ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಟ್ರೊಲೈಟ್

ವಿಕಿಸೋರ್ಸ್ದಿಂದ

ನ್ಯಾಟ್ರೊಲೈಟ್- ಜಿಯೊಲೈಟ್ ಗುಂಪಿಗೆ ಸೇರಿದ ಒಂದು ಖನಿಜ. ರಾಸಾಯನಿಕವಾಗಿ ಸೋಡಿಯಮ್ ಮತ್ತು ಅಲ್ಯೂಮಿನಿಯಮ್ ಸಿಲಿಕೇಟ್‍ಗಳ ಹೈಡ್ರೇಟ್. ರಾಸಾಯನಿಕ ಸೂತ್ರ ಓಚಿ2ಂಟ2Si3ಔ10.2ಊ20 ಕಾಠಿನ್ಯಾಂಕ 5.5, ಸಾಪೇಕ್ಷ ಸಾಂದ್ರತೆ 2.2. ಮುಳ್ಳು ಕಲ್ಲು ಅಥವಾ ಮುಳ್ಳು ಜಿಯೋಲೈಟ್ ಎಂದು ಕರೆಯುವುದು ವಾಡಿಕೆ. ಅನೇಕ ವೇಳೆ ಕಡ್ಡಿ ಆಕಾರದ ನ್ಯಾಟ್ರೊಲೈಟ್ ವಿಕಿರಣಗೊಂಡಂತೆ ಹರಡಿಕೊಂಡಿರುತ್ತದೆ. ನಾರಿನ ಆಕಾರವುಳ್ಳ ಮುದ್ದೆ ರೂಪದಲ್ಲೂ ಕಂಡುಬರುವುದುಂಟು. ಇದರ ಬಣ್ಣ ಬಿಳಿ. ಕೆಲವೊಮ್ಮೆ ನಿರ್ವರ್ಣವಾಗಿಯೂ ಕೆಂಪು. ಹಳದಿ ಬಣ್ಣಗಳಲ್ಲಿಯೂ ದೊರೆಯುವುದಿದೆ. ಸಾಮಾನ್ಯ ನ್ಯಾಟ್ರೆಲೈಟ್ ಖನಿಜಕ್ಕೆ ಗಾಜಿನ ಹೊಳಪೂ ನಾರು ನ್ಯಾಟ್ರೊಲೈಟಿಗೆ ರೇಷ್ಮೆ ಹೊಳಪೂ ಇವೆ. (ಟಿ.ಆರ್.ಎ.)