್ರಿಯರಿಗೆ 11 ವರ್ಷದ ಮೇಲೆ 22 ವರ್ಷದೊಳಗೆ, ವೈಶ್ಯರಿಗೆ 12 ವರ್ಷದ ಮೇಲೆ 24 ವರ್ಷದೊಳಗೆ ಎಂದು ಶಾಸ್ತ್ರದಲ್ಲಿ ವಿಹಿತವಾಗಿದೆ. ದ್ವಿತೀಯ ಜನ್ಮದಲ್ಲಿ ಆಚಾರ್ಯ ತಂದೆ. ಸಾವಿತ್ರಿ ತಾಯಿ. ಪ್ರಥಮ ಜನ್ಮ ಶರೀರಪ್ರಾಪ್ತಿ ರೂಪವಾದರೆ ದ್ವಿತೀಯ ಜನ್ಮ ಉಪನಯನ ಸಂಸ್ಕಾರ ರೂಪ. ವೇದ ವಿದ್ಯಾಭ್ಯಾಸಕ್ಕೆ ಅಧಿಕಾರ ಉಂಟು ಮಾಡಿಕೊಡುವುದು ಇದೇ. ಮಾತ್ರವಲ್ಲದೆ ತನ್ಮೂಲಕ ಪುರುಷಾರ್ಥಕ್ಕೆ ಸಾಧನವಾದುದರಿಂದ ಶ್ರೇಷ್ಠವಾದುದು. ಮೋಕ್ಷಪ್ರದವಾದ ಸಂನ್ಯಾಸಾಶ್ರಮವನ್ನು ಪಡೆಯಲು ಇದು ಅತ್ಯಾವಶ್ಯಕ. ದ್ವಿಜನಾದವನಿಗೆ ಮಾತ್ರ ಸಂನ್ಯಾಸಿಯಾಗುವ ಅಧಿಕಾರ ಇರುತ್ತದೆ ಎಂದು ಶಾಸ್ತ್ರಕಾರರ ಅಭಿಪ್ರಾಯ.

ಸದøತ್ತ ಬ್ರಾಹ್ಮಣನಿಗೆ ದ್ವಿಜ ಎಂದು ರೂಢನಾಮ. ಯತಿಗಳಿಗೆ e್ಞÁನಭೂಷಣವಾಗಿರುವಂತೆ ದ್ವಿಜರಿಗೆ ಸಂತೋಷವೇ ಭೂಷಣ ಎಂದು ದೇವೀಭಾಗವತದಲ್ಲಿದೆ.

ಹಲ್ಲು, ತುಂಬರುವೃಕ್ಷ, ಪಕ್ಷಿ, ಸರ್ಪ, ಮತ್ಸ್ಯ ಮೊದಲಾದವಕ್ಕೂ ದ್ವಿಜ ಎಂಬ ಶಬ್ದ ಬಳಕೆಯಲ್ಲಿದೆ. (ಎಸ್.ಎನ್.ಕೆ.)