ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೈಸ್, ಚಾಲ್ರ್ಸ್‌ ಕಾರ್ಪೆಂಟರ್

ವಿಕಿಸೋರ್ಸ್ದಿಂದ

ಫ್ರೈಸ್, ಚಾಲ್ರ್ಸ್ ಕಾರ್ಪೆಂಟರ್ ಮಿಷಿಗನ್ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ (ಇಮೆರಿಟಸ್ ಪ್ರಾಧ್ಯಾಪಕ) ಮತ್ತು ಭಾಷಾವಿಜ್ಞಾನ ಕೋವಿದ. ಬಕ್ನೆಲ್ ವಿಶ್ವವಿದ್ಯಾಲಯದಿಂದ ಎ.ಬಿ. ಪದವಿ ಮಿಷಗನ್ ವಿಶ್ವ ವಿದ್ಯಾಲಯದಿಂದ ಪಿಎಚ್.ಆರ್ ಪದವಿ ಅಲ್ಲದೆ ಷಿಕಾಗೊ ಮತ್ತು ಪ್ರೈಬಗ (ಜರ್ಮನಿ) ವಿಶ್ವವಿದ್ಯಾಲಯಗಳಿಂದ ಸ್ನಾತಕ ಪದವಿ ಪಡೆದಿದ್ದಾರೆ. ಬಕ್‍ನೆಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು.

ಇಂಗ್ಲಿಷ್ ಭಾಷಾ ಬೋಧನೆಗೆ ಸಂಬಂಧಿಸಿದಂತೆ ಫ್ರೈಸ್ ಅವರು ಹಲವಾರು ವಿದೇಶಿ ಸರ್ಕಾರಗಳಲ್ಲಿ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ಹೊರತಂದಿರುವ ನೂತನ ಕೃತಿ ಫೌಂಡೇಷನ್ಸ್ ಫಾರ್ ಇಂಗ್ಲೀಷ್ ಟೀಚಿಂಗ್ ಎಂಬುದು. ಇದೊಂದು ಹೆಸರಾಂತ ಪುಸ್ತಕ, ಫ್ರೈಸ್ ಅವರು ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ ಮತ್ತು ನ್ಯಾಷನಲ್ ಅಧ್ಯಕ್ಷರೂ ಮಾಡರ್ನ್ ಲಾಂಗ್ವೇಜ್ ಅಸೋಸಿಯೇಷನ್ನಿನ ಮೊದಲ ಉಪಾಧ್ಯಕ್ಷರೂ (1958) ಆಗಿದ್ದರು. ಅಲ್ಲದೇ ಇವರು ಅರ್ಲಿ ಮಾಡರ್ನ್ ಇಂಗ್ಲಿಷ್ ಭಾಷಾ ಸಂಸ್ಧೆಯ ಸ್ಧಾಪಕ ಮತ್ತು ನಿರ್ದೇಶಕ.

ಸುಮಾರು ಹದಿನೈದು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳ ಪೈಕಿ ಮುಖ್ಯವಾದವು: ಅಮೆರಿಕನ್ ಇಂಗ್ಲಿಷ್ ಗ್ರಾಮರ್ (1941), ದಿ ಸ್ಟ್ರಕ್ಚರ್ ಆಫ್ ಇಂಗ್ಲಿಷ್ (1952) ಮತ್ತು ಲಿಂಗ್ವಿಸ್ಟಿಕ್ ಅಚಿಡ್ ರೀಡಿಂಗ್ (1963). *