ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತ್ಯಾಯಕ ಮುತಾಲಿಕ

ವಿಕಿಸೋರ್ಸ್ದಿಂದ

ಪ್ರತ್ಯಾಯಕ ಮುತಾಲಿಕ - ಒಂದು ಸ್ಥಳದ ವರ್ತಕ ತನ್ನ ಸರಕನ್ನು ಮತ್ತೊಂದು ಸ್ಥಳದಲ್ಲಿರುವ ತನ್ನ ಮುತಾಲಕನಿಗೆ ಬಿಕರಿಗಾಗಿ ರವಾನಿಸುತ್ತಾನೆ. ಆ ಮುತಾಲಿಕ ಸರಕನ್ನು ಆ ವರ್ತಕನ ಪರವಾಗಿ ಬಿಕರಿ ಮಾಡುತ್ತಾನೆ. ಬಿಕರಿಯಾದ ಸರಕಿನ ಬೆಲೆಯ ಮೇಲೆ ಮುತಾಲಿಕನಿಗೆ ತರಗು (ಕಮಿಷನ್) ದೊರಕುತ್ತದೆ. ತಾನು ಮಾಡಿದ ಖರ್ಚು, ತನಗೆ ಬರಬೇಕಾದ ತರಗು ಇವನ್ನು ಕಳೆದು ಉಳಿದ ಮೊಬಲಗನ್ನು ವರ್ತಕನಿಗೆ ಮುತಾಲಿಕ ಕಳುಹಿಸುತ್ತಾನೆ. ರವಾನೆ ಮಾಡಲಾದ ಸರಕನ್ನು ಉದರಿಯ ಮೇಲೂಬಿಕರಿ ಮಾಡಲೂ ಮುತಾಲಿಕನಿಗೆ ಅಧಿಕಾರ ಕೊಟ್ಟಿರುವುದುಂಟು. ಈ ಹಣ ವಸೂಲಾಗದೆ ವರ್ತಕನಿಗೆ ನಷ್ಟವಾಗುವ ಸಂಭಾವ್ಯತೆಯುಂಟು. ಮುತಾಲಿಕ ಉದರಿ ಬಿಕರಿಯ ಮೊಬಲಗಿನ ಪಾವತಿಯ ಭರವಸೆ ನೀಡುವುದುಂಟು. ಈ ಪ್ರತ್ಯಯಕ್ಕಾಗಿ ಮುತಾಲಿಕನಿಗೆ ಹೆಚ್ಚಿನ ತರಗು ನೀಡಲು ವರ್ತಕ ಒಪ್ಪುತ್ತಾನೆ. ಈ ಹೆಚ್ಚಿನ ತರಗನ್ನು ಪ್ರತ್ಯಾಯಕ ತರಗು ಎಂದು ಕರೆಯಲಾಗುತ್ತದೆ. ಇಂಥ ಮುತಾಲಿಕನನ್ನು ಪ್ರತ್ಯಾಯಕ ಮುತಾಲಿಕ ಒಂದು ಕರೆಯುತ್ತಾರೆ. (ಕೆ.ಜಿ.ಆರ್.)