ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿವಿಷ

ವಿಕಿಸೋರ್ಸ್ದಿಂದ

ಪ್ರತಿವಿಷ - ವಿಷಗಳ ಹಾನಿತಟ್ಟದಂತೆ ಶರೀರವನ್ನು ರಕ್ಷಿಸಲು ಸಹಾಯಕವಾಗಬಲ್ಲ ಔಷಧಿ (ಅ್ಯಂಟಿಡೋಟ್), ಆಧುನಿಕವೈದ್ಯ ಚಿಕಿತ್ಸಾಕ್ರಮದಲ್ಲಿ ಹೆಚ್ಚಿನ ಔಷಧಿ ಪ್ರಯೋಗದಿಂದಲೇ ಆಗಲಿ ಇನ್ನಾವ ರೀತಿಯಲ್ಲೇ ಆಗಲಿ ವಿಷಸ್ಥಿತಿ ಉಂಟಾದರೆ ಆಗ ಪ್ರತಿವಿಷದ ಪ್ರಯೋಗದಿಂದ ಆ ಸ್ಥಿತಿಯನ್ನು ತಹಬಂದಿಗೆ ತರುವುದುಂಟು. ಆಮ್ಲ ಸೇವನೆಯಿಂದ ವಿಷಸ್ಥಿತಿ ಉಂಟಾದರೆ ಅದನ್ನು ತಹಬಂದಿಗೆ ತರಲು ಸಹ ಪ್ರತಿ ವಿಷಯವನ್ನು ಕೊಡುವುದುಂಟು. ಆಕಸ್ಮಿಕವಾಗಿಯಾಗಲಿ, ಇತರ ಕಾರಣದಿಂದಾಗಲಿ ಪ್ರತಿವಿಷವನ್ನು ಕೊಡುವುದುಂಟು. ಆಕಸ್ಮಿಕವಾಗಿ ಆಗಲಿ ಇತರ ಕಾರಣದಿಂದಾಗಲಿ ವಿಷಪಾನ ಮಾಡಿ ನರಳುತ್ತಿರುವವರಿಗೆ ಆ ಬಾಧೆಯ ನಿವಾರಣೆಗಾಗಿ ಈ ಗುಂಪಿನ ಔಷಧಿಗಳನ್ನು ಕೊಡುತ್ತಾರೆ. ಸಾಧಾರಣವಾಗಿ ಮನೆಗಳಲ್ಲಿ ಕ್ರಿಮಿನಾಶಗೊಳಿಸಲು ಉಪಯೋಗಿಸುವ ತಿಗಣೆ ಔಷಧಿ, ಜಿರಳೆಗಳ ನಾಶಕ್ಕಾಗಿ ಉಪಯೋಗಿಸುವ ಔಷಧಿ ಮುಂತಾದವುಗಳ ಆಕಸ್ಮಿಕ ಸೇವನೆಯಿಂದಾಗಲಿ ಅಪೀಮು, ಮಾರ್ಫಿಯಾ ಸೇವನೆಯಿಂದಾಗಲಿ ಜೀವಕ್ಕೆ ಅಪಾಯ ಸ್ಥಿತಿ ಒದಗಿದಾಗ ಇವಕ್ಕೆ ಯುಕ್ತ ಪ್ರತಿವಿಷ ಮುಂತಾದವುಗಳ ಪ್ರಯೋಗದಿಂದ ಜೀವವನ್ನು ಉಳಿಸಬಹುದು. (ಎಂ.ಎನ್.ಎನ್.)