ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಡ್ಮನ್, ಡೊನಾಲ್ಡ್‌ ಜಾರ್ಜ್

ವಿಕಿಸೋರ್ಸ್ದಿಂದ

ಬ್ರಾಡ್ಮನ್, ಡೊನಾಲ್ಡ್ ಜಾರ್ಜ್

1908. ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರ. ಕ್ರಿಕೆಟ್ ಪ್ರಪಂಚದಲ್ಲಿ ಪ್ರಪಂಚ ದಾಖಲೆ ಸೃಷ್ಟಿಸಿದ ಅಪ್ರತಿಮ ವೀರ. ಹುಟ್ಟಿದ್ದು ನ್ಯೂ ಸೌತ್‍ವೇಲ್ಸಿನ ಕೂಟ್‍ಮುಂದ್ರದಲ್ಲಿ. ಬೌರಲ್ ಶಾಲೆಯಲ್ಲಿ ಓದಿದ ಈತ ಶಾಲೆಯ ಎಲ್ಲ ಆಟಗಳಲ್ಲೂ ಭಾಗವಹಿಸುತ್ತಿದ್ದ. 1925-26ರಲ್ಲಿ ಬೌರಲ್ ಕ್ಲಬ್ಬಿನ ಸಿಡ್ ಕ್ಯುಪಿಟ್ ಎಂಬ ಆಟಗಾರ ಮುರಿದ ತನ್ನ ಬ್ಯಾಟನ್ನು ಬ್ರಾಡ್ಮನ್ನಿಗೆ ಕೊಟ್ಟ. ತಂದೆಯಿಂದ ಬ್ಯಾಟನ್ನು ರಿಪೇರಿ ಮಾಡಿಸಿಕೊಂಡ ಈತ ಸ್ಥಳೀಯ ಪಂದ್ಯಗಳಲ್ಲಿ ರನ್ನುಗಳ ಸುರಿಮಳೆ ಗೈದ. ಈತನ ಪ್ರತಿಭೆ ಗಮನಿಸಿದ ಸಿಡ್ನಿ ಸೇಂಟ್ ಕ್ಲಬ್ 1926ರಲ್ಲಿ ತನ್ನ ತಂಡ ಸೇರುವಂತೆ ಒತ್ತಾಯಿಸಿತು. ಮೊದಲ ಪಂದ್ಯದಲ್ಲೇ 110 ರನ್ ಹೊಡೆದ. ಮರು ವರ್ಷ ದಕ್ಷಿಣ ಆಸ್ಟ್ರೇಲಿಯ ವಿರುದ್ಧ ಶೆಫೀಲ್ಡ್ ಷೀಲ್ಡ್ ಪಂದ್ಯದಲ್ಲಿ ಮೊದಲ ದರ್ಜೆ 118 ರನ್ ಬಾರಿಸಿದ. ಈತ ಮೊದಲ ದರ್ಜೆ ಕ್ರಿಕೆಟ್ ಆಟದಲ್ಲಿ 37 ದ್ವಿಶತಕಗಳನ್ನು ಹಾಗೂ 6 ತ್ರಿಶತಕಗಳನ್ನು ಬಾರಿಸಿದ್ದಾನೆ. 1930ರಲ್ಲಿ ಸಿಡ್ನಿ ಮೈದಾನದಲ್ಲಿ ಔಟಾಗದೆ ಹೊಡೆದ 452 ರನ್ನುಗಳು ಆಗ ಪ್ರಪಂಚ ದಾಖಲೆ. ಅಲ್ಲದೆ 400 ರನ್ನುಗಳನ್ನು ಅತಿವೇಗವಾಗಿ ಬಾರಿಸಿದ ಕಿರಿಯ ಆಟಗಾರ ಎಂಬ ಗೌರವ.

ಈತ 52 ಟೆಸ್ಟುಗಳ 80 ಇನಿಂಗ್ಸುಗಳಲ್ಲಿ 29 ಶತಕಗಳನ್ನು ಬಾರಿಸಿ ಪ್ರಪಂಚ ವಿಕ್ರಮ ಸೃಷ್ಟಿಸಿದವ. ಅದರಲ್ಲಿ 5ನೆಯ ಟೆಸ್ಟ್ ಈತನ ಕೊನೆಯ ಟೆಸ್ಟ್. 80ನೆಯ ಇನಿಂಗ್ಸ್. ಸರಾಸರಿ 99.94 ರನ್. ಪ್ರೇಕ್ಷಕರ ಭಾರೀ ಕರತಾಡನಗಳೊಂದಿಗೆ ಆಡಲು ಬಂದ ಈತನಿಗೆ 100 ರನ್ನು ಸರಾಸರಿ ಮಾಡಲು ಕೇವಲ ನಾಲ್ಕು ರನ್ ಬೇಕಿತ್ತು. ಆದರೆ ಬ್ರಾಡ್ಮನ್ ಗುರಿ ಮುಟ್ಟಲಿಲ್ಲ. ಲೆಗ್ ಸ್ಪಿನ್ನರ್ ಎರಿಕ್ ಹೋಲಿಸ್ ಅವನ ಎರಡನೆಯ ಎಸೆತಕ್ಕೆ ಬ್ರಾಡ್ಮನ್ ಬೌಲ್ಡ್ ಆಗಿ ಈತನ ಕ್ರಿಕೆಟ್ ಜೀವನಕ್ಕೆ ತೆರೆಬಿತ್ತು. ಒಟ್ಟು ರನ್ನುಗಳು 6,993.

ಈತನ 29ಶತಕಗಳಲ್ಲಿ. ಎರಡು ತ್ರಿಶತಕಗಳು ಹಾಗೂ 10 ದ್ವಿಶತಕಗಳಿವೆ. ಅತಿ ಹೆಚ್ಚು 334 ರನ್ನು. ಇದರಲ್ಲಿ 46 ಬೌಂಡರಿಗಳಿದ್ದವು. ಇದರಲ್ಲಿ 309 ರನ್ನು ಒಂದೇ ದಿನದಲ್ಲಿ ಬಂದವು. ದ್ವಿಶತಕ 214 ನಿಮಿಷಗಳಲ್ಲಿ ಬಂದಿತು. ಈತ ನಾಯಕನಾಗಿದ್ದ 24 ಟೆಸ್ಟುಗಳಲ್ಲಿ 15 ರಲ್ಲಿ ಜಯ, 3 ರಲ್ಲಿ ಸೋಲು, ಟೆಸ್ಟುಗಳಲ್ಲಿ ಡ್ರಾ. ಬ್ರಾಡ್ಮನ್ ಬಾರಿಸಿದ ಶತಕಗಳ ವಿವರ ಕ್ರಮ ಸಂಖ್ಯೆ

ರನ್ನುಗಳು ವರ್ಷ ಸ್ಥಳ

1 … 122 1928-29 ಮೆಲ್ಬರ್ನ್

2 … 123 “ “

3 … 131 1930 ಟ್ರೆಂಟ್‍ಬ್ರಿಜ್

4 … 254 “ ಲಾಡ್ರ್ಸ್

5 … 334 “ ಹೆಡಿಂಗ್ಲೆ

6 … 232 “ ಓವಲ್

7 … 103* 1932-33 ಮೆಲ್ಬರ್ನ್

8 … 304 1934 ಹೆಡಿಂಗ್ಲೆ

9 … 244 “ ಓವಲ್

10 … 270 1936-37 ಮೆಲ್ಬರ್ನ್

11 … 212 “ ಅಡಿಲೇಡ್

12 … 169 “ ಮೆಲ್ಬರ್ನ್

13 … 144* “ ಟ್ರೆಂಟ್‍ಬ್ರಿಜ್

14 … 102* “ ಲಾಡ್ರ್ಸ್

15 … 103 “ ಹೆಡಿಂಗ್ಲೆ

16 … 187 1946-47 ಬ್ರಿಸ್ಟೇನ್

17 … 234 “ ಸಿಡ್ನಿ

18 … 138 1948 ಟ್ರೆಂಟ್‍ಬ್ರಿಜ್

19 … 173* “ ಹೆಡಿಂಗ್ಲೆ

ದಕ್ಷಿಣ ಆಫ್ರಿಕ ವಿರುದ್ಧ

20 … 226 1931-32 ಬ್ರಿಸ್ಟೇನ್

21 … 112 “ ಸಿಡ್ನಿ

22 … 167 “ ಮೆಲ್ಬರ್ನ್

23 … 299* “ ಅಡಿಲೇಡ್

ವಿಂಡೀಸ್ ವಿರುದ್ಧ

24 … 223 1930-31 ಬ್ರಿಸ್ಬೇನ್

25 … 152 “ ಮೆಲ್ಬರ್ನ್

ಭಾರತದ ವಿರುದ್ಧ

26 … 201 1947-48 ಅಡಿಲೇಡ್

27 … 185 “ ಬ್ರಿಸ್ಬೇನ್

28 … 132 “ ಮೆಲ್ಬರ್ನ್

29 … 127* “ ಮೆಲ್ಬರ್ನ್


* ಅಜೇಯ ಶತಕ

ಅಲ್ಲದೆ ಈತ ಮೂರು ಪ್ರಪಂಚದಾಖಲೆ ಜೊತೆಯಾಟದಲ್ಲಿ ಭಾಗಿ ಇಂಗ್ಲೆಂಡ್ ವಿರುದ್ಧ 1934ರಲ್ಲಿ (ಓವಲ್) ಬಿಲ್ ಫೊನ್ಸ್ ಪೋರ್ಡ್ ಜೊತೆ ಎರಡನೆಯ ವಿಕೆಟ್‍ಗೆ 451 ರನ್‍ಗಳು: 1946-47ರಲ್ಲಿ (ಸಿಡ್ನಿ) ಇಂಗ್ಲೆಂಡ್ ವಿರುದ್ಧ ಸಿಡ್ನಿ ಬಾನ್ರ್ಸ್ ಜೊತೆ ಐದನೆಯ ವಿಕೆಟ್‍ಗೆ 405 ರನ್‍ಗಳು, 1936-37ರಲ್ಲಿ ಇಂಗ್ಲೆಂಡ್ ವಿರುದ್ಧ (ಮೆಲ್ಬರ್ನ್) ಜಾನ್ ಫಿಂಗಲ್ಟನ್ ಜೊತೆ ಆಡಿದ 6ನೆಯ ವಿಕೆಟ್ ಜೋಡಿಗೆ 346 ರನ್‍ಗಳು. ಇವು ಇನ್ನೂ ಪ್ರಪಂಚ ದಾಖಲೆಗಳೇ ಆಗಿವೆ. 1930ರ ಇಂಗ್ಲೆಂಡ್ ವಿರುದ್ಧ ಸರಣಿಯ 5 ಟೆಸ್ಟ್‍ಗಳಲ್ಲಿ ಈತ ಹೊಡೆದ 974ರನ್‍ಗಳು ಸರಣಿಯೊಂದರ ಅತಿ ಹೆಚ್ಚಿನ ವೈಯಕ್ತಿಕ ಮೊತ್ತದ ದಾಖಲೆ.

ಭಾರತದ ಸುನೀಲ್ ಗಾವಸ್ಕರ್ ಅವರು 1983 ಅಕ್ಟೋಬರ್ 3ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೆಯ ಟೆಸ್ಟ್‍ನಲ್ಲಿ ತಮ್ಮ 29ನೆಯ ಶತಕ ಬಾರಿಸಿ ಬ್ರಾಡ್ಮನ್ ಹೆಸರಿನಲ್ಲಿದ್ದ 29 ಶತಕಗಳ ಪ್ರಪಂಚ ದಾಖಲೆಯನ್ನು ಸರಿಗಟ್ಟಿದರು. (ಈ 29 ಶತಕ ಗಾವಸ್ಕರ್ ಅವರ 95ನೆಯ ಟೆಸ್ಟ್‍ನ 166ನೆಯ ಇನಿಂಗ್ಸ್‍ನಲ್ಲಿ ಬಂದಿದೆ.)

ಎರಡನೆಯ ಮಹಾಯುದ್ಧಕ್ಕೆ ಮೊದಲು ಬ್ರಾಡ್ಮನ್‍ಗೆ ಪ್ರಪಂಚದ ವ್ಯಕ್ತಿ ವಿಷಯಸೂಚಿ ಪುಸ್ತಕದಲ್ಲಿ ಸ್ಥಾನ. ಸ್ಟಾಲಿನ್ ನಾಲ್ಕು ಸಾಲುಗಳಿದ್ದರೆ ಈತನ ಬಗ್ಗೆ 27 ಸಾಲುಗಳಷ್ಟು ಬರೆಯಲಾಗಿತ್ತು.

ಈತ ತನ್ನ ಕ್ರಿಕೆಟ್ ಜೀವನ ಕುರಿತಂತೆ ಫೇರ್‍ವೆಲ್ ಟು ಕ್ರಿಕೆಟ್ (1950) ಎಂಬ ಪುಸ್ತಕವನ್ನೂ ಕ್ರಿಕೆಟ್ ಆಟದ ನಡೆವಳಿಕೆಗಳನ್ನು ತಿಳಿಸುವ ದಿ ಆರ್ಟ್ ಆಫ್ ಕ್ರಿಕೆಟ್ (1958) ಎಂಬ ಪುಸ್ತಕವನ್ನೂ ಬರೆದಿದ್ದಾನೆ.