ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಚಯನ ವಿಧಾನಗಳು

ವಿಕಿಸೋರ್ಸ್ದಿಂದ

ಪ್ರತಿಚಯನ ವಿಧಾನಗಳು - ಸಮಷ್ಟಿಯ ಅಧ್ಯಯನಕ್ಕಾಗಿ ಅದರಿಂದ ಕೆಲವು ಘಟಕಗಳನ್ನು ಆಯುವ ಬಗೆಗಳು (ಸ್ಯಾಂಪ್ಲಿಂಗ್ ಮೆಥಡ್ಸ್). ಪ್ರತಿಚಯವನ್ನು ಆಯಲು ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಿದೆ.

ಸರಳ ಯಾದೃಚ್ಛಿಕ ಪ್ರತಿಚಯನ (ಸಿಂಪಲ್ ರ್ಯಾಂಡಮ್ ಸ್ಯಾಂಪ್ಲಿಂಗ್): ವಿಭಿನ್ನ ಘಟಕಗಳಿರುವ ಸಾಂತ ಸಮಷ್ಟಿಯಿಂದ ಟಿ ಘಟಕಗಳಿರುವ ಪ್ರತಿಚಯನ ಬೇಕಾಗಿದೆ. ಟಿ ಘಟಕಗಳನ್ನು ಒಂದೊಂದಾಗಿ ಟಿ ಆಯ್ಕೆಗಳಲ್ಲಿ ಆಯುವುದು ಮತ್ತು ಆಯ್ದ ಘಟಕಗಳನ್ನು ಅನಂತರದ ಆಯ್ಕೆಗಳಲ್ಲಿ ಪರಿಗಣಿಸದಿರುವುದು ಅನುಕೂಲ ಮತ್ತು ರೂಢಿ. ಪ್ರತಿ ಆಯ್ಕೆಯಲ್ಲೂ ಘಟಕವೊಂದನ್ನು ಆಯುವುದರ ಸಂಭಾವ್ಯತೆ ಎಲ್ಲ ಘಟಕಗಳಿಗೂ ಒಂದೇ ಇರುವಂತೆ ಆಯುವುದು ಸರಳ ಯಾದೃಚ್ಛಿಕ ಪ್ರತಿಚಯನ. ಅಂದರೆ ಮೊದಲ ಆಯ್ಕೆಯಲ್ಲಿ ಒಂದೊಂದು ಘಟಕಕ್ಕೂ ಅದನ್ನು ಆಯ್ಕೆ ಮಾಡುವ ಸಂಭಾವ್ಯತೆ 1/ಓ. ಎರಡನೆಯ ಆಯ್ಕೆಯ ವೇಳೆ ಸಮಷ್ಟಿಯಲ್ಲಿ ಓ-1 ಘಟಕಗಳಿರುವುದರಿಂದ ಒಂದೊಂದು ಘಟಕಕ್ಕೂ ಅದನ್ನು ಆಯ್ಕೆ ಮಾಡುವ ಸಂಭಾವ್ಯತೆ 1/(ಓ-1) ಇತ್ಯಾದಿ. ಇದರಿಂದಾಗಿ ಯಾವುದಾದರೊಂದು ಘಟಕ ನಾವು ಪಡೆಯುವ ಸರಳ ಯಾದೃಚ್ಛಿಕ ಪ್ರತಿಚಯದಲ್ಲಿ ಸೇರಿರುವ ಸಂಭಾವ್ಯತೆ ಟಿ/ಓ. ಪ್ರತಿಚಯನದ ಒಂದು ಮುಖ್ಯ ಉದ್ದೇಶ ಸಮಷ್ಟಿಯ ಮೊತ್ತ ಅಥವಾ ಸರಾಸರಿಯನ್ನು ಅಂದಾಜು ಮಾಡುವುದು. ಉದಾಹರಣೆಗೆ ಒಂದು ಜಿಲ್ಲೆಯ ಒಟ್ಟು ಜನಸಂಖ್ಯೆ, ಕುಟುಂಬದ ಸರಾಸರಿ ಆದಾಯ ಇತ್ಯಾದಿ. ಸರಳ ಯಾದೃಚ್ಛಿಕ ಪ್ರತಿಚಯದ ಘಟಕಗಳ ಸರಾಸರಿ ಸಮಷ್ಟಿಯ ಸರಾಸರಿಯ ಒಂದು ಅನಭಿನತ (ಅನ್‍ಬಯಸ್ಡ್) ಅಂದಾಜು. ಬಳಸಲೂ ಅರ್ಥವಿಸಲೂ ಸುಲಭವಾದ ಈ ವಿಧಾನ ಮೂಲ ಭೂತವಾದದ್ದು.

ವ್ಯವಸ್ಥಿತ ಪ್ರತಿಚಯನ (ಸಿಸ್ಟಮ್ಯಾಟಿಕ್ ಸ್ಯಾಂಪ್ಲಿಂಗ್): ಸಮಷ್ಟಿಯ ಓ ಘಟಕಗಳಿಗೆ 1 ರಿಂದ ಓ ವರೆಗೆ ಕ್ರಮಸಂಖ್ಯೆಗಳನ್ನು ಕೊಟ್ಟಿದೆಯೆಂದು ಭಾವಿಸೋಣ. ಮೊದಲ ಞ ಘಟಕಗಳಿಂದ ಒಂದನ್ನು ಯಾದೃಚ್ಛಿಕವಾಗಿ ಆಯ್ದು ಅದರ ತರುವಾಯ ಪ್ರತಿ ಏ ನೆ ಘಟಕವನ್ನು ಆಯುವುದು ವ್ಯವಸ್ಥಿತ ಪ್ರತಿಚಯನ. ಉದಾಹರಣೆಗೆ ಞ=5 ಆಗಿದ್ದು ಮೊದಲು ಆಯ್ದ ಸಂಖ್ಯೆ 3 ಆದರೆ ಪ್ರತಿಚಯದ ಘಟಕಗಳ ಕ್ರಮ ಸಂಖ್ಯೆ 3.8,13, . . . . ಇತ್ಯಾದಿ. ಞಯ ಮೌಲ್ಯ ನಮಗೆ ಬೇಕಾಗಿರುವ ಪ್ರತಿಚಯದ ಗಾತ್ರವನ್ನು ಅವಲಂಬಿಸಿದೆ. ಸಮಷ್ಟಿಯಲ್ಲಿ 18 ಘಟಕಗಳಿದ್ದರೆ ಮೊದಲು ಆಯ್ದ ಘಟಕಕ್ಕೆ (ಮೊದಲ ಅಡ್ಡ ಸಾಲಿನ ಸಂಖ್ಯೆ) ಅನುಸಾರವಾಗಿ ಕೆಳಗಿನ ವ್ಯವಸ್ಥಿತ ಪ್ರತಿಚಯಗಳು (ನೀಟಸಾಲು) ದೊರೆಯುತ್ತವೆ: 1 2 3 4 5

6 7 8 9 10

11 12 13 14 15

16 17 18


ವ್ಯವಸ್ಥಿತ ಪ್ರತಿಚಯನದಲ್ಲಿ ಘಟಕಗಳನ್ನು ಆಯುವುದು ಬಲು ಸುಲಭ ಮತ್ತು ಆಯ್ಕೆಯಲ್ಲಿ ತಪ್ಪು ಮಾಡುವ ಸಾಧ್ಯತೆಯೂ ಕಡಿಮೆ. ಓ=ಟಿಞ ಆಗಿರುವಾಗ ಯಾದೃಚ್ಛಿಕವಾಗಿ ಆಯ್ದ ವ್ಯವಸ್ಥಿತ ಪ್ರತಿಚಯದ ಸರಾಸರಿ ಸಮಷ್ಟಿಯ ಸರಾಸರಿಯ ಅನಭಿನತ ಅಂದಾಜು. ಅಸಮ ಸಂಭಾವ್ಯತಾ ಪ್ರತಿಚಯನ (ಅನೀಕ್ವಲ್ ಪ್ರಾಬೆಬಿಲಿಟಿ ಸ್ಯಾಂಪ್ಲಿಂಗ್): ಪ್ರತಿಚಯದ ಆಯ್ಕೆಗಳಲ್ಲಿ ಘಟಕಗಳನ್ನು ಬೇರೆ ಬೇರೆ ಸಂಭಾವ್ಯತೆಗಳೊಡನೆ ಆಯುವುದೇ ಅಸಮ ಸಂಭಾವ್ಯತಾ ಪ್ರತಿಚಯನ. ಇದನ್ನು ಬದಲಾಗುವ ಸಂಭಾವ್ಯತೆಗಳ ಪ್ರತಿಚಯನ ಎಂದೂ ಕರೆಯುವುದಿದೆ. ಈ ಪ್ರತಿಚಯನದಿಂದ ಕೆಲವು ಸಂದರ್ಭಗಳಲ್ಲಿ ಹೆಚ್ಚು ದಕ್ಷ ಅಂದಾಜುಗಳನ್ನು ಪಡೆಯುವುದು ಸಾಧ್ಯ. ಸಾಮಾನ್ಯವಾಗಿ ಬಳಕೆಯಲ್ಲಿರುವ ಅಸಮ ಸಂಭಾವ್ಯತಾ ಪ್ರತಿಚಯನದಲ್ಲಿ ಘಟಕಗಳನ್ನು ಆಯ್ಕೆ ಮಾಡುವ ಸಂಭಾವ್ಯತೆ ಗೊತ್ತಾದ ಒಂದು ಅಳತೆಯ ಮಾನಕ್ಕೆ ಅನುಪಾತೀಯವಾಗಿರುತ್ತದೆ. ಅಳತೆಯ ಮಾನ ಅಧ್ಯಯನಕ್ಕೆ ಒಳಪಟ್ಟ ಚರದ ಮೇಲೆ ನೇರ ಪ್ರಭಾವ ಬೀರುವ ಸಹಾಯಕ ಚರವೊಂದರ ಮೌಲ್ಯವಾಗಿರಬಹುದು. ಒಂದು ಜಿಲ್ಲೆಯ ಬತ್ತದ ಒಟ್ಟು ಫಸಲನ್ನು ಅಂದಾಜು ಮಾಡುವಾಗ ಬತ್ತ ಸಾಗುವಳಿಯಾಗಿರುವ ಭೂಮಿಯನ್ನು ಸಹಾಯಕಚರವೆಂದು ತಿಳಿಯಬಹುದು. ಹಳ್ಳಿಗಳನ್ನು ಘಟಕಗಳೆಂದು ಭಾವಿಸಿದರೆ ಪ್ರತಿಚಯವನ್ನು ಆಯುವಾಗ ಅಸಮ ಸಂಭಾವ್ಯತಾ ಪ್ರತಿಚಯದ ಬತ್ತದ ಸಾಗುವಳಿ ಭೂಮಿ ಹೆಚ್ಚು ಇರುವ ಹಳ್ಳಿಗೆ ಹೆಚ್ಚು ಸಂಭಾವ್ಯತೆ ಕೊಡುವುದು. ಅಸಮ ಸಂಭಾವ್ಯತಾ ಪ್ರತಿಚಯದಿಂದ ಸಮಷ್ಟಿಯ ಮೊತ್ತವನ್ನು (ಜಿಲ್ಲೆಯ ಬತ್ತದ ಒಟ್ಟು ಫಸಲು) ಅನಭಿತವಾಗಿ ಅಂದಾಜು ಮಾಡಬಹುದು. ಹೆಚ್ಚು ಮೌಲ್ಯವಿರುವ ಘಟಕ ಹೆಚ್ಚು ಸಂಭಾವ್ಯತೆಯೊಡನೆ ಆಯ್ಕೆಯಾಗುವುದರಿಂದ ಸಮಷ್ಟಿಯ ಮೊತ್ತವನ್ನು ಅಂದಾಜು ಮಾಡುವಲ್ಲಿ ಅಸಮ ಸಂಭಾವ್ಯತಾ ಪ್ರತಿಚಯನ ಹೆಚ್ಚು ದಕ್ಷ. ಅಧ್ಯಯನಚರ ಮತ್ತು ಸಹಾಯಕಚರಗಳ ನಡುವಿನ ಸಂಬಂಧ ರೇಖೀಯತೆಗೆ ಹತ್ತಿರವಾದಂತೆಲ್ಲ ಅಸಮ ಸಂಭಾವ್ಯತಾ ಪ್ರತಿಚಯದ ದಕ್ಷತೆ ಹೆಚ್ಚಾಗುತ್ತದೆ.

ಈ ಮೇಲಿನ ಮೂರು ವಿಧಾನಗಳು ಮೂಲಭೂತವಾದವು. ಪ್ರತಿಚಯನ ಸರ್ವೇಕ್ಷಣೆಯಲ್ಲಿ ಇವನ್ನು ಒಂದೊಂದು ರೂಪದಲ್ಲಿ ಬಳಸಲಾಗುವುದು. ಸಾಮಾನ್ಯವಾಗಿ ಬಳಕೆಯಲ್ಲಿರುವ ಮೂರು ರೂಪಗಳು ಈ ಮುಂದಿನವು. 1. ಸ್ತರೀಕೃತ ಯಾದೃಚ್ಛಿಕ ಪ್ರತಿಚಯನ (ಸ್ಟ್ರಾಟಿಫೈಡ್ ರ್ಯಾಂಡಮ್ ಸ್ಯಾಂಪ್ಲಿಂಗ್): ಸಮಷ್ಟಿಯನ್ನು ಓ1, ಓ2, . . . . . . . . . . . . , ಓಐ ಘಟಕಗಳಿರುವ ಐ ಉಪಸಮಷ್ಟಿಗಳಾಗಿ ವಿಭಾಗಿಸಿ ಪ್ರತಿಯೊಂದರಿಂದಲೂ ಒಂದೊಂದು ಸರಳ ಯಾದೃಚ್ಛಿಕ ಪ್ರತಿಚಯವನ್ನು ಅಯುವುದು ಸ್ತರೀಕೃತ ಯಾದೃಚ್ಛಿಕ ಪ್ರತಿಚಯನ. ಉಪಸಮಷ್ಟಿಗೆ ಸ್ತರ ಎಂದು ಹೆಸರು. ಹೀಗೆ ಸಮಷ್ಟಿಯನ್ನು ಸ್ತರೀಕರಿಸಲು ಕೆಲವು ಕಾರಣಗಳಿವೆ:

(ಚಿ) ಸಮಷ್ಟಿಯ ಕೆಲವು ಭಾಗಗಳ ಬಗೆಗೆ ಗೊತ್ತುಪಡಿಸಿದ ನಿಖರತೆಯುಳ್ಳ ಮಾಹಿತಿ ಬೇಕಾಗಿದ್ದಲ್ಲಿ ಆ ಭಾಗಗಳನ್ನು ಪ್ರತ್ಯೇಕ ಸಮಷ್ಟಿಗಳಾಗಿ ಪರಿಗಣಿಸಬೇಕಾಗಬಹುದು.

(b) ಸಮಷ್ಟಿಯ ವಿವಿಧ ಭಾಗಗಳಲ್ಲಿ ಪ್ರತಿಚಯನ ನಡೆಸುವಾಗ ಎದುರಾಗುವ ಸಮಸ್ಯೆಗಳಿಗೆ ತಕ್ಕಂತೆ ಅದನ್ನು ವಿಭಾಗಿಸಬೇಕಾಗಬಹುದು.

(ಛಿ) ಸಮಷ್ಟಿ ವಿಷಮಜಾತೀಯ (ಹೆಟರೊಜಿನಸ್) ಆಗಿದ್ದು ಸಜಾತೀಯ (ಹೊಮೊಜಿನಸ್) ಸ್ತರಗಳಾಗಿ ವಿಭಾಗಿಸಲು ಬರುವಂತಿದ್ದರೆ ಸಮಷ್ಟಿಯ ಸರಾಸರಿ ಮತ್ತು ಇತರ ಲಕ್ಷಣಗಳನ್ನು ಹೆಚ್ಚು ನಿಷ್ಕøಷ್ಟವಾಗಿ ಅಂದಾಜು ಮಾಡಬಹುದು. (ಜ) ಕಾರ್ಯನಿರ್ವಹಣೆಯಲ್ಲಿ ಅನುಕೂಲತೆ. ಸ್ತರೀಕೃತ ಯಾದೃಚ್ಛಿಕ ಪ್ರತಿಚಯನದಿಂದಲೂ ಸಮಷ್ಟಿಯ ಸರಾಸರಿಯನ್ನು ಅನಭಿನತವಾಗಿ ಅಂದಾಜು ಮಾಡಬಹುದು.

ಪ್ರತಿಚಯಗಳಿಂದ ಪಡೆದ ಅಂದಾಜುಗಳನ್ನು ತುಲನೆಮಾಡಲು ಅವುಗಳ ಚಲನೀಯಗಳನ್ನು ಹೋಲಿಸುತ್ತೇವೆ. ಕಡಿಮೆ ಚಲನೀಯವಿರುವ ಅಂದಾಜು ಹೆಚ್ಚು ನಿಷ್ಕಷ್ಟ. ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಪ್ರತಿಚಯ ಘಟಕಗಳನ್ನು ಹಂಚುವುದರ ಮೂಲಕ ಸ್ತರೀಕೃತ ಯಾದೃಚ್ಛಿಕ ಪ್ರತಿಚಯನದಿಂದ ಪಡೆದ ಅಂದಾಜು ಸರಳ ಯಾದೃಚ್ಛಿಕ ಪ್ರತಿಚಯನದಿಂದ ಪಡೆದ ಅಂದಾಜಿಗಿಂತ ಹೆಚ್ಚು ನಿಷ್ಕøಷ್ಟವಿರುವಂತೆ ಮಾಡಲು ಸಾಧ್ಯ. ಅಲ್ಲದೆ ಅಂದಾಜಿನ ನಿಷ್ಕøಷ್ಟತೆಯನ್ನು ನಿಗದಿಪಡಿಸಿ ಪ್ರತಿಚಯನಾಧ್ಯಯನಕ್ಕೆ ತಗಲುವ ವೆಚ್ಚ ಕನಿಷ್ಠತಮವಿರುವಂತೆಯೂ ಹಂಚಬಹುದು.

ಒಂದು ರೀತಿಯಲ್ಲಿ ವ್ಯವಸ್ಥಿತ ಪ್ರತಿಚಯನ ಸಮಷ್ಟಿಯನ್ನು ಹಲವು ಸ್ತರಗಳಾಗಿ ವಿಭಾಗಿಸುತ್ತದೆ (ಪ್ರತಿಯೊಂದು ಅಡ್ಡಸಾಲು ಒಂದು ಸ್ತರ). ಪ್ರತಿಯೊಂದು ಸ್ತರದಿಂದ ಘಟಕವನ್ನು ಆಯುವ ಸ್ತರೀಕೃತ ಯಾದೃಚ್ಛಿಕ ಪ್ರತಿಚಯನ ವ್ಯವಸ್ಥಿತ ಪ್ರತಿಚಯನದಷ್ಟೆ ನಿಖರವೆಂದು ನಿರೀಕ್ಷಿಸಬಹುದು. ವ್ಯತ್ಯಾಸವೆಂದರೆ ಸ್ತರೀಕೃತ ಯಾದೃಚ್ಛಿಕ ಪ್ರತಿಚಯನದಲ್ಲಿ ಪ್ರತಿ ಸ್ತರದಿಂದಲೂ ಘಟಕವನ್ನು ಯಾದೃಚ್ಛಿಕವಾಗಿ ಆಯ್ದರೆ ವ್ಯವಸ್ಥಿತ ಪ್ರತಿಚಯನದಲ್ಲಿ ಮೊದಲ ಘಟಕವನ್ನು ಮಾತ್ರ ಯಾದೃಚ್ಛಿಕವಾಗಿ ಆಯ್ದು ಉಳಿದವನ್ನು ಅದಕ್ಕೆ ಅನುಸಾರವಾಗಿ ಆಯುತ್ತೇವೆ. ಎರಡೂ ಪ್ರತಿಚಯನಗಳಲ್ಲಿಯ ಘಟಕಗಳ ಚದರಿಕೆಯನ್ನು ಮುಂದಿನ ಚಿತ್ರ ತಿಳಿಸುತ್ತದೆ.

ಚಿತ್ರ-1

2. ಗುಚ್ಛ ಪ್ರತಿಚಯನ (ಕ್ಲಸ್ಟರ್ ಸ್ಯಾಂಪ್ಲಿಂಗ್): ಸಮಷ್ಟಿಯ ಘಟಕಗಳನ್ನು ಮಾಹಿತಿಯ ಸಂಗ್ರಹಣೆಗೆ ಅನುಕೂಲವಾಗುವಂತೆ ಕೆಲವು ಗುಚ್ಚಗಳಾಗಿ ಒಂದುಗೂಡಿಸಿ ಅವುಗಳಲ್ಲಿ ಕೆಲವನ್ನು ಮೂಲಭೂತ ಪ್ರತಿಚಯನವಿಧಾನದಿಂದ ಆಯ್ದು ಗುಚ್ಛಗಳಲ್ಲಿಯ ಎಲ್ಲ ಘಟಕಗಳನ್ನು ಅಧ್ಯಯಿಸುವುದೇ ಗುಚ್ಛ ಪ್ರತಿಚಯನ, ನಗರದ ವಿವಿಧ ಭಾಗಗಳಿಂದ ಕುಟುಂಬಗಳನ್ನು ಆಯ್ದು ಮಾಹಿತಿ ಸಂಗ್ರಹಿಸುವುದಕ್ಕಿಂತ ಹತ್ತಿರ ಹತ್ತಿರ ಇರುವ ಕುಟುಂಬಗಳನ್ನು ಸೇರಿಸಿ ಗುಚ್ಛಗಳನ್ನು ಮಾಡಿ ಅವುಗಳಿಂದ ಕೆಲವನ್ನು ಆಯ್ದು ಅವುಗಳಲ್ಲಿಯ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸುವುದು ಸುಲಭದ, ಕಡಿಮೆ ವೆಚ್ಚದ ಮತ್ತು ಶೀಘ್ರವಾದ ವಿಧಾನ, ಗುಚ್ಛದಲ್ಲಿ ಸಮಷ್ಟಿಯ ಎಲ್ಲ ತರಹದ ಘಟಕಗಳು (ಉದಾಹರಣೆಗೆ ಕೆಳ, ಮಧ್ಯಮ ಮತ್ತು ಉನ್ನತವರ್ಗದ ಕುಟುಂಬಗಳು) ಇರುವಂತೆಯೂ ಗುಚ್ಛಗಳು ಆದಷ್ಟು ಏಕರೂಪ ಇರುವಂತೆಯೂ ಸಮಷ್ಟಿಯನ್ನು ವಿಭಾಗಿಸಬೇಕು. ಸರಳ ಪ್ರತಿಚಯದ ಘಟಕಗಳನ್ನು ಸಮಷ್ಟಿಯಿಂದ ನೇರವಾಗಿ ಮತ್ತು ಬಿಡಿಯಾಗಿ ಆಯುವ ಪ್ರತಿಚಯನ ವಿಧಾನವಷ್ಟು ದಕ್ಷವಲ್ಲ.

3. ಬಹುಹಂತಗಳ ಪ್ರತಿಚಯನ: ಸಮಷ್ಟಿಯನ್ನು ಗುಚ್ಛಗಳಾಗಿ ವಿಭಾಗಿಸಿ ಮೊದಲ ಹಂತದಲ್ಲಿ ಕೆಲವು ಸಮುದಾಯಗಳನ್ನು ಆಯುವುದು ಮತ್ತು ಎರಡನೆಯ ಹಂತದಲ್ಲಿ ಹೀಗೆ ಆಯ್ದ ಸಮುದಾಯಗಳಿಂದ ಪ್ರತಿಚಯಗಳನ್ನು ಆಯುವುದು ಎರಡು ಹಂತಗಳ ಪ್ರತಿಚಯನ. ಸಮುದಾಯಗಳು ಮೊದಲಹಂತದ ಘಟಕಗಳಾದರೆ ಅವುಗಳಿಂದ ಆಯ್ದ ಘಟಕಗಳು ಎರಡನೆಯ ಹಂತದ ಘಟಕಗಳು. ಈ ವಿಧಾನ ಸರಳ ಪ್ರತಿಚಯನಕ್ಕಿಂತ ಹೆಚ್ಚು ದಕ್ಷವಾಗಿದ್ದು ಸಮಷ್ಟಿಯಿಂದ ನೇರವಾಗಿ ಘಟಕಗಳನ್ನು ಆಯುವ ಪ್ರತಿಚಯಕ್ಕಿಂತ ಕಡಿಮೆ ವೆಚ್ಚದ್ದು. ಇದನ್ನು ಎರಡಕ್ಕಿಂತ ಹೆಚ್ಚು ಹಂತಗಳಿಗೂ ವಿಸ್ತರಿಸಬಹುದು. ಉದಾಹರಣೆಗೆ, ಕೆಲವು ಜಿಲ್ಲೆಗಳನ್ನೂ ಜಿಲ್ಲೆಗಳಿಂದ ಕೆಲವು ಹಳ್ಳಿಗಳನ್ನೂ ಈ ಹಳ್ಳಿಗಳಿಂದ ಕೆಲವು ಕುಟುಂಬಗಳನ್ನೂ ಆಯುವುದು.

ಇಲ್ಲಿಯವರೆಗೆ ವಿವರಿಸಿದ ವಿಧಾನಗಳು ಯಾದೃಚ್ಛಿಕ. ಘಟಕಗಳನ್ನು ಮೊದಲೇ ನಿಗದಿ ಪಡಿಸಿದ ಸಂಭಾವ್ಯತೆಗಳೊಡನೆ ಆಯ್ಕೆ ಮಾಡಲಾಗುತ್ತದೆ. ವ್ಯಕ್ತಿಯೊಬ್ಬ ಸಮಷ್ಟಿಯನ್ನು ಕುರಿತ ತನ್ನ ತಿಳಿವಳಿಕೆಯಿಂದ ಘಟಕಗಳನ್ನು ಆಯುವುದು ಉದ್ದೇಶಪೂರಿತ ಪ್ರತಿಚಯನ. ಇದು ಯಾದೃಚ್ಛಿಕವಲ್ಲ. ಕೆಲವು ಸಲ ಇದು ಉತ್ತಮ ಫಲಿತಾಂಶಗಳನ್ನು ನೀಡುವುದಾದರೂ ಘಟಕಗಳ ಆಯ್ಕೆ ವ್ಯಕ್ತಿಯ ತಿಳಿವಳಿಕೆಯನ್ನು ಅವಲಂಬಿಸಿರುವುದರಿಂದ ಈ ವಿಧಾನದ ಶಾಸ್ತ್ರೀಯ ಬೆಳೆವಣಿಗೆ ಮತ್ತು ಇದರಿಂದ ಪಡೆಯಬಹುದಾದ ಅಂದಾಜುಗಳ ನಿಷ್ಕರ್ಷತೆಯ ಮಾಪನ ಸಾಧ್ಯವಿಲ್ಲ. ಘಟಕಗಳನ್ನು ಯಾದೃಚ್ಚಿಕವಾಗಿ ಆಯಲು ಯಾದೃಚ್ಚಿಕ ಸಂಖ್ಯೆಗಳ ಕೋಷ್ಟಕಗಳನ್ನು ಬಳಸಬಹುದು. (ಎಸ್.ಎಂ.ಎಂ.ಎ.)