ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಲಾಜಿ

ವಿಕಿಸೋರ್ಸ್ದಿಂದ

ಬಾಲಾಜಿ 1948. ಕರ್ನಾಟಕದ ಬೆಂಗಳೂರಿನ ಪ್ರಮುಖ ವಾಲಿಬಾಲ್ ಆಟಗಾರ. ತಂದೆ ಕೆ. ಮುನಿಹನುಮಯ್ಯ. ಅಣ್ಣ ಕೆ.ಎಂ.ವಿ. ಸ್ವಾಮಿ ರಾಜ್ಯದ ಕ್ರೀಡಾಮಂಡಳಿಯ ವಾಲಿಬಾಲ್ ಶಿಕ್ಷಕರಾಗಿದ್ದರು. ಪ್ರಾರಂಭದಲ್ಲಿ ಬಾಲಾಜಿಗೆ ಅಣ್ಣನದೇ ತರಬೇತಿ. 1963ರಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಷಿಪ್ ಪಂದ್ಯದಲ್ಲಿ ಮೈಸೂರು ರಾಜ್ಯದ ಪರವಾಗಿ ಆಡಿದರು. 1968ರಲ್ಲಿ ರಷ್ಯಾದ ವಾಲಿಬಾಲ್ ತಂಡವೊಂದು ಭಾರತಕ್ಕೆ ಬಂದಾಗ ಅದನ್ನು ಎದುರಿಸುವ ತಂಡದ ಆಟಗಾರರಲ್ಲಿ ಒಬ್ಬರಾಗಿ ಬಾಲಾಜಿ ಆಯ್ಕೆಯಾದರು. ವೇಗದ ಹೊಡೆತ, ಬಿರುಸಾದ ಸರ್ವೀಸ್ ಮತ್ತು ತಪ್ಪಿಲ್ಲದ ರಕ್ಷಣೆಯ ಆಟ ಇವರ ವೈಶಿಷ್ಟ್ಯ. ಇವರ ಅಣ್ಣತಮ್ಮಂದಿರೂ ನಿಪುಣ ಆಟಗಾರರಾಗಿದ್ದಾರೆ. ಬೆಂಗಳೂರಿನ ಟೆಲಿಫೋನ್ ಕಾರ್ಖಾನೆಯಲ್ಲಿ ನೌಕರಿ ಹಿಡಿದ ಇವರು ಆ ತಂಡದ ಅತ್ಯುತ್ತಮ ಆಟಗಾರರೂ ಕೂಡ. (ಎಚ್.ಜಿ.ಎ.)