ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇಡ್
ಗೋಚರ
ಬೇಡ್ 673-735. ಸಂತ. ಅಂಟ್ಲೊ-ಸ್ಯಾಕ್ಸನ್ ವಿದ್ವಾಂಸ, ಇತಿಹಾಸಕಾರ ಹಾಗೂ ವೇದಾಂತಿ. ಒಂಬತ್ತನೆಯ ಶತಮಾನದಿಂದ ಪೂಜ್ಯ ಎಂದು ಕರಸಿಕೊಂಡವ. ವಾರ್‍ಮತ್ ಮತ್ತು ಜಾರೋಗಳಲ್ಲಿ ಪಾದ್ರಿಯಗಿದ್ದ. ಅಲ್ಲಿಯ ಐರಿಷ್ ಸಂನ್ಯಾಸಿಗಳ ಶಿಷ್ಯನಾಗಿದ್ದು, ಅವರ ಸರಳತೆ ಮತ್ತು ಶ್ರದ್ಧೆಗಳಿಂದ ಪ್ರಭಾವಿತನಾದ. ಕೆಲ್ಟ್ ಪ್ರಭಾವವೂ ಇವನ ಮೇಲೆ ಗಮನಾರ್ಹವಾಗಿತ್ತು. ಲ್ಯಾಟಿನ್‍ನಲ್ಲಿ ಈತ ಬರೆದ ಇಂಗ್ಲೀಷ್ ಜನಾಂಗದ ಧಾರ್ಮಿಕ ಚರಿತ್ರೆ (731) ಮುಖ್ಯವಾದ ಕೃತಿ. ನಿಷ್ಕøಷ್ಟತೆಯ ದೃಷ್ಟಿಯಿಂದ ಮಧ್ಯಯುಗದ ಅದ್ವಿತೀಯ ಕೃತಿ ಇದು. ಇದರಲ್ಲಿ ಹೃದಯ ಸ್ಪರ್ಶಿಯಾದ ಭಾಗಗಳಿವೆ. ರೋಮ್ ಮತ್ತು ಐರ್ಲೆಂಡಿನ ಚರ್ಚ್‍ಗಳ ಹೋರಾಟವನ್ನೂ ರೋಮ್‍ನ ಚರ್ಚ್ ವಿಜಯವನ್ನೂ ನಿರೂಪಿಸಲಾಗಿದೆ. ಡನೇಚರ್ ರೇರಮ್‍ನಲ್ಲಿ ಆಗಿನ ಯುಗದಲ್ಲಿ ವಿರಳ. ಕ್ರಿಸ್ತಶಕೆಯಿಂದ ಕಾಲವನ್ನು ಸೂಚಿಸುವ ಮೊದಲನೆಯ ವೃತ್ತಾಂತಕಾರ. ಲ್ಯಾಟಿನ್ ಭಾಷೆಯಲ್ಲಿ ಬರೆದರೂ ನೇರವೂ ಲಲಿತವೂ ಆದ ಶೈಲಿಯನ್ನು ಜನಪ್ರಿಯ ಮಾಡಿದ ಕೀರ್ತಿ ಈತನದು. (ಎಲ್.ಎಸ್.ಎಸ್.)