ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೋರ್ಚುಗೀಸ್ ಭಾಷೆ

ವಿಕಿಸೋರ್ಸ್ದಿಂದ

ಪೋರ್ಚುಗೀಸ್ ಭಾಷೆ - ಪೋರ್ಚುಗಲ್ ಮತ್ತು ಬ್ರಜಿóಲ್ (ದಕ್ಷಿಣ ಅಮೆರಿಕ) ದೇಶಗಳಲ್ಲಿ ಸುಮಾರು ಏಳೂವರೆ ಕೋಟಿಗೂ ಮಿಕ್ಕಿದ ಜನರು ಆಡುವ ಭಾಷೆ. ಇದು ಇಂಡೋ-ಯೂರೋಪಿಯನ್ ಭಾಷಾಪರಿವಾರಕ್ಕೆ ಸೇರಿದ್ದು ರೋಮನ್ಸ್ ಭಾಷಾ ಶಾಖೆಗೆ ಸೇರಿರುವ ಭಾಷೆ. ಇದು ಹೆಚ್ಚಾಗಿ ಸ್ಪ್ಯಾನಿಷ್ ಭಾಷೆಯನ್ನು ಹೋಲುವುದು. ಇದರಲ್ಲಿ ಜಮ್ರ್ಯಾನಿಕ್ ಮತ್ತು ಸೆಮಿಟಿಕ್ ಭಾಷೆಯ ಮೂಲಪದಗಳನ್ನು ಕಾಣಬಹುದು. ಉತ್ತರ ಪೋರ್ಚುಗೀಸ್ ಅಥವಾ ಗಲಿಷೀಯನ್, ಮಧ್ಯ ಪೋರ್ಚುಗೀಸ್, ದಕ್ಷಿಣ ಪೋರ್ಚುಗೀಸ್ (ಲಿಸ್ಬನ್ ಉಪಭಾಷೆಯನ್ನೂ ಒಳಗೊಂಡಂತೆ) ಮತ್ತು ದ್ವೀಪವಾಸಿಗಳ ಪೋರ್ಚುಗೀಸ್ (ಬ್ರಜಿóಲ್ ಮತ್ತು ಮಡಿರ ಒಳಗೊಂಡಂತೆ) ಈ ಭಾಷೆಯ ನಾಲ್ಕು ಮುಖ್ಯ ಉಪಭಾಷೆಗಳು. ಭಾರತದ ಗೋವ, ಡಾಮನ್ ಮತ್ತು ದಿಯು, ಆಗ್ನೇಯ ಚೀನದ ಮಕೌ, ಆಫ್ರಿಕದ ಅಂಗೋಲ, ಪೋರ್ಚುಗೀಸ್ ಗಿನಿ, ಮೊಜಾಂಬಿಕ್, ಓಷೀಯನೀಯದ ಪೋರ್ಚುಗೀಸ್ ತಿಮೊರ್, ಉತ್ತರ ಅಮೆರಿಕದ ಕ್ಯಾಲಿಪೋರ್ನಿಯ, ಮೆಸಾಚುಸೆಟ್ಸ್, ಮುಂತಾದ ಕಡೆಗಳಲ್ಲಿ ಇದರ ಭಾಷಾಪ್ರಭೇದಗಳನ್ನು ಕಾಣಬಹುದು. ಜಾಂಜಿಬಾರ್, ಮೊಂಬಾಸ ಮತ್ತು ಮೆಲಿಂದೆ, ಆಫ್ರಿಕದ ಪೂರ್ವ ಕರಾವಳಿ ಪ್ರದೇಶ, ಶ್ರೀಲಂಕಾ, ಮಂಗಳೂರು, ಕೊಚ್ಚಿನ್, ಕೋರಮಂಗಲ ಮತ್ತಿತರ ಭಾಗಗಳಲ್ಲಿ ಪೋರ್ಚುಗೀಸ್ ಭಾಷೆಯ ಪಿಡ್ಜಿನ್ ಮತ್ತು ಕ್ರೀಯೋಲ್ ರೂಪವನ್ನು; ಜಾವ. ಮಲಯ ಮತ್ತು ಸಿಂಗಪುರದಲ್ಲಿ ಮಲಯ್-ಪೋರ್ಚುಗೀಸ್ ಪಿಡ್ಜಿನ್ ರೂಪವನ್ನು ಆಡುವ ಜನರನ್ನು ಕಾಣಬಹುದು.

ಸ್ಥಳೀಯ ಪೋರ್ಚುಗೀಸ್ ಪದಗಳಲ್ಲಿ ಇಂಗ್ಲಿಷನ ಕ (ಏ), ವ (W) ಮತ್ತು ಯ (ಙ) ಹೊರತಾಗಿ ಉಳಿದ ಎಲ್ಲ ಸ್ವರಗಳು ಹಾಗೂ ವ್ಯಂಜನಗಳಿವೆ. ಇಂಗ್ಲಿಷ್ ~ ~ ~ ~ ಭಾಷೆಯಲ್ಲಿ ಕಾಣಿಸಿಕೊಳ್ಳದ ಪೋರ್ಚುಗೀಸ್ ಧ್ವನಿಗಳೆಂದರೆ ಅ (ಚಿ), ಒ (o), ಪೋರ್ಚುಗೀಸ್ ರ (ಡಿ). ಈ ಭಾಷೆಯಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗ ರೂಪವಿದೆ. ನಪುಂಸಕ ಲಿಂಗವಿಲ್ಲ. ಪದಾಂತ್ಯದಲ್ಲಿ ಬರುವ ಒ (o) ಪ್ರತ್ಯಯ ಪುಲ್ಲಿಂಗ ಸೂಚಕವಾಗಿಯೂ, ಅ (ಚಿ) ಸ್ತ್ರೀಲಿಂಗ ಸೂಚಕವಾಗಿರುತ್ತದೆ. ನಾಮಪದಗಳ ಅಂತ್ಯದಲ್ಲಿ ಎ (e) ಸ್ವರ ಅಥವಾ ಯಾವುದಾದರೂ ವ್ಯಂಜನ ಬಂದಾಗ, ಆ ಪದ ಪುಲ್ಲಿಂಗವೇ ಅಥವಾ ಸ್ತ್ರೀಲಿಂಗವೇ ಎಂಬುದನ್ನು ತಿಳಿಯಬೇಕಾದರೆ ಪದಗಳು ಪ್ರಯೋಗವಾಗುವ ಸನ್ನಿವೇಶವನ್ನು ಗಮನಿಸಬೇಕಾಗುತ್ತದೆ. ಏಕವಚನ ಪದಗಳು ಸ್ವರದಿಂದ ಕೊನೆಗೊಂಡಿದ್ದರೆ ಎಸ್ (S) ಪ್ರತ್ಯಯವನ್ನು, ವ್ಯಂಜನದಿಂದ ಕೊನೆಗೊಂಡಿದ್ದರೆ ಇಎಸ್ (es) ಪ್ರತ್ಯಯವನ್ನು ಸೇರಿಸುವುದರಿಂದ ಬಹುವಚನ ರೂಪವಾಗುತ್ತದೆ. ಒ (o) [ಬ.ವ.ಒಸ್.] ಮತ್ತು ಅ (ಚಿ) [ಬ.ವ.ಅಸ್.] ನಿರ್ದಿಷ್ಟ ಉಪಪದಗಳು. ಉಮ್ (um) ಮತ್ತು ಉಮ (umಚಿ) ಅನಿರ್ದಿಷ್ಟ ಉಪಪದಗಳಾಗಿವೆ. ಇವುಗಳಲ್ಲಿ ಒ.ಒಸ್ ಮತ್ತು ಉಮ್ ಪುಲ್ಲಿಂಗ ನಾಮಪದಗಳನ್ನು ನಿರ್ದೇಶಿಸಿದರೆ, ಆ ಅಸ್ ಮತ್ತು ಉಮ ಸ್ತ್ರೀಲಿಂಗ ನಾಮಪದವನ್ನು ನಿರ್ದೇಶಿಸುತ್ತವೆ. ಉದಾ : ಫಿಲ್ಹೊ (ಮಗ). ಫಿಲ್ಹ (ಮಗಳು) ಉಮ್ ಫಿಲ್ಹೊ (ಒಬ್ಬ ಮಗ), ಉಮ ಫಿಲ್ಹ (ಒಬ್ಬ ಮಗಳು), ಫಿಲ್ಹೊಸ್ (ಗಂಡು ಮಕ್ಕಳು). ಫಿಲ್ಹಸ್ (ಹೆಣ್ಣು ಮಕ್ಕಳು). ಒ ಎಂಬುದರಿಂದ ಕೊನೆಗೊಂಡಿರುವ ನಾಮವಿಶೇಷಣ, ಸ್ತ್ರೀಲಿಂಗ ಏಕವಚನದಲ್ಲಿ ಅ (ಚಿ), ಪುಲ್ಲಿಂಗ ಬಹುವಚನದಲ್ಲಿ ಒಸ್ (os) ಮತ್ತು ಸ್ತ್ರೀಲಿಂಗ ಬಹುವಚನದಲ್ಲಿ ಅಸ್ (ಚಿs) ಎಂದು ಪರಿವರ್ತನೆ ಹೊಂದುತ್ತದೆ. ಉದಾ : ನೊವೊ > ನೊವ,

~ ~ ನೊವೊಸ್, ನೋವಸ್, ಒಂದು ವೇಳೆ ಆಒ ಎಂಬುದರಿಂದ ಕೊನೆಗೊಂಡಿದ್ದರೆ, ಸ್ತ್ರೀ ಲಿಂಗ ಏಕವಚನದಲ್ಲಿ ಅ, ~ ~ ಪುಲ್ಲಿಂಗ ಬಹುವಚನದಲ್ಲಿ ಅಒಸ್, ಸ್ತ್ರೀಲಿಂಗ ಬಹುವಚನದಲ್ಲಿ ಅಸ್ ಎಂಬುದಾಗಿ ಪರಿವರ್ತನೆ ಹೊಂದುತ್ತದೆ. ಉದಾ ~ ~

ಟೆಂಪೊ ರಒ > ಟೆಂಪೊರ, ಟೆಂಪೊರಾಒಸ್, ಟಂಪೋರಸ್, ಎ (e) ಎನ್ನುವ ಸ್ವರದಿಂದ ಅಥವಾ ಯಾವುದಾದರೂ ವ್ಯಂಜನದಿಂದ ಕೊನೆಗೊಂಡಿದ್ದರೆ, ಸ್ತ್ರೀಲಿಂಗ ರೂಪದಲ್ಲಿ ಸಾಮಾನ್ಯವಾಗಿ ಯಾವುದೇ ವ್ಯತ್ಯಾಸ ಹೊಂದುವುದಿಲ್ಲ. ಎ (e) ಎನ್ನುವ ಸ್ವರದಿಂದ ಕೊನೆಗೊಂಡಿರುವ ವಿಶೇಷಣ ಪುಲ್ಲಿಂಗ ಮತ್ತು ಸ್ತ್ರೀಲಿಂಗ ರೂಪಗಳೆರಡಕ್ಕೂ ಎಸ್ ಎನ್ನುವ ಬಹುವಚನ ಪ್ರತ್ಯಯ ಹೊಂದುತ್ತದೆ. ಆದರೆ, ವ್ಯಂಜನದಿಂದ ಕೊನೆಗೊಂಡಿರುವ ವಿಶೇಷಣ ಈಎಸ್ ಅಥವಾ ಎಸ್ ಎನ್ನುವ ಪ್ರತ್ಯಯಗಳನ್ನು ಪಡೆಯುತ್ತದೆ. ನಾಮಶೇಷಣವು ಈಎಸ್, ಒಲ್, ಒರ್, ಉಮ್, ಉ ಎನ್ನುವ ಪ್ರತ್ಯಯಗಳಿಂದ ಕೊನೆಗೊಂಡಿದ್ದರೆ ವಿಶೇಷವಾಗಿ ರಾಷ್ಟ್ರೀಯತೆಯನ್ನು ಸೂಚಿಸುವಾಗ, ಸ್ತ್ರೀಲಿಂಗ ರೂಪಕ್ಕೆ ಅ ಎನ್ನುವ ಪ್ರತ್ಯಯವನ್ನು ಹಚ್ಚಲಾಗುತ್ತದೆ. ಉದಾ : ಪೋರ್ಚುಗೀಸ್ > ಪೋರ್ಚುಗೀಸ. ಎಸ್‍ಪನ್ ಹೊಲ್ > ಎಸ್‍ಪನ್ ಹೊಲ. ನಾಮವಿಶೇಷಣದ ಸ್ತ್ರೀಲಿಂಗ ಏಕವಚನ ರೂಪಕ್ಕೆ ಮೆಂತೆ (-meಟಿಣe) ಎನ್ನುವ ಪ್ರತ್ಯಯ ಸೇರಿದಾಗ ಕ್ರಿಯಾ ವಿಶೇಷಣ ಉಂಟಾಗುತ್ತದೆ. ಉದಾ : ಜಸ್ತ + ಮೆಂತೆ > ಜಸ್ತಮೆಂತೆ.

ಸಂಖ್ಯಾವಾಚಕಗಳಲ್ಲಿ ಉಮ್, ಉಮ (1), ದೌಸ್, ದುವಸ್ (2) ತ್ರೆಸ್ (3) ಇತ್ಯಾದಿ ಇವು ಪ್ರಧಾನ ಸಂಖ್ಯೆಗಳು. ಪ್ರೈಮೈರೊ (ಒಂದನೆಯ), ಸೆಗುಂದೊ (ಎರಡನೆಯ), ತರ್‍ಸೈರೊ (ಮೂರನೆಯ) ಇತ್ಯಾದಿ ಇವು ವಿಶೇಷಣ ಸೂಚಕ ಸಂಖ್ಯೆಗಳು. ಆ ಮೆತದೆ (ನಾಮಪದ) (ಅರ್ಧ) , ಮೈಅ ಹೊರ (ಅರ್ಧ ಗಂಟೆ) ಇತ್ಯಾದಿ ಇವು ಭಿನ್ನರಾಶಿ ಸಂಖ್ಯೆಗಳು. ಸರ್ವನಾಮಗಳಲ್ಲಿ ಉತ್ತಮ ಪುರುಷ, ಮಧ್ಯಮ ಪುರುಷ, ಪ್ರಥಮ ಪುರುಷ ಎಂಬ ರೂಪಗಳಿವೆ. ಉತ್ತಮ ಪುರುಷ : ಎಉ (ನಾನು), ನೊಸ್ (ನಾವು) ಮಧ್ಯಮ ಪುರುಷ : ತು (ನೀನು), ವೊಸ್ (ನೀವು-ಸ್ತ್ರೀಲಿಂಗ ಬ.ವ) ಪ್ರಥಮ ಪುರುಷ : ಎಲೆ (ಅವನು), ಎಲ (ಅವಳು), ಎಲೆಸ್ (ಅವರು-ಪುಲ್ಲಿಂಗ ಎಲಸ್ (ಅವರು-ಸ್ತ್ರೀಲಿಂಗ)

ಕ್ರಿಯಾಪದಗಳನ್ನು ಮೂರು ಮುಖ್ಯವರ್ಗಗಳಲ್ಲಿ ವಿಭಜಿಸಲಾಗಿದೆ. - ಆರ್-ಎರ್ ಮತ್ತು - ಇರ್ ಎನ್ನುವ ಪೂರ್ವಕಾಲಿಕ ಕ್ರಿಯಾಂತ್ಯ ಪ್ರತ್ಯಯಗಳನ್ನು ಕ್ರಿಯಾಪದಗಳು ಹೊಂದಿವೆ. ಇವುಗಳಲ್ಲಿ - ಇರ್ ಪ್ರತ್ಯಯವನ್ನು ಹೊಂದಿರುವ ಕ್ರಿಯಾಪದಗಳು ವ್ಯಾಕರಣ ಪ್ರಕ್ರಿಯೆಯಲ್ಲೆ ಹೆಚ್ಚಾಗಿ ಪರಿವರ್ತನೆ ಹೊಂದುತ್ತವೆ. ಕ್ರಿಯಾಪದಗಳಲ್ಲಿ ವರ್ತಮಾನಕಾಲ, ಭೂತಕಾಲ, ಭವಿಷ್ಯತ್‍ಕಾಲ, ಅಪೂರ್ಣಕಾಲ, ಪುರುಷವಾಚಕ ಪೂರ್ವಕಾಲಿಕ, ಮಿಶ್ರಕಾಲ, ಅಜ್ಞಾರ್ಥಕ, ಆತ್ಮಾರ್ಥಕ ಕ್ರಿಯಾಪದಗಳಿವೆ. ಸಂಭಾವನಾತ್ಮಕ ಕ್ರಿಯಾರ್ಥಕದಲ್ಲಿ ಆರು ಕಾಲಗಳಿವೆ. ಭೂತಕಾಲಿಕ ಕೃದಂತದ ಜೊತೆಗೆ ಸೆರ್ ಎಂಬ ಕ್ರಿಯಾಪದ ಸೇರಿದಾಗ ಕರ್ಮಿಣಿರೂಪ ತಾಳುತ್ತದೆ.

ಪೋರ್ಚುಗಲ್ಲಿನ ರಾಜಧಾನಿಯಾದ ಲೆಸ್ಬನ್‍ನಲ್ಲಿ ಮಾತನಾಡುವ ಭಾಷಾರೂಪವೇ ಪೋರ್ಚುಗೀಸಿನ ಶಿಷ್ಟರೂಪ. ದೇಶದೊಳಗಿನ ಉಪಭಾಷೆಗಳಲ್ಲಿ ಹೆಚ್ಚು ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ. ಪೋರ್ಚುಗೀಸ್ ಭಾಷೆ ಪೋರ್ಚುಗಲ್ ಮತ್ತು ಬ್ರಜಿóಲ್ ದೇಶಗಳ ಅಧಿಕೃತ ಭಾಷೆಯಾದರೂ ಬ್ರಜಿóಲ್ ಪೋರ್ಚುಗೀಸ್ ಭಾಷೆ ಪೋರ್ಚುಗಲದ ದೇಶದ ಭಾಷೆಗಿಂತ ಭಿನ್ನವಾಗಿದೆ. ಕೆಲವು ಧ್ವನಿಗಳಲ್ಲಿ, ಕ್ರಿಯಾರೂಪಕಾಲ ಪ್ರಕ್ರಿಯೆಗಳಲ್ಲಿ ಮತ್ತು ವಾಕ್ಯ ರಚನೆಯಲ್ಲಿ ಹಲವಾರು ವ್ಯತ್ಯಾಸಗಳನ್ನು ಕಾಣಬಹುದು. ಬ್ರಜಿಲ್‍ನಲ್ಲಿ ಆಡುವ ಭಾಷೆಯಲ್ಲಿ ಸರ್ವನಾಮಗಳು ಕ್ರಿಯಾಪದದ ಪೂರ್ವದಲ್ಲಿ ಬಂದರೆ, ಪೋರ್ಚುಗಲ್‍ನಲ್ಲಿ ಆಡುವ ಭಾಷೆಯಲ್ಲಿ ಕ್ರಿಯಾಪದದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಬ್ರಜಿûಲ್ ಪೋರ್ಚುಗೀಸ್ ಭಾಷೆಯಲ್ಲಿ ಅನೇಕ ಸ್ಥಳೀಯ ಪ್ರಭೇದಗಳಿವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಕರಿಯೋಕ ಮತ್ತು ಪೌಲಿಸ್ತ. 1943ರಲ್ಲಿ ಪೋರ್ಚುಗಲ್ ಮತ್ತು ಬ್ರಜಿóಲ್ ಸರ್ಕಾರಗಳು ಪರಸ್ಪರ ಒಪ್ಪಂದದಿಂದ ಪೋರ್ಚುಗೀಸ್ ಭಾಷೆಯ ಕಾಗುಣಿತ, ಅಕ್ಷರಾನುಕ್ರಮ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಒಂದು ಹೊಸ ಪದ್ಧತಿಯನ್ನು ಮಾನ್ಯ ಮಾಡಿವೆ. ಈ ಪದ್ಧತಿಯಲ್ಲಿ ಫ್ಹ (ಠಿh) ಗೆ ಬದಲಾಗಿ ಫ (ಜಿ), ಥ (ಣh) ಗೆ ಬದಲಾಗಿ ತ (ಣ) ಮತ್ತು ಯ (ಥಿ) ಗೆ ಬದಲಾಗಿ ಇ (i) ಯನ್ನು ಪ್ರತಿಸ್ಥಾಪಿಸಲಾಗಿದೆ. (ಬಿ.ಸಿ.ಬಿ.)