ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಬ್ರಿಟನ್ 1

ವಿಕಿಸೋರ್ಸ್ದಿಂದ

ನ್ಯೂ ಬ್ರಿಟನ್ 1 - ನೈಋತ್ಯ ಪೆಸಿಫಿಕ್ ಸಾಗರದಲ್ಲಿ ಪಾಪ್ಯವ ನ್ಯೂ ಗಿನಿಯ ಬಿಸ್ಮಾರ್ಕ್ ದ್ವೀಪಸ್ತೋಮದ ಅತ್ಯಂತ ದೊಡ್ಡ ದ್ವೀಪ. ದ.ಅ.6ಲಿ 00' ಮತ್ತು ಪೂ.ರೇ 150ಲಿ 00' ನಡುವೆ ಇದೆ. ಸುಮಾರು 592 ಕಿಮೀ ಉದ್ದವಾಗಿಯೂ 80 ಕಿಮೀ ಗರಿಷ್ಠ ಅಗಲ ಉಳ್ಳದ್ದಾಗಿಯೂ ಇರುವ ಈ ದ್ವೀಪ ಬಾಲಚಂದ್ರಾಕೃತಿಯಲ್ಲಿದೆ. ಇದರ ಕರಾವಳಿ 1,600 ಕಿಮೀ ಉದ್ದವಾಗಿದೆ. ಇದರ ಅಂಚಿನಲ್ಲಿ ಹವಳದ ದಿಬ್ಬಗಳಿವೆ. ಇದರ ವಿಸ್ತೀರ್ಣ 36,500 ಚ.ಕಿಮೀ ಕರಾವಳಿಯ ಬಯಲು ಕಿರಿದು. ದ್ವೀಪದ ನಡುವೆ ಇರುವ ಹ್ವೈಟ್‍ಮನ್‍ನಾಕಾನಾಯ್, ಮತ್ತು ಬೇನಿಂಗ್ ಪರ್ವತಶ್ರೇಣಿಗಳ ಕಡೆಗೆ ಸಾಗಿದಂತೆ ನೆಲ ಎತ್ತರವಾಗುತ್ತ ಹೋಗುತ್ತದೆ. 2,100 ಮೀಗಿಂತ ಎತ್ತರವಾದ ಅನೇಕ ಶಿಖರಗಳಿವೆ. ಅತ್ಯಂತ ಪಶ್ಚಿಮದಲ್ಲಿ ಉತ್ತರ ಕರಾವಳಿಯ ಓಪನ್ ಕೊಲ್ಲಿಯ ಬಳಿಯಲ್ಲಿ ಹಾಗೂ ಈಶಾನ್ಯದ ಗeóÉಲ್ ಪರ್ಯಾಯ ದ್ವೀಪಪ್ರದೇಶದಲ್ಲಿ ಜೀವಂತ ಜ್ವಾಲಾಮುಖಿಗಳಿವೆ. ಗeóÉಲ್ ಪರ್ಯಾಯ ದ್ವೀಪದಜ್ವಾಲಾಮುಖಿಗಳು ಬಳಿಯ ರಬಾವುಲ್ ಪಟ್ಟಣಕ್ಕೆ ಸದಾ ಆತಂಕಕಾರಿಗಳಾಗಿವೆ. ರಬಾವುಲ್ ಈಶಾನ್ಯ ನ್ಯೂ ಬ್ರಿಟನ್ನಿನ ಪ್ರಮುಖ ರೇವುಪಟ್ಟಣ ಹಾಗೂ ಪೂರ್ವ ನ್ಯೂ ಬ್ರಿಟನ್ ಜಿಲ್ಲೆಯ ಆಡಳಿತ ಕೇಂದ್ರ. ನ್ಯೂ ಬ್ರಿಟನ್ನಿನದು ಸಮಭಾಜಕೀಯ ವಾಯುಗುಣ.

µóÁಕ್ ಲಮೇರ್ ಎಂಬ ಡಚ್ ನಾವಿಕನೇ ಈ ದ್ವೀಪವನ್ನು ಮೊದಲು ಕಂಡ ಐರೋಪ್ಯ. ನ್ಯೂ ಗಿನಿ ಮತ್ತು ನ್ಯೂ ಐರ್ಲೆಂಡುಗಳನ್ನೊಳಗೊಂಡ ವಿಶಾಲ ಭೂಪ್ರದೇಶದ ಭಾಗವಿದು ಎಂಬುದಾಗಿ ಆತ ಭ್ರಮಿಸಿದ್ದ. ವಿಲಿಯಂ ಡ್ಯಾಂಪಿಯೆರ್ ಎಂಬ ಇಂಗ್ಲಿಷ್ ಪರಿಶೋಧಕ ಇದನ್ನು ಸುಳ್ಳುಗೊಳಿಸಿದ. ಪಶ್ಚಿಮದ ವೀಟಿಯಾeóï ಜಲಸಂಧಿಯನ್ನು ಕಂಡವನೂ ಈ ದ್ವೀಪಕ್ಕೆ ಹೆಸರಿಟ್ಟವನೂ ಆತನೇ. 1884ರಲ್ಲಿ ಇದು ಜರ್ಮನಿಯ ರಕ್ಷಣಾಧಿಕಾರಕ್ಕೆ ಸೇರಿತು. ಒಂದನೆಯ ಮಹಾಯುದ್ಧದ ಅನಂತರ ಇದು ಆಸ್ಟ್ರೇಲಿಯದ ಆಡಳಿತಕ್ಕೆ ಒಳಪಟ್ಟಿತು. ಜನವರಿ 1942ರಲ್ಲಿ ಇದು ಜಪಾನಿನ ವಶವಾಗಿತ್ತು. 1945ರಲ್ಲಿ ಮತ್ತೆ ಇದನ್ನು ಆಸ್ಟ್ರೇಲಿಯ ಅಕ್ರಮಿಸಿಕೊಂಡಿತು. 1973ರಲ್ಲಿ ಸ್ವಯಮಾಡಳಿತ ಪಡೆದ ಪಾಪ್ಯವ ನ್ಯೂ ಗಿನಿಯ ಭಾಗವಾದ ನ್ಯೂಬ್ರಿಟನ್ 1975ರಲ್ಲಿ ಸ್ವತಂತ್ರ ಪಾಪ್ಯವ ನ್ಯೂಗಿನಿಯಲ್ಲಿ ಮುಂದುವರಿಯಿತು. 1966ರ ಜುಲೈಯಲ್ಲಿ ಈ ದ್ವೀಪವನ್ನು ಎರಡು ಜಿಲ್ಲೆಗಳ ನಡುವೆ ವಿಭಾಗ ಮಾಡಲಾಯಿತು. ಪಶ್ಚಿಮದ ಜಿಲ್ಲೆಯಲ್ಲಿ ವೀಟೂ ದ್ವೀಪಗಳೂ ಸೇರಿವೆ. ಈ ಜಿಲ್ಲೆಯ ವಿಸ್ತೀರ್ಣ 18,400 ಚ.ಕಿಮೀ., ಜನಸಂಖ್ಯೆ 55,000 (1970 ಅಂ); ರಾಜಧಾನಿ ಕಿಂಬೀ. ಪೂರ್ವದ ಜಿಲ್ಲೆಯಲ್ಲಿ ಡ್ಯೂಕ್ ಆಫ್ ಯಾರ್ಕ್ ದ್ವೀಪಗಳೂ ಇವೆ. ಈ ಜಿಲ್ಲೆ 17,920 ಚ.ಕಿಮೀ ವಿಸ್ತಾರವಾಗಿದೆ. ಇದರ ಜನಸಂಖ್ಯೆ 99,000; ರಾಜಧಾನಿ ರಬಾವುಲ್ ಗeóÉಲ್ ಪರ್ಯಾಯದ್ವೀಪ ಅತ್ಯಂತ ಫಲವತ್ತಾದ ಹಾಗೂ ಮುಂದುವರಿದ ಪ್ರದೇಶ, ಇಲ್ಲಿಯ ಕರಾವಳಿಯ ಬಯಲಿನಲ್ಲಿ ಕೊಬ್ಬರಿ, ಕೋಕೋ ತೋಟಗಳಿವೆ. ಇತರ ಕರಾವಳಿ ಪ್ರದೇಶಗಳಲ್ಲೂ ಇವನ್ನು ಬೆಳೆಯಲಾಗುತ್ತದೆ. ಸ್ಥಳೀಯರು ಬಳಸುವ ಅನೇಕ ಧಾನ್ಯಗಳೂ ಬೆಳೆಯುತ್ತವೆ. ದ್ವೀಪದ ಪ್ರಮುಖ ವಸ್ತುಗಳೆಂದರೆ ಮರ, ತಾಮ್ರ, ಚಿನ್ನ, ಕಬ್ಬಿಣ ಮತ್ತು ಕಲ್ಲಿದ್ದಲು. (ಜೆ.ಎಸ್.ಎಸ್.)