ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಮಿವ್ರತಿ

ವಿಕಿಸೋರ್ಸ್ದಿಂದ

ನೇಮಿವ್ರತಿ(ನೇಮಣಕವಿ): ಸು 1650. ಕನ್ನಡದ ಒಬ್ಬ ಜೈನಕವಿ.ಜ್ಞಾನ ಭಾಸ್ಕರ ಚರಿತೆ. ಸುವಿಚಾರ ಚರಿತೆ ಕರ್ತೃ. ಇದು ಸಾಂಗತ್ಯದಲ್ಲಿ ರಚಿತವಾಗಿದ್ದು ಸು. 1,265 ಪದ್ಯಗಳನ್ನೊಳಗೊಂಡಿದೆ. ಹತ್ತು ಸಂಧಿಗಳು (ದಾರ್ಶನಿಕ ಸಂಧಿ, ಅಣುವ್ರತ ಸಂಧಿ, ತಿಲಸಪ್ತಕ ಸಂಧಿ, ನರಕ ಸಂಧಿ, ಮಧ್ಯಮ ಲೋಕ ಸಂಧಿ, ಭುವನತ್ರಯ ಸಂಧಿ, ಸ್ವರ್ಗದ ಸಂಧಿ ಭವದುಃಖ ಸಂಧಿ, ನವಸ್ಥಾನ ಸಂಧಿ ಮತ್ತು ಮೋಕ್ಷಸುಖ ಸಂಧಿ) ಇರುವ ಈ ಕೃತಿಯಲ್ಲಿ ಜೈನಧರ್ಮದ ಆಚಾರವಿಚಾರಗಳು, ಚತುರ್ಗತಿಗಳ ದುಃಖಗಳು, ಶ್ರಾವಕರ ಹನ್ನೊಂದು ನೆಲೆಗಳು, ಮೋಕ್ಷ ಸ್ವರೂಪ ಮುಂತಾದ ಅಂಶಗಳ ಬಗ್ಗೆ ಮಾಹಿತಿ ಇದೆ. ಪದ್ಯಗಳು ಸರಳವೂ ನೀತಿಯುಕ್ತವೂ ಅಗಿದೆ. ಮನುಷ್ಯನ ಅಸೆಗಳಿಗೆ ಕೊನೆಯಿಲ್ಲ. ಆವಶ್ಯಕತೆ ಪೂರೈಸಿದಂತೆ ಆಸೆಗಳು ಹೇಗೆ ವೃದ್ಧಿಯಾಗುತ್ತ ಹೋಗುತ್ತವೆ ಎಂಬುದನ್ನು ಕವಿ ಚೆನ್ನಾಗಿ ವರ್ಣಿಸಿದ್ದಾನೆ. (ಎಸ್.ಎನ್.ಜಿ.)