ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಾಪಗಢ 1

ವಿಕಿಸೋರ್ಸ್ದಿಂದ

ಪ್ರತಾಪಗಢ 1 - ಉತ್ತರ ಪ್ರದೇಶ ರಾಜ್ಯದ ಪೂರ್ವಭಾಗದಲ್ಲಿರುವ ಒಂದು ಜಿಲ್ಲೆ. ಫೈಜಾಬಾದ್ ವಿಭಾಗಕ್ಕೆ ಸೇರಿರುವ ಈ ಜಿಲ್ಲೆ ಉ.ಅ. 25º32'- 26º21' ಮತ್ತು ಪೂ.ರೇ. 81º19'-82º27' ನಡುವೆ ಇದೆ. ಈ ಜಿಲ್ಲೆಯ ಉತ್ತರಕ್ಕೆ ರೇಬರೇಲಿ ಮತ್ತು ಸುಲ್ತಾನಪುರ, ಪೂರ್ವಕ್ಕೆ ಜಾನ್‍ಪುರ, ದಕ್ಷಿಣಕ್ಕೆ ಅಲಹಾಬಾದ್ ಮತ್ತು ಪಶ್ಚಿಮಕ್ಕೆ ರೇಬರೇಲಿ ಜಿಲ್ಲೆಗಳಿವೆ. 3,730 ಕಿಮೀ ವಿಸ್ತೀರ್ಣವುಳ್ಳ ಈ ಜಿಲ್ಲೆಯ ಜನಸಂಖೆಯ 180,68,33 (1981). ಆಡಳಿತ ಕೇಂದ್ರ ವಿಸ್ತೀರ್ಣವುಳ್ಳ ಈ ಜಿಲ್ಲೆಯ ದಕ್ಷಿಣಭಾಗದಲ್ಲಿ ದಟ್ಟವಾದ ಅರಣ್ಯವಿದೆ. ಗಂಗಾ ನದಿಯ ಮೆಕ್ಕಲ ಮಣ್ಣಿನ ಮೈದಾನದ ಭಾಗವಾಗಿರುವ ಈ ಜಿಲ್ಲೆಯ ನೈಋತ್ಯ ಅಂಚಿನಲ್ಲಿ ಆ ನದಿಯಿದೆ. ಗಂಗಾನದಿಯ ಉಪನದಿಗಳಲ್ಲೊಂದಾದ ಸಾಯಿ ಈ ಜಿಲ್ಲೆಯಲ್ಲಿ ಹರಿಯುತ್ತದೆ. ಜಿಲ್ಲೆ ಫಲವತ್ತಾಗಿದೆ. ಒಂದು ಭಾಗ ಅರಣ್ಯಾವೃತ. ಅಲ್ಲಲ್ಲಿ ಚೌಳು ನೆಲವಿದೆ. ಇದು ಪಾಳು ಭೂಮಿ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 965 ಮಿಮೀ. ಬತ್ತ, ಗೋದಿ, ಕಬ್ಬು, ಬೇಳೆಯಕಾಳು, ಬಾರ್ಲಿ ಮುಖ್ಯ ಬೆಳೆಗಳು. ಉಪ್ಪು ಪೆಟ್ಲುಪ್ಪು, ಸುಣ್ಣದ ಹರಳು ಇವು ಇಲ್ಲಿಯ ಖನಿಜೋತ್ಪನ್ನಗಳು. (ಬಿ.ಎ.ಎಸ್.)