ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಫಿಲಡೆಲ್ಫಿಯ

ವಿಕಿಸೋರ್ಸ್ದಿಂದ

ನ್ಯೂ ಫಿಲಡೆಲ್ಫಿಯ - ಒಹೈಯೊ ರಾಜ್ಯದ ಈಶಾನ್ಯ ಭಾಗದಲ್ಲಿರುವ ಟಿಸ್ಕರಾವಸ್ ಕೌಂಟಿಯ ನಗರ. ಆ ಕೌಂಟಿಯ ಆಡಳಿತಕೇಂದ್ರ. ಕ್ಯೌಂಟನ್‍ಗೆ ದಕ್ಷಿಣದಲ್ಲಿ, ಟಿಸ್ಕರಾವಸ್ ನದಿಯ ದಡದ ಮೇಲೆ ಉ.ಅ 40ಲಿ 30' ಮತ್ತು ಪ.ರೇ 81ಲಿ 27' ನಲ್ಲಿದೆ. ಜನಸಂಖ್ಯೆ 15,184(1970). ಜಾನ್ ಕಿನ್ಸ್‍ಲಿ ಇದನ್ನು 1803ರಲ್ಲಿ ಸ್ಥಾಪಿಸಿದ. ಕ್ರಾಂತಿಯುದ್ಧದಲ್ಲಿ ಭಾಗವಹಿಸಿದ ಯೋಧರಿಗೆ ಮೀಸಲಾಗಿಡಲಾಗಿದ್ದ ಪ್ರದೇಶದಲ್ಲಿ ಇದು ಸ್ಥಾಪಿತವಾಯಿತು. ಅಂತರ್ಯುದ್ಧದ ಅನಂತರ ಇದು ಬೆಳೆಯಿತು. ಇಲ್ಲಿಯ ಕಲ್ಲಿದ್ದಲು ಮತ್ತು ಜೇಡಿಮಣ್ಣಿನ ನಿಕ್ಷೇಪಗಳಿಂದ ಕೈಗಾರಿಕೆ ಪ್ರೋತ್ಸಾಹ ಲಭ್ಯವಾಯಿತು. ಜವಳಿ ಯಂತ್ರ, ಕಟ್ಟಡ ಸಲಕರಣೆ, ಯಂತ್ರ ಸಲಕರಣೆ, ಜೇಡಿಮಣ್ಣು ಸರಕು, ಪ್ಲಾಸ್ಟಿಕ್ ಸಾಮಾನು, ಕೈಗಾರಿಕಾ ಪಂಖ, ಕಿಡಿ ಪ್ಲಗ್, ಬ್ಯಾಟರಿ ಇವು ಇಲ್ಲಿ ತಯಾರಾಗುತ್ತವೆ. 1833ರಲ್ಲಿ ಇದು ಪಟ್ಟಣವಾಯಿತು. 1883ರಲ್ಲಿ ಇದಕ್ಕೆ ನಗರದ ಸ್ಥಾನ ಪ್ರಾಪ್ತವಾಯಿತು. (ಎಸ್.ಕೆಆರ್.)