ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಕಣ

ವಿಕಿಸೋರ್ಸ್ದಿಂದ

ಪ್ರತಿಕಣ - ಕಣಕ್ಕೆ ಇರುವಷ್ಟೇ ರಾಶಿ. ಆಯುಷ್ಯ, ಗಿರಕಿ (ಸ್ಪಿನ್) ಇದ್ದು ಆವೇಶದ (ಚಾರ್ಜ್) ಮತ್ತು ಕಾಂತ ಭ್ರಮಣಾಂಕದ (ಮ್ಯಾಗ್ನೆಟಿಕ್ ಮೊಮೆಂಟ್) ಚಿಹ್ನೆಗಳು ವಿಪರ್ಯಯವಾಗಿರುವ ಕಣಪ್ರತಿರೂಪ (ಆ್ಯಂಟಿಪಾರ್ಟಿಕಲ್), ಪ್ರೋಟಾನ್, ಪ್ರತಿಪ್ರೋಟಾನ್; ಎಲೆಕ್ಟ್ರಾನ್; ಪಾಸಿಟ್ರಾನ್; ನ್ಯೂಟ್ರಿನೊ, ಪ್ರತಿನ್ಯೂಟ್ರಿನೊ ಇವು ಕಣ-ಪ್ರತಿಕಣ ಯುಗ್ಮಗಳಿಗೆ ನಿದರ್ಶನಗಳು. ಕಣ ಮತ್ತು ಪ್ರತಿಕಣ ಸೇರಿದಾಗ ಅಲ್ಲಿ ಸರ್ವನಾಶ ವಿಕಿರಣ (ಅನ್ಸಿಹಿಲೇಶನ್ ರೇಡಿಯೇಶನ್) ಉತ್ಸರ್ಜಿತವಾಗುವುದು.