ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಾಪಗಢ 2

ವಿಕಿಸೋರ್ಸ್ದಿಂದ

ಪ್ರತಾಪಗಢ 2 -

ರಾಜಸ್ಥಾನ ರಾಜ್ಯದ ಚಿತ್ತೋರಗಢ ಜಿಲ್ಲೆಯ ಒಂದು ಪಟ್ಟಣ. ಉ.ಅ. 24º02' ಮತ್ತು ಪೂ.ರೇ. 74º47' ಮೇಲೆ, ಉದಯಪುರದ ಆಗ್ನೇಯಕ್ಕೆ 121 ಕಿಮೀ. ದೂರದಲ್ಲಿದೆ. ಜನಸಂಖ್ಯೆ 17,402 (1971). ಪ್ರತಾಪಸಿಂಹನಿಂದ 1689ರಲ್ಲಿ ನಿರ್ಮಿತವಾಯಿತು. ಇದು ರಾಜಧಾನಿಯಾಗಿತ್ತು. ಇಲ್ಲಿ ಅರಮನೆಯೂ ಅನೇಕ ಜೈನ ಹಾಗೂ ಹಿಂದೂ ಮಂದಿರಗಳೂ ಇವೆ. ಇದು ವ್ಯವಸಾಯೋತ್ಪನ್ನಗಳ ವ್ಯಾಪಾರಸ್ಥಳ. ರಾಜಸ್ಥಾನ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜಿದೆ. (ಬಿ.ಎ.ಎಸ್.)