ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರಾತ್ಮಕ ವಿಶ್ಲೇಷಣೆ

ವಿಕಿಸೋರ್ಸ್ದಿಂದ

ಭಾರಾತ್ಮಕ ವಿಶ್ಲೇಷಣೆ - ಪರಿಮಾಣಾತ್ಮಕ ವಿಶ್ಲೇಷಣ ರಸಾಯನವಿಜ್ಞಾನದ ಒಂದು ಶಾಖೆ (ಗ್ರ್ಯಾವಿಮೆಟ್ರಿಕ್ ಅನಾಲಿಸಿಸ್). ಅಪೇಕ್ಷಿತ ಘಟಕವನ್ನು ಸಾಮಾನ್ಯವಾಗಿ ಒತ್ತರಿಸುವುದರಿಂದಲೊ (ಪ್ರೆಸಿಪಿಟೇಷನ್) ದಹಿಸುವುದರಿಂದಲೊ (ಕಂಬಸ್ಚನ್) ಒಂದು ನಿರ್ದಿಷ್ಟ ರಚನೆ ಹೊಂದಿರುವಂಥ ಶುದ್ಧರೂಪದ ಮಿಶ್ರಣ ಇಲ್ಲವೆ ಧಾತುವಾಗಿ ಪರಿವರ್ತಿಸುವುದು ಇಲ್ಲಿಯ ಕೆಲಸ. ಇಂಥ ಘಟಕಗಳ ತೂಕವನ್ನು ಶೋಧಿಸಿ ಶೇಕಡಾವಾರು ನಮೂದಿಸಲಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ವಿಧಾನಗಳು ಇವೆ. ಇವುಗಳ ಪೈಕಿ ಭಾರಾತ್ಮಕ ವಿಶ್ಲೇಷಣೆಯೂ ಒಂದು. ಕೆಲವೊಂದು ಸಂದರ್ಭಗಳಲ್ಲಿ ಅಂಥ ಘಟಕವನ್ನು ಹೊಂದಿರದ, ಆದರೆ ಆ ಘಟಕಕ್ಕೆ ಒಂದು ನಿರ್ದಿಷ್ಟ ಗಣಿತೀಯ ಸಂಬಂಧ ಹೊಂದಿರುವ ಸಂಯುಕ್ತವಾಗಲಿ ಧಾತುವಾಗಲಿ ರೂಪುಗೊಳ್ಳುತ್ತದೆ.

(ನೋಡಿ- ಪರಿಮಾಣಾತ್ಮಕ-ವಿಶ್ಲೇಷಣೆ-(ರಾಸಾಯನಿಕ))							

*