ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಹ್ಟ್ರೂಲಿನ್

ವಿಕಿಸೋರ್ಸ್ದಿಂದ

ಬಾಹ್ಟ್ರೂಲಿನ್ - (ಹಿರಿಯ) ಕೌಸ್ಪರ್ (1585-1629), ಇವನ ಗಂಡು ಮಕ್ಕಳು ತಾಮಸ್ (1616-80) ಮತ್ತು ಇರ್ಯಾಸ್ಮಸ್ (1625-98), ಮತ್ತು ತಾಮಸನ ಮಗ (ಕಿರಿಯ) ಕ್ಯಾಸ್ಪರ್ (1655-1738) ಎಂಬ ನಾಲ್ವರು ವಿಖ್ಯಾತ ಡೇನಿಶ್ ವಿಜ್ಞಾನಿಗಳ ಕುಟುಂಬನಾಮ.

(ಹಿರಿಯ) ಕ್ಯಾಸ್ಪರ್ ಬಾಹ್ಟ್ರೂಲಿನ್ ಸ್ವೀಡನ್ನಿನ ಮಾಲ್ಮೋ ಎಂಬಲ್ಲಿ ಜನಿಸಿದ. ಗ್ರೀಕ್, ತತ್ತ್ವಜ್ಞಾನ ಮತ್ತು ಅಂಗರಚನವಿಜ್ಞಾನ ಅಭ್ಯಾಸಮಾಡಿದ್ದ ಈತ ವೈದ್ಯವಿಜ್ಞಾನÀ ಅಧ್ಯಾಪಕನಾಗಿದ್ದು ಅನಂತರ ವೃತ್ತೀಯ ವಿಷಯಗಳ ಅಧ್ಯಾಪಕನಾದ, ಈತನ ಎರಡನೆಯ ಮಗ ತಾಮಸ್ ಬಾಹ್ಟ್ರೂಲಿನ್ ಮಾನವ ದೇಹದ ದುಗ್ಧಗ್ರಂಥಿಗಳ ಹಾಗೂ ದುಗ್ಧನಾಳಗಳ ಪೂರ್ಣವಿವರಣೆಯನ್ನು ಕೊಟ್ಟ ಧೀಮಂತ. ವಿಲಿಯಮ್ ಹಾರ್ವೆ (1578-1657) ವರ್ಣಿಸಿದ್ದ ರಕ್ತ ಪರಿಚಲನ ಕ್ರಮಕ್ಕೆ ಬೆಂಬಲಕೊಟ್ಟು ಈತ ಬರೆದ. ಕ್ಯೌಸ್ಪರನ ಇನ್ನೊಬ್ಬ ಮಗ ಇರ್ಯಾಸ್ಮಸ್ ಬಾಹ್ಟ್ರೂಲಿನ್ ಹಿಮಹರಳುಗಳ ವೀಕ್ಷಣೆಗೂ ದ್ವಿವಕ್ರೀಭವನದ ಆವಿಷ್ಕಾರಕ್ಕೂ ಪ್ರಖ್ಯಾತ. (ಕಿರಿಯ) ಕ್ಯಾಸ್ಪರ್ ವೈದ್ಯವಿಜ್ಞಾನದಲ್ಲಿ ದೊಡ್ಡ ಹೆಸರು. ಈತ ಹಾಲೆಂಡಿನಲ್ಲಿ ಅಂಗರಚನ ವಿಜ್ಞಾನ ಅಭ್ಯಸಿಸಿದ. ಹೆಂಗಸಿನ ದೇಹದಲ್ಲಿ ಯೋನಿಯ ಎರಡೂ ಬದಿಗಳಲ್ಲಿರುವ ಗ್ರ್ರಂಥಿಗಳನ್ನು ಶೋಧಿಸಿದವನೀತ. ಆದ್ದರಿಂದ ಅವಕ್ಕೆ ಬಾಹ್ಟ್ರೂಲಿನ್ ಗ್ರಂಥಿಗಳೆಂಬ ಹೆಸರು ಬಂದಿದೆ. ಹೆಣ್ಣು ಲೈಂಗಿಕ ಉದ್ರೇಕಕ್ಕೆ ಒಳಗಾದಾಗ ಈ ಗ್ರ್ರಂಥಿಗಳು ಸ್ರವಿಸಿ ಯೋನಿ ಮಾರ್ಗವನ್ನು ಮೃದುಗೊಳಿಸುತ್ತವೆ ಎಂಬುದನ್ನು ಈತ ಪತ್ತೆ ಹಚ್ಚಿದ, ನಾಲಗೆಯ ತಳದಲ್ಲಿರುವ ಜೊಲ್ಲುಗ್ರಂಥಿಯೊಂದರ ನಾಳಕ್ಕೂ ಬಾಹ್ಟ್ರೂಲಿನ್ ನಾಳ ಎಂಬ ಹೆಸರಿದೆ. ಜೀವನದ ಸಂಧ್ಯೆಯನ್ನು ಈತ ರಾಜಕೀಯದಲ್ಲಿ ಕಳೆದ. (ಎ.ಎನ್.)