ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೀಲಿ ಮೀನು

ವಿಕಿಸೋರ್ಸ್ದಿಂದ

ನೀಲಿ ಮೀನು - ಕೆರಾಂಜಿಡೆ ಕುಟುಂಬಕ್ಕೆ ಸೇರಿದ ಸಮುದ್ರ ವಾಸಿ ಎಲುಬ ಮೀನು (ಬ್ಲೂ ಫಿಶ್). ಇದು ಮುಖ್ಯವಾಗಿ ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಾಗರಗಳಲ್ಲಿ ವಾಸಿಸುತ್ತದೆ. ಉತ್ತರ ಅಮೆರಿಕದ ಸಮುದ್ರತೀರದಲ್ಲಿ ಹೇರಳ. ಟೆಮ್ನೊಡಾನ್ ಸಾಲ್ಟೇಟರ್ ಇದರ ಶಾಸ್ತ್ರೀಯ ನಾಮ. ಇದರ ದೇಹ ಉದ್ದ ಹಾಗೂ ಚಪ್ಪಟೆಯಾಗಿದೆ. ಇದರ ಸರಾಸರಿ ಉದ್ದ ಸುಮಾರು 1 ಮೀಟರ್. ಕೆಲವೊಮ್ಮೆ 1.5 ಮೀಟರ್ ಬೆಳೆಯುವುದೂ ಉಂಟು. ದೇಹದ ಮೇಲೆ ಸೈಕ್ಲಾಯಿಡ್ ಹುರುಪೆಗಳ ಹೊದಿಕೆಯಿದೆ. ಬಾಯಿ ಅಗಲ, ದವಡೆಗಳಲ್ಲಿ ಬಹಳ ಗಟ್ಟಿಯಾದ ಹಾಗೂ ಚೂಪಾದ ಹಲ್ಲುಗಳಿವೆ.


ಇದು ಒಳ್ಳೆಯ ಆಹಾರ ಮೀನು ಎನಿಸಿದೆ. (ಪಿ.ಎ.ಆರ್.)