ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಮನ್ - ಜರ್ಸಿ

ವಿಕಿಸೋರ್ಸ್ದಿಂದ

ನೇಮನ್ - ಜರ್ಸಿ 1894- ಪ್ರತಿಭಾವಂತ ಸಂಖ್ಯಾಕಲನವಿಜ್ಞಾನಿ. ಸೋವಿಯೆತ್ ರಷ್ಯಾದಲ್ಲಿ 1894ರ ಏಪ್ರಿಲ್ 16ರಂದು ಜನಿಸಿದ ಇವರ ಜೀವನದ ಮೊದಲ ಭಾಗ ರಷ್ಯನ್ ಕ್ರಾಂತಿ (1917-21) ಮತ್ತು ಒಂದನೆಯ ಮಹಾಯುದ್ಧ (1914-18) ಇವುಗಳ ನೆರಳು ಮೋಡಗಳಿಂದ ಕವಿದಿತ್ತು. ಉಕ್ರೇನ್ ಪ್ರಾಂತ್ಯದ ಖಾರ್ಕೋಫ್‍ನ ತಾಂತ್ರಿಕ ಸಂಸ್ಥೆಯಲ್ಲಿ 1912ರಿಂದ 1916ರ ತನಕ ವಿದ್ಯಾಭ್ಯಾಸ ಮಾಡಿ 1921ರ ತನಕ ಜಿಲ್ಲೆ ಉಪನ್ಯಾಸಕರಾಗಿದ್ದರು. ಮುಂದೆ ಪೋಲಂಡಿಗೆ ತೆರಳಿ ಅಲ್ಲಿನ ಕೃಷಿಸಂಸ್ಥೆಯೊಂದರಲ್ಲಿ ಸಂಖ್ಯಾಕಲನವಿಜ್ಞಾನಿಯ ಹುದ್ದೆ ಸ್ವೀಕರಿಸಿದರು. 1923ರಲ್ಲಿ ವಾರ್ಸಾದ ಜೀವವೈಜ್ಞಾನಿಕ ಪ್ರಯೋಗಾಲಯದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಲಂಡನ್ನಿಗೆ ಮೊದಲಬಾರಿ 1925ರಲ್ಲಿ ತೆರಳಿ ಅಲ್ಲಿಯ ಯೂನಿವರ್ಸಿಟಿ ಕಾಲೇಜಿನ ಕಾರ್ಲ್ ಪಿಯರ್ಸನ್ ಪ್ರಯೋಗಶಾಲೆಯಲ್ಲಿ ಒಂದು ವರ್ಷದ ತನಕ ಕೆಲಸ ಮಾಡಿದರು. ಇನ್ನೊಬ್ಬ ಪ್ರತಿಭಾವಂತ ಸಂಖ್ಯಾಕಲನವಿಜ್ಞಾನಿ ಇ.ಸ್. ಪಿಯರ್ಸನ್ ಜೊತೆ ಸಹಯೋಗ ಆರಂಭವಾದದ್ದು ಈ ವೇಳೆಯಲ್ಲಿ. ಇದರ ಫಲವೇ ಸಂಖ್ಯಾಕಲನೀಯ ಅಧಾರಭಾವದದ್ದು ಈ ವೇಳೆಯಲ್ಲಿ ಇದರ ಫಲವೇ ಸಂಖ್ಯಾಕಲನೀಯ ಅಧಾರಭಾವನೆಗಳ ಪರೀಕ್ಷೆಯ ನೇಮನ್-ಪಿಯರ್ಸನ್ ಸಿದ್ಧಾಂತ (19236-34). ಭರವಸೆ ಮಧ್ಯಾಂತರಗಳನ್ನು ಕುರಿತ ನೇಮನ್ ಅವರ ಸ್ವಂತ ಸಿದ್ಧಾಂತ ಕೂಡ ಈ ಅವಧಿಯಲ್ಲೇ ಮೊಳೆತು ಬೆಳೆಯಿತು.

ಕೃಷಿ ಸಂಬಂಧವಾದ ಸಂಖ್ಯಾಕಲನೀಯ ವಿಧಾನಗಳ ಬಗ್ಗೆ ಸಂಶೋಧನೆ ನಡೆಸುತ್ತ ನೇಮನ್ ಮರಳಿದರು. ಬಳಿಕ ಅಲ್ಲೇ ವರ್ಷಗಳನ್ನು ಕಳೆದು 1934ರಲ್ಲಿ ಯೂನಿವರ್ಸಿಟಿ ಕಾಲೇಜಿಗೆ ಮರಳಿದರು. ಬಳಿಕ ಅಲ್ಲೇ ಸಂಖ್ಯಾಕಲನವಿಜ್ಞಾನದ ರೀಡರ್ ಆದರು. 1958ರಲ್ಲಿ ಅವರು ಅಮೆರಿಕಕ್ಕೆ ವಲಸೆ ಹೋಗಿ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪ್ರಸಿದ್ಧ ಸಂಖ್ಯಾಕಲನ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿ. ನಿರ್ದೇಶಿಸಿ ಬೆಳಸಿದರು. (ಎಸ್.ಟಿ.)