ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೃಂಗಿ ನೃತ್ಯ

ವಿಕಿಸೋರ್ಸ್ದಿಂದ

ಭೃಂಗಿ ನೃತ್ಯ - ಭಾರತೀಯ ನೃತ್ಯ ಪರಂಪರೆಗೆ ಸೇರಿದ ಒಂದು ವಿಶಿಷ್ಟ ನೃತ್ಯ. ಈ ನೃತ್ಯಗಾರ ಮೂಗು ಮತ್ತು ಮುಖಗಳನ್ನು ಸಂಕೋಚ ಮತ್ತು ವಿಕಾಸಗೊಳಿಸಿ ನರ್ತಿಸುತ್ತಾನೆ, ಇದರಿಂದ ಸಭಿಕರನ್ನೂ ನಗಿಸುತ್ತಾನೆ. ಶಿವಶರಣರ ಉತ್ಸವಗಳಲ್ಲಿ ಭೃಂಗಿನೃತ್ಯ ಇರುವುದುಂಟು. ಈ ನೃತ್ಯ ಭೀಬಿತ್ಸರಸ ಪ್ರಚೋದಕವಾಗಿಯೂ ಇರುತ್ತದೆ.