ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿಭಜನ

ವಿಕಿಸೋರ್ಸ್ದಿಂದ

ದ್ವಿಭಜನ ವರ್ಗೀಕರಣದಲ್ಲಾಗಲಿ (ಕ್ಲ್ಯಾಸಿಫಿಕೇಷನ್) ವಿಭಜನೆಯಲ್ಲೇ (ಡಿವಿಷನ್) ಆಗಲಿ ಪ್ರತಿಯೊಂದು ಮಟ್ಟದಲ್ಲಿಯೂ ಸಾಮಾನ್ಯವನ್ನು ವಿಶೇಷಗಳಾಗಿ ವಿಂಗಡಿಸುವಾಗ, ಕೆಲವೊಂದು ವಿಶಿಷ್ಟ ಲಕ್ಷಣಗಳನ್ನು ಹೊಂದಿರತಕ್ಕವು ಮತ್ತು ಆ ಲಕ್ಷಣವನ್ನು ಹೊಂದದೆ ಇರತಕ್ಕವು ಎಂಬ ಪ್ರಕ್ರಿಯೆಯನ್ನು ಅನುಸರಿಸುವುದನ್ನೇ ದ್ವಿಭಜನ (ಡೈಕಾಟಮೀ) ಎನ್ನಲಾಗುತ್ತದೆ. ಈ ಎರಡು ವಿಭಿನ್ನ ವರ್ಗಗಳು ಪರಸ್ಪರ ವಿರುದ್ಧವೂ ಎರಡೂ ಕೂಡಿ ಪೂರ್ಣವೂ ಆಗಿರುತ್ತವೆ; ಆಗಿರಬೇಕು. ಉದಾಹರಣೆಗೆ ಜಗತ್ತನ್ನು ಚರ ಮತ್ತು ಅಚರವೆಂದು ವಿಭಾಗಿಸುವುದು; ಅಥವಾ ಚೇತನ ಮತ್ತು ಅಚೇತನವೆಂದು ವಿಭಾಗಿಸುವುದು. (ಕೆ.ಕೆ.)