ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧರ್ಮದ್ರವ್ಯ
ಗೋಚರ
ಧರ್ಮದ್ರವ್ಯ ಜೀವ ಪುದ್ಗಲಗಳೆರಡೂ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವಾಗ ಅವುಗಳ ಸ್ಥಳಾಂತರ ಕ್ರಿಯೆಗೆ ಉದಾಸೀನ ರೀತಿಯಿಂದ ಸಹಕಾರಿಯಾಗುವ ದ್ರವ್ಯ. ಇದಕ್ಕೆ ವಿರುದ್ಧವಾಗಿ ಜೀವ ಪುದ್ಗಲಗಳ ಸ್ಥಿತಿಯಲ್ಲಿನ ಸಾಧಾರಣ ಸಹಾಯಕ ಮಾಧ್ಯಮವೇ ಅಧರ್ಮದ್ರವ್ಯ. ಇದು ಜೈನಶಾಸ್ತ್ರಕಾರ ಅಭಿಮತ. (ಎ.ಎನ್.ಯು.; ಎಂ.ಎ.)