ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಟ್ಯಾಟೊರೇಸ್

ವಿಕಿಸೋರ್ಸ್ದಿಂದ

ಪೊಟ್ಯಾಟೊರೇಸ್ - ಮಕ್ಕಳಿಗೆ ಪ್ರಿಯವಾದ ಒಂದು ಆಟ. ಇದಕ್ಕೆ ಆಲೂಗೆಡ್ಡೆ ಓಟ, ಬಟಾಟೆ ಓಟ ಎನ್ನುತ್ತಾರೆ. 8-12 ವರ್ಷದೊಳಗಿನ ಏಳೆಂಟು ಹುಡುಗರು ಈ ಆಟವನ್ನು ಆಡುತ್ತಾರೆ. ಮೊದಲು ಸಾಲಾಗಿ ನಿಲ್ಲುತ್ತಾರೆ. ಅವರ ಕಾಲ ಬಳಿ ಒಬ್ಬರಿಗೆ ಒಂದರಂತೆ ಖಾಲಿ ಬುಟ್ಟಿಗಳನ್ನು ಇಡಲಾಗುತ್ತದೆ. ಅವರ ಮುಂದೆ 2-3 ಮೀ. ದೂರದಲ್ಲಿ ಸಾಲಿನಲ್ಲಿರುವ ಹುಡುಗರ ಸಂಖ್ಯೆಯಷ್ಟೆ ಆಲೂಗೆಡ್ಡೆಗಳನ್ನು ಸಾಲಾಗಿ ಇಡಲಾಗುತ್ತದೆ. ನಿರ್ದೇಶಕರು ಪೀಪಿ ಊದಿದ ಕೂಡಲೇ ಸಾಲಿನಲ್ಲಿರುವ ಹುಡುಗರು ಮುಂದಕ್ಕೆ ಓಡಿ ಆಲೂಗೆಡ್ಡೆಯನ್ನು ತೆಗೆದುಕೊಂಡು ವೇಗದಲ್ಲಿ ಹಿಂದಕ್ಕೆ ಬಂದು ತಂತಮ್ಮ ಬುಟ್ಟಿಗೆ ತುಂಬಬೇಕು. ಒಂದು ಸಲಕ್ಕೆ ಒಂದೇ ಆಲೂಗೆಡ್ಡೆಯನ್ನು ತರಬೇಕು. ಹೀಗೆ ಯಾರು ಹೆಚ್ಚು ಗೆಡ್ಡೆಗಳನ್ನು ಶೇಖರಿಸುತ್ತಾರೋ ಅವರು ಆಟದಲ್ಲಿ ಗೆದ್ದಂತೆ.

ಪಾಶ್ಚಾತ್ಯದಲ್ಲಿ ಪ್ರಾರಂಭವಾದ್ದರಿಂದ ಈ ಆಟಕ್ಕೆ ಅವರು ಬಟಾಟೆ ಉಪಯೋಗಿಸಿದರು. ನಾವು ಇಲ್ಲಿ ಯಾವ ಗೆಡ್ಡೆಯನ್ನಾದರೂ ಉಪಯೋಗಿಸಬಹುದು. (ಎಸ್.ಎಚ್.ಕೆ.)