ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂವಿಜ್ಞಾನ

ವಿಕಿಸೋರ್ಸ್ದಿಂದ

ಭೂವಿಜ್ಞಾನ

ಭೂಮಿಯನ್ನು ಕುರಿತ ಅಧ್ಯಯನ ಇಲ್ಲವೆ ವಿe್ಞÁನ (ಜಿಯೋಲಜಿ). ಶಿಲೆಗಳಲ್ಲಿ ದಾಖಲಾಗಿರುವಂತೆ ಇರುವ ಭೂಮಿಯ ಜೀವನ ವೃತ್ತಾಂತ, ಇತಿಹಾಸಗಳ ಸಮಗ್ರ ಅಧ್ಯಯನ ಇದರಲ್ಲಿ ಮಾಡಲಾಗುತ್ತದೆ. ಪ್ರದೇಶವೊಂದರ ಶಿಲಾರಚನೆಗಳನ್ನು ಕುರಿತ ರೇಖಾಗಣಿತೀಯ ವೃತ್ತಾಂತ ಹಾಗೂ ವಿಶ್ಲೇಷಣೆ, ಹವೆಯ ಬದಲಾವಣೆಗಳಿಂದ ಅವುಗಳ ಮೇಲೆ ಉಂಟಾಗುವ ಪರಿಣಾಮ, ಕ್ಷಯ, ಅವಸಾದನ ಮುಂತಾದ ಭೂವೈe್ಞÁನಿಕ ಲಕ್ಷಣಗಳ ಅಧ್ಯಯನವೂ ಇಲ್ಲಿ ಸೇರುತ್ತದೆ. ಗ್ರೀಕ್ ಭಾಷೆಯಲ್ಲಿ ಜಿ ಎಂದರೆ ಭೂದೇವತೆಯೆಂದೂ ಜಿಯೋ ಎಂದರೆ ಭೂಮಿ ಎಂದೂ ಲಾಜಿ ಎಂದರೆ e್ಞÁನ ಎಂದೂ ಅರ್ಥ. ಈ ಪದಗಳ ಸಂಯುಕ್ತ ರೂಪವೇ ಜಿಯೋಲಜಿ.

ಇತಿಹಾಸ: ಇದು ವಿe್ಞÁನದ ಇತರ ವಿಭಾಗಗಳಾದ ಭೌತ, ರಸಾಯನ, ಖಗೋಳ, ಜೀವ ಮುಂತಾದವುಗಳ ಜೊತೆ ನಿಕಟಸಂಪರ್ಕ ಹೊಂದಿದೆ. ಇತರ ವಿe್ಞÁನ ವಿಭಾಗಗಳ ವಿಚಾರದಲ್ಲಿ ಹೇಗೋ ಹಾಗೆ ಇಲ್ಲಿಯೂ ಮೊದಮೊದಲ ದಿವಸಗಳಲ್ಲಿ ಭೂಮಿಯ ಬಗ್ಗೆ ಭಯಮಿಶ್ರಿತ ಭಾವನೆಗಳಿದ್ದುವು. ಪ್ರಾಚೀನ ತಲೆಮಾರಿನವರು ಭೂವ್ಯಾಪಾರಗಳಿಗೆ ಯಾವುದೋ ದೈವೀ ಅಥವಾ ರಾಕ್ಷಸೀ ಶಕ್ತಗಳೇ ಕಾರಣ ಎನ್ನುತ್ತಿದ್ದರು. ಪುರಾತನ ಹಿಂದೂಗಳು, ಬ್ಯಾಬಿಲೋನಿಯನ್ನರು, ಸುಮೇರಿಯನ್ನರು ಹಾಗೂ ಗ್ರೀಕರು ಭೂಮಿಯ ಮೇಲೆ ಕಂಡುಬರುವ ಜ್ವಾಲಾಮುಖಿ, ಭೂಕಂಪನಗಳು, ಸಮುದ್ರಾಕ್ರಮಣ ಮುಂತಾದ ಕ್ರಿಯೆಗಳಿಗೆಲ್ಲ ಅತಿಮಾನುಷ ಅಥವಾ ಅಮಾನುಷ ವ್ಯಕ್ತಿಗಳ ಕೋಪ ಪ್ರಕೋಪಗಳೇ ಕಾರಣ ಎನ್ನುತಿದ್ದುದೂ ಉಂಟು. ಅವರ ಅಭಿಪ್ರಾಯದಲ್ಲಿ ಜ್ವಾಲಾಮುಖಿ ಅಗ್ನಿದೇವತೆಯ ಕೋಪಾನಲ; ಬಿರುಗಾಳಿ ವಾಯುದೇವನ ಶಾಪ ಇತ್ಯಾದಿ.

ಈ ಮೂಢನಂಬಿಕೆಗಳನ್ನು ಮೊದಲಿಗೆ ತೊಡೆದುಹಾಕಿದವ ಗ್ರೀಕ್ ತತ್ತ್ವe್ಞÁನಿ ತೇಲ್ಸ್ (ಕ್ರಿ.ಪೂ.ಸು.640-546). ಈತ ಭೂಚಟುವಟಿಕೆಗಳು ಮಾನವಾತೀತವಾದವೆಂದು ಅಭಿಪ್ರಾಯಪಟ್ಟರೂ ಅವು ನೈಸರ್ಗಿಕ ಹಾಗೂ ಕ್ರಮಪರಿತ ಘಟನೆಗಳಾಗಿದ್ದು ಅವನ್ನು ಚೆನ್ನಾಗಿ ವೀಕ್ಷಿಸಿದಲ್ಲಿ ಅವುಗಳಿಗೆ ಕಾರಣ ತಿಳಿದು ವಿಶ್ಲೇಷಿಸಲು ಸಾಧ್ಯವಾದೀತೆಂದು ಸೂಚಿಸಿದ, ಕ್ರಿ.ಪೂ.5ನೆಯ ಶತಮಾನದ ರೋಮನ್ ತತ್ತ್ವe್ಞÁನಿ ಕ್ಸೀನೊಫ್ಯಾನಸ್ ಇಟಲಿಯ ಭೂಪ್ರದೇಶಗಳಲ್ಲಿಯ ಶಿಲೆಗಳಲ್ಲಿ ಅಡಕವಾಗಿದ್ದ ಮೀನಿನ ಪಳೆಯುಳಿಕೆಗಳು ಹಾಗೂ ಸಮುದ್ರಜೀವಿಗಳ ಚಿಪ್ಪುಗಳನ್ನು ಆಧರಿಸಿ ಆ ನೆಲಭಾಗವನ್ನು ಒಮ್ಮೆ ಸಮುದ್ರ ಆಕ್ರಮಿಸಿತ್ತೆಂದು ಸಾರಿದ್ದ. ಕ್ರಿ.ಪೂ.ನಾಲ್ಕನೆಯ ಶತಮಾನದ ಗ್ರೀಕ್ ವಿದ್ವಾಂಸ ಅರಿಸ್ಟಾಟಲ್ ಭೂಭಾಗಗಳ ಸ್ವರೂಪ ನಿರ್ಮಾಣದಲ್ಲಿ ನೀರು ಬಲು ಮುಖ್ಯ ಪಾತ್ರ ವಹಿಸುತ್ತದೆಂದು ಹೇಳಿದ. ಇದನ್ನು ಸಮರ್ಥಿಸಲು ಆತ ಈಜಿಪ್ಟಿನ ನೈಲ್ ನದಿ ಹೊತ್ತು ತಂದ ಮೆಕ್ಕಲಿನ ಶೇಖರಣೆಯಿಂದ ಅದರ ಮುಖಜಭೂಮಿ ರೂಪುಗೊಂಡಿತೆಂದೂ ಅಲ್ಲಿದ್ದ ನೀರು ಸಮುದ್ರವನ್ನು ಸೇರಿ ಅದರ ಮಟ್ಟ ಏರಿತೆಂದೂ ನಿರೂಪಿಸಿದ. ಕ್ರಿ.ಪೂ.1ನೆಯ ಶತಮಾನದ ಮತ್ತೊಬ್ಬ ಗ್ರೀಕ್ ತತ್ತ್ವe್ಞÁನಿ ಸ್ಟ್ರಾಬೋ ತಾನು ವಾಸಿಸುತ್ತಿದ್ದ ಏಷ್ಯಾ ಮೈನರ್ ಪ್ರದೇಶದಲ್ಲಿ ಭೂಕಂಪನಗಳು ಆದಾಗ ಅನೇಕ ವೇಳೆ ಅಲ್ಲಿಯ ನೆಲಭಾಗ ಉಬ್ಬಿ ಮೇಲಕ್ಕೆ ಬಂದಿತೆಂದೂ ಈ ಕ್ರಿಯೆ ಭೂಸ್ವರೂಪನಿರ್ಮಾಣದಲ್ಲಿ ಸಾಕಷ್ಟು ಪಾತ್ರವಹಿಸುವುದೆಂದೂ ತಿಳಿಸಿದ. ಕ್ರೈಸ್ತಮತ ಪ್ರಚಾರಕ್ಕೆ ಬಂದ ಅನಂತರ ಜನ ಮತಸಂಬಂಧೀ ವಿಚಾರಗಳಲ್ಲಿ ಅಂಧಶ್ರದ್ಧೆ ತಳೆದಕಾರಣ ವಿe್ಞÁನ ಅಷ್ಟಾಗಿ ಮುಂದುವರಿಯಲಿಲ್ಲ.

ಇದಾದ ಹಲವಾರು ದಶಕಗಳ ಅನಂತರ ಅಂದರೆ, ಕ್ರಿ.ಶ.11ನೆಯ ಶತಮಾನದಲ್ಲಿ, ಅವಿಸೆನ್ನ ಎಂಬ ತತ್ತ್ವಶಾಸ್ತ್ರಜ್ಞ ಮೃದುವಾದ ಕೆಸರು ಕಾಲಕ್ರಮೇಣ ಗಟ್ಟಿಯಾಗಿ ಶಿಲೆಯಾಗಿ ಮಾರ್ಪಡುವುದೆಂದೂ ಗುಹೆಯ ಚಾವಣೆಯಿಂದ ತೊಟ್ಟಿಕ್ಕುವ ನೀರು ಸಹ ಕ್ರಮವಾಗಿ ಸುಣ್ಣಶಿಲೆಯಾಗಿ ಪರಿವರ್ತನೆಗೊಳ್ಳುವುದೆಂದೂ ತಿಳಿಸಿದ. ಗಾಳಿ ಹಾಗೂ ನೀರಿನ ಪರಿಣಾಮಗಳಿಂದ ಆಗುವ ಭೂಚಟುವಟಿಕೆಗಳನ್ನು ವಿವರಿಸಿದ. ಮುಂದೆ ನಾಲ್ಕುನೂರು ವರ್ಷಗಳ ಅನಂತರ ಇಟಲಿಯ ಕಲಾವಿದ ಹಾಗೂ ವಿe್ಞÁನಿ ಲಿಯೊನಾರ್ಡೊ ಡ ವಿಂಚಿ (1452-1519) ಹಲವಾರು ಭೂವೈe್ಞÁನಿಕ ಲಕ್ಷಣಗಳು ಉಂಟಾದ ರೀತಿಯನ್ನೂ ಸಂಚಿತಶಿಲೆಗಳಲ್ಲಿ ಹುದುಗಿದ್ದ ಅವಶೇಷಗಳ ಜೈವಿಕ ಮೂಲವನ್ನೂ ನೆಲಜಲಮಟ್ಟಗಳ ಏರುಪೇರುಗಳನ್ನೂ ವಿವೇಚಿಸಿದ.

ಖನಿಜವಿe್ಞÁನದ ಆದ್ಯಪ್ರವರ್ತಕನೆಂದು ಹೆಸರು ಪಡೆದಿರುವ ಜಾರ್ಜ್ ಅಗ್ರಿಕೋಲ ಎಂಬವ 1545ರಲ್ಲಿ ಪ್ರಕಟವಾದ ದೆ ನೇಚುರ ಫಾಸಿಲಿಯಮ್ ಎಂಬ ಗ್ರಂಥದಲ್ಲಿ ಭೂಮಿಯಲ್ಲಿ ದೊರೆಯುವ ವಿವಿಧ ಶಿಲೆ, ಖನಿಜ ಹಾಗೂ ರತ್ನಗಳನ್ನು ಉಲ್ಲೇಖಿಸಿ ವರ್ಣಿಸಿದ್ದಾನೆ. ಬಹುಶಃ ಇದೇ ಸರಿಸುಮಾರಿನ ಭಾರತದ ಖಗೋಳವಿe್ಞÁನಿ ವರಾಹಮಹಿರ ತನ್ನ ಬೃಹತ್ ಸಂಹಿತೆಯಲ್ಲಿ ಭೂಕಂಪನಗಳ ಲಕ್ಷಣಗಳನ್ನು ವಿವರಿಸುವ ಅಧ್ಯಾಯವೊಂದನ್ನು ಬರೆದಿದ್ದಾನೆ. ಅಲ್ಲದೆ ಇವನ ಬರವಣಿಗೆಗಳಲ್ಲಿ ಅಂತರ್ಜಲಕ್ಕೆ ಸಂಬಂಧಿಸಿದ ಹಲವಾರು ವಿವರಗಳೂ ಇವೆ.

ನಿಕೊಲಾಸ್ ಸ್ಪೆನೋ ಎಂಬವ ಇಟಲಿಯ ಟಸ್ಕನಿ ಪ್ರಾಂತ್ಯದ ಪರ್ವತ ಪ್ರದೇಶದ ಲಕ್ಷಣಗಳನ್ನು ವಿವರಿಸುವಾಗ (1669) ಭೂವಿe್ಞÁನದ ಅನೇಕ ಮೂಲಭೂತ ತತ್ತ್ವಗಳನ್ನು ಪ್ರತಿಪಾದಿಸಿದ್ದಾನೆ. ಇವುಗಳ ಪೈಕಿ ಅತಿ ಮುಖ್ಯವಾದುದು ಎಂದರೆ ಸಂಚಿತ ಶಿಲಾಸ್ತರಗಳು ಒಂದರಮೇಲೊಂದು ನಿಕ್ಷೇಪಗೊಳ್ಳುವಿಕೆಯನ್ನು ಕುರಿತದ್ದು. ಈ ಕ್ರಿಯೆಯಲ್ಲಿ ಕಿರಿಯ ಹೊಸ ಸ್ತರಗಳು ಹಿರಿಯ ಹಳೆ ಸ್ತರಗಳ ಮೇಲೆ ಅನುಕ್ರಮವಾಗಿ ನಿಕ್ಷೇಪಗೊಳ್ಳುತ್ತ ಸಹಸ್ರಾರು ಮೀಟರ್ ಮಂದದ ಶಿಲಾಸ್ತೋಮಗಳು ಮೈದೋರುತ್ತವೆ ಹಾಗೂ ಸಂಚಯನಕ್ರಿಯೆಯ ಆರಂಭದಲ್ಲೇ ಸ್ತರಗಳು ಮಟ್ಟಸ ನೆಲದ ಮೇಲೆ ಸಂಚಯನಗೊಳ್ಳುತ್ತವೆ. ಇದೇ ಭೂವಿe್ಞÁನದಲ್ಲಿ ಪ್ರಸ್ತಾಪಿಸಿರುವ ಅಧಿವ್ಯಾಪನ ನಿಯಮ (ಆರ್ಡರ್ ಆಫ್ ಸೂಪರ್‍ಪೊಸಿಷನ್). ಸ್ತರವಿe್ಞÁನದ ಅಧ್ಯಯನದಲ್ಲಿ ಇದು ಬಲು ಉಪಯುಕ್ತ. ವಿವಿಧ ಪ್ರದೇಶಗಳಲ್ಲಿರುವ ಶಿಲಾಸ್ತರಗಳ ವಯೋನಿರ್ಣಯ ವಿವಿಧ ಪ್ರದೇಶಗಳಲ್ಲಿಯ ಶಿಲಾಶ್ರೇಣಿಗಳನ್ನು ಪರಸ್ಪರ ಸರಿಗಟ್ಟುವಿಕೆ ಇವನ್ನು ಕುರಿತ ಅಧ್ಯಯನಗಳಲ್ಲಿ ಸ್ತರವಿe್ಞÁನ ಅತ್ಯಾವಶ್ಯಕವೆನಿಸಿದೆ. ನಿರ್ದಿಷ್ಟ ಪ್ರದೇಶದ ವಿವಿಧ ಭೂಯುಗಗಳ ಪುನರ್‍ನಿರ್ಮಾಣ ಹಾಗೂ ಅದರ ಇಡೀ ಭೂಇತಿಹಾಸದ ಅಧ್ಯಯನದಲ್ಲಿ ಈ ನಿಯಮದ ಪಾತ್ರ ಬಲು ಹಿರಿದು.

ಹತ್ತೊಂಬತ್ತನೆಯ ಶತಮಾನದ ವಿe್ಞÁನಗಳ ಮೇಲೆ ಕ್ರೈಸ್ತಗುರುಪೀಠದ ಪ್ರಭಾವ ಬಹಳವಾಗಿತ್ತು. ಆ ಪೀಠಾಧಿಪತಿಗಳು ಭೂಮಿ ಕೇವಲ ಕೆಲವು ಸಹಸ್ರ ವರ್ಷಗಳ ಹಿಂದೆ ಜನ್ಮತಾಳಿದರೂ ಆಗಾಗ ಅದರ ಮೇಲೆ ತೋರಿಬಂದ ಪ್ರಳಯಗಳು ಇಂದು ತೋರುವ ಭೂಲಕ್ಷಣಗಳ ಹಾಗೂ ಪ್ರಾಣಿವರ್ಗಗಳ ನಿರ್ಮಿತಿಯಲ್ಲಿ ಬಲು ಮುಖ್ಯಪಾತ್ರವಹಿಸಿವೆ ಎಂದೂ ಸಾರಿದರು. ಇದೇ ಪ್ರಳಯವಾದ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಭೂವಿe್ಞÁನ ಶಾಖೆಯ ಪ್ರಾಧ್ಯಾಪಕನಾಗಿದ್ದ ವಿಲಿಯಮ್ ಬಕ್‍ಲೆಂಡ್ ಈ ತೆರನಾದ ಹಲವಾರು ಜಲಪ್ರಳಯಗಳು ನಡೆದಿವೆ ಎಂದು ಜನರಿಗೆ ಮನದಟ್ಟಾಗುವಂತೆ ವಾದಿಸಿದ. ಫ್ರಾನ್ಸಿನ ಪ್ರಾಚೀನ ಜೀವವಿe್ಞÁನಿ ಕುವೆಯರ್ (1769-1832) ಇದನ್ನು ಸಮರ್ಥಿಸಿದ.

1817ರ ವೇಳೆಗೆ ಜರ್ಮನಿಯ ಫ್ರೈಬರ್ಗ್ ಗಣಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಏಬ ಹ್ಯಾಮ್ ಗಾಟ್‍ಲಬ್ ವರ್ನರ್ ಎಂಬವ ಹಿಂದೆ ಯೋಹಾನ್ ಲೆಹ್‍ಮನ್ ಎಂಬವನಿಂದ ಸೂಚಿತವಾಗಿದ್ದ ವಾದವನ್ನು ವಿವರಿಸಿ ಪ್ರತಿಪಾದಿಸಿದ. ಆ ಊರಿನ ಸುತ್ತಮುತ್ತಲಿನ ಶಿಲಾಸ್ತರಗಳನ್ನು ವಿಶೇಷವಾಗಿ ಅಧ್ಯಯನ ಮಾಡಿ ಅವೆಲ್ಲವೂ ಸಮುದ್ರತಳದಲ್ಲಿ ರೂಪು ತಳೆದವೆಂದೂ ಈ ಆಧಾರದ ಮೇಲೆ ಭೂಮಿಯ ಮೇಲಿನ ಶಿಲೆಗಳು ಹಾಗೂ ಅವುಗಳಲ್ಲಿರುವ ಖನಿಜಗಳು ಪ್ರಪಂಚವ್ಯಾಪಿ ಸಾಗರತಳವೊಂದರಲ್ಲಿ ರಾಸಾಯನಿಕ ಪ್ರಕ್ಷೇಪಣ ಕ್ರಿಯೆಯಿಂದ ಜನ್ಮ ತಳೆದಿವೆ ಎಂದೂ ಸೂಚಿಸಿದ. ಈತನ ವಾಗ್ವೈಖರಿಗೆ ಮಾರುಹೋದ ಜನ ಹಾಗೂ ಶಿಷ್ಯವೃಂದ ಯೂರೊಪಿನಲ್ಲೆಲ್ಲ ಈ ವಾದವನ್ನು (ವರ್ನಿರಿಯನ್ ಸಿದಾಂತ) ಪ್ರಚುರಪಡಿಸಿದರು. ಈ ಭೂವಿe್ಞÁನಿಗಳಿಗೆ ನೆಪ್ಚೂನಿಸ್ಟ್ಸ್ (ವರುಣಾರ್ಧಾಧಕರು) ಎಂದು ಹೆಸರು. ಬಸಾಲ್ಟ್ ಗ್ರ್ಯಾನೈಟ್, ಡಾಲರೈಟ್ ಮುಂತಾದ ಅಗ್ನಿಜನ್ಯಶಿಲೆಗಳೇ ಇವರ ದೃಷ್ಟಿಯಲ್ಲಿ ಇಲ್ಲವೆನಿಸಿದುವು. ಎಲ್ಲವೂ ಸಾಗರಮಯವಾಗಿದೆ ಎಂಬುದು ಇವರ ಅಭಿಪ್ರಾಯ. ಮಹಾಸಾಗರವೊಂದು ಕ್ರಮೇಣ ಕುಗ್ಗಿ ಸಂಕುಚಿತಗೊಂಡಂತೆ ಅದರಲ್ಲಿ ಶೇಖರಗೊಂಡಿದ್ದ ಶಿಲಾಸ್ತರಗಳು ಒಂದಾದ ಮೇಲೆ ಒಂದರಂತೆ ನೆಲದ ಮೇಲೆ ಕಾಣತೊಡಗಿದುವು. ಇವುಗಳ ಉತ್ಪತ್ತಿಯಲ್ಲಿ ಜ್ವಾಲಾಮುಖಿ ಅಥವಾ ಇನ್ನಾವುದೇ ರೀತಿಯ ಅಗ್ನಿಜನ್ಯಕ್ರಿಯೆ ಬಲು ಗೌಣ.

ಇದೇ ಸಮಯದಲ್ಲಿ ಗ್ರೇಟ್ ಬ್ರಿಟನ್ನಿನ ಸ್ಕಾಟ್ಲೆಂಡಿನಲ್ಲಿ ಮತ್ತೊಂದು ಅಭಿಪ್ರಾಯವನ್ನು ಸಮರ್ಥಿಸುವ ಭೂವಿe್ಞÁನಿಗಳ ತಂಡವೊಂದು ರೂಪುಗೊಳ್ಳುತ್ತಿತ್ತು. ಭೂಲಕ್ಷಣಗಳನ್ನು ರೂಪಿಸುವಲ್ಲಿ ಇವರಿಗೆ ಪ್ರಳಯವಾದದಲ್ಲಾಗಲೀ ವರುಣವಾದದಲ್ಲಾಗಲೀ ನಂಬಿಕೆ ಇರಲಿಲ್ಲ. ಈ ತಂಡದ ಅಧ್ವರ್ಯು ಎಂದೆನಿಸಿದವ ಜೇಮ್ಸ್ ಹಟ್ಟನ್. ಇತಿಹಾಸಪ್ರಸಿದ್ಧ ಎನಿಸಿರುವ ತಿಯೋರಿ ಆಫ್ ದಿ ಅರ್ತ್ ಎಂಬ ಲೇಖನವೊಂದನ್ನು ಪ್ರಚುರಪಡಿಸಿದ (1788). ಇದು ಇಂದಿನ ಭೂವಿe್ಞÁನದ ಪ್ರಗತಿಗೆ ನಾಂದಿಯಾಯಿತು ಎನ್ನಬಹುದು. ಅಂದು ಪ್ರಚಾರದ ಶಿಖರವನ್ನು ಮುಟ್ಟಿದ್ದ ವರುಣವಾದ ಹಾಗೂ ಪ್ರಳಯವಾದಗಳನ್ನು ಇದು ಕ್ರಮೇಣ ತೊಡೆದುಹಾಕಿತು. ಭೂಮಿಯ ಮೇಲೆ ಈಗ ನಾವು ಕಾಣುವ ಲಕ್ಷಣಗಳನ್ನು ಕ್ರಮವರಿತು ಅಧ್ಯಯನ ಮಾಡಿದಲ್ಲಿ ಗತಕಾಲದ ಭೂಚಟುವಟಿಕೆಗಳನ್ನು ತೃಪ್ತಿಕರವಾದ ವಿವರಿಸಲು ಸಾಧ್ಯವಾದೀತು ಎಂಬುದು ಹಟ್ಟನನ ಅಭಿಪ್ರಾಯ. ಇದಕ್ಕಾಗಿ ಪ್ರಳಯಗಳ ಅಥವಾ ಇತರ ಪ್ರಚಂಡಕ್ರಿಯೆಗಳ ಸೂಚನೆ ಸಲ್ಲ. ಈ ಭೂಕ್ರಿಯೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದು ವರ್ನರನ ವಾದಕ್ಕೆ ಪ್ರತಿವಾದವೆನಿಸಿತು. ಅಲ್ಲಲ್ಲೇ ಈ ಎರಡು ತತ್ತ್ವಾರಾಧಕರ ಗುಂಪುಗಳ ನಡುವೆ ವಾಗ್ಯುದ್ಧಗಳೂ ತಲೆದೋರಿದುವು. ಕ್ರಮೇಣ ಈ ತತ್ತ್ವ ಬೇರೂರಿತು. ಹಟ್ಟನನ ಸಹೋದ್ಯೋಗಿ ಜಾನ್ ಪ್ಲೇಫೇರ್ ಎಂಬವ ಹಟ್ಟನ್ ತತ್ತ್ವಗಳನ್ನು ವಿವರಿಸುವ ಮತ್ತು ವಿe್ಞÁನದ ಶ್ರೇಷ್ಠ ಕೃತಿಗಳ ಪೈಕಿ ಒಂದು ಎನಿಸಿರುವ ಇಲ್ಲಸ್ಪ್ರೇಷನ್ ಆಫ್ ಹಟ್ಟೋನಿಯನ್ ತಿಯೊರಿ ಎಂಬ ಗ್ರಂಥ ಪ್ರಕಟಿಸಿದ (1802). ಭೂಚಟುವಟಿಕೆಗಳಿಗೆ ಮೂಲ ಕಾರಣ ಭೂಗರ್ಭದಲ್ಲಿ ಹುದುಗಿರುವ ಅಪಾರ ಉಷ್ಣ. ಸಮುದ್ರತಳದಲ್ಲಿ ನಿಕ್ಷೇಪಗೊಂಡಿರುವ ಜಲಜ ಶಿಲೆಗಳನ್ನು ಮೇಲೆತ್ತುವುದು ಈ ಉಷ್ಣಶಕ್ತಿಯೇ. ಗ್ರ್ಯಾನೈಟ್ ಮೊದಲಾದ ಶಿಲೆಗಳು ವರುಣಶಿಲೆಗಳಲ್ಲ, ಅಗ್ನಿಶಿಲೆಗಳು. ಈ ಶಕ್ತಿ ಭೂಗರ್ಭದಿಂದ (ಪಾತಾಳ) ಆವಿರ್ಭವಿಸುತ್ತದೆ ಎಂಬ ವಾದದ ಬೆಂಬಲಿಗರನ್ನು ಪ್ಲೂಟೋನಿಸ್ಟ್ಸ್ ಎಂದೇ ಹೆಸರಿಸಲಾಗಿದೆ. ಪ್ಲೂಟೊ ರೋಮನ್ ಪುರಾಣ ಕಾವ್ಯಗಳಲ್ಲಿ ಬರುವ ಪಾತಾಳದೇವತೆಗೆ ಇರುವ ಹೆಸರು.

ಇಂಗ್ಲೆಂಡಿನ ಭೂವಿe್ಞÁನಿ ಚಾಲ್ರ್ಸ್ ಲಯಲ್ ರಚಿಸಿದ ಪ್ರಿನ್ಸಿಪಲ್ಸ್ ಆಫ್ ಜಿಯೋಲಜಿ ಎಂಬ ಗ್ರಂಥದಲ್ಲಿ (1830) ಹಟ್ಟನನ ನಿರೂಪಣೆಗೆ ಒಂದು ಖಚಿತ ರೂಪ ದೊರೆಯಿತು. ಲಯಲ್ ಕೂಡ ಪ್ರಳಯವಾದವನ್ನು ಅಲ್ಲಗಳೆದು ಭೂಚಟುವಟಿಕೆಗಳು ಭೂಮಿ ಮೈದೋರಿದ ದಿವಸದಿಂದಲೂ ಒಂದೇ ಸಮನೆ ನಿರಂತರವಾಗಿ ನಡೆಯುತ್ತಿದೆ ಎಂದು ಸೂಚಿಸಿದ. ಇದೇ ಪ್ರಸಿದ್ಧವಾದ ಏಕಪ್ರಕಾರವಾದ (ಯೂನಿಫಾರ್ಮಿಟೇರಿಯನಿಸಮ್). ಗತಕಾಲದ ಭೂಚಟುವಟಿಕೆಗಳನ್ನು ಅರಿಯಲು ಪ್ರಸಕ್ತದ ಚಟುವಟಿಕೆಗಳು ಕೀಲಿಕೈ ಇದ್ದಂತೆ. ಇದೇ ಸರಿಸುಮಾರಿಗೆ ಮತ್ತೊಬ್ಬ ಹೆಸರಾಂತ ಇಂಗ್ಲಿಷ್ ಭೂವಿe್ಞÁನಿ ವಿಲಿಯಮ್ ಸ್ಮಿತ್ ಪ್ರಕಟಿಸಿದ (1815) ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡಿನ ವಿವಿಧ ಶಿಲಾವರ್ಗಗಳನ್ನು ಸೂಚಿಸುವ ವರ್ಣರಂಜಿತ ಭೂನಕ್ಷೆಯೂ ಉಲ್ಲೇಖಾರ್ಹ. ಶಿಲಾಸ್ತರಗಳ ಶ್ರೇಣಿಯಲ್ಲಿ ಕಾಲಕ್ಕೆ ಅನುಗುಣವಾದ ರೀತಿಯಲ್ಲಿ ಜೀವ್ಯವಶೇಷಗಳಿರುವುದನ್ನು ಒತ್ತಿ ಹೇಳಿ ಇವುಗಳ ಆಧಾರದ ಮೇಲೆ ಶ್ರೇಣಿಯ ವಿವಿಧಸ್ತರಗಳ ಅನುಕ್ರಮಣಿಕೆಯನ್ನು ನಿರ್ಧರಿಸಲು ಸಹಾಯಕವಾಗುವುದೆಂದು ಅಭಿಪ್ರಾಯಪಟ್ಟ. ಇದೇ ವೇಳೆಗೆ ಶಿಲಾಸೂಕ್ಷ್ಮದರ್ಶಕವೂ ಬಳಕೆಗೆ ಬಂದು ಜರ್ಮನಿಯ ಶಿಲಾವಿe್ಞÁನಿ ರೋಸೆನ್ ಬುಷ್ ಎಂಬವನ ಅಧ್ಯಯನದಿಂದ ಶಿಲಾವಿe್ಞÁನ ಅದರಲ್ಲೂ ಅಗ್ನಿಶಿಲೆಗಳನ್ನು ಕುರಿತ ಅಧ್ಯಯನ ಅಧಿಕ ಪ್ರಗತಿ ಸಾಧಿಸಿತು.

ಭೂವಿe್ಞÁನದ ವಿಭಾಗಗಳು: 18 ಮತ್ತು 19ನೆಯ ಶತಮಾನಗಳಲ್ಲಿ ಇತರ ವಿe್ಞÁನವಿಭಾಗಗಳ ಪ್ರಗತಿಗೆ ಹೋಲಿಸಿದಲ್ಲಿ ಭೂವಿe್ಞÁನದ ವಿವಿಧ ವಿಭಾಗಗಳು ಮಂದಗತಿಯಲ್ಲಿ ಆದರೂ ಸಾಕಷ್ಟು ಮುಂದುವರಿದಿದ್ದುವು. ಆದರೆ 19ನೆಯ ಶತಮಾನದ ಕೊನೆಯಭಾಗದಲ್ಲಿ ಹಾಗೂ 20ನೆಯ ಶತಮಾನದಲ್ಲಿ ಇಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿದೆ.

ಈ ವಿe್ಞÁನದ ಮುಖ್ಯವಿಭಾಗ ಎಂದರೆ ಖನಿಜವಿe್ಞÁನ. ಖನಿಜಗಳೇ ಶಿಲಾಘಟಕಗಳು. ಈತನಕ ಸಹಸ್ರಾರು ಖನಿಜಗಳನ್ನು ಕುರಿತು ವಿವರಿಸಿದ್ದರೂ ಕೇವಲ 15-20 ಖನಿಜಗಳು ಶಿಲೆಗಳ ನಿರ್ಮಾಣದಲ್ಲಿ ಬಲು ಅಗತ್ಯವೆನಿಸಿವೆ. ಇವೇ ಶಿಲಾರೂಪಕ ಖನಿಜಗಳು. ಖನಿಜಗಳು ತಮ್ಮ ಸ್ವರೂಪ, ಒಳರಚನೆ, ರಾಸಾಯನಿಕ ಸಂಯೋಜನೆ, ಭೌತ ಹಾಗೂ ದೃಗ್‍ಲಕ್ಷಣಗಳಲ್ಲಿ ಏಕರೀತಿಯಾಗಿರದೆ, ವಿಭಿನ್ನವಾಗಿರುತ್ತವೆ. ಈ ಅಂಶಗಳ ಆಧಾರದ ಮೇಲೆ ವಿವಿಧ ಖನಿಜಗಳನ್ನು ಗುರುತಿಸುವುದು ಸಾಧ್ಯ. ಅದರಲ್ಲೂ ಅವುಗಳ ದೃಗ್ಲಕ್ಷಣಗಳಂತೂ ಬಲು ವಿಶಿಷ್ಟವೆನಿಸಿದ್ದು ಅವುಗಳ ಸವಿವರ ಅಧ್ಯಯನವೇ ದೃಗ್ವಿe್ಞÁನ. ಈ ಅಧ್ಯಯನಕ್ಕೆ ಉತ್ತಮ ಸೂಕ್ಷ್ಮದರ್ಶಕ ಹಾಗೂ ಅದಕ್ಕೆ ಅಳವಡಿಸಲಾಗುವ ಹಲವಾರು ದೃಗುಪಕರಣಗಳಿವೆ. ಖನಿಜದ ಒಳರಚನೆಯನ್ನು ಅರಿಯಲು ಎಕ್ಸ್‍ಕಿರಣಗಳನ್ನು ಅವುಗಳ ಮೂಲಕ ಹಾಯಿಸಿ ಛಾಯಾಚಿತ್ರಗಳನ್ನು ತೆಗೆದು ಅಧ್ಯಯನ ಮಾಡಲಾಗುವುದು. ಇದಲ್ಲದೆ ಅವು ಭೂಮಿಯ ಬಹಳಷ್ಟು ಆಳದಲ್ಲಿರುವ ಮಾತೃಶಿಲಾದ್ರವದಲ್ಲಿ ಜನಿಸುವ ಕಾಲದಲ್ಲಿಯ ಅಪಾರ ಉಷ್ಣ ಮತ್ತು ಒತ್ತಡಗಳ ಪರಿಸರವನ್ನು ಪ್ರಯೋಗಶಾಲೆಯಲ್ಲೇ ಕೃತಕವಾಗಿ ಸೃಷ್ಟಿಸಿ ವಿಶೇಷ ಸಂಶೋಧನೆಗಳನ್ನು ನಡೆಸಲಾಗುತ್ತದೆ. ಇದೇ ಪ್ರಾಯೋಗಿಕ ಖನಿಜವಿe್ಞÁನ. ಶಿಲೆಗಳ ಜನನ ರೀತಿಯನ್ನು ಅರಿಯಲು ಈ ವಿಭಾಗ ಬಲು ಸಹಾಯವೆಸಗುತ್ತದೆ. ಖನಿಜ ಹಾಗೂ ಈ ಶಿಲೆಗಳನ್ನು ಕುರಿತು ಈ ಬಗೆಯ ಪ್ರಯೋಗಗಳು ಅಮೆರಿಕದ ವಾಷಿಂಗ್‍ಟನ್ನಿನ ಕಾರ್ನ್‍ಗಿ ಸಂಶೋಧನಾಲಯದಲ್ಲಿ ಹಲವು ದಶಕಗಳಿಂದ ನಡೆಯುತ್ತಿದೆ. ಅಲ್ಲಿಯ ಎನ್.ಎಲ್. ಬೋಯೆನ್ ಹಾಗೂ ಅವರ ಸಹೋದ್ಯೋಗಿಗಳು ನಡೆಸಿದ ಪ್ರಯೋಗಗಳು ಮಹತ್ತ್ವದವು.

ಕೆಲವು ಖನಿಜಗಳು ಯುಕ್ತ ಉಷ್ಣ ಒತ್ತಡಗಳ ಪರಿಸರದಲ್ಲಿ ಜನಿಸಿದಾಗ ಅಸ್ಪಷ್ಟ ಸ್ವರೂಪ ಹೊಂದಿರದೆ ನಿರ್ದಿಷ್ಟ ಸ್ಫಟಿಕಾಕೃತಿ ತಳೆದಿರುತ್ತವೆ. ಸ್ಫಟಿಕಗಳಲ್ಲಿ ಹಲವಾರು ವರ್ಗಗಳಿದ್ದು ಅವು ತಮ್ಮ ಅಕ್ಷೀಯ ಹಾಗೂ ಸಮಸೂತ್ರತಾ ಲಕ್ಷಣಗಳಲ್ಲಿ ವಿಭಿನ್ನವಾಗಿರುತ್ತವೆ. ಇವುಗಳ ಅಧ್ಯಯನವೇ ಸ್ಫಟಿಕ ವಿe್ಞÁನ. ಲಕ್ಷಣಗಳ ಆಧಾರದ ಮೇಲೆ ಸ್ಫಟಿಕಗಳ ವರ್ಗೀಕರಣ, ಬಾಹ್ಯ ಲಕ್ಷಣಗಳು, ಸ್ವರೂಪದಲ್ಲಿ ತೋರಿಬರುವ ಏರುಪೇರುಗಳು ಇವೆಲ್ಲವನ್ನೂ ಈ ವಿಭಾಗದಲ್ಲಿ ವಿಮರ್ಶಿಸಲಾಗುತ್ತದೆ.

ಖನಿಜಗಳ ಸಂಯೋಜನೆಗೆ ಅನುಗುಣವಾಗಿ ಅವನ್ನು ಅಲೋಹ ಮತ್ತು ಲೋಹ ಖನಿಜಗಳೆಂದು ಸ್ಥೂಲವಾಗಿ ವಿಭಾಗಿಸುವುದಿದೆ. ಕೆಲವು ಅಲೋಹ ಖನಿಜಗಳು ಹಾಗೂ ಬಹುತೇಕ ಲೋಹಖನಿಜಗಳು ಆರ್ಥಿಕ ಮಹತ್ತ್ವವುಳ್ಳದ್ದಾಗಿವೆ. ಒಂದು ರಾಷ್ಟ್ರದ ಅಭ್ಯುದಯಕ್ಕೆ ಅಲ್ಲಿಯ ಖನಿಜಸಂಪತ್ತು ಬಲು ಮುಖ್ಯ. ವಿವಿಧ ಬಗೆಯ ಖನಿಜಗಳು ಜನರ ನಿತ್ಯಜೀವನದಲ್ಲಿ ಬಳಕೆಯಲ್ಲಿವೆ. ಇವುಗಳ ಉಪಯೋಗದ ವ್ಯಾಪ್ತಿ ಬಲು ಹೆಚ್ಚು. ಇವು ದೊರೆವ ರೀತಿ, ಹುದುಗಿಸಿಕೊಂಡಿರುವ ಅದುರುಗಳ ಗುಣ ವಿಶೇಷ, ಇವನ್ನು ಹೊರತೆಗೆದು ಒಪ್ಪ ಮಾಡುವ ರೀತಿ ಇತ್ಯಾದಿ ವಿವರಗಳನ್ನು ನೀಡುವ ವಿe್ಞÁನ ಭಾಗ ಆರ್ಥಿಕ ಭೂ ವಿe್ಞÁನ (ಎಕನಾಮಿಕ್ ಜಿಯೋಲಜಿ). ಆಧುನಿಕ ನಾಗರಿಕ ಜೀವನಕ್ಕೆ ಅತ್ಯಾವಶ್ಯಕವಾದ ನೈಸರ್ಗಿಕ ಇಂಧನಗಳು ಎಂದರೆ ಕಲ್ಲಿದ್ದಲು ಹಾಗೂ ಪೆಟ್ರೋಲಿಯಮ್. ಈ ನಿಕ್ಷೇಪಗಳನ್ನು ಕುರಿತ ಅಧ್ಯಯನವೂ ಈ ವಿಭಾಗಕ್ಕೆ ಬರುತ್ತದೆ. ಇಂಥ ನಿಕ್ಷೇಪಗಳ ಅನ್ವೇಷಣೆಯಲ್ಲಿ ಭೂಭೌತ ಹಾಗೂ ಭೂರಾಸಾಯನಿಕ ವಿಧಾನಗಳನ್ನು ಅನುಸರಿಸಲಾಗುತ್ತಿದೆ.

ಒಂದು ಇಲ್ಲವೆ ಹಲವಾರು ಖನಿಜಗಳ ಸಮೂಹವೇ ಶಿಲೆ. ನಾವು ನೆಲೆಗೊಂಡಿರುವ ಭೂಮಿಯ ಹೊರಚಿಪ್ಪು ವಿವಿಧ ರೀತಿಯ ಶಿಲೆಗಳಿಂದಾದುದು. ಇದನ್ನು ವಿವರಿಸುವ ವಿಭಾಗವೇ ಶಿಲಾವಿe್ಞÁನ. ಇದು ಶಿಲೆಗಳ ಸ್ವರೂಪ, ಸಂಯೋಜನೆ, ವಿನ್ಯಾಸ, ಜನನ ಈ ವಿವರಗಳನ್ನು ಕುರಿತು ವಿವೇಚನೆ ನಡೆಸುತ್ತದೆ. ಶಿಲೆಗಳಲ್ಲಿ 95% ಮೂಲ ಇಲ್ಲವೆ ಅಗ್ನಿಶಿಲೆಗಳಾಗಿರುತ್ತವೆ. ಅಂದರೆ ಮಾತೃಶಿಲಾದ್ರವದ ನೇರ ಆರುವಿಕೆಯಿಂದ ರೂಪುಗೊಂಡಂಥವು. ಇವುಗಳ ಅಧ್ಯಯನ ಭೂವಿe್ಞÁನದಲ್ಲಿ ಬಲು ಮುಖ್ಯ. ಶಿಲೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಅದರ ಪೊರೆಯೊಂದನ್ನು ತೆಗೆದು ಸೂಕ್ಷ್ಮದರ್ಶಕದ ಸಹಾಯದಿಂದ ಅಧ್ಯಯನ ಮಾಡುವುದಿದೆ.

ಪುನರ್ಜನ್ಮ ತಳೆದ ಶಿಲೆಗಳೇ ಆನುಷಂಗಿಕ ಶಿಲೆಗಳು. ಇವುಗಳಲ್ಲಿ ಎರಡು ಬಗೆ: ಶಿಲೆಗಳು ಛಿದ್ರಗೊಂಡು ಉಂಟಾದ ಕಣಗಳ ಸಂಚಲನದಿಂದ ಜಲಾಶಯಗಳಲ್ಲಿ ರೂಪು ತಳೆದವು. ಇವು ಜಲಜ ಅಥವಾ ಸಂಚಿತಶಿಲೆಗಳು. ಇವುಗಳ ಸ್ವರೂಪ ಅಗ್ನಿಶಿಲೆಗಳಿಂದ ಭಿನ್ನ, ಇವನ್ನು ಹೆಚ್ಚಿನ ಕಷ್ಟವಿಲ್ಲದೆ ಗುರುತಿಸುವುದು ಸಾಧ್ಯ. ಇದೇ ರೀತಿ ಇವುಗಳ ಸ್ವರೂಪ, ವಿನ್ಯಾಸ ಹಾಗೂ ಸಂಯೋಜನೆಯಲ್ಲಿ ವೈಶಿಷ್ಟ್ಯಗಳನ್ನು ಗುರುತಿಸಬಹುದು. ಈ ಅಧ್ಯಯನಕ್ಕೆ ಮೀಸಲಾದ ವಿಭಾಗ ಸಂಚಯನ ಶಿಲಾವಿe್ಞÁನ (ಸೆಡಿಮೆಂಟರಿ ಪೆಟ್ರಾಲಜಿ). ಈ ವಿಭಾಗಕ್ಕೆ ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯ ಬರುತ್ತಿದೆ. ಮೊದಲು ರೂಪುತಳೆದ ಶಿಲೆಗಳು ಅಧಿಕ ಉಷ್ಣ ಮತ್ತು ಒತ್ತಡಗಳ ಪ್ರಭಾವಕ್ಕೆ ಸಿಲುಕಿ ರೂಪಾಂತರಗೊಂಡು ಹೊಸ ಶಿಲೆಗಳ ರೂಪಣೆಗೆ ಕಾರಣವಾಗುತ್ತವೆ. ಇವೇ ರೂಪಾಂತರಶಿಲೆಗಳು. ಇವು ತಮ್ಮ ಸ್ವರೂಪ, ವಿನ್ಯಾಸ ಹಾಗೂ ಖನಿಜ ಸಂಯೋಜನೆಯಲ್ಲಿ ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತವೆ. ಈ ಲಕ್ಷಣಗಳ ಪೈಕಿ ಸುಕ್ಕುಗಟ್ಟಿದ ಇಲ್ಲವೆ ಮಡಿಕೆ ಬಿದ್ದಿರುವ ಸ್ಥಿತಿ, ಪದರು ಹಾಗೂ ಗೀರು ವಿನ್ಯಾಸ ಇವು ಗಮನಾರ್ಹ. ಸಾಮಾನ್ಯವಾಗಿ ಖನಿಜ ನಿಕ್ಷೇಪಗಳು ಇವುಗಳಲ್ಲಿ ಅಡಗಿರುತ್ತವೆ. ಈ ಶಿಲೆಗಳನ್ನು ಕುರಿತ ಶಾಸ್ತ್ರಭಾಗ ರೂಪಾಂತರ ಶಿಲಾವಿe್ಞÁನ (ಮೆಟಾಮಾರ್ಪಿಕ್ ಪೆಟ್ರಾಲಜಿ).

ಜಲಜಶಿಲೆಗಳು ಬಲುಮಟ್ಟಿಗೆ ಸ್ತರಗಳೋಪಾದಿಯಲ್ಲಿದ್ದು ತಾವು ರೂಪಣೆಯಾದ ಕಾಲಕ್ಕೆ ಅನುಗುಣವಾಗಿ ಒಂದರಮೇಲೊಂದು ಸಂಚಯನಗೊಂಡು ಸ್ತರಶ್ರೇಣಿಗಳನ್ನು ನಿರ್ಮಿಸಿವೆ. ಇವುಗಳ ಆಧಾರದ ಮೇಲೆ ಭೂಮಿಯ ಪ್ರಾಚೀನ ಇತಿಹಾಸವನ್ನು ಅರಿಯಲು ಸಾಧ್ಯವಾಗಿದೆಯಲ್ಲದೆ ಭೂಕಾಲಮಾನವನ್ನು ವಿವಿಧ ಕಲ್ಪಗಳು, ಯುಗಗಳು, ವರ್ಗಗಳಾಗಿ ವಿಭಜಿಸಲಾಗಿದೆ. ಇದೇ ಸ್ತರವಿe್ಞÁನ (ಸ್ಪ್ರ್ಯಾಟಿಗ್ರಫಿ). ಪ್ರೊಟಿರೋಜೋಯಿಕ್ (600ರಿಂದ 1850 ದಶಲಕ್ಷವರ್ಷಗಳಿಗೂ ಹೆಚ್ಚು ಪ್ರಾಚೀನ), ಪೇಲಿಯೋಜೋಯಿಕ್ (225ರಿಂದ 600ದಲವ ಪ್ರಾಚೀನ), ಮೀಸೋಜೋಯಿಕ್ (65 ರಿಂದ 225 ದಲವ ಪ್ರಾಚೀನ), ಟಿರ್ಷಿಯರಿ (11 ರಿಂದ 65 ದಲವ. ಪ್ರಾಚೀನ), ಮತ್ತು ಕ್ವಾಟರ್ನರಿ (10ಲಕ್ಷ ವರ್ಷ ಪ್ರಾಚೀನ) ಇವು ಯುಗಗಳು. ಆರ್ಷೇಯಕಲ್ಪ (ಆರ್ಕೀಯನ್ ಎಪಾಕ್: 1850 ದಲವಗಳಿಗಿಂತ ಹೆಚ್ಚು ಪ್ರಾಚೀನ), ಆದಿಜೀವಿಕಲ್ಪ (600-1850 ದಲವ ಪ್ರಾಚೀನ), ಕೇಂಬ್ರಿಯನ್ (500-600 ಪ್ರಾಚೀನ), ಆರ್ಡೋವಿಷಿಯನ್ (440-500 ದಲವ ಪ್ರಾಚೀನ), ಸೈಲೂರಿಯನ್ (400-440 ದಲವ ಪ್ರಾಚೀನ), ಡಿವೋನಿಯನ್ (350-400 ದಲವ ಪ್ರಾಚೀನ), ಕಾರ್ಬೋನಿಫೆರಸ್ (280-350 ದಲವ ಪ್ರಾಚೀನ), ಪರ್ಮಿಯನ್ (225-280 ದಲವ ಪ್ರಾಚೀನ), ಟ್ರಯಾಸಿಕ್ (190-225 ದಲವ ಪ್ರಾಚೀನ), ಜ್ಯೂರಾಸಿಕ್ (135-190 ದಲವ ಪ್ರಾಚೀನ), ಕ್ರಿಟೇಷಸ್ (65-135 ದಲವ ಪ್ರಾಚೀನ), ಅಲಿಗೊಸೀನ್ (25-40 ದಲವ ಪ್ರಾಚೀನ), ಮಯೊಸೀನ್ (11-25 ದಲವ ಪ್ರಾಚೀನ), ಪ್ಲಿಯೊಸೀನ್ (1-11 ದಲವ ಪ್ರಾಚೀನ) ಮತ್ತು ಪ್ಲೀಸ್ಟೊಸೀನ್ 0-1 ದಶಲಕ್ಷವರ್ಷ ಪ್ರಾಚೀನ) ಇವು ಕಲ್ಪಗಳು. ಈ ಯುಗ ಕಲ್ಪಗಳಲ್ಲಿಯ ಭೂರಚನೆಗಳನ್ನೂ ಜೀವಿಗಳನ್ನೂ ಕುರಿತು ವಿಶೇಷ ಅಧ್ಯಯನ ಮಾಡಲಾಗಿದೆ. ಶಿಲಾಸ್ತರಶ್ರೇಣಿಗಳಲ್ಲಿ ಸ್ತರಗಳಿರುವ ಹಂತ ಹಾಗೂ ಅವುಗಳಲ್ಲಿ ಹುದುಗಿರುವ ಪ್ರಾಚೀನ ಜೀವ್ಯವಶೇಷಗಳ ಆಧಾರದ ಮೇಲೆ ಭೂಇತಿಹಾಸಕ್ಕೆ ಸಂಬಂಧಿಸಿದಂತೆ ಶಿಲಾಸ್ತರ ಮಾನಕವನ್ನು (ಸ್ಟ್ರಾಟಿಗ್ರಫಿಕ್ ಸ್ಕೇಲ್) ನಿರ್ಮಿಸಲಾಗಿದೆ. ಇದನ್ನು ಭೂಮಿಯ ವಿವಿಧ ಪ್ರದೇಶಗಳಲ್ಲಿ ಕಾಣಬರುವ ಸ್ತರಶ್ರೇಣಿಗಳ ಅಧ್ಯಯನದಲ್ಲಿ ಬಳಸುತ್ತಾರೆ. ಅವನ್ನು ಪರಸ್ಪರ ಸಮದೂಗಿಸಿ ಅಂದರೆ, ಜೀವ್ಯವಶೇಷಗಳು ಹಾಗೂ ಅವು ತೋರುವ ಸಾಮ್ಯ ರೂಪ ಲಕ್ಷಣಗಳ ಆಧಾರದ ಮೇಲೆ ಮಾಡಿರುವ ಅಧ್ಯಯನದಿಂದ ಭೂಕಾಲದ ವಿವಿಧ ಹಂತಗಳನ್ನು ವಿವರವಾಗಿ ತಿಳಿಯಲು ಹಾಗೂ ಆ ಕಾಲದ ವಿವಿಧ ಸಸ್ಯ ಹಾಗೂ ಪ್ರಾಣಿಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗಿದೆ. ಇದನ್ನು ಕುರಿತ ವಿಭಾಗ ಪ್ರಾಗ್ಜೀವಿವಿe್ಞÁನ (ಪೇಲಿಯಂಟಾಲಜಿ). ಜೀವ್ಯವಶೇಷಗಳ ಅಧ್ಯಯನದಿಂದ ಗತಕಾಲದ ಜೀವರಾಶಿಯ ವೈವಿಧ್ಯವನ್ನು ಅರಿಯುವುದರ ಜೊತೆಗೆ ಅವು ವಿಕಾಸ ಹೊಂದಿದ ಪರಿಯೂ ತಿಳಿದುಬರುತ್ತದೆ. ಸೂಕ್ಷ್ಮಜೀವಿಗಳ ಅವಶೇಷಗಳನ್ನು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಅಧ್ಯಯನ ಮಾಡಲಾಗುತ್ತದೆ. ಇತ್ತೀಚೆಗೆ ಈ ಕೆಲಸದಲ್ಲಿ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಬಳಕೆ ಹೆಚ್ಚಾಗುತ್ತಿದೆ. ಹಲವೊಮ್ಮೆ ಸೂಕ್ಷ್ಮ ಜೀವ್ಯವಶೇಷಗಳ ವಿನ್ಯಾಸವನ್ನು ಅರಿಯಲು ಎಕ್ಸ್‍ಕಿರಣಗಳನ್ನು ಬಳಸಲಾಗುತ್ತದೆ. ಗತಕಾಲದ ಪರಾಗ ಮತ್ತು ಬೀಜಾಣುಗಳ (ಸ್ಟೋರ್ಸ್) ವೈe್ಞÁನಿಕ ಅಧ್ಯಯನ ಪರಾಗವಿe್ಞÁನ (ಪೇಲಿನಾಲಜಿ). ಇದರ ಉಪಯೋಗ ತೈಲೋದ್ಯಮದಲ್ಲಿದೆ. ಜಲಜ ಶಿಲೆಗಳ ಕಾಲನಿರ್ಧರಣೆಯಲ್ಲೂ ಇದು ಉಪಯುಕ್ತ, ಜೀವವಿಕಾಸ ಗತಿಸಿ ಹೋದ ಯುಗಗಳ ಪರಿಸರ ಇದ್ದ ರೀತಿ ಮುಂತಾದವುಗಳ ಅಧ್ಯಯನಕ್ಕೆ ಪರಾಗವಿe್ಞÁನದ ಅಭ್ಯಾಸ ಅವಶ್ಯಕ.

ಶಿಲೆಗಳ ಸ್ವರೂಪ ಹಾಗೂ ಬಾಹ್ಯರಚನೆಗಳಿಂದ ಅವು ಉಂಟಾದ ಬಗೆಯನ್ನು ಅಂದರೆ, ಅವಿರುವ ಭೂಭಾಗದ ಜನನರೀತಿಯನ್ನು ಅರಿತುಕೊಳ್ಳುವುದು ಸಾಧ್ಯವಾಗಿದೆ. ಪರ್ವತ ಪ್ರದೇಶಗಳಲ್ಲಂತೂ ಇವುಗಳ ಪ್ರಾಮುಖ್ಯ ಹೆಚ್ಚು. ಭೂವಿe್ಞÁನದ ಈ ಶಾಸ್ತ್ರ ಭಾಗ ಭೂರಚನಾವಿe್ಞÁನ (ಸ್ಟ್ರಕ್ಚರಲ್ ಜಿಯೋಲಜಿ). ಶಿಲೆಗಳು ತೋರುವ ಬಗೆ ಬಗೆಯ ಬೃಹತ್ ಮಡಿಕೆಗಳು, ಸ್ತರಭಂಗಗಳು, ಸ್ವರೂಪ ಹಾಗೂ ವಿನ್ಯಾಸಗಳು, ಬಿರಿತಗಳು, ಸೀಳುಗಳು ಹೀಗೆ ಈ ಎಲ್ಲ ರಚನಾ ಲಕ್ಷಣಗಳನ್ನೂ ಈ ವಿಭಾಗದಲ್ಲಿ ವಿವರವಾಗಿ ಅಧ್ಯಯನ ಮಾಡಲಾಗುತ್ತದೆ.

ಈ ತನಕ ಅಧ್ಯಯನ ಕೇವಲ ನೆಲಭಾಗಗಳಿಗೆ ಮಾತ್ರ ಸೀಮಿತವಾಗಿದ್ದು ಈಚಿನ ಸಾಗರಗಳ ಅದರಲ್ಲೂ ಅವುಗಳ ತಳಭಾಗಗಳ ಅಧ್ಯಯನ ಕೂಡ ಪ್ರಾರಂಭವಾಗಿದೆ. ಈ ವಿಭಾಗಕ್ಕೆ ಸಾಗರ ವಿe್ಞÁನ (ಓಷಿಯಾನೊಗ್ರಫಿ) ಎಂದು ಹೆಸರು. ಇದರಲ್ಲಿ ಮುಂದುವರಿದ ಪಾಶ್ಚಾತ್ಯ ರಾಷ್ಟ್ರಗಳು ನಡೆಸಿರುವ ಪ್ರಯತ್ನದಿಂದ ಪ್ರಗತಿ ಉಂಟಾಗಿದೆ. ನೆಲದ ಮೇಲೆ ಹೇಗೊ ಸಾಗರತಳದಲ್ಲೂ ಹಾಗೆ ಶಿಲಾ ರಚನೆಗಳು ಕಂಡುಬಂದಿವೆ. ಅಗ್ನಿಪರ್ವತಗಳು, ಸ್ತರಭಂಗಗಳು, ಶಿಲಾಮಡಿಕೆಗಳು ಮತ್ತು ಖನಿಜನಿಕ್ಷೇಪಗಳು ಅಲ್ಲಿ ಇವೆ. ಭೂಭಾಗಗಳಲ್ಲಿ ಖನಿಜನಿಕ್ಷೇಪಗಳ ಲಭ್ಯತೆ ಕಡಿಮೆಯಾಗುತ್ತಿದ್ದು ಭೂವಿe್ಞÁನಿಗಳ ದೃಷ್ಟಿ ಸಹಜವಾಗಿ ಸಾಗರಗಳ ಕಡೆ ಹರಿದಿದೆ. ಸಾಗರಗಳ ತಳದಲ್ಲಿ ಕಂಡುಬರುವ ಮಧ್ಯ ಸಾಗರೀಯ ಏಣುಗಳಲ್ಲಿ (ಮಿಡ್ ಓಷಿಯಾನಿಕ್ ರಿಡ್ಜ್) ಲಾವಾ ಹೊರಹೊಮ್ಮುವಿಕೆ ಭೂಕವಚವನ್ನು ನಿರಂತರವಾಗಿ ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವುದು ವ್ಯಕ್ತವಾಗಿದೆ. ಇದನ್ನು ಆಧರಿಸಿ ಇತ್ತೀಚಿನ ದಿವಸಗಳಲ್ಲಿ ಫಲಕರಚನಾವಾದವನ್ನು (ಪ್ಲೇಟ್ ಟೆಕ್ಟಾನಿಕ್ಸ್) ಮುಂದಿಡಲಾಗಿದೆ. 1915ರಲ್ಲಿ ಆಸ್ಟ್ರಿಯಾದ ಪವನವಿe್ಞÁನಿ ಆಲ್‍ಫ್ರೆಡ್ ವೆಗೆನರ್ ಹಿಂದೆ ಅಲೆಕ್ಸಾಂಡರ್ ಫಾನ್ ಹಂಬೋಲ್ಟ್ (1810) ಹಾಗೂ ಅಂಟೋನಿಯೋ ಸ್ನೆಡರ್ (1858) ಎಂಬವರಿಂದ ಸೂಚಿತವಾಗಿದ್ದ ಭೂಖಂಡಗಳ ಅಲೆತವನ್ನು (ಕಾಂಟಿನೆಂಟಲ್ ಡ್ರಿಫ್ಟ್) ಪುಷ್ಟೀಕರಿಸಿ ನೂತನ ವಾದಸರಣಿ ಮಂಡಿಸಿದ. ಇದರಿಂದ ಭೂವಿe್ಞÁನದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿದಂತಾಗಿದೆ. ಭೂವಿe್ಞÁನದಲ್ಲಿ ಇದನ್ನು ವೆಗಿನೇರಿಯನ್ ಕ್ರಾಂತಿ ಎಂದು ಕರೆಯಲಾಗಿದೆ.

ಭೂಖಂಡಗಳ ಅಲೆತವಾದದ ನವೀನರೂಪವೆನ್ನಬಹುದಾದ ಫಲಕರಚನಾವಾದದಂತೆ ಇಡೀ ಭೂಹೊರಚಿಪ್ಪು ಅಥವಾ ಕವಚ ಸುಮಾರು 12-14 ಬೃಹತ್ ಫಲಕಗಳಿಂದ ಆಗಿದ್ದು ಇವು ಸಂತತವಾಗಿ ನಿರ್ದಿಷ್ಟ ದಿಕ್ಕುಗಳಲ್ಲಿ ಮಂದಗತಿಯಲ್ಲಿ ಸರಿಯುತ್ತಿರುತ್ತವೆ. ಭೂಮಿಯ ಮೇಲಿನ ಪರ್ವತಗಳು, ಮಹಾಕಂದರಗಳು, ಖನಿಜ ನಿಕ್ಷೇಪಗಳು ಹಾಗೂ ಉತ್ಪತ್ತಿ, ಹವೆಯಲ್ಲಿಯ ಬದಲಾವಣೆಗಳು ಇವೆಲ್ಲಕ್ಕೂ ಈ ಅಲೆತವೇ ಕಾರಣವೆನ್ನಲಾಗಿದೆ. ಉದಾಹರಣೆಗೆ ಭಾರತವಿರುವ ಫಲಕ ಮತ್ತು ಚೀನವಿರುವ ಫಲಕಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದು ಘರ್ಷಣೆಗೊಂಡು ಕೆಳಕ್ಕೆ ಸರಿಯುತ್ತಿರುವ ಜಾಡಿನಲ್ಲೇ ಹಿಮಾಲಯ ಪರ್ವತ ಶ್ರೇಣಿಯ ಉದ್ಭವವಾಗುತ್ತಿದೆ. ಹೀಗಾಗಿ ಆ ಭೂಪ್ರದೇಶ ಸ್ಥಿರತೆಯನ್ನು ಪಡೆಯದೆ ಅಲ್ಲಿ ಪದೇಪದೇ ಭೂಕಂಪನಗಳು ಉಂಟಾಗಿ ಹಾವಳಿಯಾಗುತ್ತಿದೆ. ಈ ಭೂವಲಯವನ್ನು ಯುಕ್ತ ರೀತಿಯಲ್ಲಿ ಅನ್ವೇಷಣೆ ಮಾಡಿದಾಗ ಅಪಾರ ಖನಿಜಸಂಪತ್ತು ದೊರೆಕುವ ನಿರೀಕ್ಷೆಯೂ ಉಂಟು.

ಮುಂಬರುವ ವರ್ಷಗಳಲ್ಲಿ ಪ್ರಪಂಚದ ಜನಸಂಖ್ಯೆ ಮಿತಿಮೀರಿ ಬೆಳೆದು ಜಲ ಕ್ಷಾಮ ತಲೆದೋರುವ ಅಪಾಯವಿದೆ. ಇದಕ್ಕೆ ಮುಖ್ಯಕಾರಣ ಹವೆಯಲ್ಲಿ ಆಗುವ ವೈಪರೀತ್ಯಗಳು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭೂವಿe್ಞÁನಿಗಳು ಭೂಮಿಯನ್ನೇ ಆಧರಿಸಿದ್ದಾರೆ. ಭೂಮಿಯ ಆಳದಲ್ಲಿ ಇರುವ ಜಲಸಂಪತ್ತನ್ನೂ ಭೂಜಲನಿಕ್ಷೇಪಗಳನ್ನೂ ರೂಢಿಸಿಕೊಳ್ಳುವ ತಾಂತ್ರಿಕ ವಿಧಾನಗಳ ಅಧ್ಯಯನಗಳನ್ನು ಕುರಿತದ್ದು ಭೂಜಲವಿe್ಞÁನ (ಜಿಯೊಹೈಡ್ರಾಲಜಿ). ಪ್ರಪಂಚದ ರಾಷ್ಟ್ರಗಳು ಈ ಬಗ್ಗೆ ಹೆಚ್ಚಿನ ಗಮನ ನೀಡುತ್ತಿವೆ.

ಆಕಾಶ ಸಂಶೋಧನೆ, ಚಂದ್ರಯಾತ್ರೆ ಅಂತರಗ್ರಹ ನೌಕಾಯಾನ ಮುಂತಾದವುಗಳೆಲ್ಲ ಇತ್ತೀಚೆಗೆ ಪ್ರಗತಿ ಹೊಂದಿದ್ದು ಭೂಮಿಯ ಸಮಗ್ರ ಭೂವೈe್ಞÁನಿಕ ಅಧ್ಯಯನ ಸಾಧ್ಯವಾಗಿದೆ. ಭೂಮಿಯನ್ನು ನಿರ್ದಿಷ್ಟ ಎತ್ತರದಲ್ಲಿ ಪರಿಭ್ರಮಿಸುವ ಕೃತಕ ಭೂಉಪಗ್ರಹಗಳು ಮತ್ತು ಆಕಾಶ ಪ್ರಯೋಗಾಲಯಗಳು ಇವುಗಳಿಂದ ಭೂವೈe್ಞÁನಿಕ ಅಧ್ಯಯನಕ್ಕೆ ಹೆಚ್ಚಿನ ಕುಮ್ಮಕ್ಕು ದೊರಕಿದೆ. ಚಾಂದ್ರನೆಲ ವಿe್ಞÁನ (ಲೂನಾರ್‍ಜಿಯೋಲಜಿ) ಇತ್ತೀಚೆಗೆ ಬೆಳೆದು ಬರುತ್ತಿರುವ ಮತ್ತೊಂದು ವಿಭಾಗ. ಅಮೆರಿಕ ರಷ್ಯ ಮೊದಲಾದ ದೇಶಗಳ ಗಗನಯಾತ್ರಿಗಳು ಚಂದ್ರನನ್ನು ತಲಪಿ ಅಲ್ಲಿಯ ನಿರ್ದಿಷ್ಟ ಪ್ರದೇಶಗಳಿಂದ ಶಿಲಾ ಪ್ರತಿಚಯಗಳನ್ನು ಸಂಗ್ರಹಿಸಿ ಭೂಮಿಗೆ ತಂದಿದ್ದಾರೆ. ಈ ಶಿಲೆಗಳ ವಿವರ ಅಧ್ಯಯನದಿಂದ ಚಂದ್ರ-ಭೂಮಿ ಇವುಗಳ ಭೂವೈe್ಞÁನಿಕ ಬಾಂಧವ್ಯ ಹಾಗೂ ಚಂದ್ರನ ಜನನ ರೀತಿಯನ್ನು ಕುರಿತ ಹೆಚ್ಚಿನ ಮಾಹಿತಿಗಳು ಒದಗಿವೆ. ಭೂಮಿಯ ಮೇಲಿನ ಜ್ವಾಲಾಮುಖಜಶಿಲೆ, ಬಸಾಲ್ಟ್ ಮತ್ತು ಅನಾರ್ಥೊಸೈಟುಗಳಿಗೂ ಚಾಂದ್ರ ಶಿಲೆಗಳಿಗೂ ಹೆಚ್ಚಿನ ಸಾಮ್ಯದ ಲಕ್ಷಣಗಳಿರುವುದು ಗೊತ್ತಾಗಿದೆ. (ಬಿ.ವಿ.ಜಿ.)