ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಕ್ಕಸದ ಚಿಕ್ಕಣ್ಣ

ವಿಕಿಸೋರ್ಸ್ದಿಂದ

ಬೊಕ್ಕಸದ ಚಿಕ್ಕಣ್ಣ ಹನ್ನೆರಡನೆಯ ಶತಮಾನದ ಒಬ್ಬ ವಚನಕಾರ, ಬಸವಣ್ಣನವರ ಸಮಕಾಲೀನ. ಈತ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದನೆಂದು ತಿಳಿದುಬರುತ್ತದೆ. ಇವನ ಹತ್ತು ವಚನಗಳು ಪ್ರಕಟವಾಗಿವೆ. ಇವುಗಳಲ್ಲಿ ನಾಲ್ಕು ಬೆಡಗಿನ ವಚನಗಳಿದ್ದು ಇವಕ್ಕೆ ಟೀಕು ಬರೆಯಲ್ಪಟ್ಟಿದೆ. ಬಸವಣ್ಣ ಪ್ರಿಯನಾಗರೇಶ್ವರಲಿಂಗ ಎಂಬುದು ಇವನ ವಚನಗಳ ಅಂಕಿತ. ಈತ ತನ್ನ ವಚನ ಹೀಗಿದೆ. ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾಭರಣದ ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯ ಆತ್ಮನಬೆಂಬಳಿಯನರಿಯಬೇಕು. ಎಂಟು ರತ್ನದ ಕಾಂತಿ ಜೀವ ರತ್ನದ ಕಳೆ ಭಾವಿಸಿ ಏಕವಮಾಡಿ ನಡವುದು; ನೀವು ಕೊಟ್ಟ ಕಾಯಕ ತನುವಿಗೆಕ್ರೀ ಆತ್ಮಂಗರಿವು; ಆ ಅಣುವಿಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ. (ಎನ್.ಬಿ.)