ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಬ್ರಿಟನ್ 2

ವಿಕಿಸೋರ್ಸ್ದಿಂದ

ನ್ಯೂ ಬ್ರಿಟನ್ 2 - ಅಮೆರಿಕ ಸಂಯುಕ್ತ ಸಂಸ್ಥಾನಗಳ ಕನೆಕ್ವಿಕಟ್ ರಾಜ್ಯದ ಮಧ್ಯಭಾಗದಲ್ಲಿ ಹಾರ್ಟ್‍ಫರ್ಡ್ ಕೌಂಟಿಯಲ್ಲಿರುವ ನಗರ. ಉ.ಅ.41ಲಿ 40' ಮತ್ತು ಪ.ರೇ.72ಲಿ 71' ಮೇಲೆ ಇದೆ. ಜನಸಂಖ್ಯೆ 83,441 (1970). 1686ರಲ್ಲಿ ಗ್ರೇಟ್ ಸ್ವಾಂಪ್ ಎಂಬ ಹೆಸರಿನಲ್ಲಿ ಇಲ್ಲಿ ವಸತಿ ಪ್ರಾರಂಭವಾಯಿತು. 1754ರಲ್ಲಿ ಇದಕ್ಕೆ ನ್ಯೂಬ್ರಿಟನ್ ಎಂದು ಹೆಸರು ನೀಡಲಾಯಿತು. 1850ರಲ್ಲಿ ಇದು ಪಟ್ಟಣವಾಯಿತು. 1870ರಲ್ಲಿ ಇದಕ್ಕೆ ನಗರದ ಸ್ಥಾನಮಾನ ಲಭಿಸಿದುವು. 1905ರಲ್ಲಿ ಪಟ್ಟಣ, ನಗರ ಎರಡನ್ನೂ ಪರಸ್ಪರ ಸಮಾವೇಶಗೊಳಿಸಲಾಯಿತು.ಇದೊಂದು ಕೈಗಾರಿಕಾ ನಗರ, ಕಬ್ಬಿಣ ಸರಕು ಮತ್ತು ಯಂತ್ರ ತಯಾರಿಕೆ ಇಲ್ಲಿಯ ಮುಖ್ಯ ಕೈಗಾರಿಕೆಗಳು. ಕೇಂದ್ರೀಯ ಕನೆಕ್ಟಿಕಟ್ ರಾಜ್ಯ ಕಾಲೇಜು. ಅಮೆರಿಕನ್ ಕಲಾವಸ್ತು ಸಂಗ್ರಹಾಲಯ-ಇವು ಪ್ರಮುಖ ಸಂಸ್ಥೆಗಳು.

(ಎಚ್.ಜೆ.ಎ. ಜೆ.ಎಸ್.ಎಸ್)