ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಥ, ಲೂಯಿಸ್

ವಿಕಿಸೋರ್ಸ್ದಿಂದ

ಬೋಥ, ಲೂಯಿಸ್ 1862-1919. ದಕ್ಷಿಣ ಆಫ್ರಿಕದ ರಾಜಕಾರಣಿ, ದಕ್ಷ ಆಡಳಿತಗಾರ ಮತ್ತು ಯೋಧ. ನಟಾಲ್‍ನ ಗ್ರೇಟಾನ್ ಎಂಬಲ್ಲಿ ಜನಿಸಿದ. ದಕ್ಷಿಣ ಆಫ್ರಿಕದ ಬೋಯರ್ ಕದನದಲ್ಲಿ ಬೋಯರರ ನಾಯಕನಾಗಿ ಬ್ರಿಟಿಷರ ವಿರುದ್ಧ ಹೋರಾಡಿದ (1900). 1902ರ ಅನಂತರ ಬ್ರಿಟಿಷರೊಡನೆ ಹೊಂದಿಕೊಂಡು ಆಡಳಿತ ನಡೆಸಿದ. ಟ್ರಾನ್ಸ್‍ವಾಲ್‍ನ ಮೊದಲ ಮುಖ್ಯಮಂತ್ರಿ (1907-10). ಅನಂತರ 1910ರಿಂದ 1919ರ ತನಕ ಸಂಯುಕ್ತ ದಕ್ಷಿಣ ಆಫ್ರಿಕದ ಮುಖ್ಯಮಂತ್ರಿಯಾಗಿದ್ದ. ಮೊದಲ ಮಹಾಯುದ್ಧದಲ್ಲಿ ಬ್ರಿಟಿಷರ ಪರ ಕಾಳಗ ನಡೆಸಿ ಜರ್ಮನ್ ಪೂರ್ವ ಆಫ್ರಿಕವನ್ನು ಗೆದ್ದುಕೊಟ್ಟ. ಜಾನ್ ಕ್ರಿಶ್ಚಿಯನ್ ಸ್ಮಟ್ಸ್ ಜೊತೆಗೂಡಿ ವರ್ಸೈಲ್ಸ್ ಶಾಂತಿ ಸಭೆಯಲ್ಲಿ ದಕ್ಷಿಣ ಆಫ್ರಿಕ ಒಕ್ಕೂಟವನ್ನು ಪ್ರತಿನಿಧಿಸಿದ. (ಬಿ.ಎಸ್.ಆರ್.ಆರ್.)