ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಟ್, ಚಾಲ್ರ್ಸ್‌

ವಿಕಿಸೋರ್ಸ್ದಿಂದ

ನೈಟ್, ಚಾಲ್ರ್ಸ್ 1791-1873. ಆಂಗ್ಲ ಲೇಖಕ ಮತ್ತು ಪ್ರಕಾಶಕ. ಹುಟ್ಟಿದ್ದು ವಿನ್ಸರ್‍ನಲ್ಲಿ. ತಂದೆಯ ವೃತ್ತಿಯಾಗಿದ್ದ ಪುಸ್ತಕ ವ್ಯಾಪಾರದಲ್ಲಿ ತರಬೇತಿ ಹೊಂದಿ ಲಂಡನ್ನಿಗೆ ಹೋದ. ಅಲ್ಲಿ ಬ್ರಾಹ್ಯಾಮ್ ಮೊದಲಾದವರೊಂದಿಗೆ ದಿ ಸೊಸೈಟಿ ಫಾರ್ ದಿ ಡಿಫ್ಯೂಷನ್ ಆಫ್ ಯೂಸ್‍ಫುಲ್ ನಾಲೆಜ್ ಎಂಬ ಸಂಸ್ಥೆಯಲ್ಲಿ ಸೇರಿಕೊಂಡು ಆ ಸಂಸ್ಥೆಯ ಪ್ರಕಾಶಕನಾಗಿ ನಿಂತ. ಆ ಸಂಸ್ಥೆಯಿಂದ ದಿ ಪೆನ್ನಿ ಮ್ಯಾಗಜೀನ್ (1832-1845). ಪೆನ್ನಿ ಸೈಕ್ಲೋಪೀಡಿಯ (1833-1844), ದಿ ಪಿಕ್ಟೋರಿಯಲ್ ಹಿಸ್ಟರಿ ಆಫ್ ಇಂಗ್ಲೆಂಡ್, ದಿ ಪಿಕ್ಟೋರಿಯಲ್ ಷೇಕ್ಸ್‍ಪಿಯರ್ (1838-41) ಮೊದಲಾದ ಅಗ್ಗದ ಬೆಲೆಯ ಪುಸ್ತಕಗಳನ್ನು ಹೊರತಂದು ಜನಸಾಮಾನ್ಯರ ಜ್ಞಾನವೃದ್ಧಿಗೆ ಕಾರಣನಾದ. ಈತನ ಟಿಪ್ಪಣಿಗಳಿಂದಾಗಿ ದಿ ಪಿಕ್ಟೋರಿಯಲ್ ಷೇಕ್ಸ್‍ಪಿಯರ್ ಅನೇಕ ಆವೃತ್ತಿಗಳನ್ನು ಕಂಡಿತು. ಒನ್ಸ್ ಅಪಾನ್ ಎ ಟೈಮ್ (1853) ಎಂಬ ಈತನ ಪ್ರಬಂಧಗಳ ಸಂಕಲನ ಹಾಗೂ ಪ್ಯಾಸೇಜಸ್ ಆಫ್ ಎ ವರ್ಕಿಂಗ್ ಲೈಫ್ (1863-65) ಎಂಬ ಆತ್ಮವೃತ್ತಾಂತ ಈತನ ಇತರ ಕೃತಿಗಳು. ಹಿಸ್ಟರಿ ಆಫ್ ದಿ ತರ್ಟಿ ಇಯರ್ಸ್ ಪೀಸ್ ಎಂಬ ಈತನ ಅಪೂರ್ವ ಕೃತಿ ಹ್ಯಾರಿಟ್ ಮಾರ್ಟಿನ್ಯೂ ಎಂಬಾತನಿಂದ ಪೂರ್ಣಗೊಂಡಿತು. (ಜಿ.ಕೆ.ಯು.)