ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಜಿ಼ಲ್

ವಿಕಿಸೋರ್ಸ್ದಿಂದ

ಬ್ರಜಿóಲ್

ದಕ್ಷಿಣ ಅಮೆರಿಕ ಖಂಡದ ಸಂಯುಕ್ತ ಗಣರಾಜ್ಯ. ಪ್ರಪಂಚದ ಐದನೆಯ ದೊಡ್ಡ ರಾಷ್ಟ್ರ. ಇದು ದಕ್ಷಿಣ ಅಮೆರಿಕದ ಸುಮಾರು ಅರ್ಧ ಭಾಗವನ್ನು ಆವರಿಸಿಕೊಂಡಿದೆ. ವಾಯವ್ಯದಲ್ಲಿ ಕೊಲಂಬಿಯ, ಉತ್ತರದಲ್ಲಿ ವೆನಿಜ್ವೇಲ, ಗೀಯಾನ, ಸುರಿನಾಮ್ ಮತ್ತು ಫ್ರೆಂಚ್ ಗೀಯಾನ, ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ, ದಕ್ಷಿಣದಲ್ಲಿ ಉರಗ್ವೇ, ಪಶ್ಚಿಮದಲ್ಲಿ ಆರ್ಜೆಂಟೀನ, ಪರಗ್ವೇ, ಬೊಲಿವೀಯ ಮತ್ತು ಪೆರೂಬ್ರಜಿûಲನ್ನು ಸುತ್ತುವರೆದಿವೆ. ಉತ್ತರ-ದಕ್ಷಿಣವಾಗಿ 4.319 ಕಿಮೀ, ಪೂರ್ವ-ಪಶ್ಚಿಮವಾಗಿ 4328 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 85.11,965 ಚ.ಕಿಮೀ. ಜನಸಂಖ್ಯೆ 124,700,000 (1981). ರಾಜಧಾನಿ ಬ್ರಸಿûಲ್ಯ.

ಮೇಲ್ಮೈಲಕ್ಷಣ : ಬ್ರಜಿûಲಿನ ಬಹುಭಾಗ ಪರ್ವತ, ಪ್ರಸ್ಥಭೂಮಿ ಮತ್ತು ಬೆಟ್ಟಗಳಿಂದ ಕೂಡಿದೆ. ಬ್ರಜಿûಲಿನಲ್ಲಿ ಮೈದಾನ ಬಹಳ ಕಡಿಮೆ. ಅತ್ಯಂತ ದೊಡ್ಡ ಮೈದಾನವೆಂದರೆ ಅಮೆeóÁನ್ ನದಿಯ ಮೇಲ್ದಂಡೆ ಪ್ರದೇಶ. ಬ್ರೆಜಿûಲ್ ಮತ್ತು ಬೊಲಿವೀಯಗಳ ನಡುವೆ ಗಡಿಯಾಗಿ ಹರಿಯುವ ಪರಗ್ವೇ ನದಿಯ ಜಲಾನಯನ ಭೂಮಿಯ ಸ್ವಲ್ಪಭಾಗ ಬ್ರಜಿûಲಿಗೆ ಸೇರಿದೆ. ಅಮೆeóÁನ್ ನದಿಗೆ ಉತ್ತರದಲ್ಲಿರುವ ಗೀಯಾನ ಮಲೆನಾಡು ಹಾಗೂ ಇದೇ ನದಿಯ ದಕ್ಷಿಣದ ಬ್ರಜಿûಲಿಯನ್ ಮಲೆನಾಡು ಬಹುಮಟ್ಟಿಗೆ ಒಂದೇ ಬಗೆಯ ಭೌತಲಕ್ಷಣಗಳನ್ನು ಹೊಂದಿವೆ.

ಅಮೆeóÁನ್ ನದಿಯ ದಕ್ಷಿಣದಲ್ಲಿ ಬ್ರಜಿûಲಿಯನ್ ಪರ್ವತಸೀಮೆ ಹಠಾತ್ತನೆ ತಗ್ಗುತ್ತ ಸಮುದ್ರದತ್ತ ಇಳಿಯುತ್ತದೆ. ಕೆಲವು ಕಡೆ ಭೂಮಿ ಸೋಪಾನಗಳಂತೆ ಇದೆ. ಸಮುದ್ರದ ಅಂಚಿನಲ್ಲಿ, ವಿಶೇಷವಾಗಿ ದಕ್ಷಿಣ ತೀರದಲ್ಲಿ ಅನೇಕ ಕಡೆ ಮರಳಿನ ದಂಡೆಗಳು ಹಾಗೂ ಮರಳಿನ ದಿಬ್ಬಗಳ ನಡುವೆ ನೀರಿನ ಹರವುಗಳಿವೆ. ದಕ್ಷಿಣ ತೀರದಲ್ಲಿ ಮರಳದಂಡೆಗಳು ಲಗೋವ ದೋಸ್ ಪಾತೋಸ್ ಮತ್ತು ಲಗೋವ ಮಿರಿಮ್ ಎಂಬ ಎರಡು ಮಹಾ ಸರೋವರಗಳನ್ನು ಸಮುದ್ರದಿಂದ ಪ್ರತ್ಯೇಕಿಸಿವೆ. ಕೆಲವು ಕಡೆ ಇಳಿಜಾರು ಬಂಡೆಗಳು ನೀರಿನ ಹರವುಗಲನ್ನು ಛೇದಿಸಿಕೊಂಡು ನೇರವಾಗಿ ಸಮುದ್ರಕ್ಕೆ ಚಾಚಿಕೊಂಡಿದೆ. ಸ್ಯಾಂತಸ್ ರೇವಿನ ಭಾಗದಲ್ಲಿ ಇಂಥ ಇಳಿಬಂಡೆಗಳ ಚಾಚುಗಳನ್ನು ಕಾಣಬಹುದು. ಬ್ರಜಿûಲಿಗೆ ಒಟ್ಟು 9.687 ಕಿಮೀ ಉದ್ದದ ಕರಾವಳಿಯಿದೆ. ಇಲ್ಲಿ ಅನೇಕ ಉತ್ತಮ ಬಂದರುಗಳಿವೆ. ಬ್ರಜಿûಲಿನ ಪ್ರಸಿದ್ಧ ರೇವುಪಟ್ಟಣಗಳು ರಿಯೋ ಡೇ ಷನೇರೊ ಮತ್ತು ಸ್ಯಾಲ್ವಡಾರ್, ಅಮೆeóÁನ್ ನದಿಯ ಅಳಿವೆ ಕಡಲ ನೀರಿನಲ್ಲಿ ಮುಳುಗಿ ಆಳವಾಗಿರುವುದರಿಂದ ಒಳನಾಡಿನ ಮನಾವುಸ್‍ವರೆಗೆ ಸಮುದ್ರ ಯಾನದ ಹಡಗುಗಳು ಸಂಚರಿಸುತ್ತವೆ. ಇತರ ಸಾರಿಗೆ ಹಡಗುಗಳು ಒಳನಾಡಿನಲ್ಲಿ ಪೆರೂರಾಜ್ಯದ ಪೂರ್ವಭಾಗದಲ್ಲಿರುವ ಇಕೀಟೋಸಸ್‍ವರೆಗೆ ಅಮೆeóÁನ್ ನದಿಯ ಮೇಲೆ ಸಂಚರಿಸುತ್ತವೆ.

ಬ್ರಜಿûಲಿನ ಮೂರು ಮುಖ್ಯ ನದಿಗಳು ಅಮೆeóÁನ್, ಪ್ಯಾರನಾ ಮತ್ತು ಸೌನ್ ಫ್ರನ್ಸಿಸ್ಕೋ. ಅಮೆಜಾನ್ ನದಿ ಪೆರೂ ರಾಜ್ಯದಲ್ಲಿ ಆಂಡೀಸ್ ಪರ್ವತದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಬ್ರಜಿûಲಿನ ಉತ್ತರ ಭಾಗದಲ್ಲಿ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಅಂಡೀಸ್ ಪರ್ವತದಲ್ಲಿ ಹುಟ್ಟಿ ಕೊಲಂಬಿಯ, ಎಕ್ವಡಾರ್, ಪೆರೂ ಮತ್ತು ಬೊಲಿವೀಯ ರಾಜ್ಯಗಳ ಮೂಲಕ ಹರಿಯುವ ನದಿಗಳೆಲ್ಲ ಅಮೆeóÁನ್ ನದಿಯನ್ನು ಸೇರುತ್ತವೆ. ಅಮೆeóÁನ್ ನದಿಯ ಉಪನದಿಗಳು ದಕ್ಷಿಣದಿಂದ ಹರಿದು ಬರುವ ಟೋಕನ್ ಟೀನ್ಸ್, ಅರಗ್ವೈಯ, ಹೀಂಗೂ, ಟ್ಯಾಪಜೋಸ್ ಮತ್ತು ಮಂದಿರ. ಉತ್ತರದಿಂದ ಹರಿದು ಬಂದು ಅಮೆeóÁನನ್ನು ಸೇರುವ ನದಿಗಳು ನೇಗ್ರೋ, ಟ್ರೋಂಬೇಟಸ್ ಹಾಗೂ ಜರೀ. ಪರಗ್ವೇ ಮತ್ತು ಪಾರನಾ ಇವು ಬ್ರಜಿûಲಿನ ಇನ್ನೆರಡು ಮುಖ್ಯ ನದಿಗಳು. ಇವಕ್ಕೂ ಹಲವು ಉಪನದಿಗಳಿವೆ. ಬ್ರಜಿûಲಿನ ದಕ್ಷಿಣ ಭಾಗದಲ್ಲಿ ಆರ್ಜೆಂಟೀನದ ಗಡಿಯಾಚೆಗೆ ಹರಿಯುವ ನದಿ ಉರಗ್ವೇ.

ಈ ಬೃಹತ್ ನದಿಗಳಲ್ಲದೆ ಅಟ್ಲಾಂಟಿಕ್ ಸಾಗರಕ್ಕೆ ನೇರವಾಗಿ ಬೀಳುವ ಅನೇಕ ಸಣ್ಣ ನದಿಗಳಿವೆ. ಅವುಗಳಲ್ಲಿ ಕೆಲವು ಪಾರ್ನಯೀಬ, ಕೋಂಟಾಸ್, ಜಕೀಟೆನ್ಯೋನ್ಯ ಮತ್ತು ಡೋಸ್ ಪರಯೀಬ ನದಿ ಸಾವು ಪೌಲೂ ರಾಜ್ಯದಲ್ಲಿ ಹುಟ್ಟಿ ಆಗ್ನೇಯಾಭಿಮುಖವಾಗಿ ಹರಿದು ಅನಂತರ ಈಶಾನ್ಯದಿಕ್ಕಿಗೆ ತಿರುಗಿ ಆಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಪೂರ್ವಾಭಿಮುಖವಾಗಿ ಹರಿಯುವ ಇನ್ನೊಂದು ನದಿ ಷಕ್ವೀ ಇದರ ಮೇಲಿರುವ ಪೋರ್ಟೊ ಅಲೆಗ್ರ ಒಳನಾಡಿನ ಒಂದು ಪ್ರಮುಖ ಬಂದರು.

ವಾಯುಗುಣ : ಬ್ರಜಿûಲಿನ ಮಳೆ ಹಾಗೂ ಉಷ್ಣತೆಗಳಲ್ಲಿ ವೈಪರೀತ್ಯಗಳಿಲ್ಲ. ಇದರ ಉತ್ತರ ಭಾಗದಲ್ಲಿ ಸಮಭಾಜಕ ವೃತ್ತ ಹಾದುಹೋಗುತ್ತದೆ. ಆಫ್ರಿಕದ ಇದೇ ನೆರದ ಪ್ರದೇಶದ ಉಷ್ಣತೆಯೊಂದಿಗೆ ಹೋಲಿಸಿದರೆ. ಇಲ್ಲಿಯದು ಅಧಿಕವಲ್ಲ. ನದಿ ಹರಿಯುವ ಕಡೆ ಬೇಸಗೆಯ ಸರಾಸರಿ ಉಷ್ಣತೆ 25(-26(ಅ, ಚಳಿಗಾಲದಲ್ಲಿ 2.6(ಅ, ಬಿಸಿಲಿನ ತಾಪ ಹೆಚ್ಚಾಗಿರುವ ಈಶಾನ್ಯದಲ್ಲಿ ಬೇಸಗೆಯ ಉಷ್ಣತೆ 37.8(ಅ, ಗಿಂತ ಅಧಿಕ. ರಿಯೋ ಡೇ ಷನೆರೋ ಬಳಿ ಬೇಸಗೆಯ ಸರಾಸರಿ ಉಷ್ಣತೆ 27(ಅ, ಚಳಿಗಾಲದಲ್ಲಿ 22(ಅ, ಪರ್ವತ ಸೀಮೆಯಲ್ಲಿ ಸಮುದ್ರದಂಚಿನಲ್ಲಿರುವುದಕ್ಕಿಂತ ಕಡಿಮೆ ಉಷ್ಣತೆಯಿರುತ್ತದೆ.

ಅಮೆಜಾನ್ ನದಿ ಹರಿಯುವ ಮಲೆನಾಡಿನಲ್ಲೂ ಆ ನದಿಯ ಮುಖಜಭೂಮಿ ಹಾಗೂ ಸಾವ್ ಪೌಲೂ ರಾಜ್ಯ ಭಾಗಗಳಲ್ಲೂ ಮಳೆ ಅಧಿಕ. ಬ್ರಜಿûಲಿನ ಈಶಾನ್ಯದಲ್ಲಿ ಮಳೆ ಬಲು ಕಡಿಮೆ. ರಾಜ್ಯದ ಬಹುಭಾಗದಲ್ಲಿ ಸರಾಸರಿ ಮಳೆ 1,000-1500ಮಿಮೀ. ಪಶ್ಚಿಮದಲ್ಲಿ ವಾರ್ಷಿಕ ಮಳೆ 1,000 ಮಿಮೀ.

ಸಸ್ಯ, ಪ್ರಾಣಿ ಜೀವನ : ನದಿಗಳ ವೈಶಿಷ್ಟ್ಯ ವಾಯುಗುಣ ಮತ್ತು ಭೂಗುಣಗಳ ವ್ಯತ್ಯಾಸಗಳಿಂದ ಸಸ್ಯವರ್ಗದಲ್ಲಿ ಭಿನ್ನತೆಯಿದೆ, ಅಮೆeóÁನ್ ನದಿಯ ಪ್ರದೇಶಗಳಲ್ಲಿ ಹಾಗೂ ಮಳೆ ಹೆಚ್ಚಾಗಿರುವ ಅಂಟ್ಲಾಟಿಕ್ ತೀರಭಾಗಗಳಲ್ಲಿ ಸೆಲ್ವ ಎಂಬ ಉಷ್ಣವಲಯೀಯ ಅರಣ್ಯಗಳಿವೆ. ಅಗಲ ಎಲೆಯ ನಿತ್ಯಹಸುರಿನ ವೃಕ್ಷಗಳು ಈ ಅರಣ್ಯಗಳಲ್ಲಿ ಅಧಿಕ. ಸೂರ್ಯಕಿರಣಗಳು ಭೂಮಿಯನ್ನು ಮುಟ್ಟದಷ್ಟು ಮಟ್ಟಿಗೆ ಇಲ್ಲಿ ವೃಕ್ಷಗಳು ಒತ್ತಾಗಿವೆ. ಅಮೆeóÁನ್ ನದೀಮುಖ ಹಾಗೂ ಆ ನದಿ ಪ್ರವಾಹಕ್ಕೆ ಒಳಗಾದ ಇತರ ಪ್ರದೇಶಗಳಲ್ಲಿ ಫಲವತ್ತಾದ ನೆಲವಿದೆ. ಉತ್ತರ ಮಲೆನಾಡು ಹಿಂದೆ ರಬ್ಬರ್ ಗಿಡಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಪ್ರಧಾನವಾಗಿತ್ತು. 1950ರಿಂದ ಈಚೆಗೆ ಇಲ್ಲಿ ಸೆಣಬು ಮತ್ತು ಮೆಣಸನ್ನು ಬೆಳೆಯಲಾಗುತ್ತಿದೆ.

ಮಳೆ ಕಡಿಮೆಯಾಗಿರುವ ಬೇಸಗೆಯಲ್ಲಿ ಉಷ್ಣತೆ ಹೆಚ್ಚಾಗಿರುವ ಭಾಗಗಳ ಅರಣ್ಯಗಳ ಮರಗಳು ಸೆಲ್ವದಕ್ಕಿಂತ ಚಿಕ್ಕವು. ಈ ಕಾಡುಗಳನ್ನು ಕಡಿದು ಭೂಮಿಯನ್ನು ವ್ಯವಸಾಯಕ್ಕೆ ತರುವುದು ಸುಲಭ. ಪೋರ್ಟೊ ಅಲೆಗ್ರ ಪ್ರದೇಶದಲ್ಲಿ ಈ ಬಗೆಯ ಅರಣ್ಯಗಳು ವ್ಯಾಪಕವಾಗಿವೆ.

ಈಶಾನ್ಯದ ಒಳನಾಡಿನಲ್ಲಿ ಕುರುಚಲು ಹಾಗೂ ಜಾಲಿಜಾತಿಯ ಮುಳ್ಳುಗಿಡಗಳ ಕಾಡುಗಳಿವೆ. ಈ ಭಾಗದ ನೆಲೆ ವ್ಯವಸಾಯಕ್ಕೆ ಉಪಯುಕ್ತವಲ್ಲ ಅಮೆeóÁನ್ ಜಲನಯನ ಪ್ರದೇಶದ ದಕ್ಷಿಣ ಹಾಗೂ ಈಶಾನ್ಯ ತೀರದ ಅರಣ್ಯಗಳ ನಡುವೆ ಅರಬೆಂಗಾಡು ಹಾಗೂ ಅರಹುಲ್ಲುಗಾವಲುಗಳಿವೆ. ನದೀತೀರಗಳಲ್ಲಿ ಎಲೆಯುದುರುವ ವೃಕ್ಷಗಳ ಅರಣ್ಯಗಳಿವೆ. ಪರಗ್ವೇ ನದಿಯ ಮೇಲುಭಾಗದಲ್ಲಿ ಎಲೆಯುದುರುವ ವೃಕ್ಷಗಳ ಅರಣ್ಯಗಳಿವೆ. ಪರಗ್ವೇ ನದಿಯ ಮೇಲುಭಾಗದಲ್ಲಿ ಪ್ರತಿವರ್ಷವೂ ಮಳೆಗಾಲದಲ್ಲಿ ನದೀಪ್ರವಾಹದಿಂದ ಮುಳುಗಡೆಯಾಗುವ ಭೂಭಾಗದಲ್ಲಿ ಹುಲ್ಲು ಹಾಗೂ ತಾಳೆ ಜಾತಿಯ ಗಿಡಗಳು ಬೆಳೆಯುತ್ತವೆ. ಬೇಸಗೆಯಲ್ಲಿ ಹುಲ್ಲನ್ನು ಜಾನುವಾರಗಳ ಮೇವಿಗೆ ಉಪಯೋಗಿಸುತ್ತಾರೆ.

ದಕ್ಷಿಣದಲ್ಲಿ ಸಮಶೀತೋಷ್ಣೀಯ ಪ್ರೇರಿ ಹುಲ್ಲುಗಾಡುಗಳಿವೆ. ಇವು ಸೌ ಪೌಲೂ ರಾಜ್ಯದ ಸೋರುಕಾಬ ಪ್ರದೇಶದಿಂದ ಉರಗ್ವೇ ರಾಜ್ಯದ ಕಡೆಸಾಗಿವೆ. ಹಿಮ ಹೆಚ್ಚಾಗಿ ಬೀಳುವ ಉನ್ನತ ಪ್ರದೇಶಗಳಲ್ಲಿ ಎತ್ತರವಾದ ಪೈನ್ ಮರಗಳಿವೆ. ಅವುಗಳಿಂದ ಕೆಳಕ್ಕೆ ಎಲೆಯುದುರುವ ವೃಕ್ಷಗಳ ಶ್ರೇಣಿಯಿದೆ. ಸ್ಯಾಂಟಕ್ಯಾಟಲೇನ ರಾಜ್ಯದಲ್ಲಿ ಪೈನ್ ಮರಗಳನ್ನು ಕಾಗದ ತಯಾರಿಕೆಗೆ ಉಪಯೋಗಿಸುತ್ತಾರೆ. ಪರ್ಣಪಾತಿ ವೃಕ್ಷಗಳಿಂದ ಮರಗೆಲಸಕ್ಕೆ ಯೋಗ್ಯವಾದ ಉತ್ತಮ ದಿಮ್ಮಿಗಳು ಸಿಗುತ್ತವೆ.

ಬ್ರಜಿûಲಿನಲ್ಲಿ ವಿವಿಧ ವನ್ಯಮೃಗಗಳಿವೆ. ಅವುಗಳಲ್ಲಿ ಕೆಲವು ಆಫ್ರಿಕದ ಅರಣ್ಯ ಹಾಗೂ ಸವಾನ ಹುಲ್ಲುಗಾಡಿನ ಪ್ರಾಣಿಗಳನ್ನು ಹೋಲುತ್ತವೆ. ಜಾಗ್ವಾರ್, ಚಿರತೆ, ಟೇಪರ್, ಸ್ಲಾತ್, ಜಿಂಕೆ, ಮೊಲ ಮೊದಲಾದ ಪ್ರಾಣಿಗಳಿವೆ. ಅಮೆeóÁನ್ ನದೀ ಪ್ರದೇಶದಲ್ಲಿ 50 ಬಗೆಯ, ಚಪ್ಪಟೆಮೂಗಿನ ಮಂಗಗಳಿವೆ, ನಾನಾ ಬಣ್ಣಗಳ ಪಕ್ಷಿಗಳಿವೆ. ಅರಣ್ಯಗಳಲ್ಲಿ ದೊಡ್ಡ ಗಾತ್ರದ ಜಿಗಣೆಗಳು ಮತ್ತು ಅನೇಕ ಬಗೆಯ ಕೀಟಗಳು ಇವೆ.

ಜನಜೀವನ

ಜನ : ಬ್ರಜಿûಲಿನಲ್ಲಿ ದಕ್ಷಿಣ ಅಮೆರಿಕದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನಸಂಖ್ಯೆಯಿದೆ. ಜನಸಾಂದ್ರತೆ ಚ. ಕಿಮೀ.ಗೆ ಕೇವಲ 12, ಜನ ದೇಶದ ಎಲ್ಲೆಡೆಯೂ ಸಮವಾಗಿ ಹರಡಿಕೊಂಡಿಲ್ಲ. ಒಳನಾಡಲ್ಲಿ ಜನಸಾಂದ್ರತೆ ತೀರ ಕಡಿಮೆ, ಕರಾವಳಿಯಲ್ಲಿ ಅಧಿಕ.

16ನೆಯ ಶತಮಾನದಲ್ಲಿ ಪೋರ್ಚುಗೀಸ್ ವಲಸೆಗಾರರು ಒಳನಾಡು ಪ್ರವೇಶಿಸಿದಾಗ ಅಲೆಮಾರಿ ಜನರು ಅಲ್ಲಲ್ಲಿ ವಾಸವಾಗಿದ್ದುದನ್ನು ಕಂಡರು. ಇವರು ರೆಡ್ ಇಂಡಿಯನ್ ಬುಡಕಟ್ಟಿನವರು. ಪೋರ್ಚುಗೀಸರು ವಸಾಹತುಗಳನ್ನು ಕಟ್ಟಲು ಪ್ರಾರಂಭಿಸಿದಾಗ ಹಲವು ರೆಡ್ ಇಂಡಿಯನ್ ಬಣಗಳು ಪೋರ್ಚುಗೀಸ್ ದಾಳಿಕಾರರಿಂದ ನಾಶಗೊಂಡವು. ಇವರ ಜನಸಂಖ್ಯೆ ಕ್ಷೀಣಿಸಿತು. ಈಶಾನ್ಯದ ಕರಾವಳಿಯ ವ್ಯವಸಾಯ ಭೂಮಿಗಳಲ್ಲಿ ಕೆಲಸಮಾಡಲು ಇಂಡಿಯನ್ ಜನರನ್ನು ಗುಲಾಮರಾಗಿ ಪರಿವರ್ತಿಸಿಕೊಳ್ಳಲು ಪೋರ್ಚುಗೀಸರಿಗೆ ಸಾಧ್ಯವಾಗಲಿಲ್ಲ. 16-19ನೆ ಶತಮಾನಗಳಲ್ಲಿ ಸುಮಾರು 40,00,000 ನೀಗ್ರೋ ಗುಲಾಮರನ್ನು ಆಫ್ರಿಕದಿಂದ ತಂದು ಇಲ್ಲಿಯ ತೋಟಗಳಲ್ಲಿ ಕೆಲಸ ಮಾಡಲು ನೇಮಿಸಿಕೊಂಡರು.

ಬ್ರಜಿûಲನ್ನು ಕಂಡ ಮೇಲೆ ಸುಮಾರು ಮೂರು ಶತಮಾನಗಳ ತನಕ ಇಲ್ಲಿಗೆ ವಲಸೆ ಬಂದ ಯೂರೋಪಿಯನರು ಪೋರ್ಚುಗೀಸರೇ. ಅವರು ಇಲ್ಲಿ ಚದರಿದಂತೆ ನೆಲಸಿ, ಇಂದಿನ ಬ್ರಜಿûಲಿಯನರ ಮೂಲ ಪುರುಷರಾದರು. 1892ರಲ್ಲಿ ಬ್ರಜಿûಲಿನ ಸ್ವಾತಂತ್ರ್ಯ ಘೋಷಣೆಯಾದ ಮೇಲೆ ಇತರ ದೇಶಗಳಿಂದ ಬಂದ ಜನರೂ ಬ್ರಜಿûಲಿಯನರೊಂದಿಗೆ ಸೇರಿಕೊಂಡರು. ಆದರೆ ಪೋರ್ಚುಗೀಸರು ಸಂಖ್ಯೆಯೇ ಸದಾ ಹೆಚ್ಚಾಗುತ್ತ ಬಂತು. ಇಟಲಿಯಿಂದ ಬಂದ ಜನರು ಸೌ ಪೌಲೂ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿ ಕಾಫಿ ತೋಟಗಳ ಕಾರ್ಮಿಕರಾದರು. ಕೆಲವು ಇಟಾಲಿಯನರು ರೀಯೂ ಗ್ರಾಂಡೀ ದ ಸೂಲ್ ರಾಜ್ಯದಲ್ಲಿ ಭೂಮಾಲೀಕರಾದರು. ಮತ್ತೆ ಕೆಲವರು ದಕ್ಷಿಣದ ನಗರಗಳಲ್ಲಿ ವ್ಯಾಪಾರಸ್ಥರಾದರು. ಜರ್ಮನರು ದಕ್ಷಿಣ ರಾಜ್ಯಗಳಲ್ಲಿ ವ್ಯವಸಾಯಗಾರರಾದರು, ಪೋರ್ಟೊ ಅಲೆಗ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ವೃದ್ಧಿಗೊಳಿಸಿದರು. 1928-35ರ ನಡುವೆ ಜಪಾನೀಯರು, ಸಿರಿಯನರು, ಹಾಗೂ ಲೆಬನೀಸರು ಸೌನ್ ಪೌಲೂ ರಾಜ್ಯ ಹಾಗೂ ಪಾರನಾ ನದಿಯ ಉತ್ತರದ ಪ್ರದೇಶಗಳಲ್ಲಿ ನೆಲೆನಿಂತರು. ಪೂರ್ವ ಯೂರೋಪಿಯನ್ ದೇಶಗಳಿಂದ ಬಂದ ಜನರೂ ಬ್ರಜûಲ್ ಜನರೊಂದಿಗೆ ಮಿಲನಗೊಂಡರು.

ಹೀಗೆ ಬ್ರಜಿûಲಿನಲ್ಲಿ ವಿವಿಧ ಬುಡಕಟ್ಟುಗಳ ಜನ ಹಲವಾರು ಶತಮಾನಗಳಿಂದ ಬೆರೆತುಗೊಂಡಿದ್ದಾರೆ. ಪ್ರಾರಂಭದ ಹಂತಗಳಲ್ಲಿ ಪೋರ್ಚುಗೀಸರು ಬ್ರಜಿûಲ್ ಇಂಡಿಯನ್ ಜನರೊಂದಿಗೆ ಹಾಗೂ ಆಫ್ರಿಕದ ಜನರೊಡನೆ ಬೆರೆತರು. ಈಗ ಈ ರಾಜ್ಯದಲ್ಲಿ ಮಿಶ್ರಗೊಳ್ಳದ ಸ್ಥಳೀಯ ಬುಡಕಟ್ಟುಗಳು ಅಪರೂಪ, ಸಮಾಜದಲ್ಲಿ ಪ್ರಧಾನ ವರ್ಗದವರು ಬಿಳಿಯರು. ಬಹೀಯ, ರಿಯೋ ಡೆ ಷóನೆರೋ, ಮಾರನ್ಯಾವು ಮತ್ತು ಮೀನಸ್ ಷರೈಸ್ ರಾಜಗಳಲ್ಲಿ ಕಪ್ಪುಜನರು ಅಧಿಕ. ದಕ್ಷಿಣದಲ್ಲಿ ಬಿಳಿಯರು ಶೇಕಡಾ 85ರಷ್ಟಿದ್ದಾರೆ. ಇಂಡಿಯನ್ ಜನ ಆಮೆeóÉೂೀನಸ್ ರಾಜ್ಯದ ಪಶ್ಚಿಮ ಭಾಗದಲ್ಲಿದ್ದಾರೆ ಸಮಾಜದಲ್ಲಿ ಹಿಂದುಳಿದವರು ಕರಿಯ ಜನ, ಬಿಳಿಯರ ಜೀವನಕ್ಕೆ ಹೋಲಿಸಿದರೆ ಅವರ ಜೀವನ ಕಠಿಣ. ಈ ಎಲ್ಲ ಬುಡಕಟ್ಟಿನ ಜನರನ್ನೂ ಒಟ್ಟುಗೂಡಿಸಿರುವುದೆಂದರೆ ಪೋರ್ಚುಗೀಸ್ ಭಾಷೆ ಮತ್ತು ಕ್ಯಾತೊಲಿಕ್ ಧರ್ಮ.

ಬ್ರಜಿûಲಿನ ರಾಜ್ಯಗಳ ವಿಸ್ತೀರ್ಣ ಹಾಗೂ ಜನಸಂಖ್ಯೆ

ರಾಜ್ಯಗಳು ವಿಸ್ತೀರ್ಣ (ಚ. ಕಿಮೀ) ಜನಸಂಖ್ಯೆ (1970) ಮಧ್ಯ ಪಶ್ಚಿಮ ವಲಯ

ಫೆಡರಲ್ ಜಿಲ್ಲೆ 			. . . 	    5,819		 . . .		5,46,000

ರಾಜ್ಯಗಳು

ಗೊಯಿಯಾಸ್ 			. . .     6,42,092		 . . .        29,98,000
ಮಾಟಗ್ರೋಸೋ 		. . .    12,31,549 		 . . .        16,24,000

ಉತ್ತರ ವಲಯ ರಾಜ್ಯಗಳು

ಆಕ್ರ 				. . .      1,52,589         . . .         2,18,000
ಆಮೆeóÉೂೀನಸ್ 			. . .     15,64,445         . . .         9,61,000
ಪರಾ			       . . .     12,48,042         . . .        21,97,000

ಪ್ರದೇಶಗಳು

ಆಮಪಾ 			. . .       1,40,276         . . .         1,16,000
ರೊಂಡೋನ್ಯ 			. . .       2,43,044         . . .         1,17,000
ರೊರೈಮ 			. . .       2,30,104         . . .           42,000

ಈಶಾನ್ಯ ವಲಯ ರಾಜ್ಯಗಳು

ಅಲಾಗೋವಸ			 . . .        27,731         . . .        16,06,800
ಬಹೀಯ			 . . .      5,61,026         . . .        75,83,000
ಸೇಯರಾ 			 . . .       1,48,016        . . .        44,92,000
ಮಾರನ್ಯಾವು                   . . . 	     3,28,663        . . .        30,37,000
ಪರಯೀಬ 			 . . .         56,372        . . .        24,45,000
ಪರ್ನಂಬುಕೋ 			 . . .         98,281        . . .        52,52,000
ಪ್ಯಾಯುಯೀ 			 . . .        2,50,934       . . .        17,35,000
ರೀಯೂ ಗ್ರಾಂಡೀ ದ ಸೂಲ್		       53,015        . . .       16,12,000
ಸರ್ಷೀಪ			 . . .         21,994         . . .        9.11,000

ಪ್ರದೇಶಗಳು

ಫರ್ನಾಂಡೋ ದ ನರೋನ್ಯ	 . . . 		     26         . . . 	    1,000

ದಕ್ಷಿಣ ವಲಯ ರಾಜ್ಯಗಳು

ಪಾರನಾ				 . . .        1,99,554         . . .      69,98,000
ರೀಯೂ ಗ್ರಾಂಡೀ ದ ಸೂಲ್ 		      2,82,184 	    . . .      67,55,000
ಸಾಂತ ಕಾಟಲೀನ			 . . .		 95,985	    . . .      29,30,000

ಆಗ್ನೇಯ ವಲಯ ರಾಜ್ಯಗಳು

ಎಸ್ಸಿರಿಟೂ ಸಾಂಟೋ		 . . .          45,597 	    . . .      16,18,000
ಗ್ವಾನಬಾರ			 . . .            1,356        . . .       43,16,000
ಮೀನಸ್ ಷóರೈಸ್			 . . .         5,87,172        . . .     1,16,45,000
ರಿಯೋ ಡೇ ಷóನೆರೋ		 . . .           42,912        . . .       47,95,000
ಸೌ ಪೌಲೂ			 . . .          2,47,898       . . .      1,79,59,000
						   11,965      . . .       9,45 09.000

ಬ್ರಜಿûಲಿನ ಪ್ರಮುಖ ಮಹಾನಗರಗಳ ಜನಸಂಖ್ಯೆ 1975ರಲ್ಲಿದಂತೆ ಆವರಣಗಳೊಳಗೆ ಕೊಟ್ಟಿದೆ: ಸೌ ಪೌಲೂ (7,198,608), ರಿಯೋ ಡೇ ಷóನೆರೋ (4,857,716), ಬೀಲೋ ಹಾರಿeóÁಂಟೀ (1,557,464) ರಸೀಫ (1,2498.21), ಸ್ಯಾಲ್ವಡಾರ್ (1,237,393), ಪಾರ್ಟಲ ಲೀಜû (1,109,839). ಈ ಕೆಳಗಿನವು 1970ರಲ್ಲಿದಂತೆ-ಪೋರ್ಟೊ ಅಲೆಗ್ರ (903,175), ಕುಲಿಟೀಬ (309,784), ನೀಟರಾಯ್ (330,396).

ಧರ್ಮ : ಬ್ರಜಿûಲಿನಲ್ಲಿ ರೋಮನ್ ಕ್ಯಾತೊಲಿಕ್ ಕ್ರೈಸ್ತರು ಸೇಕಡಾ 90 ಮಂದಿ. ಪ್ರಾಟೆಸ್ಟಂಟರು ಅಲ್ಪ ಸಂಖ್ಯಾತರು. ಅವರ ಸಂಖ್ಯೆ 1970ರಲ್ಲಿ 20,00,000 ಇತ್ತು, 1889ರಲ್ಲಿ ಗಣರಾಜ್ಯ ಸ್ಥಾಪನೆಯಾದ ಮೇಲೆ ರೋಮನ್ ಕ್ಯಾತೊಲಿಕ್ ಧರ್ಮ ರಾಷ್ಟ್ರಧರ್ಮವೆಂಬ ಕಲ್ಪನೆ ಹೋಯಿತು : ಚರ್ಚ್ ಹಾಗೂ ರಾಜ್ಯಗಳ ನಡುವಣ ನಿಕಟ ಸಂಬಂಧ ಕಡಿದುಹೋಯಿತು. ಈ ಸಂಬಂಧ 1934ರಲ್ಲಿ ಪುನಃ ಸ್ಥಾಪಿತವಾದರೂ ಮತ್ತೆ 1946ರ ಸಂವಿಧಾನದಲ್ಲಿ ರದ್ದಾಯಿತು. ರಾಷ್ಟ್ರದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರವಿದೆ.

ಇತಿಹಾಸ

1500 ಏಪ್ರಿಲ್ 22ರಂದು ಪೋರ್ಚುಗೀಸ್ ನಾವಿಕ ಪೇದ್ರೂ ಆಲ್ವರಿಸ್ ಕಬ್ರಾಲ್ ಬ್ರಜಿûಲ್ ದೇಶವನ್ನು ಪೋರ್ಚುಗಲ್ ರಾಜನ ಪರವಾಗಿ ಸ್ವಾಧೀನಪಡಿಸಿಕೊಂಡ. 16ನೆಯ ಸತಮಾನದ ಪ್ರಾರಂಭದಲ್ಲೆ ಯೂರೋಪಿನ ಇತರ ರಾಷ್ಟ್ರಗಳು ದಕ್ಷಿಣ ಅಮೆರಿಕದ ಇತರ ಕಡೆಗಳಲ್ಲಿ ವಸಾಹತುಗಳನ್ನು ಸ್ಥಾಪಿಸಹತ್ತಿದುವು. ಇದರಿಂದ ಪೋರ್ಚೂಗೀಸರೂ ಉತ್ತೇಜಿತರಾಗಿ 30 ವರ್ಷಗಳ ಹಿಂದೆ ಕಬ್ರಾಲ್ ಕಂಡ ಬ್ರಜಿಲ್ ಪ್ರದೇಶಕ್ಕೆ 1532ರಲ್ಲಿ ಪ್ರಪ್ರಥಮವಾಗಿ ವಲಸೆ ಬಂದರು. ವ್ಯವಸಾಯಕ್ಕಾಗಿ ತಮ್ಮೊಂದಿಗೆ ಜಾನುವಾರು, ಬಿತ್ತನೆ ಬೀಜ ಹಾಗೂ ನೀಗ್ರೋ ಗುಲಾಮರನ್ನು ತಂದರು. 1549ರಲ್ಲಿ ಸೌನ್ ಸ್ಯಾಲ್ವಡಾರ್ ಪಟ್ಟಣ ನಿರ್ಮಿತವಾಗಿ ಅಲ್ಲಿ ಪೋರ್ಚುಗೀಸ್ ಸರ್ಕಾರ ಸ್ಥಾಪಿತವಾಯಿತು. ಅದೇ ವರ್ಷ ರೋಮನ್ ಕ್ಯಾತೊಲಿಕ್ ಪಾದ್ರಿಗಳು ಬಂದು ಸ್ಥಳೀಯ ಇಂಡಿಯನರನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸಲಾರಂಭಿಸಿದರು. 1555ರಲ್ಲಿ ರಿಯೋ ಡೇ ಷನೆರೋ ಕೊಲ್ಲಿಯಲ್ಲಿ ಫ್ರೆಂಚರ ವಸಾಹತು ಸ್ಥಾಪನೆಯಾಯಿತು. ಡಚ್ಚರು 1630ರಲ್ಲಿ ಈಗಿನ ಪುರ್ನಂಬ್ರುಕೋ ರಾಜ್ಯವಿರುವ ಕಡೆ ನೆಲಸಿದರು., 1654ರ ಹೊತ್ತಿಗೆ ಯೂರೊಪಿನ ಈ ಎರಡು ರಾಷ್ಟ್ರಗಳ ವಲಸೆಗಾರರೂ ತಮ್ಮ ಸಂಸ್ಕøತಿಯ ಕುರುಹುಗಳನ್ನು ಬಿಟ್ಟು ಸ್ವದೇಶಗಳಿಗೆ ಹಿಂತಿರುಗಿದರು. ಪೋರ್ಚುಗೀಸರು ಮಾತ್ರ ತಮ್ಮ ನೆಲೆಗಳನ್ನು ಬಿಡದೆ ವ್ಯವಸಾಯದಲ್ಲಿ ನಿರತರಾಗಿ, ಕಬ್ಬನ್ನು ಬೆಳೆಸಿದರು. 1640ರಲ್ಲಿ ಪೋರ್ಚುಗಲ್ ದೇಶ ಬ್ರಜûಲಿಗೆ ಒಬ್ಬ ವೈಸರಾಯಿಯನ್ನು ನೇಮಿಸಿತು.

ರಿಯೋ ಡೇ ಷನೆರೋ ಭಾಗದಲ್ಲಿ 1693ರಲ್ಲಿ ಚಿನ್ನದ ಮತ್ತು 1720ರಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾದವು. 1790ರ ಹೊತ್ತಿಗೆ ಚಿನ್ನ ಮತ್ತು ವಜ್ರದ ಗಣಿಗಳು ಬರಿದಾದ ಮೇಲೆ ಬ್ರಜಿûಲಿನ ಬಯಲುಗಳು ಜನಭರಿತವಾದುವು. ಆದರೆ ವ್ಯವಸಾಯ ಕ್ಷೇತ್ರದಲ್ಲಿ ಪ್ರಗತಿಯಾಗಲಿಲ್ಲ. 1789ರಲ್ಲಿ ಬ್ರಜಿóಲಿನಲ್ಲಿ ಸ್ವಾತಂತ್ರ್ಯ ಚಳವಳಿ ಉಗ್ರವಾಯಿತು. ಆದರೆ ಪೋರ್ಚುಗೀಸ್ ಸರ್ಕಾರ ಅದನ್ನು ಹತ್ತಿಕ್ಕಿತು. ಅತ್ತ ಯೂರೊಪಿನಲ್ಲಿ ನೆಪೋಲಿಯನ್ನನ ಸೈನ್ಯಗಳು ಪೋರ್ಚುಗಲ್ಲಿನ ಮೇಲೆ ಧಾಳಿ ನಡೆಸಿದುವು. ಪೋರ್ಚುಗಲ್ ದೊರೆ ಕುಟುಂಬ ಸಮೇತ 15,000 ಪೋರ್ಚುಗೀಸ್ ಪ್ರಜೆಗಳೊಡನೆ ಬ್ರಜಿóಲಿಗೆ ಓಡಿಬಂದ (1807). ಫ್ರೆಂಚರ ಆಕ್ರಮಣದಿಂದ ಪೋರ್ಚುಗಲ್ ವಿಮೋಚನೆಗೊಂಡ ಮೇಲೆ ದೊರೆ ತನ್ನ ಮಗ ಪೇದ್ರೂನನ್ನು ಬ್ರಜಿóಲಿನಲ್ಲಿ ಆಳುವಂತೆ ನೇಮಿಸಿ ಪೋರ್ಚುಗಲ್ಲಿಗೆ ಹಿಂತಿರುಗಿದ. 1815-21ರಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಇಲ್ಲಿ ಹೋರಾಟ ಬಿರುಸಾಯಿತು. ಬ್ರಜಿóಲಿನ ದೊರೆ ಪೇದ್ರೂ 1822 ಸೆಪ್ಟೆಂಬರ್ 7ರಂದು ಸ್ವಾತಂತ್ರ ಘೋಷಿಸಿದ. ಸಂವಿಧಾನದ ಪ್ರಕಾರ ಅವನ ಅರಸುತನ ಮುಂದುವರೆದು ಅವನು 1ನೆಯ ಪೆದ್ರೂ ಅನಿಸಿಕೊಂಡ. 9ವರ್ಷಗಳ ತರುವಾಯ ಸೈನಿಕರ ದಂಗೆಯಿಂದ ಪೇದ್ರೊ ಪದಚ್ಯುತನಾಗಿ ಅವನ 5 ವರ್ಷ ವಯಸ್ಸಿನ ಮಗ 2ನೆಯ ಪೇದ್ರೊ ರಾಜ್ಯಾಭಿಷಿಕ್ತನಾದ. ರಾಜ್ಯದಲ್ಲಿ ಶಾಂತಿ ನೆಲಸಿತು. ಅವನ ಅರ್ಧ ಶತಮಾನದ ಆಳ್ವಿಕೆಯಲ್ಲಿ ಬ್ರಜಿóಲ್ ಸಂಘಟಿತ ರಾಜ್ಯವಾಯಿತು. ಯೂರೊಪಿನಿಂದ ಬಹು ಸಂಖ್ಯೆಯಲ್ಲಿ ಜನರು ವಲಸೆ ಬಂದರು. ರೈಲು ಮಾರ್ಗಗಳು ನಿರ್ಮಾಣವಾದುವು. ಅಮೆeóÁನ್ ನದಿಯ ಪ್ರದೇಶದಲ್ಲಿ ರಬ್ಬರ್ ಶೇಖರಣೆಯ ಚಟುವಟಿಕೆಗಳಿಂದಾಗಿ ಹೊಸ ನಗರಗಳ ಸ್ಥಾಪನೆಯಾಯಿತು. 1885ರಲ್ಲಿ ಗುಲಾಮಪದ್ಧತಿ ರದ್ದಾಯಿತು. ವ್ಯವಸಾಯ ಕುಂಠಿತಗೊಂಡಿತು. ಆರ್ಥಿಕ ಮುಗ್ಗಟ್ಟು ಸಂಭವಿಸಿತು. 1889ರಲ್ಲಿ 2ನೆಯ ಪೇದ್ರೂನ ಅರಸು ತನ್ನ ಹೋಗಿ ಬ್ರಜಿóಲ್ ಸಂಯುಕ್ತ ಗಣರಾಜ್ಯದ ಸ್ಥಾಪನೆಯಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಾದರಿಯ್ಲಲಿ ಬ್ರಜಿûಲಿನ ಸಂವಿಧಾನ ರಚನೆಯಾಯಿತು (1891).

ಪ್ರಾರಂಭದಲ್ಲಿ ಬ್ರಜಿûಲ್ ಗಣರಾಜ್ಯದಲ್ಲಿ ನೈತಿಕ ಆಡಳಿತವಿತ್ತು. 1894ರ ಹೊತ್ತಿಗೆ ಸಂವಿಧಾನ ನೀಡಿದ ವ್ಯವಸ್ಥೆ ಸ್ಥಿರಗೊಂಡ ಮೇಲೆ ಬ್ರಜಿóಲ್‍ಗೆ ಅಂತರ ರಾಷ್ಟ್ರೀಯ ವಲಯಗಳಲ್ಲಿ ಗೌರವದ ಸ್ಥಾನ ಮಾನಗಳು ಲಭಿಸಿದುವು. 1917 ಅಕ್ಟೋಬರ್‍ನಲ್ಲಿ ಬ್ರಜಿóಲ್ ಮಿತ್ರರಾಷ್ಟ್ರಗಳೊಡನೆ ಸೇರಿ ಜರ್ಮನಿಯ ಮೇಲೆ ಯುದ್ಧ ಘೋಷಿಸಿತು. ಆ ತರುವಾಯ ಆರ್ಥಿಕ ಪ್ರಗತಿಯಾಯಿತು. ರಬ್ಬರ್ ಉತ್ಪಾದನೆಯ ಹೆಚ್ಚಳವಾಯಿತು. ಕಾಫಿ ಬೆಳೆ ಹೆಚ್ಚಿತು. ಕಾಫಿ ಉತ್ಪಾದನೆ ಪ್ರಪಂಚದ ರಾಷ್ಟ್ರಗಳ ಪೈಕಿ ಬ್ರಜಿóಲ್ ಪ್ರಥಮ ಸ್ಥಾನ ಲಭ್ಯವಾಯಿತು. ಆದರೆ ಯುದ್ಧಾನಂತರ ಮಲಯ ಮತ್ತು ಇಂಡೊನೇಷ್ಯಗಳ ಸ್ಪರ್ಧೆಯಿಂದ ಬ್ರಜಿóಲ್ ರಬ್ಬರ್ ಮಾರುಕಟ್ಟೆಯ ಕುಸಿತ ಸಂಭವಿಸಿತು. ಕಾಫಿ ಉತ್ಪನ್ನ ಹೆಚ್ಚಿ, ಬೆಲೆ ಇಳಿಯಿತು. ಆದರಿಂದ ರಾಷ್ಟ್ರಕ್ಕೆ ಅಪಾರ ನಷ್ಟವಾಯಿತು. 1930ರಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಜನತೆಯಲ್ಲಿ ಅಸಮಾಧಾನ ಬೆಳೆಯಿತು. 1934ರಲ್ಲಿ ಷಟೂಲ್ಯೂ ವ್ಯಾರ್ಗಸ್ ರಾಷ್ಟ್ರಾಧ್ಯಕ್ಷನಾದ. ಅವನು 1937ರಲ್ಲಿ ಮುಂಬರಲಿದ್ದ ಚುನಾವಣೆಯನ್ನು ನಿಲ್ಲಿಸಿ ಸಂಸತ್ತು ಹಾಗೂ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಿ ಸರ್ವಾಧಿಕಾರಿಯಂತೆ ಆಳತೊಡಗಿದ. ಅವನಿಂದ ನಾಗರಿಕ ಹಕ್ಕುಗಳಿಗೆ ಅಡಚಣೆಗಳುಂಟಾಯಿತು. ಆದರೆ ಕೈಗಾರಿಕಾ ಪ್ರಗತಿಯಾಯಿತು. ಎರಡನೆಯ ಮಹಾಯುದ್ಧದಲ್ಲಿ ಬ್ರಜಿóಲ್ ಜರ್ಮನಿಯ ವಿರುದ್ಧಯುದ್ಧ ಘೋಷಿಸಿತು (1942). ಇಟಲಿಯ ವಿರುದ್ಧ ಯುದ್ಧ ಮಾಡಲು ಇದು ಸೈನಿಕರನ್ನು ಕಳುಹಿಸಿತು. ಯುದ್ಧಾನಂತರ ವ್ಯಾರ್ಗಸನ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನ ಮೂಡಿತು. ಮುಕ್ತ ಚುನಾವಣೆಗೆ ಒತ್ತಾಯ ಬಂತು. ವ್ಯಾರ್ಗಸ್ 1945ರಲ್ಲಿ ರಾಜಿನಾಮೆ ನೀಡಿದ. ಅವನ ತರುವಾಯ ಜನರಲ್ ದೂತ್ರ ರಾಷ್ಟ್ರಾಧ್ಯಕ್ಷನಾದ. 1946ರಲ್ಲಿ ಬ್ರಜಿûಲ್‍ಗೆ ಹೊಸ ಸಂವಿಧಾನವನ್ನು ಘೋಷಿಸಲಾಯಿತು. 1950ರ ಚುನಾವಣೆಯಲ್ಲಿ ವ್ಯಾರ್ಗಸ್ ಪುನಃ ಅಧ್ಯಕ್ಷನಾಗಿ ಆಯ್ಕೆಯಾದ. ಆದರೆ ಜನಸಂಖ್ಯೆ ಹೆಚ್ಚುತ್ತಿದ್ದ ಬ್ರಜಿóಲಿನ ಸಮಸ್ಯೆಗಳನ್ನು ಅವನು ಎದುರಿಸಲಾರದೆ ಹೋದ. 1954ರಲ್ಲಿ ಅವನು ಆತ್ಮಹತ್ಮೆ ಮಾಡಿಕೊಂಡ. 1955 ನವಂಬರ್ 10ರಂದು ಉಪಾಧ್ಯಕ್ಷ ಕಫೆ ಫಿಲ್ಹೊ ಅಧ್ಯಕ್ಷನಾದ. ಅದೇ ವರ್ಷ ಕ್ಷಿಪ್ರಾಕ್ರಮಣ ನಡೆದು ನೆರ್ಯೂ ರಾಮೆಸ್ ಅಧ್ಯಕ್ಷಸ್ಥಾನ ಆಕ್ರಮಿಸಿದ. 1956 ಜನವರಿಯಲ್ಲಿ ಅಧಕ್ಷನಾದ ಜೂಸೆಲೀನೋಕುಬಿಟ್‍ಪಿಕನ ಆಡಳಿತದಲ್ಲಿ ರಾಜಧಾನಿಯನ್ನು ರಿಯೋ ಡೇ ಷನೆರೋವಿಂದ ಹೊಸದಾಗಿ ನಿರ್ಮಿತವಾದ ಬ್ರಸಿಲ್ಯಕ್ಕೆ ವರ್ಗಾಯಿಸಲಾಯಿತು. ಈತ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರೂ ಹಣದ ಉಬ್ಬರದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. 1961ರಲ್ಲಿ ರಾಷ್ಟ್ರಾಧ್ಯಕ್ಷನಾದ ಜಾನಿಯೋಕ್ವಾಡ್ರೋಸ್ ಏಳು ತಿಂಗಳು ಆಡಳಿತ ನಡೆಸಿ ರಾಜಿನಾಮೆ ನೀಡಿದ. 1961 ಸೆಪ್ಟೆಂಬರಿನಲ್ಲಿ ಉಪಾಧ್ಯಕ್ಷ ಜೋವೊ ಗೌಲಾರ್ಟ್ ಅಧ್ಯಕ್ಷನಾದ. ಕ್ಷಿಪ್ರಾಕ್ರಮಣದಿಂದ ಇವನ ಅಧಿಕಾರವೂ ಮುಕ್ತಾಯಗೊಂಡಿತು (1964). 1966 ಅಕ್ಟೋಬರಿನಲ್ಲಿ ಅಧ್ಯಕ್ಷನಾಗಿ ಚುನಾಯಿತನಾದ ಆರ್ತರ್ ಡ ಕಾಸ್ಟಾ ಎ ಸಿಲ್ವಾ ಮಾರ್ಚ್ 1967ರಲ್ಲಿ ಅಧಿಕಾರ ಸ್ವೀಕರಿಸಿ 4ವರ್ಷ ಆಡಳಿತ ನಿರ್ವಹಿಸಿದ. ಅವನ ಕಾಲದಲ್ಲಿ ರಾಷ್ಟ್ರಾಧ್ಯಕ್ಷನಿಗೆ ವ್ಯಾಪಕ ಅಧಿಕಾರ ಪ್ರಾಪ್ತವಾಯಿತು. ಅನೇಕ ಅಧಿನಿಯಮಗಳು ಜಾರಿಗೆ ಬಂದುವು. 1969 ಸೆಪ್ಟೆಂಬರಿನಲ್ಲಿ ಅನಾರೋಗ್ಯದಿಂದ ಸಿಲ್ವಾ ರಾಜಿನಾಮೆ ನೀಡಿದಾಗ ರಾಷ್ಟ್ರಾಧ್ಯಕ್ಷನ ಅಧಿಕಾರಗಳನ್ನು ಸೈನ್ಯ ವಹಿಸಿಕೊಂಡಿತು. ಸೇನಾ ಆಡಳಿತದಲ್ಲಿ ಜಾರಿಗೆ ಬಂದ ಹೊಸ ಸಂವಿಧಾನದ ಪ್ರಕಾರ ಲೆಫ್ಟೆನಂಟ್ ಜನರಲ್ ಎಮಿಲಿಯೊ ಗರ್ರಾಸ್ಟಾಜೂ ಮೆಡಿಸಿ ರಾಷ್ಟ್ರಾಧ್ಯಕ್ಷನಾಗಿ ಆಯ್ಕೆಯಾದ. 1970ರಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಗೆರಿಲಾ ತಂಡಗಳ ಚಟುವಟಿಕೆಗಳು ವ್ಯಾಪಕವಾದುವು. ಸೈನ್ಯದ ಸಹಾಯದಿಂದ ಈ ತಂಡಗಳನ್ನುಹತ್ತಿಕ್ಕಲಾಯಿತು. 1974 ಮಾರ್ಚ್‍ನಲ್ಲಿ ಅಧ್ಯಕ್ಷರಾದ ಜನರಲ್ ಅರ್ನೆಸ್ಟೊ (?)ಸೆಲರ ಆಡಳಿತ ಉತ್ತಮವಾಗಿದ್ದರೂ ಚುನಾವಣೆಗಳಲ್ಲಿ ವಿರೋಧಪಕ್ಷ (ಎಂ.ಡಿ.ಬಿ. ಪಕ್ಷ) ಜಯಗಳಿಸಿ ಸೈನಿಕ ಆಡಳಿತ ಕೊನೆಗೊಳ್ಳಬೇಕೆಂದು ಹಾಗೂ ಪ್ರಜಾಪ್ರಭುತ್ವ ಜಾರಿಗೆ ಬರಬೇಕೆಂದು ಒತ್ತಾಯಪಡಿಸಿತು.

1977ರಲ್ಲಿ ಮಾನವೀಯ ಹಕ್ಕುಗಳ ಬಗ್ಗೆ ಹಾಗೂ ಬ್ರಜಿóಲ್ ರಾಷ್ಟ್ರ ಪರಮಾಣು ಶಕ್ತಿಯನ್ನು ಉತ್ಪಾದಿಸುವ ಬಗ್ಗೆ ಭಿನ್ನಾಭಿಪ್ರಾಯಗಳುಂಟಾಗಿ ಅಮೆರಿಕ ಮತ್ತು ಬ್ರಜಿóಲ್ ದೇಶಗಳ ಸಂಬಂಧ ಹದಗೆಟ್ಟಿತು. 1977ರ ಮಧ್ಯದಲ್ಲಿ ಪ್ರಜಾಸರ್ಕಾರ ಪುನಃ ಸ್ಥಾಪಿತವಾಗಬೇಕೆಂದು ವಿದ್ಯಾರ್ಥಿಗಳು ಮುಷ್ಕರ ಹೂಡಿದರು. 1977 ಡಿಸೆಂಬರಿನಲ್ಲಿ ಅಧ್ಯಕ್ಷ ಗೀ ಸೆಲ್ ಶಿಸ್ತುಪಾಲನೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸಂವಿಧಾನದಲ್ಲಿ ತಿದ್ದು ಪಾಟುಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಸಂವಿಧಾನ ಮತ್ತು ಸರ್ಕಾರ

1964ರಿಂದ ಬ್ರಜಿóಲಿನಲ್ಲಿ ಸೈನಿಕ ಸರ್ಕಾರವಿದೆ. 1969ರ ಸಂವಿಧಾನದ ಪ್ರಕಾರ ಬ್ರಜಿóಲ್‍ನಲ್ಲಿ 21 ರಾಜ್ಯಗಳು, 4 ಪ್ರದೇಶಗಳು ಹಾಗೂ 1 ಫೆಡರಲ್ ಜಿಲ್ಲೆ ಇವುಗಳನ್ನೊಳಗೊಂಡ ಸಂಯುಕ್ತ ಗಣರಾಜ್ಯವಿದೆ.

ಕಾನೂನು ರಚನೆ: ವಿಧಾನಾಧಿಕಾರ ದ್ವಿಸದನ ಸಂಸತ್ತಿನಲ್ಲಿ (ರಾಷ್ಟ್ರೀಯ ಕಾಂಗ್ರೇಸ್) ನೆಲಸಿದೆ ಅದರ ಫೆಡರಲ್ ಸೆನೆಟ್ ಮೇಲ್ಮನೆ. ಅದರಲ್ಲಿ 66 ಸದಸ್ಯರಿರುತ್ತಾರೆ. ಅವರ ಅಧಿಕಾರಾವಧಿ 8 ವರ್ಷ. ಚೇಂಬರ್ ಆಫ್ ಡೆಪ್ಯುಟೀಸ್ ಕೆಳಮನೆ. ಅದರ ಸದಸ್ಯತ್ವ 364. ಸದಸ್ಯರ ಅಧಿಕಾರಾವಧಿ 4 ವರ್ಷ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯಲ್ಲಿ ಇವರ ಆಯ್ಕೆಯಾಗುತ್ತದೆ.

ಸಂಸತ್ತು ಬ್ರಜಿóಲಿನ ಎಲ್ಲ ವಿಷಯಗಳ ಬಗ್ಗೆ ಅಧಿನಿಯಮ ರಚಿಸುವ ಅಧಿಕಾರ ಹೊಂದಿದೆ. ಅದು ರಾಷ್ಟ್ರೀಯ ಮತ್ತು ಪ್ರಾದೇಶಿಕ ಯೋಜನೆಗಳನ್ನು ರೂಪಿಸುತ್ತದೆ. ಸಂಸತ್ತಿನ ಉಭಯ ಸದನಗಳು ಸಂಯುಕ್ತ ಅಧಿವೇಶನದಲ್ಲಿ ರಾಷ್ಟ್ರದ ಬಜೆಟನ್ನು ಅನುಮೋದಿಸುತ್ತವೆ. ವಿಧೇಯಕವನ್ನು ರಾಷ್ಟ್ರಾಧ್ಯಕ್ಷ ಸಹಿಹಾಕಿದ ಮೇಲೆ 15 ದಿನಗಳೊಳಗೆ ಸಂಸತ್ತಿಗೆ ಮಂತ್ರಿಮಂಡಲ ಒಪ್ಪಿಸಬೇಕು. ಸಂವಿಧಾನಕ್ಕೆ ತಿದ್ದುಪಡಿಯನ್ನು ಸಂಸತ್ತಿನ ಉಭಯಸದನಗಳ ಒಟ್ಟು ಸದಸ್ಯರಲ್ಲಿ 1/3 ಭಾಗದಷ್ಟು ಸದಸ್ಯರು ಅಥವಾ ರಾಷ್ಟ್ರಧ್ಯಕ್ಷ ಸಲಹೆ ಮಾಡಬಹುದು. ಇಂಥ ತಿದ್ದುಪಡಿ ಸಂಸತ್ತಿನ ಬಹುಮತದಿಂದ ಅಂಗೀಕೃತವಾಗಬೇಕು. ಯುದ್ಧ ಕಾಲದಲ್ಲಿ ಸಂವಿಧಾನದಲ್ಲಿ ಬದಲಾವಣೆಗಳನ್ನು ತರಲಾಗುವುದಿಲ್ಲ.

ಆಡಳಿತ: ರಾಷ್ಟ್ರಾಧ್ಯಕ್ಷ ಗಣರಾಜ್ಯದ ಪ್ರಮುಖ ಆಡÀಳಿತಾಧಿಕಾರಿ. ರಾಷ್ಟ್ರಾಧ್ಯಕ್ಷ ಮತ್ತು ಉಪರಾಷ್ಟ್ರಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸುವವರು ಬ್ರಜಿóಲ್ ರಾಷ್ಟ್ರದಲ್ಲಿ ಹುಟ್ಟಿದವರಾಗಿದ್ದು ಅವರ ವಯಸ್ಸು 35ವರ್ಷಕ್ಕೆ ಮೇಲ್ಪಟ್ಟಿರಬೇಕು. ಸಂಸತ್ತು ಮತ್ತು ರಾಜ್ಯಗಳ ಪ್ರತಿನಿಧಿಗಳಿಂದ ಅವರ ಆಯ್ಕೆಯಾಗುತ್ತದೆ. ಅವರ ಅಧಿಕಾರಾವಧಿ 6 ವರ್ಷ. ರಾಷ್ಟ್ರಾಧ್ಯಕ್ಷ ಆಡಳಿತಕ್ಕಾಗಿ ಮಂತ್ರಿಮಂಡಲವನ್ನು ನೇಮಿಸಿ ಅದರ ನಾಯಕತ್ವ ವಹಿಸುತ್ತಾನೆ. 1977ರಲ್ಲಿ ಸಂವಿಧಾನಕ್ಕೆ ಅನೇಕ ತಿದ್ದುಪಡಿಗಳು ರಾಷ್ಟ್ರಾಧ್ಯಕ್ಷನ ಘೋಷಣೆಯ ಮೂಲಕ ಜಾರಿಗೆ ಬಂದವು.

ರಾಷ್ಟ್ರೀಯ ಭದ್ರತಾ ಪರಿಷತ್ತು ರಾಷ್ಟೀಯ ರಕ್ಷಣೆಯ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಅದರ ಸದಸ್ಯರು ರಾಷ್ಟ್ರಾಧ್ಯಕ್ಷ, ಮಂತ್ರಿಗಳು ಹಾಗೂ ಪ್ರಧಾನ ಸೈನ್ಯಾಧಿಕಾರಿ. ರಾಷ್ಟ್ರೀಯ ಭದ್ರತೆ ಪ್ರತಿಯೊಬ್ಬ ಪ್ರಜೆಯ ಹೊಣೆ.

ಪ್ರತಿಯೊಂದು ರಾಜ್ಯಕ್ಕೂ ನೇಮಕಗೊಂಡ ಒಬ್ಬ ರಾಜ್ಯಪಾಲ, ನ್ಯಾಯಾಡಳಿತ ವ್ಯವಸ್ಥೆ ಹಾಗೂ ಪ್ರಜೆಗಳಿಂದ ಚುನಾಯಿತರಾದ ಸದಸ್ಯರ ವಿಧಾನಮಂಡಲ ಇರುತ್ತದೆ. ಪ್ರತಿಯೊಂದು ರಾಜ್ಯವೂ ತನ್ನ ಸಂವಿಧಾನ ಹಾಗೂ ಕಾನೂನುಗಳನ್ನುಜಾರಿಗೆ ತರುತ್ತದೆ. ಆದರೆ ಇವು ಕೇಂದ್ರ ಸಂವಿಧಾನದ ವಿಧಿಗಳಿಗೆ ಒಳಪಟ್ಟಿರಬೇಕು.

ನ್ಯಾಯಾಂಗ: ಬ್ರಜಿóಲ್ ಗಣರಾಜ್ಯದ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ ಆಯಾ ರಾಜ್ಯಗಳ ನ್ಯಾಯಾಡಳಿತ ವ್ಯವಸ್ಥೆಯಿರುತ್ತದೆ. ಬ್ರಸಿಲ್ಯದಲ್ಲಿ ಕೇಂದ್ರ ನ್ಯಾಯಾಲಯಗಳಿವೆ.


ಕೇಂದ್ರ ನ್ಯಾಯವ್ಯವಸ್ಥೆಯಲ್ಲಿ ಫೆಡರಲ್ ಸರ್ವೋಚ್ಚ ನ್ಯಾಯಾಲಯವೇ ಪರಮೋಚ್ಚ ನ್ಯಾಯಾಲಯ. ಇದು ಬ್ರಸಿಲ್ಯದಲ್ಲಿದೆ. ಈ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕ ಮೊದಲು ಕೇಂದ್ರ ಸಂಸತ್ತ್ತಿನಿಂದ ಅಂಗೀಕೃತವಾಗಿ ತರುವಾಯ ರಾಷ್ಟ್ರಾಧ್ಯಕ್ಷನ ಒಪ್ಪಿಗೆ ಪಡೆಯಬೇಕು. ಫೆಡರಲ್ ಅಪೀಲು ನ್ಯಾಯಾಲಯಕ್ಕೆ ಮೂಲ ಮೊಕದ್ದಮೆಗಳನ್ನು ಹಾಗೂ ಅಪೀಲುಗಳನ್ನು ವಿಚಾರಣೆ ಮಾಡುವ ಅಧಿಕಾರವಿದೆ. ಈ ನ್ಯಾಯಾಲಯದ ನ್ಯಾಯಮೂರ್ತಿಗಳು 13 ಮಂದಿ. ಇವರ ನೇಮಕ ಕೇಂದ್ರ ಸಂಸತ್ತಿನ ಅಂಗೀಕೃತವಾಗಿ ರಾಷ್ಟ್ರಾಧ್ಯಕ್ಷರ ಒಪ್ಪಿಗೆ ಪಡೆಯಬೇಕು.

ರಾಜಕೀಯ ಪಕ್ಷಗಳ ನೊಂದಣಿ, ಚುನಾವಣೆಗಳ ದಿನಾಂಕಗಳು, ಮತಗಾರರ ಪಟ್ಟಿಯ ಮೇಲ್ವಿಚಾರಣೆ, ಚುನಾವಣೆಯ ಅಪರಾಧಗಳು ಈ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವುದು ಚುನಾವಣಾ ನ್ಯಾಯಾಧಿಕರಣದ ಹೊಣೆ. ಚುನಾವಣಾ ನ್ಯಾಯ ವ್ಯವಸ್ಥೆಯಲ್ಲಿ ಚುನಾವಣಾ ಉಚ್ಚ ನ್ಯಾಯಾಲಯ, ಪ್ರಾದೇಶಿಕ ಚುನಾವಣಾ ನ್ಯಾಯಾಲಯಗಳು ಹಾಗೂ ಚುನಾವಣಾ ಮಂಡಲಿಗಳು ಇರುತ್ತವೆ. ಕಾರ್ಮಿಕ ವಿಷಯಗಳ ಬಗ್ಗೆ ಕಾರ್ಮಿಕ ಉಚ್ಚ ನ್ಯಾಯಾಲಯಗಳು, ಪ್ರಾದೇಶಿಕ ಕಾರ್ಮಿಕ ನ್ಯಾಯಾಲಯಗಳು ಮತ್ತು ರಾಜಿ ಒಪ್ಪಂದ ತೀರ್ಪುಗಳ ನ್ಯಾಯಾಧೀಶ ಮಂಡಲಿಗಳಿವೆ.

ಆರ್ಥಿಕತೆ

ವ್ಯವಸಾಯ: ಬ್ರಜಿóಲ್ ವ್ಯವಸಾಯಪ್ರಧಾನವಾದ ದೇಶ. ಬೆಳೆಯಲ್ಲಿ ಶೇಕಡಾ 20ರಷ್ಟನ್ನು ದೇಶದಲ್ಲಿ ಬಳಸಲಾಗುತ್ತದೆ. ಶೇಕಡಾ 80ರಷ್ಟು ರಫ್ತಾಗುತ್ತದೆ. ದೇಶದ ಈಶಾನ್ಯ ಭಾಗದಲ್ಲಿ ವ್ಯವಸಾಯ ಪ್ರಗತಿ ಹೊಂದಿದೆ. ಒಳನಾಡಿನಲ್ಲಿ ಕಾಫಿ, ಕಬ್ಬು, ಬಾಳೆ, ಕಿತ್ತಳೆಯನ್ನು ಹೆಚ್ಚಾಗಿ ಬೆಳೆಸುತ್ತಾರೆ. ಪ್ರಪಂಚದ ಕಾಫಿಬೆಳೆಯಲ್ಲಿ ಶೇಕಡಾ 40ರಷ್ಟು ಬ್ರಜಿóಲಿನದು. ಪರಾನಾ ರಾಜ್ಯದಲ್ಲಿ ಅದರ ಬೆಳೆ ಅಧಿಕ. ಬ್ರಜಿóಲಿನ ಇತರ ಬೆಳೆಗಳು ಕೋಕೊ, ತಂಬಾಕು, ಮೆಕ್ಕೆ ಜೋಳ, ಬತ್ತ, ಮರಗೆಣಸು, ನೆಲಗಡಲೆ, ಆಲೂಗಡ್ಡೆ ಮತ್ತು ಹಣ್ಣುಗಳು.

ಪಶುಪಾಲನೆ: ಪಶುಪಾಲನೆಯಲ್ಲಿ ಬ್ರಜಿóಲ್ ಮುಂದಾಗಿದೆ. 1970ರಲ್ಲಿದ್ದ ಜಾನುವಾರುಗಳ ಸಂಖ್ಯೆ 21,70,000. ರಾಷ್ಟ್ರದ ಸಮಶೀತೋಷ್ಣ ಭಾಗಗಳಲ್ಲಿ ಉತ್ತಮ ತಳಿಗಳನ್ನು ಸಾಕುತ್ತಾರೆ. ದಕ್ಷಿಣ ಮತ್ತು ಆಗ್ನೇಯ ಭಾಗಗಳಲ್ಲಿ ಜೆಬು ಜಾತಿಯ ಪಶುಗಳನ್ನು ಸಾಕಲಾಗುತ್ತದೆ. ಮೀನಸ್ ಜಿರೀಸ್ ಹಾಗೂ ರೀಯೂ ಗ್ರಾಂಡೀ ದ ಸೂಲ್ ರಾಜ್ಯಗಳಲ್ಲಿ ಹಂದಿಗಳನ್ನು ಸಾಕುತ್ತಾರೆ. ಬ್ರಜಿóಲ್ ಕುದುರೆಗಳಿಗೆ ಪ್ರಸಿದ್ಧವಾಗಿದೆ. 1970ರಲ್ಲಿದ್ದಂತೆ ಅವುಗಳ ಸಂಖ್ಯೆ 90,00,000. ರೀಯೂ ಗ್ರಾಂಡೀ ದ ಸೂಲ್ ರಾಜ್ಯದಲ್ಲಿ ಕುರಿಗಳನ್ನೂ ಹೆಚ್ಚಾಗಿ ಸಾಕುತ್ತಾರೆ.

ಅರಣ್ಯೋತ್ಪನ್ನ: ಬ್ರಜಿóಲ್‍ನ ಸುಮಾರು ಮೂರನೆಯ ಎರಡು ಭಾಗ ಅರಣ್ಯ. ಶೇಕಡಾ 75ರಷ್ಟು ಅರಣ್ಯಭಾಗ ಅಭೇದ್ಯವಾಗಿದೆ. ಪ್ರಪಂಚದ ಒಟ್ಟು ಅರಣ್ಯ ಪ್ರದೇಶದಲ್ಲಿ 1/10ರಷ್ಟು ಬ್ರಜಿûಲ್‍ನಲ್ಲಿದೆ. ಬ್ರಜಿûಲಿನ ಉಷ್ಣವಲಯೀಯ ಅರಣ್ಯಗಳಲ್ಲಿ ಗೋಂದು, ರಾಳ ಹಾಗೂ ಮೇಣ ದೊರೆಯುವ ವೃಕ್ಷಗಳಿವೆ. ಔಷಧಿಗಳಿಗೆ ಉಪಯುಕ್ತವಾದ ಮೂಲಿಕೆಗಳಿವೆ, ಚರ್ಮ ಹದ ಮಾಡಲು ಯೋಗ್ಯವಾದ ತೊಗಟೆಗಳು ಸಿಗುತ್ತವೆ. ಮರಗೆಲಸಕ್ಕೆ ಉಪಯುಕ್ತವಾದ ಗಟ್ಟಿ ಮರಗಳು ಆಮೆeóÁನ್ ನದಿ ಪ್ರದೇಶ ಮತ್ತು ಅಟ್ಲಾಂಟಿಕ್ ತೀರ ಭಾಗಗಳಲ್ಲಿವೆ. ದಕ್ಷಿಣದ ಪರಾನಾದಲ್ಲಿರುವ ಪೈನ್ ಮರಗಳನ್ನು ಕಾಗದ ತಯಾರಿಕೆಗೆ ಬಳಸುತ್ತಾರೆ.

ಕೈಗಾರಿಕೆ: 1960ರಿಂದ ಕೈಗಾರಿಕೆ ಪ್ರಗತಿ ಹೊಂದುತ್ತಿದೆ. ಸೌ ಪೌಲೂ ರಾಜ್ಯ ಕೈಗಾರಿಕೆಗಳಲ್ಲಿ ಮುನ್ನಡೆದಿದೆ. ಬ್ರಜಿóಲ್ 1970ರಿಂದ ಉಕ್ಕಿನ ಉತ್ಪಾದನೆಯಲ್ಲಿ ಸ್ವಯಂಪೂರ್ಣವಾಗಿದೆ. ದೇಶದಲ್ಲಿ ಅನೇಕ ಉಕ್ಕಿನ ಮತ್ತು ಕಬ್ಬಿಣದ ಕಾರ್ಖಾನೆಗಳಿವೆ. ಹಡಗು ನಿರ್ಮಾಣ ಕೈಗಾರಿಕೆಯೂ ಪ್ರಾಮುಖ್ಯ ಪಡೆದಿದೆ. ದೇಶದಲ್ಲಿ ಪೆಟ್ರೋಲ್ ಶುದ್ಧೀಕರಣ ಕಾರ್ಖಾನೆಗಳಿವೆ. ಮೋಟಾರ್ ವಾಹನಗಳ ತಯಾರಿಕೆಯಲ್ಲಿ ಪ್ರಗತಿಯಾಗಿದೆ. ಜವಳಿ, ಸಿಮೆಂಟ್, ರಾಸಾಯನಿಕ ಮುಂತಾದ ಕೈಗಾರಿಕೆಗಳೂ ಬ್ರಜಿóಲಿನಲ್ಲಿವೆ,

ಖನಿಜಗಳು: ಬ್ರಜಿóಲಿನಲ್ಲಿ ಖನಿಜನಿಕ್ಷೇಪಗಳು ಅಪಾರವಾಗಿವೆ. ಕಬ್ಬಿಣ ಹೆಚ್ಚಾಗಿ ಸಿಕ್ಕುವುದು ಮೀನಸ್ ಷóರೈಸ್ ಮತ್ತು ಮಾಟಗ್ರೋಸೋ ರಾಜ್ಯಗಳಲ್ಲಿ. ಮ್ಯಾಂಗನೀಸ್ ನಿಕ್ಷೇಪಗಳು ಆಮಪಾ ಮತ್ತು ಮೀನಸ್ ರಾಜ್ಯಗಳಲ್ಲಿ ಹೆಚ್ಚಾಗಿವೆ. ರೀಯೂ ಗ್ರಾಂಡೀ ದ ಸೂಲ್ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಹೇರಳವಾಗಿವೆ. ಬೆಳ್ಳಿ, ಚಿನ್ನ, ವಜ್ರ, ಟಂಗ್‍ಸ್ಟನ್, ಸೀಸ, ನಿಕ್ಕಲ್, ಲವಣ ಮೊದಲಾದವೂ ಬ್ರಜಿûಲಿನಲ್ಲಿ ಸಿಗುತ್ತವೆ. ಬ್ರಸಿóಲ್ಯದ ಬಳಿ ತೈಲನಿಕ್ಷೇಪಗಳಿವೆ. ರೀಯೊ ದೇ ಷನೆರೋ ರಾಜ್ಯದಲ್ಲೂ ತೈಲ ನಿಕ್ಷೇಪಗಳು ಪತ್ತೆಯಾಗಿವೆ.

ಮೀನುಗಾರಿಕೆ: ಬ್ರಜಿóಲ್ 7,360ಚ.ಕಿಮೀ ವಿಸ್ತಾರದ ಸಮುದ್ರ ತೀರ ಇದೆ. ಅದರ ಮತ್ಸ್ಯಸಂಪತ್ತು ವಿಪುಲವಾದ್ದು. ಈಶಾನ್ಯ ಮತ್ತು ದಕ್ಷಿಣ ತೀರಗಳಲ್ಲಿ ಮೀನುಗಾರಿಕೆ ಬೆಳೆದಿದೆ.

ವಿದ್ಯುತ್ತು: ಬೃಹತ್ ನದಿಗಳು ಹರಿಯುವ ಬ್ರಜಿûಲ್‍ನಲ್ಲಿ ಜಲವಿದ್ಯುದುತ್ಪಾದನೆಗೆ ಹೆಚ್ಚು ಅವಕಾಶವಿದೆ. ವಿದ್ಯುತ್ತಿನ ಉತ್ಪಾದನೆಯಲ್ಲಿ ಮುಕ್ಕಾಲು ಭಾಗ ಆಗ್ನೆಯ ಮತ್ತು ದಕ್ಷಿಣ ಭಾಗಗಳ ನಗರಗಳಲ್ಲಿ ಬಳಕೆಯಾಗುತ್ತವೆ.

ವಿದೇಶಿ ವ್ಯಾಪಾರ: ಬ್ರಜಿûಲ್‍ನಿಂದ ನಿರ್ಯಾತವಾಗುವ ಪ್ರಮುಖಸರಕುಗಳು ಕಾಫಿ, ಹತ್ತಿ, ಕೋಕೊ, ಸಕ್ಕತೆ, ಕಬ್ಬಿಣ, ಮ್ಯಾಂಗನೀಸ್, ಯಂತ್ರಗಳು ಹಾಗೂ ಮೋಟಾರು ವಾಹನಗಳು.

ನಾಣ್ಯ: ಬ್ರಜಿûಲ್‍ನ ನಾಣ್ಯ ಕ್ರೂಜೆರೋ. ಇದು 1942ರಲ್ಲಿ ಚಲಾವಣೆಗೆ ಬಂತು. ಇದನ್ನು 100 ಸೆಂಟಾವೋಗಳಾಗಿ ವಿಂಗಡಿಸಲಾಗಿದೆ.

ಸಾರಿಗೆ ಸಂಪರ್ಕ

ವಿಮಾನ ಸಾರಿಗೆ: ಅರಣ್ಯ, ನದಿ, ಬೆಟ್ಟಗಳಿಂದಾಗಿ ಬ್ರಜಿûಲಿನ ರಸ್ತೆ ಸಾರಿಗೆ ಪರಿಮಿತವಾದ್ದಾಗಿದೆ. ಒಳನಾಡಿನಲ್ಲಿ ವಿಮಾನ ಸಂಚಾರ ತಕ್ಕಮಟ್ಟಿಗೆ ಬೆಳೆದಿದೆ. ರಿಯೋ ಡೇ ಷóನೆರೋ, ಪೋರ್ಟೂ ಅಲೆಗ್ರ, ಕಾಂಪೊ, ಗ್ರಾಂಡ್, ಬ್ರಸಿಲ್ಯ, ಸ್ಯಾಲ್ವಡಾರ್ ರಸೀಫ, ಬಲೆಂ, ಮನೌಸ್ ಇವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು.

ರೈಲ್ವೆ: ಬ್ರಜಿûಲಿನಲ್ಲಿ ರೈಲುಮಾರ್ಗಗಳ ಬೃಹತ್ ಜಾಲವಿದೆ. ಅವುಗಳ ಒಟ್ಟು ಉದ್ದ 32,000 ಕಿಮೀ. ಹೆಚ್ಚು ರೈಲ್ವೆ ಕಂಪನಿಗಳು ಸರ್ಕಾರದ ಆಡಳಿತದಲ್ಲಿವೆ. ಉಳಿದವು ಖಾಸಗಿ ಬಂಡವಾಳದಿಂದ ಸ್ಥಾಪಿತವಾದವು.

ಜಲಸಾರಿಗೆ: ಬ್ರಜಿûಲಿನ ಅನೇಕ ನದಿಗಳು ಹಡಗುಗಳ ಸಂಚಾರಕ್ಕೆ ಯೋಗ್ಯವಾಗಿವೆ. ನದಿಗಳ ಮೇಲೆ ಒಟ್ಟು 43,200 ಕಿಮೀ. ದೂರ ಜಲಯಾನ ಸಾಗುತ್ತದೆ. ಅಮೆeóÁನ್ ನದಿಯ ಮೇಲೆ ಪೆರು ರಾಜ್ಯದ ಇಕ್ವಿಬೋಸ್‍ವರೆಗೆ 3,680 ಕಿಮೀ. ನೌಕಾಯಾನ ಸಾಧ್ಯ. ಅಮೆeóÁನ್ ಮುಖದಿಂದ ಒಳನಾಡಲ್ಲಿ 1,600 ಕಿಮೀ ದೂರ ಸಾಗರ ನೌಕೆಗಳು ಯಾನ ಮಾಡುತ್ತವೆ. ಕರಾವಳಿಯ ನೌಕಾಯಾನದಿಂದ ರಾಷ್ಟ್ರದ ವಿವಿಧ ಪ್ರದೇಶಗಳ ನಡುವೆ ಸಂಪರ್ಕ ಸಾಧಿಸಿದೆ. ರಿಯೋ ಡೆ ಷóನೆರೋ ನೌಕಾಯಾನ ಕೇಂದ್ರ. ವಿದೇಶಿ ಹಡಗುಗಳು ಅಲ್ಲಿಗೆ ಬಂದು ಹೋಗುತ್ತವೆ.

ರಸ್ತೆ ಸಾರಿಗೆ: ಬ್ರಜಿûಲಿನ ವಿಸ್ತೀರ್ಣಕ್ಕೆ ಹೋಲಿಸಿದರೆ ಅಲ್ಲಿಯ ರಸ್ತೆಗಳು ಬಹಳ ಕಡಿಮೆ. ಈಶಾನ್ಯದಲ್ಲಿ ರಸ್ತೆಗಳು ಕಡಿಮೆ. ದಕ್ಷಿಣದಲ್ಲಿ ತಕ್ಕಮಟ್ಟಿಗೆ ಬೆಳೆದಿದೆ. 1976ರಲ್ಲಿ ಒಟ್ಟು 23,82,002 ಕಿಮೀ ಉದ್ದದ ರಸ್ತೆಗಳಿದ್ದುವು. ರಾಷ್ಟ್ರದ ಉತ್ತರ ಭಾಗದಲ್ಲಿ ಹೊಸ ರಸ್ತೆಗಳ ನಿರ್ಮಾಣವಾಗುತ್ತಿದೆ. (ವಿ.ಜಿ.ಕೆ.)

ಅರ್ಥವ್ಯವಸ್ಥೆ: ತೀವ್ರವಾದ ಔದ್ಯೋಗೀಕರಣದ ಪ್ರಯತ್ನದಲ್ಲಿದ್ದರೂ ಬ್ರಜಿûಲಿನ ಪ್ರಮುಖಿಕ್ಷೇತ್ರ ಕರಷಿಯಾಗಿಯೇ ಮುಂದುವರಿದಿದೆ. ಕೃಷಿಕ್ಷೇತ್ರ ಒಟ್ಟು ರಾಷ್ಟ್ರ ವರಮಾನಕ್ಕೆ ಶೇಕಡಾ 11ರಷ್ಟು ಕಾಣಿಕೆ ನೀಡುತ್ತಿದೆ. ಬ್ರಜಿûಲಿನ ರಫ್ತಿನ ಶೇಕಡಾ 40 ಕೃಷಿಕ್ಷೇತ್ರದಿಂದ ಬರುತ್ತಿದೆ. ಪ್ರಪಂಚದಲ್ಲೇ ಕೃಷಿ ವಸ್ತುಗಳನ್ನು ರಫ್ತು ಮಾಡವುದರಲ್ಲಿ ಬ್ರಜಿûಲಿಗೆ ಎರಡನೆಯ ಸ್ಥಾನವಿದೆ. 1981ರಲ್ಲಿ ಕೃಷಿಕ್ಷೇತ್ರದ ಬೆಳೆವಣಿಗೆ ಶೇಕಡಾ 7ರಷ್ಟಾಗಿತ್ತು. ವಿದೇಶೀ ವಿನಿಮಯಗಳಿಸುವ ಇಲ್ಲಿಯ ಪ್ರಮುಖ ಕೃಷಿ ವಸ್ತುಗಳೆಂದರೆ ಕಾಫಿ, ಸಕ್ಕತೆ, ಸೋಯಾಬೀನ್ಸ್, ಕಿತ್ತಳೆರಸ, ಕೋಕೋ, ದನದ ಮಾಂಸ, ಹೊಗೆಸೊಪ್ಪು, ಮುಸುಕಿನ ಜೋಳ ಮತ್ತು ಹತ್ತಿ, ಕಾಫಿಯ ಉತ್ಪಾದನೆ ಮತ್ತು ಪ್ರಪಂಚ ಕಾಫಿಬೆಲೆಯ ಏಳು ಬೀಳು ಬ್ರಜಿûಲಿನ ವಿದೇಶೀ ವಿನಿಮಯದ ಏರು-ತಗ್ಗುಗಳೊಡನೆ ನಿಕಟ ಸಂಪರ್ಕ ಹೊಂದಿವೆ. 1981ರಲ್ಲಿ ಕಳೆದ 16 ವರ್ಷಗಳ ದಾಖಲೆ ಮುರಿದು ಬ್ರಜಿûಲ್ 32 ದಶಲಕ್ಷ ಚೀಲ ಕಾಫಿಯನ್ನು (ಪ್ರತಿ ಚೀಲ 50 ಕೆಜಿ) ಉತ್ಪಾದಿಸಿತ್ತು. ಆದರೆ ಬ್ರಜಿûಲಿನ ಕಾಫಿ ಆಫ್ರಿಕ, ಭಾರತ ಮುಂತಾದ ರಾಷ್ಟ್ರಗಳ ಕಾಫಿಯೊಡನೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರವಾದ ಸ್ಪರ್ಧೆ ಎದರಿಸಬೇಕಾಗಿದೆ.

ಬ್ರಜಿûಲಿನ ಪ್ರಮುಖ ಬೆಳೆಗಳು (000 ಮೆಟ್ರಿಕ್ ಟನ್‍ಗಳಲ್ಲಿ, 1980ರಲ್ಲಿದ್ದಂತೆ) ಹತ್ತಿ 1,676, ಕಾಫಿ 2,122, ಮೆಕ್ಕೆಜೋಳ 20,372, ಬೀನ್ಸ್ 1,968, ಬತ್ತ 9,776, ಗೋದಿ 2,702, ಆಲೂಗೆಡ್ಡೆ 1,940, ಸೋಯಾಬೀನ್ಸ್ 15,156, ಕಬ್ಬು 148,651, ಕೋಕೋ 319, ಕಿತ್ತಳೆಹಣ್ಣು (ದಶಲಕ್ಷದಲ್ಲಿ) 54,459, ಸಹಜ ರಬ್ಬರ್ 27.8. ಇಷ್ಟಿದ್ದರೂ ಇಲ್ಲಿಯ ಕೃಷಿಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಾಲದ ಕೊರತೆ, ಸಣ್ಣ ಹಿಡುವಳಿಗಳು, ಭೂಮಾಲಿಕತ್ವದಲ್ಲಿ ಅಸಮಾನತೆ ಇವು ಮುಖ್ಯವಾದವು ಕಾಫಿಯ ಉತ್ಪಾದನೆಯಲ್ಲಿರುವ ವ್ಯವಸ್ಥೆ ಉಳಿದ ಬೆಳೆಗಳ ವಿಷಯದಲ್ಲಿಲ್ಲ. ಹೆಚ್ಚಿನ ಬೆಲೆಗಳಿಂದಾಗಿ ರಾಸಾಯನಿಕ ಗೊಬ್ಬರವನ್ನು ಬಳಸುವವರು ಕಡಿಮೆ. ಇದರಿಂದ ಭೂಮಿಯ ಉತ್ಪಾದಕತೆಯ ಏರಿಕೆ ಇಲ್ಲ. ಈ ಸಮಸ್ಯೆಗಳಿಂದಾಗಿ ಬ್ರಜಿûಲ್ ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿಲ್ಲ.

ಕೈಗಾರಿಕಾ ಕ್ಷೇತ್ರದಲ್ಲಿ ಬ್ರಜಿûಲ್ ಸಾಧನೆ ಬಲು ಗಮನಾರ್ಹವಾದುದು. ಎರಡನೆಯ ಮಹಾಯುದ್ಧದ ತನಕ ವಾಸ್ತವವಾಗಿ ಬ್ರಜಿûಲ್‍ನಲ್ಲಿ ಯಾವ ಪ್ರಮುಖ ಯಂತ್ರೋತ್ಪಾದನ ಕೈಗಾರಿಕೆಯೂ ಇರಲಿಲ್ಲ. ಒಟ್ಟು ಕೈಗಾರಿಕಾ ಉತ್ಪಾದನೆಯಲ್ಲಿ ಶೇಕಡಾ 66ರಷ್ಟು ಬಟ್ಟೆಗಿರಣಿಗಳಿಂದ ಬರುತ್ತಿತ್ತು ಅಷ್ಟೆ. ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಸರ್ಕಾರದ ಮೂಲಭೂತ ಕೈಗಾರಿಕೆಗಳಲ್ಲಿ, ಆಮದು ಬದಲಿ ವಸ್ತು ಕೈಗಾರಿಕೆಗಳಲ್ಲಿ ಹೂಡಿಕೆ ಮಾಡಿತು. ಜೊತೆಗೆ ವಿದೇಶೀ ಹೂಡಿಕೆ ಸಹ ಹೆಚ್ಚಾಯಿತು. 1950ರಿಂದೀಚೆಗೆ ಮೋಟಾರ್‍ಕಾರ್ ರೆಫ್ರಿಜರೇಟರ್, ಟೆಲಿವಿಷನ್, ರೇಡಿಯೋಗಳ ಉತ್ಪಾದನ ಪ್ರಾರಂಭವಾಯಿತು. 1950ರ ವೇಳೆಗ ಯಂತ್ರೋಪಕರಣಗಳ ಉತ್ಪಾದನಾ ಕೈಗಾರಿಕೆ, ವಿದ್ಯುತ್ ಉತ್ಪಾದನ ಘಟಕ, ಹಡಗು ನಿರ್ಮಾಣ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದುವು. 1970 ಮತ್ತು 80ರ ದಶಕದಲ್ಲಿ ಅನೇಕ ಆಧುನಿಕ ಕೈಗಾರಿಕೆಗಳು ಬ್ರಜಿûಲಿನಲ್ಲಿ ಅಸ್ತಿತ್ವಕ್ಕೆ ಬಂದಿವೆ. ಇಲ್ಲಿಯ ಪ್ರಮುಖ ಕೈಗಾಕೆಗಳು ಮತ್ತು ಅವುಗಳ ಉತ್ಪಾದನೆಯನ್ನು (000 ಮೆಟ್ರಿಕ್‍ಟನ್‍ಗಲಲ್ಲಿ 1981ರಲ್ಲಿದ್ದಂತೆ) ಮುಂದೆ ಕೊಡಲಾಗಿದೆ.

ಕೋಕ್ 3,741, ಕಬ್ಬಿಣ 10,791, ಉಕ್ಕು 13,226, ಸಿಮೆಂಟ್ 24,886, ಸಕ್ಕರೆ 3,266, ನ್ಯೂಸ್‍ಪ್ರಿಂಟ್ 105, ಪೇಪರ್ ಮತ್ತು ಪೇಪರ್ ಬೋರ್ಡ್ 3,193, ಸಂಶ್ಲೇಷಿತ ರಬ್ಬರ್ 228,871. ಕಾರುಗಳು (ಸಂಖ್ಯೆ) 612,349, ವ್ಯಾಪಾರ ವಹಿವಾಟು ವಾಹನಗಳು 142,262, ಟ್ರಾಕ್ಟರುಗಳು 43,485, 1981ರಲ್ಲಿ ಬ್ರಜಿûಲಿನ ಒಟ್ಟು ರಫ್ತು ಆದಾಯದಲ್ಲಿ ಕೈಗಾರಿಕಾವಸ್ತುಗಳ ರಫ್ತು ಶೇಕಡಾ 58ರಷ್ಟಿತ್ತು.

ಬ್ರಜಿûಲಿನಲ್ಲಿ ಅಪಾರ ಗಣಿ ಸಂಪತ್ತಿರುವುದು ಆ ರಾಷ್ಟ್ರದ ಮೂಲಭೂತ ಕೈಗಾರಿಕೆಗಳ ಅಭಿವೃದ್ಧಿಗೆ ಪ್ರೋತ್ಸಾಹದಾಯಕವಾಗಿದೆ. ಅದರಲ್ಲೂ ವೀನಸ್ ಗೆರಾಯ್ಸ್ ಮತ್ತು ಅಮeóÉೂನೀಯಾ ಪ್ರದೇಶಗಳಲ್ಲಿಯ ಗಣಿಸಂಪತ್ತು ಬ್ರಜಿûಲಿಗೆ ವರಪ್ರಸಾದವಾಗಿದೆ. 1981ರಲ್ಲಿ ಕಬ್ಬಿಣದ ಅದುರಿನ ರಫ್ತಿನಲ್ಲಿ ಬ್ರಜಿûಲ್ ಪ್ರಪಂಚದಲ್ಲೇ ಪ್ರಮುಖ ಸ್ಥಾನ ಪಡೆದುಕೊಂಡಿತು. ಆ ವರ್ಷ ಬ್ರಜಿûಲಿನ ಕಬ್ಬಿಣ ಅದುರಿನ ರಫ್ತು 82 ದಶಲಕ್ಷ ಟನ್ ಆಗಿತ್ತು. 1980ರಲ್ಲಿ ಸೆರ್ರಾಪೆಲೆಡಾದಲ್ಲಿ ಪತ್ತೆಹಚ್ಚಿದ ಚಿನ್ನದ ಗಣಿಯಲ್ಲಿ 14 ಟನ್ ಚಿನ್ನ ಉತ್ಪಾದನೆ ಇದ್ದುದು 1985ರಲ್ಲಿ 100 ಟನ್‍ಗೆ ಏರಿದೆ. ಇದರಿಂದ ಚಿನ್ನದ ಉತ್ಪಾದನೆಯಲ್ಲಿ ಬ್ರಜಿûಲಿಗೆ ಪ್ರಪಂಚದಲ್ಲಿ ಮೂರನೆಯ ಸ್ಥಾನ ದೊರೆತಿದೆ. ಹೊಸ ಹೊಸ ಗಣಿಗಳ ಶೋಧ ಬ್ರಜಿûಲಿನಲ್ಲಿ ಮುಂದುವರಿದಿದೆ. ಫಾಸ್ಫೇಟ್, ಯುರೇನಿಯಮ್, ಮ್ಯಾಂಗನೀಸ್, ಟೈಟೇನಿಯಮ್, ತಾಮ್ರ, ಸತುವು, ಕಲ್ಲಿದ್ದಲು ಹೇರಳವಾಗಿ ದೊರೆಯುವ ನಿರೀಕ್ಷೆಯಲ್ಲಿದೆ. ಪೆಟ್ರೋಲಿಯಮ್ ದೃಷ್ಟಿಯಿಂದ ಬ್ರಜಿûಲ್ ಸ್ವಾವಲಂಬಿಯಲ್ಲ. ತನ್ನ ಅಗತ್ಯದಲ್ಲಿ ಶೇಕಡಾ 25ರಷ್ಟನ್ನು ಮಾತ್ರ ಅದು ಉತ್ಪಾದಿಸುತ್ತದೆ. ಇದರಿಂದಾಗಿ, ತನ್ನ ಆಮದು ಖರ್ಚಿನಲ್ಲಿ ಶೇಕಡಾ 50ರಷ್ಟನ್ನು ಪೆಟ್ರೋಲಿಯಮ್ಮಿಗಾಗಿ ವೆಚ್ಚಮಾಡುತ್ತಿದೆ. ಮದ್ಯಸಾರದಿಂದ ಚಲಿಸುವ ವಾಹನಗಳನ್ನು ಅಭಿವೃದ್ಧಿಪಡಿಸಿ ಪೆಟ್ರೋಲಿಯಮ್ ಉಪಯೋಗವನ್ನು 1985ರ ವೇಳೆಗೆ ಶೇಕಡಾ 40ರಷ್ಟು ಮಾಡಬೇಕೆಂಬುದು ಬ್ರಜಿûಲಿನ ಗುರಿ.

ಕೈಗಾರಿಕಾ ಕ್ಷೇತ್ರ ತನ್ನ ಉತ್ಪಾದನಾ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೂ ಹೆಚ್ಚಿನ ಕೈಗಾರಿಕೆಗಳು ಕೆಲವೇ ಪ್ರದೇಶದಲ್ಲಿ ಕೇಂದೀಕೃತವಾಗಿರವುದು ಬ್ರಜಿûಲಿನ ಕೈಗಾರಿಕಾ ಕ್ಷೇತ್ರದ ಪ್ರಮುಖ ಅಂಶವಾಗಿದೆ. ಉದಾಹರಣೆಗೆ ಸೌ ಪೌಲೂ, ರಿಯೋಡೇ ಷನೆರೋ ಗುವಾನಾಬರಾ ಮತ್ತು ಮೀನಸ್ ಗೆರಾಯ್ಸ್‍ನಲ್ಲೇ ಹೆಚ್ಚಿನ ಕೈಗಾರಿಕೆಗಳು ಆಸ್ತಿತ್ವಕ್ಕೆ ಬಂದಿವೆ.

ವಿದೇಶೀ ವ್ಯಾಪಾರ: ಬ್ರಜಿûಲ್ ತನ್ನ ವಿದೇಶಿ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. 1975ರಲ್ಲಿ ಅದರ ರಫ್ತು 8,670 ದಶಲಕ್ಷ ಡಾಲರುಗಳಾಗಿದ್ದರೆ 1981ರ ವೇಳೆಗೆ ಅದು 23,293 ದಶಲಕ್ಷ ಡಾಲರ್ ಮುಟ್ಟಿತ್ತು. ಹಾಗೆಯೇ, ಅದರ ಅಮದು 1975ರಲ್ಲಿ 12,210 ದಶಲಕ್ಷ ಡಾಲರುಗಳಿದ್ದುದು, 1981 ವೇಳೆಗೆ 22,091ರ ದಶಲಕ್ಷ ಡಾಲರುಗಳಿಗೆ ಏರಿತ್ತು. ಸರ್ಕಾರ ರಫ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. 1982ರಲ್ಲಿ ಇಂಥ ಉತ್ತೇಜನಗಳಿಗಾಗಿ ಸರ್ಕಾರ 8,900 ದಶಲಕ್ಷ ಡಾಲರುಗಳನ್ನು ವೆಚ್ಚಮಾಡಿತು. ತನ್ನ ರಫ್ತನ್ನು ಹೆಚ್ಚಾಗಿ ಚೀನ, ಸೈಬೀರಿಯ, ಅಂಗೋಲಾ, ಮೆಕ್ಸಿಕೋ ಮತ್ತು ವೆನಿಜ್ವೇಲ ದೇಶಗಳ ಜೊತೆ ಕುದುರಿಸಿಕೊಳ್ಳಲು ಬ್ರಜಿûಲ್ ತೀವ್ರವಾಗಿ ಪ್ರಯತ್ನಿಸುತ್ತಿದೆ. ಈ ರಾಷ್ಟ್ರಗಳಿಂದ ತೈಲವನ್ನು ಆಮದು ಮಾಡಿಕೊಳ್ಳಬಹುದೆಂಬುದೇ ಈ ಪ್ರಯತ್ನದ ಹಿಂದಿರುವ ಅಂಶ.

ಸಾಮಾಜಿಕ ಭದ್ರತೆ : 1966ರಲ್ಲಿ ಬ್ರಜಿûಲ್ 1923ರ ಸಾಮಾಜಿಕ ಭದ್ರತಾ ಕಾಯಿದೆಯನ್ನು ಪುನರ್ವಿಮರ್ಶಿಸಿತು. 1966ರಲ್ಲಿ ಸಾಮಾಜಿಕ ಭದ್ರತಾ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1977ರಲ್ಲಿ ಸಾಮಾಜಿಕ ಭದ್ರತೆಯ ಎಲ್ಲ ಕಾರ್ಯಕ್ರಮಗಳನ್ನು ಸಂಯೋಜಿಸಿ "ಸಾಮಾಜಿಕ ವಿಮೆ ಮತ್ತು ಸಹಾಯದ ರಾಷ್ಟ್ರೀಯ ವ್ಯವಸ್ಥೆ"ಯ ವ್ಯಾಪ್ತಿಯೊಳಕ್ಕೆ ತರಲಾಯಿತು. ಈ ವ್ಯವಸ್ಥೆ ಕೈಗಾರಿಕಾ ಕಾರ್ಮಿಕರ ಅಪಘಾತ, ಮರಣ, ಮಹಿಳಾ ಕಾರ್ಮಿಕರ ಕುಟುಂಬ ಕಲ್ಯಾಣಗಳಿಗೆ ವ್ಯಾಪಕವಾದ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.

ಇತ್ತೀಚಿನ ಬೆಳವಣಿಗೆಗಳು: ಕಳೆದ 25 ವರ್ಷಗಳಲ್ಲಿ ಬ್ರಜಿûಲಿನ ಆರ್ಥಿಕ ಬೆಳವಣಿಗೆ ತೃಪ್ತಿದಾಯಕವಾಗಿದೆ. 1963 ಮತ್ತು 1981ರ ನಡುವೆ ಬ್ರಜಿûಲಿನ ಒಟ್ಟು ರಾಷ್ಟ್ರೀಯ ವರಮಾನ ವರ್ಷಕ್ಕೆ ಶೇಕಡ 8ರಂತೆ ಬೆಳೆದು ಬಂದಿದೆ. ಈ ಬೆಳೆವಣಿಗೆಯೊಡನೆಯೇ ವಿದೇಶಿ ರಫ್ತು ಸಹ ವಿಸ್ತಾರಗೊಂಡಿದೆ, ಇದೇ ಅವಧಿಯಲ್ಲಿ ವರ್ಷಕ್ಕೆ ರಫ್ತು ಶೇಕಡ 17ರಂತೆ ಬೆಳೆದಿದೆ. ಆದರೆ 1973-74ರಲ್ಲಿ ತೈಲ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರಿದ ಅನಂತರ ಬ್ರಜಿûಲಿನ ಅರ್ಥವ್ಯವಸ್ಥೆ ಅನೇಕ ಎಡರು-ತೊಡರುಗಳನ್ನು ಎದುರಿಸಬೇಕಾಗಿ ಬಂದಿದೆ. ಉದಾಹರಣೆಗೆ 1969-73ರ ಅವಧಿಯಲ್ಲಿ ರಾಷ್ಟ್ರೀಯ ವರಮಾನ ವರ್ಷಕ್ಕೆ ಶೇಕಡಾ 11ರಂತೆ ಹೆಚ್ಚಾಯಿತು. ಇದೇ ಅವಧಿಯಲ್ಲಿ ಹಣದುಬ್ಬರ ವರ್ಷಕ್ಕೆ ಶೇಕಡಾ 20ರಷ್ಟಿತ್ತು. ಆದರೆ 1973-74 ಮತ್ತು 1978-79ರ ಅವಧಿಯಲ್ಲಿ ರಾಷ್ಟ್ರೀಯ ವರಮಾನ ವರ್ಷಕ್ಕೆ ಶೇಕಡಾ 7ರಷ್ಟು ಹೆಚ್ಚಾಯಿತು. ಆದರೆ, ಹಣದುಬ್ಬರದ ದರ ಮಾತ್ರ ವರ್ಷಕ್ಕೆ 40ರಷ್ಟಾಯಿತು; 1979ರಲ್ಲಿ ಮತ್ತೆ ತೈಲ ಬೆಲೆ ಏರಿದ ಮೇಲೆ ಬ್ರಜಿûಲ್ ಇನ್ನೂ ಅನೆಕ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. 1979 ಮತ್ತು 1980ರ ಮೊದಲ ಭಾಗದ ನಡುವೆ ಈ ಕಾರಣದಿಂದಾಗಿ ಬ್ರಜಿûಲ್ ತನ್ನ ಹಣಕಾಸು ಮತ್ತು ನೀತಿಗಳನ್ನು ಬಿಗಿಗೊಳಿಸಬೇಕಾಯಿತಲ್ಲದೆ ತನ್ನ ಕರೆನ್ಸಿಯಾದ ಕ್ರೂಜಿûರೋವನ್ನು ಅಪಮೌಲ್ಯಗೊಳಿಸಬೇಕಾಯಿತು. ಈ ಕ್ರಮಗಳಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಅಂತರರಾಷ್ಟ್ರೀಯ ಲೇಣಿ-ದೇಣಿ ತಃಖ್ತೆಯ ಚಾಲ್ತಿ ಲೆಕ್ಕದ ಕೊರತೆ 1980ರಲ್ಲಿ 12 ಬಿಲಿಯನ್ ಡಾಲರುಗಳಿದ್ದುದು 1981ರಲ್ಲಿ 11 ಬಿಲಿಯನ್ ಡಾಲರುಗಳಿಗೆ ಇಳಿಯಿತು. ತನ್ನ ಕೊರತೆಯನ್ನು ಬ್ರಜಿûಲ್ ಮುಖ್ಯವಾಗಿ ವಿದೇಶೀ ಸಾಲಗಳಿಂದ ಭರ್ತಿಮಾಡಿಕೊಂಡಿತು.

ಆಂತರಿಕವಾಗಿ ಹಣದುಬ್ಬರ ಸಮಸ್ಯೆಯನ್ನು ಹತ್ತಿಕ್ಕಲು ಬ್ರಜಿûಲ್ ಸಮರ್ಥವಾಗೇ ಇಲ್ಲ. 1982ರಲ್ಲಿ ಹಣದುಬ್ಬರ ಶೇಕಡ 100ರಷ್ಟಿತ್ತು. ಒಟ್ಟು ನೈಜ ಉತ್ಪಾದನೆ ಆವರ್ಷ ಹೆಚ್ಚು ಕಮ್ಮಿ ಹಿಂದಿನ ವರ್ಷದಷ್ಟೆ ಇದ್ದು, ಆಂತರಿಕವಾಗಿ ಉತ್ಪಾದನೆ ಕ್ಷೇತ್ರದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿಲ್ಲ. ಈ ಸಂಕಷ್ಟಕ್ಕೆ ಮುಖ್ಯಕಾರಣಗಳೆಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳ ಕುಸಿತ, ಬ್ರಜಿûಲಿನ ಕೈಗಾರಿಕಾ ವಸ್ತುಗಳಿಗೆ ಬೇಡಿಕೆಯಲ್ಲಿ ಇಳಿತಾಯ, ಪ್ರತಿಯೊಂದು ರಾಷ್ಟ್ರವೂ ರಕ್ಷಿತ ವ್ಯಾಪಾರವನ್ನು ಹೆಚ್ಚಾಗಿ ಅನುಸರಿಸಿದುದು. ಹೀಗಾಗಿ, ಬ್ರಜಿûಲಿನ ಅಂತರರಾಷ್ಟ್ರೀಯ ಲೇಣಿ-ದೇಣಿ ತಃಖ್ತೆಯ ಚಾಲ್ತಿ ಲೆಕ್ಕದ ಕೊರತೆ 1982ರಲ್ಲಿ ಹಿಂದೆಂದೂ ಇರದಿದ್ದ 14.5 ಬಿಲಿಯನ್ ಡಾಲರುಗಳನ್ನು ಮುಟ್ಟಿತು. ಈ ಕೊರತೆಯಲ್ಲಿ 5.5 ಬಿಲಿಯನ್ ಡಾಲರುಗಳನ್ನು ಹೊರ ರಾಷ್ಟ್ರಗಳಿಂದ ಬಂದ ನಿಧಿಯಿಂದ ತುಂಬಿಕೊಂಡು ಉಳಿದ 9 ಬಿಲಿಯನ್ ಡಾಲರುಗಳನ್ನು ತನ್ನದೇ ಕಾಯ್ದಿಟ್ಟ ನಿಧಿಯಿಂದ ತುಂಬಿಕೊಂಡಿತು.

1982ರ ಕೊನೆಯ ವೇಳೆಗೆ ಬ್ರಜಿûಲಿನ ಅರ್ಥವ್ಯವಸ್ಥೆಯ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿತು. ಪ್ರಪಂಚ ವಾಣಿಜ್ಯದಲ್ಲಿ ಸ್ಥಗಿತತೆ, ಆಂತರಿಕವಾಗಿ ಸೂಚ್ಯಂಕ ನಿರ್ಧಾರಿತ ಕೂಲಿ, ನಾನಾ ವಿಧವಾದ ಪ್ರೋತ್ಸಾಹಗಳಿಗಾಗಿ ಖರ್ಚು, ಪೆಟ್ರೋಲಿಯಮ್ ಆಮದಿಗಾಗಿ ಹೇರಳ ಹಣ ವೆಚ್ಚ, ಸಾರ್ವಜನಿಕ ಉದ್ಯಮಗಳ ವಿಸ್ತರಣೆ, ಈ ಕಾರಣಗಳಿಂದಾಗಿ ಬ್ರಜಿûಲ್ ಹಣಕಾಸು ಕ್ಷೇತ್ರದ ಮೆಲೆ ಹತೋಟಿ ಇಟ್ಟಕೊಳ್ಳುವುದು ಕಷ್ಟವಾಯಿತು. ಹಣದುಬ್ಬರ ವರ್ಷಕ್ಕೆ ಶೇಕಡ 100ರಂತೆಯೇ ಮುಂದುವರಿಯಿತು. ವಿದೇಶೀ ಸಾಲದಲ್ಲಿ ಅಸಾದಾರಣ ಏರಿಕೆ ತಲೆದೋರಿತು. 1982ರ ಅಂತ್ಯದ ವೇಳೆಗೆ ಬ್ರಜಿûಲಿನ ವಿದೇಶಿ ಸಾಲ 81 ಬಿಲಿಯನ್ ಡಾಲರುಗಳಾಗಿತ್ತು. ಇದಕ್ಕೆ ತೆರಬೇಕಾದ ಬಡ್ಡಿಯ ಭಾರವನ್ನು ಹೊರುವುದೇ ಬ್ರಜಿûಲಿಗೆ ಕಷ್ಟವಾಯಿತು. ಈ ಕಾರಣಗಳಿಗಾಗಿ ಅದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ 1983ರಲ್ಲಿ 4.2 ಬಿಲಿಯಿನ್ ಎಸ್.ಡಿ.ಆರ್. ಸಾಲ ಪಡೆಯಿತು.

ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಇನ್ನು ಮುಂದೆ ಕೆಲವು ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಬ್ರಜಿûಲ್ ಯೋಚಿಸುತ್ತಿದೆ. ಮೊತ್ತಮೊದಲಿಗೆ ಹಣದುಬ್ಬರವನ್ನು ಕಡಿಮೆ ಮಾಡಬೇಕು. ಪ್ರಸ್ತುತದ ಶೇಕಡ 100ರ ಹಣದುಬ್ಬರ ದರವನ್ನು 1984ರ ಕೊನೆಯ ವೇಳೆಗೆ ಶೇಕಡಾ 40ಕ್ಕೆ ಮತ್ತು 1985ರ ಕೊನೆಯ ವೇಳೆಗೆ ಶೇಕಡಾ 20ಕ್ಕೆ ಇಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಸಾರ್ವಜನಿಕ ಕೈಗಾರಿಕೆಗಳು ಉತ್ತಮವಾಗಿ ಕೆಲಸ ಮಾಡಬೇಕು ಮತ್ತು ಇವುಗಳ ವಿಸ್ತರಣೆಗಾಗಿ ಸದ್ಯಕ್ಕೆ ವಿಪರೀತ ಹಣ ಖರ್ಚು ಮಾಡಬಾರದು ಎನ್ನುವುದು ಸಹ ಪ್ರಸ್ತುತದ ನೀತಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಕರೆನ್ಸಿಯ ಬೆಲೆಯನ್ನು ಕಾಪಾಡಿಕೊಳ್ಳಲು 1983 ಫೆಬ್ರವರಿ 21ರಲ್ಲಿ ಶೇಕಡಾ 23ರಷ್ಟು ಅಪಮೌಲ್ಯಗೊಳಿಸಿತು. ಎಲ್ಲ ವಿಧದ ಪ್ರೋತ್ಸಾಹಕ ವೆಚ್ಚಗಳಲ್ಲಿ ಕಡಿತ, ರಫ್ತು ವೃದ್ಧಿ, ಬಾಹ್ಯ ಸಾಲದಲ್ಲಿ ಇಳಿತಾಯ, ಆಂತರಿಕ ಉಳಿತಾಯ ದರದಲ್ಲಿ ಏರಿಕೆ, ಕೃಷಿ ಕ್ಷೇತ್ರದ ಸಾಲಕ್ಕೆ ನೀಡುತ್ತಿದ್ದ ಸಹಾಯ ಧನದಲ್ಲಿ ಕಡಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಆಚರಿಸುವುದು ಈ ಮುಂತಾದ ಯೋಜನೆಗಳಿವೆ. (ಸಿ.ಕೆ.ಆರ್.)

ಶಿಕ್ಷಣ ಪದ್ಧತಿ : ಬ್ರಜಿûಲ್‍ನ ಶಿಕ್ಷಣಪದ್ಧತಿ 1962ರ ತನಕ ಬೇರೆ ಬೇರೆ ಪ್ರಾಧಿಕಾರಗಳಿಗೆ ಸೇರಿದ್ದು ಬೇರೆ ಬೇರೆ ನಿಯಮಾವಳಿಗಳನ್ನು ಅನುಸರಿಸುತ್ತಿತ್ತು. ಪ್ರಾಥಮಿಕ ಶಿಕ್ಷಣದ ಹೊಣೆಗಾರಿಕೆ ರಾಜ್ಯ ಸರ್ಕಾರ ಅಥವಾ ಪೌರಸಭೆಗಳಿಗೆ ಸೇರಿದ್ದು, ಶಿಕ್ಷಣ ಹೊಣೆಗಾರಿಕೆ ರಾಜ್ಯ ಸರ್ಕಾರ ಅಥವಾ ಪೌರಸಭೆಗಳಿಗೆ ಸೇರಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ನಿರ್ದೇಶನದಲ್ಲಿ ನಡೆಯುತ್ತಿತ್ತು. ಪ್ರೌಢ ಹಾಗೂ ಉನ್ನತ ಶಿಕ್ಷಣ ಸರ್ಕಾರದ ಸಚಿವಾಲಯಕ್ಕೆ ಸೇರಿದ್ದು ಶಿಕ್ಷಣ ಮತ್ತು ಸಂಸ್ಕøತಿ ಸಚಿವರು ರಾಷ್ಟ್ರೀಯ ಶಿಕ್ಷಣ ಸಲಹಾ ಮಂಡಲಿಯ ಸಲಹೆಯಂತೆ ಅದರ ಆಡಳಿತ ನಡೆಸುತ್ತಿದ್ದರು. 1961ರ ಕಾಂಗ್ರೆಸ್ ಶಾಸನದ ಪ್ರಕಾರ ಶಿಕ್ಷಣದ ಆಡಳಿತವನ್ನು ವಿಕೇಂದ್ರೀಕರಿಸಲಾಯಿತು. ಕೇಂದ್ರ ಶಿಕ್ಷಣ ಸಲಹಾ ಮಂಡಲಿಗೆ ಶಿಕ್ಷಣದ ನೀತಿನಿರೂಪಣೆ ರೂಪಿಸುವ ಹಕ್ಕನ್ನೂ ಕೆಲವು ನಿಯಂತ್ರಣಾಧಿಕಾರವನ್ನೂ ವರ್ಗಾಯಿಸಿತು. ಜೊತೆಗೆ ರಾಜ್ಯದ ಶಿಕ್ಷಣ ಸಲಹಾ ಮಂಡಲಿಗಳನ್ನು ರಚಿಸಿ ಅವು ರಾಜ್ಯಶಾಸನಗಳಂತೆ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿತು. ರಾಜ್ಯಸರ್ಕಾರಕ್ಕೂ ಪೌರಸಭೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸ್ವಾಯತ್ತರೆ ನೀಡಿ ಅವು ತಮ್ಮ ಕಾರ್ಯಕ್ರಮವನ್ನು ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಅವಕಾಶ ಕಲ್ಪಿಸಿತು.

ಶಿಕ್ಷಣದ ಅಂಗರಚನೆ (ವ್ಯವಸ್ಥೆ) : ನಾಲ್ಕುವರ್ಷದ ಪ್ರಾಥಮಿಕ ಶಿಕ್ಷಣ, 7 ವರ್ಷದ ಪ್ರೌಢ ಶಿಕ್ಷಣ, 3-6 ವರ್ಷಗಳ ಉನ್ನತೆ (ಪದವಿ) ಶಿಕ್ಷಣ-ಈ ಮೂರು ಅಂತಸ್ತುಗಳಲ್ಲಿ ಇಲ್ಲಿಯ ಶಿಕ್ಷಣ ವ್ಯವಸ್ಥೆಯಿದೆ. ಕೆಲವು ಪ್ರಾಥಮಿಕ ಶಾಲೆಗಳು 5 ಮತ್ತು 6ನೆಯ ತರಗತಿಗಳನ್ನೂ ಹೊಂದಿವೆ. ವಿದ್ಯಾರ್ಥಿಗಳು 7ನೆಯ ವಯಸ್ಸಿನಲ್ಲಿ ಶಾಲೆಗೆ ಸೇರುತ್ತಾರೆ. ಹತ್ತು ವರ್ಷ ತುಂಬಿದವರು ಪ್ರೌಢಶಾಲೆಗೆ ಸೇರಬಹುದು. ಅನೇಕ ಪ್ರೌಢಶಾಲೆಗಳು ಪ್ರವೇಶ ಪರೀಕ್ಷೆ ನಡೆಸುವುವು. ಪ್ರೌಢ ಶಾಲಾ ವಿಧ್ಯಾಭ್ಯಾಸ ಎರಡು ಸೈಕಲ್‍ಗಳ ವ್ಯವಸ್ಥೆಯಲ್ಲಿದೆ. 4 ವರ್ಷದ ಪ್ರಥಮ ಸೈಕಲ್ ಮತ್ತು 3 ವರ್ಷದ ದ್ವಿತೀಯ ಸೈಕಲ್ ಪ್ರಾಥಮಿಕ ಶಾಲೆಯ ಅಧ್ಯಾಪಕರ ಶಿಕ್ಷಣ ನಾರ್ಮಲ್ ಸ್ಕೂಲುಗಳಲ್ಲೂ ತಾಂತ್ರಿಕ ಪ್ರೌಢಶಾಲೆಗಳಲ್ಲೂ ನಡೆಯುತ್ತದೆ. ದ್ವಿತೀಯ ಸೈಕಲ್ 4 ವರ್ಷದ್ದಾಗಿರುತ್ತದೆ. ಸಾಮಾನ್ಯವಾಗಿ ಪ್ರೌಢಶಾಲೆಗಳಲ್ಲಿ 3 ರೀತಿಯ ಪಠ್ಯಕ್ರಮ, ಪ್ರಾಥಮಿಕ ಶಾಲೆಗಳ ಅಧ್ಯಾಪಕರಾಗತಕ್ಕವರಿಗೆ ಪ್ರಶಿಕ್ಷಣದ ಕಾರ್ಯಕ್ರಮ ಮತ್ತು ಇತರರಿಗೆ ವಾಣಿಜ್ಯ ಉದ್ಯೋಗ, ಕೃಷಿ ಈ ರೀತಿಯ ಪಠ್ಯಕ್ರಮಗಳಿರುತ್ತವೆ.

ಉನ್ನತಶಿಕ್ಷಣ ವಿಶ್ವವಿದ್ಯಾಲಯಗಳಲ್ಲೂ ಖಾಸಗಿ ಸ್ವತಂತ್ರ ಸಂಸ್ಥೆಗಳಲ್ಲೂ ಗ್ರಾಮೀಣ ಕೃಷಿ ವಿದ್ಯಾಲಯಗಳಲ್ಲೂ ಏಪರ್Àಟ್ಟಿದೆ. ಪ್ರೌಢಶಾಲೆ ಮುಗಿಸಿದವರು ವಿಶ್ವವಿದ್ಯಾಲಯ ಅಥವಾ ಉನ್ನತ ವಿದ್ಯಾಲಯ ನಡೆಸುವ ಪ್ರವೇಶ ಪರೀಕ್ಷೆಯಲ್ಲ; ಉತ್ತೀರ್ಣರಾದರೆ ಉನ್ನತ ಶಿಕ್ಷಣಕ್ಕೆ ಅರ್ಹರಾಗುತ್ತಾರೆ. ಖಾಸಗಿ ಉನ್ನತ ವಿದ್ಯಾಲಯಗಳಿಗೆ ಸರ್ಕಾರದ ಮನ್ನಣೆಯೂ ಅನುದಾನವೂ ದೊರಕುತ್ತವೆ. ಇವುಗಳ ಜೊತೆಗೆ ದೇವತಾಶಾಸ್ತ್ರ, ಸೈನಿಕ ಶಿಕ್ಷಣ ಸಂಸ್ಥೆಗಳೂ ಉಂಟು. ಅವುಗಳಲ್ಲಿ ಕೆಲವು ಉಮೇದುವಾರಿ ಶಿಕ್ಷಣ ಸಂಸ್ಥೆಗಳಾಗಿದ್ದು ಸರ್ಕಾರದ ಮನ್ನಣೆ ಪಡೆದಿವೆ.

ಆಡಳಿತ : ಶಿಕ್ಷಣದ ವಿಕೇಂದ್ರಿಕರಣವಾದ ಮೇಲೆ ಕೇಂದ್ರ ಸರ್ಕಾರ ಸ್ಥೂಲ ನೀತಿನಿರೂಪಣೆಗಳನ್ನು ಮಾತ್ರ ಮಾಡಿ ಮಿಕ್ಕ ಅಂಶಗಳನ್ನು ರಾಜ್ಯ ಸರ್ಕಾರಗಳಿಗೂ ಪೌರಾಡಳಿತಗಳಿಗೂ ಬಿಡುತ್ತದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಆಡಳಿತ ಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಸೇರಿರುತ್ತದೆ. ರಾಜ್ಯ ಸರ್ಕಾರದ ಹಾಗೂ ಪೌರಸಭೆಗಳ ಪ್ರೌಢಶಾಲೆಗಳೆಲ್ಲಿ ರಾಜ್ಯ ಸರ್ಕಾರದ ಆಡಳಿತಕ್ಕೆ ಸೇರಿವೆ. 1962ಕ್ಕೆ ಹಿಂದೆ ಆರಂಭದಾಗಿದ್ದ ಖಾಸಗಿ ಪ್ರಾಢಶಾಲೆಗಳು ರಾಜ್ಯ ಅಥವಾ ಕೇಂದ್ರ ಸರ್ಕಾರದ ಆಡಳಿತಕ್ಕೆ ಸೇರುವ ನಿರ್ಧಾರವನ್ನು ತಾವೇ ಕೈಕೊಳ್ಳಬಹುದು. ಆದರೆ ಅನಂತರ ಸ್ಥಾಪನೆಯಾದ ಖಾಸಗಿ ಪ್ರೌಢಶಾಲೆUಳೆÀಲ್ಲ ರಾಜ್ಯ ಸರ್ಕಾರದ ನಿರ್ದೆಶನಕ್ಕೆ ಸೇರಿವೆ. ಉನ್ನತ ಶಿಕ್ಷಣ ಸಲಹಾ ಮಂಡಲಿಯ ನಿರ್ದೆಶನದಂತೆ ನಡೆದುಕೊಳ್ಳಬೇಕು . ವಿಶ್ವವಿದ್ಯಾಲಯವುಳ್ಳ ರಾಜ್ಯ ಐದು ವರ್ಷ ಕೆಲಸ ಮಾಡಿರುವ ತನ್ನ ಎಲ್ಲ ಶಿಕ್ಷಣ ಸಂಸ್ಥೆಗಳ ಆಡಳಿತವನ್ನೂ ವಹಿಸಿಕೊಳ್ಳಬಹುದು.

ಉನ್ನತ ವಿದ್ಯಾಲಯದ ಆಡಳಿತ ಒಂದು ಮಂಡಲಿಗೆ ಸೇರಿದೆ. ಅದರಲ್ಲಿ ಅಧ್ಯಾಪಕರೂ ವಿದ್ಯಾರ್ಥಿ ಪ್ರತಿನಿಧಿಗಳೂ ಇರುತ್ತಾರೆ. ಈ ಮಂಡಲಿ ವಿಶ್ವವಿದ್ಯಾಲಯದ ಆಡಳಿತ ಮಂಡಲಿಗೆ ತನ್ನ ಪ್ರತಿನಿಧಿಯನ್ನು ಕಳಿಸುತ್ತದೆ. ಅದರಲ್ಲೂ ವಿದ್ಯಾರ್ಥಿ ಪ್ರತಿನಿಧಿ ಇರುತ್ತಾನೆ. ರಾಜ್ಯ ವಿದ್ಯಾಲಯದ ಮುಖ್ಯಸ್ಥರನ್ನು ರಾಜ್ಯ ಗವರ್ನರರೂ ಕೇಂದ್ರಸರ್ಕಾರದ ವಿದ್ಯಾಲಯಕ್ಕೆ ಗಣರಾಜ್ಯದ ಅಧ್ಯಕ್ಷರೂ ಆಯಾ ಆಡಳಿತ ಮಂಡಲಿ ಸೂಚಿಸುವ ಮೂರು ಮಂದಿಗಳಲ್ಲೊಬ್ಬರನ್ನು ನೇಮಕಮಾಡುವರು. ವಿಶ್ವವಿದ್ಯಾಲಯದ ರೆಕ್ಟಾರರನ್ನು ಇದೇ ರೀತಿಯಲ್ಲಿ ನೇಮಿಸಲಾಗುವುದು. ಖಾಸಗಿ ವಿದ್ಯಾಲಯಗಳೂ ಅಂಗೀಕೃತ ನಿಯಮಗಳನ್ನು ಅನುಸರಿಸಿ ನಿರ್ದೇಶಕರನ್ನು ನೇಮಕಮಾಡಿಕೊಳ್ಳುವುವು.

ಹಣಕಾಸು : ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳ ವೆಚ್ಚವನ್ನು ಆ ಶಾಲೆಗಳನ್ನು ನಡೆಸುತ್ತಿರುವ ಸರ್ಕಾರಗಳೇ ವಹಿಸಿಕೊಳ್ಳುತ್ತವೆ. ಖಾಸಗಿ ಶಾಲೆಗಳು, ವಿದ್ಯಾರ್ಥಿಗಳು ಕೊಡುವ ಶುಲ್ಕ ಕೇಂದ್ರ ಅಥವಾ ರಾಜ ಸರ್ಕಾರ ನೀಡುವ ಅನುದಾನಗಳಿಂದ ನಡೆಯುತ್ತವೆ. ವಿಶ್ವವಿದ್ಯಾಲಯಗಳ ಹಾಗೂ ಇತರ ಉನ್ನತ ವಿನ್ಯಾ ಸಂಸ್ಥೆಗಳ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸುತ್ತವೆ.

ಶಿಕ್ಷಣದ ಗುರಿ : ಪ್ರಾಥಮಿಕ ಶಿಕ್ಷಣದ ಗುರಿ ಜನತೆಯಲ್ಲಿ ಓದುಬರಹ ಪ್ರಚಾರ ಮಾಡುವುದೇ ಅಗಿದೆ. ಪ್ರೌಢ ಶಿಕ್ಷಣದ ಎರಡನೆಯ ಸೈಕಲ್ಲಿನ ಅನಂತರ ವಿದ್ಯಾರ್ಥಿ ಯಾವುದಾದರೂ ಉದ್ಯೋಗಕ್ಕೆ ಸೇರಬಹುದು ಅಥವಾ ಉನ್ನತ ವೃತ್ತಿ ಅಥವಾ ತಾಂತ್ರಿಕ ಶಿಕ್ಷÀಣಕ್ಕೆ ಸೇರಬಹುದು. ವಿಶ್ವವಿದ್ಯಾಲಯದ ಹಾಗೂ ಉನ್ನತ ವಿದ್ಯಾಲಯಗಳ ಶಿಕ್ಷಣ ಪಡೆದ ಪದವೀಧರರು ಸರ್ಕಾರದ ಉದ್ಯೋಗಕ್ಕೊ ಖಾಸಗಿ ವೃತ್ತಿಗಳಿಗೊ ಅರ್ಹತೆ ಪಡೆಯುತ್ತಾರೆ.

ಪಠ್ಯಕ್ರಮ : ರಾಜ್ಯದ ಆಡಳಿತಕ್ಕೊಳಪಟ್ಟು ಪ್ರಾಥಮಿಕ ಶಾಲೆಯ ಪಠ್ಯಕ್ರಮವನ್ನು ರಾಜ್ಯದ ಶಿಕ್ಷಣ ಸಲಹಾಮಂಡಲಿ ತಯಾರಿಸುತ್ತದೆ. ಅದನ್ನು ಖಾಸಗಿ ಶಾಲೆಗಳು ಅನುಸರಿಸುತ್ತವೆ. ಗ್ರಾಮೀಣ ಶಾಲೆಗಳು ಈ ಎರಡರಲ್ಲಿ ಯಾವುದಾದರೂ ಒಂದನ್ನು ಅನುಸರಿಸುತ್ತವೆ.

ಪ್ರೌಢಶಾಲೆಯ ಪಠ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಲಹಾ ಮಂಡಲಿ ನಿರ್ಧರಿಸುತ್ತದೆ. ರಾಜ್ಯ ಸಲಹಾಮಂಡಲಿಗಳು ಕೆಲವು ಐಚ್ಛಿಕ ವಿಷಯಗಳನ್ನು ಅದಕ್ಕೆ ಸೇರಿಸುತ್ತವೆ. ಖಾಸಗಿ ಪ್ರೌಢಶಾಲೆಗಳಿಗೂ ಇದು ಅನ್ವಯಿಸುತ್ತದೆ. ಸಾಮಾನ್ಯವಾಗಿ ಅದರಲ್ಲಿ 5ರಿಂದ 7 ವ್ಯಾಸಂಗ ವಿಷಯಗಳಿರುತ್ತವೆ. ಪೋರ್ಚ್‍ಗೀಸ್ ಭಾಷೆ ಕಡ್ಡಾಯವಾಗಿದೆ. ಒಂದು ವ್ಯಾವಹಾರಿಕ ಅನ್ಯ ಭಾಷೆ, ಗಣಿತ, ಭೌತವಿಜ್ಞಾನ, ಸಮಾಜಪಾಠ, ದೈಹಿಕಶಿಕ್ಷಣ, ಗೃಹಕಲೆ ಸಂಗೀತ-ಇವೂ ಸೇರಿರುವುದುಂಟು.

ಉನ್ನತ ಶಿಕ್ಷಣದ ಪಠ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಲಹಾಮಂಡಲಿ ನಿರ್ಧರಿಸುತ್ತದೆ. ಬೋಧನೆಯ ವಿಷಯ, ಅದಕ್ಕೆ ವಿನಿಯೋಗಿಸಬೇಕಾದ ಕಾಲ ಇವನ್ನು ಅದು ನಿರ್ಧರಿಸಿದರೂ ಆಯಾ ಸಂಸ್ಥೆಗಳು ಕೆಲವು ಐಚ್ಚಿಕ ವಿಷಯಗಳನ್ನು ಸೇರಿಸಿಕೊಳ್ಳುವುದಲ್ಲದೆ ವಿಷಯ ವಿಭಾಗಗಳನ್ನು ವ್ಯವಸ್ಥೆಗೊಳಿಸಿಕೊಳ್ಳುವ ಹಾಗೂ ಪರೀಕ್ಷೆಗೆ ಸಿದ್ಧಪಡಿಸುವ ಕಾರ್ಯದಲ್ಲಿ ಸ್ವಂತ ಹೊಣೆಗಾರಿಕೆ ಹೊಂದಿರುತ್ತವೆ ಕೂಡ.

ಅಧ್ಯಾಪಕರು: ಪ್ರಾಥಮಿಕ ಶಾಲೆಯ ಅಧ್ಯಾಪಕರನ್ನು ಸರ್ಕಾರದ ಅಧಿಕಾರಿ ಆಯ್ಕೆಮಾಡುತ್ತಾನೆ. ಖಾಸಗಿ ಶಾಲೆಗಳು ನೇರವಾಗಿ ನೇಮಕಮಾಡಿಕೊಳ್ಳುವುವು. ಅಧ್ಯಾಪಕರಲ್ಲಿ ಮುಕ್ಕಾಲು ಮಂದಿ ನಾರ್ಮಲ್ ಸ್ಕೂಲಿನ ಶಿಕ್ಷಣ ಮುಗಿಸಿರುವರು. ಮಿಕ್ಕವರು ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿರುತ್ತಾರೆ.

ಪ್ರೌಢಶಾಲೆಯ ಅಧ್ಯಾಪಕರು ವಿಶ್ವವಿದ್ಯಾಲಯದ ಪದವಿ ಪಡೆದಿದ್ದು ಅಗತ್ಯ ಪ್ರಶಿಕ್ಷಣ ಪಡೆದಿರಬೇಕೆಂಬ ನಿಯಮವಿದ್ದರೂ ಅನೇಕ ಅಧ್ಯಾಪಕರು ಉನ್ನತ ಪ್ರಶಿಕ್ಷಣ ಪಡೆದಿರಬೇಕೆಂಬ ನಿಯಮವಿದ್ದರೂ ಅನೇಕ ಅಧ್ಯಾಪಕರು ಉನ್ನತ ವಿದ್ಯಾಲಯಗಳಲ್ಲಿ ಯಾವುದಾದರೂ ವಿಷಯದಲ್ಲಿ ಪದವಿ ಪಡೆದು ಬೋಧನೆಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದುಂಟು. ಅಗತ್ಯವಾದ ಅರ್ಹತೆಯಿಲ್ಲದವರಿಗೆ ಸಚಿವಾಲಯ ಪ್ರಶಿಕ್ಷಣಕ್ಕೆ ಅವಕಾಶ ಕಲ್ಪಿಸುತ್ತದೆ.

ಉನ್ನತಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರನ್ನು ಸ್ಪರ್ಧಾಪರೀಕ್ಷೆಯ ಮೂಲಕ ಆಯ್ಕೆಮಾಡಲಾಗುವುದು. ಉಪಪ್ರಾಧ್ಯಾಪಕ, ಅಧ್ಯಾಪಕರ್ನು ಆಡಳಿತ ಮಂಡಲಿಗಳು ಆಯಾ ವಿಷಯದ ಪ್ರಾಧ್ಯಾಪಕರ ಸಲಹೆಯಂತೆ ನೇಮಕಮಾಡಿಕೊಳ್ಳುವುದು. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಹಾಗೂ ಖಾಸಗಿ ಪ್ರೌಢ ಶಾಲೆಗಳ ಅಧ್ಯಾಪಕರ ನೇಮಕದಲ್ಲಿ ರಾಷ್ಟ್ರದ ಕಾರ್ಮಿಕ ಶಾಸನ ಅನುಸರಿಸಬೇಕು. ಸಾಮಾನ್ಯವಾಗಿ ಆಯಾ ಸಂಸ್ಥೆಯ ಮುಖ್ಯಸ್ಥರು ಅಧ್ಯಾಪಕರನ್ನು ನೇಮಕಮಾಡಿಕೊಳ್ಳುವರು. ಆದರೆ ಅದನ್ನು ಪ್ರಾಧ್ಯಾಪಕರ ಸಮಿತಿಯೊಂದು ಅನುಮೋದಿಸಬೇಕೆಂಬ ನಿಯಮ ಉಂಟು. ಉನ್ನತ ಶಿಕ್ಷಣದ ಅಧ್ಯಾಪಕರಿಗೆ ಯಾವ ಸಿದ್ಧತಾಶಿಕ್ಷಣವೂ ಇಲ್ಲ. ಇತ್ತೀಚೆಗೆ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ವ್ಯವಸ್ಥೆ ನಡೆಯುತ್ತಿದೆ. ಈಗ ಕೆಲಸಮಾಡುತ್ತಿರುವ ಅಧ್ಯಾಪಕರು ಅನ್ಯದೇಶಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದುಬಂದವರು.

ಬೋಧನಕ್ರಮ, ಕಟ್ಟಡ ಇತ್ಯಾದಿ : ಪ್ರಾಥಮಿಕ ಶಾಲೆಗಳಲ್ಲಿ ಪಾಠಗಳನ್ನು ಕಂಠಪಾಠ ಮಾಡಿಸುವುದೇ ಮುಖ್ಯ ಬೋಧನಕ್ರಮ. ಪ್ರೌಢಶಾಲೆಯಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಉಪನ್ಯಾಸ ಪದ್ಧತಿಯ ಬೋಧನಕ್ರಮವಿದೆ. ಕೆಲವು ಸಂಸ್ಥೆಗಳಲ್ಲಿ ಪಾಠೋಪಕರಣ, ಪ್ರಯೋಗಾಲಯ ಮುಂತಾದ ಸೌಲಭ್ಯಗಳು ತಕ್ಕಮಟ್ಟಿಗೆ ಇದ್ದರೂ ಮಿಕ್ಕ ಸಂಸ್ಥೆಗಳಲ್ಲಿ ಅವುಗಳ ಅಭಾವ ತುಂಬ. ವಿಜ್ಞಾನದ ವಿದ್ಯಾರ್ಥಿಗಳು ಪ್ರಯೋಗ ನಡೆಸಲು ತಕ್ಕ ಸೌಲಭ್ಯಗಳು ಅಷ್ಟಾಗಿ ಇರುವುದಿಲ್ಲ. ನಗರ ಸಂಸ್ಥೆಗಳಲ್ಲಿ ಸಮರ್ಪಕವಾದ ಕಟ್ಟಡಗಳಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ಮಟ್ಟದ ಶಿಕ್ಷಣ ಸಂಸ್ಥೆಗಳಿಗೂ ಕಟ್ಟಡಗಳು ಸರಿಯಾಗಿಲ್ಲ.

ಸಮಸ್ಯೆಗಳು ಮತ್ತು ಪ್ರವೃತ್ತಿಗಳು : ಬ್ರಜಿûಲ್ ಶಿಕ್ಷಣಕ್ಷೇತ್ರದಲ್ಲಿ ಹಿಂದುಳಿದ ರಾಷ್ಟ್ರ. ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಷ್ಟು ಸೌಲಭ್ಯಗಳಿಲ್ಲ, ವ್ಯರ್ಥ ವ್ಯಯವೂ ಅಧಿಕ. ಪ್ರಾಥಮಿಕ ಮೊದಲನೆಯ ತರಗತಿಗೆ ಸೇರಿದ ನೂರು ಮಂದಿಯಲ್ಲಿ ಕೇವಲ ಹತ್ತು ಜನ ಮಾತ್ರ ನಾಲ್ಕನೆಯ ತರಗತಿ ಮುಗಿಸುತ್ತಾರೆ. ಮಿಕ್ಕವರ ಮಧ್ಯೆ ಬಿಟ್ಟುಬಿಡುವುದರಿಂದ ಅಪಾರ ಶೈಕ್ಷಣಿಕ ನಷ್ಟ ಸಂಭವಿಸುತ್ತಿದೆ. ಹಾಗೆ ಮಧ್ಯೆ ಶಾಲೆ ಬಿಟ್ಟವರಿಗೆ ಶಿಕ್ಷಣವೊದಗಿಸುವ ಯೋಜನೆ ರೂಪುಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಗಳೂ ಅದನ್ನು ವ್ಯವಸ್ಥೆಗೊಳಿಸಲು ಪ್ರಯತ್ನಪಡುತ್ತಿವೆ. (ಎನ್.ಎಸ್.ವಿ.)