ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ

ವಿಕಿಸೋರ್ಸ್ದಿಂದ

ಬ - ಪ ವರ್ಗದ ಮೂರನೆಯ ಅಕ್ಷರ. ಅಲ್ಪಪ್ರಾಣ ಮೌರ್ಯರ ಕಾಲದ ಬ್ರಾಹ್ಮೀಯಲ್ಲಿ ಇದರ ಆಕಾರ ಚೌಕನಾದ್ದು. ಇದೇ ರೂಪವೆ ಮುಂದುವರಿದರೂ ಮೂಲೆಗಳು ಸ್ವಲ್ಪ ಗುಂಡಗಾಗುತ್ತ ಹೋಗುತ್ತವೆ. ಸುಮಾರು ಐದನೆಯ ಶತಮಾನದಲ್ಲಿ ಎಡಭಾಗದಲ್ಲಿ ರೇಖೆ ಕೊಂಡಿಯಂತಾಗುತ್ತದೆ. ಒಂಬತ್ತನೆಯ ಶತಮಾನದಲ್ಲಿ ಎಡಭಾಗದ ಈ ಕೊಂಡಿ ಬೇರೆಯಾಗಲು ಹವಣಿಸುತ್ತದೆ. ಹನ್ನೊಂದನೆಯ ಶತಮಾನದಲ್ಲಿ ಪೂರ್ಣ ವಿಕಾಸಹೊಂದಿ ಅಕ್ಷರದ ಮೇಲ್ಭಾಗದ ರೇಖೆ ಇಲ್ಲವಾಗಿ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳುತ್ತದೆ. ಇದೇ ರೂಪವೇ ಮುಂದುವರಿಯುತ್ತದೆ. (ಎ.ವಿ.ಎನ್.)