ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಂಗೋಲಿಯ
ಮಂಗೋಲಿಯ ಮದ್ಯ ಏಷ್ಯಾದ ಒಂದು ಗಣರಾಜ್ಯ. ಉತ್ತರ ಅಕ್ಷಾಂಶ 42 ಡಿಗ್ರಿ-52 ಡಿಗ್ರಿ ಮತ್ತು ಪೂರ್ವರೇಖಾಂಶ 88 ಡಿಗ್ರಿ-120 ಡಿಗ್ರಿ ವ್ಯಾಪಿಸಿರುವ ಪ್ರಸ್ಥಭೂಮಿ, ಮಂಗೋಲ್ ಜನರ ಜನ್ಮಭೂಮಿ. ಒಳ ಮಂಗೋಲಿಯ ಚೀನಾ ದೇಶದಲ್ಲಿ ಸೇರಿಹೋಗಿದೆ. ಹೊರ ಮಂಗೋಲಿಯ ಗಣರಾಜ್ಯವಾಗಿದ್ದು ರಷ್ಯಾದೊಡನೆ ನಿಕಟ ಸಂಬಂಧ ಹೊಂದಿದೆ. ಇದರ ಉತ್ತರದಲ್ಲಿ ರಷ್ಯಾದೇಶವೂ, ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಚೀನಾ ದೇಶವೂ ಸುತ್ತುವರೆದಿವೆ. ವಿಸ್ತೀರ್ಣ 1,565,000 ಚ.ಕಿಮೀ. ಜನಸಂಖ್ಯೆ 1,820,000 (1984). ಊಲಾನ್ ಬಾಟರ್ ಇದರ ರಾಜಧಾನಿ.
ಮೇಲ್ಮ್ಯೆ ಲಕ್ಷಣ : ಪ್ರಾಕೈತಿಕವಾಗಿ ಮಂಗೋಲೀಯವನ್ನು ಮೂರು ಭಾಗಗಳಾಗಿ ವಿಭಾಗಿಸಬಹುದು: 1 ಮಧ್ಯ ಅಥವಾ ಗೋಬಿ ಪ್ರದೇಶ, 2 ವಾಯುವ್ಯದ ಪರ್ವತಗಳು, 3 ಆಗ್ನೇಯ ಮಂಗೋಲಿಯ. ಮಧ್ಯ ಅಥವಾ ಗೋಬಿ ಪ್ರದೇಶ : ಒಟ್ಟು ಪ್ರಸ್ಥಭೂಮಿಯ ಅತೀವ ತಗ್ಗು ಪ್ರದೇಶ, ನೆಲಮಟ್ಟಸವಾಗಿದೆ. ಇಲ್ಲಿ ಹೆಚ್ಚು ಎತ್ತರವಿಲ್ಲದ ಬೆಟ್ಟಗಳಿವೆ. ಉತ್ತರದ ತುದಿಯಲ್ಲಿ ಮಾತ್ರ ಕೆರೊಲಿನ್ ನದಿ ಹರಿಯುತ್ತದೆ. ಮಂಗೋಲಿಯನ್ ಭಾಷೆಯಲ್ಲಿ ಗೋಬಿ ಎಂದರೆ ಮರಳುಕಾಡು ಎಂದರ್ಥ.
ವಾಯುವ್ಯದ ಪರ್ವತ ಪ್ರದೇಶದಲ್ಲಿ ಅಲ್ಟಾಯ್, ಖಾಂಗಾಯ್, ಸಯಾನ್ ಪರ್ವತಶ್ರೇಣಿಗಳಿವೆ. ಇಲ್ಲಿಯ ಕಣಿವೆಗಳು ಸಮುದ್ರಮಟ್ಟದಿಂದ 915-1370 ಮೀ ಎತ್ತರದಲ್ಲಿವೆ. ಎಲ್ಲಿ ಅನೇಕ ನದಿಗಳಿವೆ.
ಆಗ್ನೇಯ ಮಂಗೋಲಿಯದಲ್ಲಿ ಹೊರ ಹಾಗೂ ಒಳಪರ್ವತ ಶ್ರೇಣಿಗಳ ಸರಪಣಿ ಇದೆ. ಈ ಎರಡು ಶ್ರೇಣಿಗಳ ನಡುವೆ ಇರುವ ಭಾಗ ತಗ್ಗಾಗಿದೆ. ಇದು ಗೋಬಿಯ ಚೀನಾಭಾಗದಲ್ಲಿದ್ದು ಮಧ್ಯೆ ಗೋಬಿ ಪ್ರದೇಶಕ್ಕಿಂತ ವೈವಿಧ್ಯಮಯವಾಗಿದೆ.
ವಾಯುಗುಣ : ದೇಶಾದ್ಯಂತ ಒಂದೇ ರೀತಿಯ ವಾಯುಗುಣವಿರದೆ ವ್ಯತ್ಯಾಸಗಳು ತೋರಿಬರುತ್ತದೆ. ಚಳಿಗಾಲದಲ್ಲಿ ಅತಿ ಶೀತ ಹವೆಯೂ ಬೇಸಗೆ ಕಾಲದಲ್ಲಿ ಅತಿ ಬಿಸಿ ಹವೆಯೂ ಇರುತ್ತದೆ. ಚಳಿಗಾಲ ಮತ್ತು ಬೇಸಗೆ ಕಾಲಗಳ ಉಷúತೆಯಲ್ಲಿ 11 ಡಿಗ್ರಿ ಸೆ. ವ್ಯತ್ಯಾಸ ಕಂಡುಬರುತ್ತದೆ. ವರ್ಷಕ್ಕೆ ಸರಾಸರಿ ಮಳೆ 20-25 ಸೆಂಮೀ ಮಾತ್ರ. ಮಳೆ ಮಾರುತ ಬಹಳ ದೂರ ಸಾಗಿ ಬರುವಾಗ ತಮ್ಮಲ್ಲಿಯ ತೇವಾಂಶವನ್ನು ಕಳೆದುಕೊಂಡಿರುವುದೇ ಇದರ ಕಾರಣ. ಗೋಬಿ ಪ್ರದೇಶದಲ್ಲಿ ಮಳೆಯ ಸರಾಸರಿ 22-25 ಸೆಂಮೀ. ವರ್ಷಾದ್ಯಂತ ಇಲ್ಲಿ ಮಾರುತ ಬೀಸುತ್ತಲೇ ಇರುತ್ತದೆ. ಒಳಮಂಗೋಲಿಯಾದಲ್ಲಿ ಚಳಿಗಾಲದಲ್ಲಿ ವಾಯುವ್ಯದಿಂದ ಬೀಸುವ ಗಾಳಿ ಅತೀವ ಚಳಿ ಉಂಟುಮಾಡುತ್ತದೆ. ಗೋಬಿಯಲ್ಲಿ ದೂಳು ಬಿರುಗಾಳಿಯ ಹಾವಳಿಯೂ ಉಂಟು. ಆಗ್ನೇಯದಿಂದ ಬೀಸುವ ಬೇಸಗೆ ಮಾನ್ಸೂನ್‍ನಿಂದ ಮಳೆ ಆಗುತ್ತದೆ. ಸರಾಸರಿ 25-37 ಸೆಂಮೀ. ಗೋಬಿ ಮರುಭೂಮಿಯಲ್ಲಿ ಮಳೆ ಅತ್ಯಲ್ಪ.
ಹವಾ ವ್ಯತ್ಯಾಸದಂತೆಯೇ ಸ್ವಾಭಾವಿಕ ಸಸ್ಯವರ್ಗದಲ್ಲೂ ವ್ಯತ್ಯಾಸ ಕಾಣ ಬರುತ್ತದೆ. ಸಯಾನ್ ಪರ್ವತದ ಇಕ್ಕೆಡೆಗಳಲ್ಲೂ ಸಿಡಾರ್, ಪೈನ್, ಲಾರ್ಚ್ ಮೊದಲಾದ ಮರಗಳಿರುವ ಒಟ್ಟು 156,700 ಚ.ಕಿಮಿ. (1976). ಅರಣ್ಯ ಪ್ರದೇಶವಿದೆ. ಕೆರೊಲಿನ್ ನದಿಯ ಸುತ್ತಮುತ್ತ ಪರ್ವತಗಳೂ ಕಣಿವೆಗಳೂ ಇವೆ. ಪರ್ವತದಲ್ಲಿ ಕಾಡೂ ಕಣಿವೆಗಳಲ್ಲಿ ಹುಲ್ಲೂ ಬೆಳೆಯುತ್ತವೆ. ಗೋಬಿ ಪ್ರದೇಶ ಶುಷ್ಕ. ಒಳ ಮಂಗೋಲಿಯಾ ಎತ್ತರ ಹುಲ್ಲಿನ ಭೂಮಿ, ಎನಿಸಿಕೊಂಡಿದೆ.
ಮಂಗೋಲಿಂiÀi ಸಮೃದ್ಧ ಹುಲ್ಲು ಮೈದಾನಗಳ ನಾಡು. ಹೀಗಾಗಿ ಜನರಿಗೆ ಪಶುಪಾಲನೆಯೇ ಮುಖ್ಯ ವೃತ್ತಿ. ದನ, ಕುರಿ, ಆಡು, ಒಂಟೆ ಕುದುರೆಗಳನ್ನು ಸಾಕಿಕೊಂಡು, ಒಂದು ಕಡೆಯಿಂದ ಮತ್ತೊಂದು ಕಡೆಗೆ__ಹುಲ್ಲು ಹುಲುಸಾಗಿರುವ ಕಡೆಗೆ__ವಲಸೆ ಹೋಗುವ ಅಲೆಮಾರಿಗಳಿರುವರು. ಇಲ್ಲಿ ನೀರಾವರಿ ಸೌಕರ್ಯವಿಲ್ಲ, ಮಳೆಯೂ ಸರಿಯಾಗಿ ಬೀಳುವುದಿಲ್ಲವಾಗಿ ಧಾನ್ಯ ಬೆಳೆಸುವುದು ಕಷ್ಟವಾಗಿದೆ. ಗೋದಿ ಹಾಗೂ ಜವೆಗೋದಿಗಳನ್ನು ಒಳಮಂಗೋಲಿಯಾದ ಅಂಚು ಪ್ರದೇಶದಲ್ಲಿ ಬೆಳೆಸುತ್ತಾರೆ. ಇತ್ತೀಚಿನ ಪಂಚವಾರ್ಷಿಕ ಯೋಜನೆಯಂತೆ (1981-1985) 1990ರ ವರೆಗಿನ ದೀರ್ಘಾಯೋಜನೆಯ ಪ್ರಕಾರ ಕೃಷಿ, ಪಶುಪಾಲನೆ, ಕೈಗಾರಿಕೆ, ವ್ಯಾಪಾರ ಮುಂತಾದವುಗಳು ಗುರಿಯಂತೆ ಅಭಿವೈದ್ಧಿಯಾಗುತ್ತಿದೆ. ಕೈಷೀ ಉತ್ಪನ್ನದಲ್ಲಿ ಶೇಕಡಾ 70 ಭಾಗ ಪಶುಪಾಲನೆಯಿಂದಲೇ ಬರುತ್ತಿದೆ. 207000, ಟನ್ ಗೋದಿ 1700, ಟನ್ ರೈ, 31,800 ಟನ್ ಬಾರ್ಲಿಯನ್ನು 1980ರಲ್ಲಿ ಬೆಳೆಯಲಾಗಿತ್ತು.
ಕೈಗಾರಿಕೆಯಲ್ಲೂ ಈ ದೇಶ ಇತ್ತೀಚಿಗೆ ಪ್ರಗತಿ ಸಾಧಿಸುತ್ತಿದೆ. 1980ರಲ್ಲಿ 1.4 ಮಿಲಿಯನ್, ಕ್ಯೂಬಿಕ್ ಮೀಟರ್‍ಗಳಷ್ಟು ಬಟ್ಟೆ ತಯಾರಿಸಿದ್ದು, 1,78,000, ಟನ್‍ಗಳ ಸಿಮೆಂಟ್ 98.000, ಹೆಕ್ಟೋಲೀಟರ್ ಬೀರ್ ತಯಾರಿಕೆಯಾಗಿತ್ತು. ಜೊತೆಗೆ ಮಾಂಸ ಚರ್ಮವಸ್ತುಗಳು ಇತ್ಯಾದಿಗಳ ಉತ್ಪತ್ತಿಯೂ ಸಾಗುತ್ತಿದೆ.
ಆಡಳಿತದ ಅನುಕೂಲಕ್ಕಾಗಿ ಮಂಗೋಲಿಯವನ್ನು 18 ಪ್ರಾಂತ್ಯಗಳನ್ನಾಗಿ ಮತ್ತು ಪ್ರಾಂತ್ಯಗಳನ್ನು ಮತ್ತು ಜಿಲ್ಲೆಗಳಾಗಿ ವಿಂಗಡಿಸಿದ್ದಾರೆ. ಸ್ಥಳೀಯ ಆಡಳಿತವನ್ನು ಪ್ರಜಾಪತಿನಿಧಿಗಳು (ಖುರಲ್ಸ್) ನೋಡಿಕೊಳ್ಳುವರು. ಊಲಾನ್ ಬಾಟರ್ ಈ ದೇಶದ ಮುಖ್ಯ ಆಡಳಿತ ಕೇಂದ್ರ ನಗರ. ಡರ್ ಖಾನ್ ಮತ್ತು ಅರ್ಡೆನೆಟ್ ಮುಖ್ಯನಗರಗಳು. ಟ್ರಾನ್ಸ್ ಮಂಗೋಲಿಯನ್ ರೈಲ್ವೆ 1423 ಕಿಮೀ (1983), ಚೀನ ಮತ್ತು ರಷ್ಯಾದೇಶದೊಡನೆ ಸಂಪರ್ಕಕಲ್ಪಿಸಿದೆ. ವಿಮಾನ ಸಂಪರ್ಕವಿದೆ. ಅಂಚೆ, ತಂತಿ, ದೂರದರ್ಶನ ಕೇಂದ್ರಗಳು ಇತ್ಯಾದಿ ಸಂಪರ್ಕ ಸಾಧನಗಳಿವೆ. ರಾಜ್ಯ ವಿಶ್ವವಿದ್ಯಾಲಯ (1942) ವಿe್ಞÁನ ಅಕಾಡೆಮಿ (1953) ವಿವಿಧ ಶಾಲಾ ಕಾಲೇಜುಗಳಿವೆ. 107 (1983) ಆಸ್ಪತ್ರೆಗಳೂ ಇದ್ದವು.
ಭೂಮಿಯ ಒಳಪದರದಲ್ಲಿ ವಿಸ್ತಾರವಾದ ಗ್ರಾನೈಟ್ ನಿಕ್ಷೇಪವಿದೆ. ಬ್ಯಾತಿಲಿಥ್‍ನ ಅಂಚಿನಲ್ಲಿ ಅಮೂಲ್ಯ ಖನಿಜಗಳಿರಬೇಕೆಂಬ ಊಹೆಗೆ ಅವಕಾಶವಿದೆ. ಕಲ್ಲಿದ್ದಲು, ಕಬ್ಬಿಣದ ಅದುರು ಸಹ ಇವೆ. ತಾಮ್ರ, ಸತು, ಜಿಂಕ್ ಟಿನ್ ಮತ್ತು ಮಲೆಬ್ಡಿನಮ್ ಮುಂತಾದ ಅಪಾರ ಖನಿಜ ನಿಕ್ಷೇಪಗಳಿವೆ. 17,000 ಮಿಲಿಯನ್ ಟನ್‍ಗಳ ಕಲ್ಲಿದ್ದಲಿನ ನಿಕ್ಷೇಪವಿದ್ದು 1981ರಲ್ಲಿ 4.1 ಮಿಲಿಯನ್ ಟನ್‍ಗಳ ಲಿಗ್ನೈಟ್ ಉತ್ಪಾದಿಸಲಾಗಿದೆ. ಮಂಗೋಲಿಯದ ವಿದ್ಯುತ್ ಉತ್ಪಾದನೆ 1980ರಲ್ಲಿ 1.400 ಮಿಲಿಯ ಕಿ ವಾಟ್ಸ್.
ಚರಿತ್ರೆ : 1200ರ ಪ್ರಾರಂಭದಲ್ಲಿ ಚೆಂಗೇಸ್‍ಖಾನ್ ಮಂಗೋಲಿಯವರ ವಿವಿಧ ಪಂಗಡಗಳನ್ನು ಒಂದುಗೂಡಿಸಿ ಕೋರಿಯ ಮತ್ತು ಚೀನಾದಿಂದ ಪಶ್ಚಿಮದತ್ತ ಯೂರೋಪಿನವರೆಗೂ ಮಂಗೋಲ್ ಸಾಮ್ರಾಜ್ಯ ವಿಸ್ತರಿಸಿದ. ಇವನ ಮಗ ಕುಬ್ಲಾಯ್‍ಖಾನ್ ಇದೇ ನೀತಿಯನ್ನು ಮುಂದುವರಿಸಿದ. ಈ ಸಾಮ್ರಾಜ್ಯ 1300ರಲ್ಲಿ ಕುಸಿದು ಬಿತ್ತು.
ಪುನಃ ಈ ದೇಶವನ್ನು ಮಂಗೋಲಿಯನ್ ರಾಜಕುಮಾರರು 1500ರ ಕೊನೆಯಲ್ಲಿ ಒಂದುಗೂಡಿಸಿದರು. ಆಗ ಅವರೇ ಇಲ್ಲಿಯ ಜನರನ್ನು ಲಾಮಾ ಪಂಥಕ್ಕೆ ಪರಿವರ್ತಿಸಿದರು. 1600ರ ಪ್ರಾರಂಭದಲ್ಲಿ ಮಂಚೂರಿಯಾದ ಮಂಚೂದೊರೆಗಳು ಒಳ ಮಂಗೋಲಿಯಾದ ಮೇಲೆ ಪ್ರಭುತ್ವ ಸ್ಥಾಪಿಸಿಕೊಂಡರು. ಮಂಚುಗಳು ಚೀನಾವನ್ನು 1644 ರಲ್ಲಿ ಗೆದ್ದುಕೊಂಡರಲ್ಲದೆ 1680ರಲ್ಲಿ ಹೊರ ಮಂಗೋಲಿಯಾವನ್ನು ಆಕ್ರಮಿಸಿದರು. 1700-1800 ಅವಧಿಯಲ್ಲಿ ಮಂಗೋಲಿಯಾಕ್ಕೆ ಬಾಹ್ಯ ಪ್ರಪಂಚದ ಜೊತೆ ಇದ್ದ ಸಂಪರ್ಕ ಅತ್ಯಲ್ಪ ಚೀನಾದಂತೆ.
ಮಂಗೋಲಿಯನ್ನರು ಚೀನಾ ಪಡೆಯನ್ನು ಹೊರ ಮಂಗೋಲಿಯದಿಂದ ಹೊರದಬ್ಬಿ (1911) ಜೀವಂತ ಬುದ್ಧನೆಂಬ ಪುರೋಹಿತನನ್ನು ರಾಜನನ್ನಾಗಿ ನೇಮಿಸಿದರು. ಅದೇ ವೇಳೆ ರಷ್ಯದ ಸಹಾಯ ಯಾಚಿಸಿದರು. ಚೀನಾ ಮತ್ತು ರಷ್ಯಗಳು ಹೊರಮಂಗೋಲಿಯಕ್ಕೆ ಸ್ವಂತ ವ್ಯವಹಾರಗಳಲ್ಲಿ ಸ್ವಾತಂತ್ರ್ಯ ನೀಡುವ ಒಪ್ಪಂದ ಮಾಡಿಕೊಂಡವು (1913). ಹೊರಮಂಗೋಲಿಯಾ ಮಾತ್ರ ಕಾನೂನು ರೀತ್ಯ ಚೀನದ ಭಾಗವಾಗಿ ಉಳಿದಿದ್ದರೂ ವಾಸ್ತವವಾಗಿ ರಷ್ಯದ ನಿಯಂತ್ರಣಕ್ಕೆ ಒಳಪಟ್ಟಿತ್ತು.
ರಷ್ಯದ ಆಂತರಿಕ ಯುದ್ಧದ ವೇಳೆ (1920) ಕಮ್ಯೂನಿಸ್ಟ್ ವಿರೋಧಿ ರಷ್ಯದ ಸೈನ್ಯ ಹೊರ ಮಂಗೋಲಿಯವನ್ನು ಆಕ್ರಮಿಸಿ ಜೀವಂತ ಬುದ್ಧನ ಮೂಲಕ ಅಲ್ಲಿಯ ಆಡಳಿತ ನಡೆಸತೊಡಗಿತು. ಮಂಗೋಲಿಯಾದ ಮತ್ತು ರಷ್ಯದ ಕಮ್ಯೂನಿಷ್ಟರು 1921ರಲ್ಲಿ ಹೊರ ಮಂಗೋಲಿಂiÀiದ ಮೇಲೆ ಪ್ರಭುತ್ವ ಪಡೆದದ್ದು ಜೀವಂತ ಬುದ್ಧನ ಮರಣಾ£ಂತರ ಅವರು ಮಂಗೋಲಿಯನ್ ಜನತಾ ಪ್ರಜಾರಾಜ್ಯ ಸ್ಥಾಪಿಸಿದರು (1924). 1946ರ ತನಕವೂ ಚೀನ ಮಂಗೋಲಿಯದ ಸ್ವಾತಂತ್ರವನ್ನು ಮಾನ್ಯ ಮಾಡಲಿಲ್ಲ. 1960ರ ನಾಲ್ಕನೆಯ ರಾಜ್ಯಾಂಗದ ಪ್ರಕಾರ ವಯಷ್ಕ ಮತದಾನವಿದ್ದು 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದು. ಇಲ್ಲಿರುವುದು ಕಮ್ಯೂನಿಸ್ಟ್ ರಾಜಕೀಯ ಪಕ್ಷ. 1961, ಅಕ್ಟೋಬರ್ 28ರಂದು ಮಂಗೋಲಿಯ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. ಕಮ್ಯೂನಿಸ್ಟ್ ಪ್ರಪಂಚದ ನಾಯಕತ್ವಕ್ಕಾಗಿ ಚೀನಾ, ರಷ್ಯಗಳ ನಡುವಿನ ಪೈಪೋಟಿಯಲ್ಲಿ ಮಂಗೋಲಿಯ ದೇಶ ರಷ್ಯವನ್ನು ಬೆಂಬಲಿಸುತ್ತಿದೆ. ಮಂಗೋಲಿಯ ಮತ್ತು ರಷ್ಯ ದೇಶಗಳು ಪರಸ್ಪರ ಸಹಾಯಕ್ಕಾಗಿ ಒಂದು ಒಪ್ಪಂದ ಮಾಡಿಕೊಂಡಿವೆ (1966).
ಜನ : ಇವರ ಮೂಲ ವಾಸಸ್ಥಾನ ಮಧ್ಯ ಏಷ್ಯದ ಪೂರ್ವಭಾಗ; ಬೈಕಲ್ ಸರೋವರ ಮತ್ತು ಅಮೂರ್ ನದಿ ಹುಟ್ಟುವ ಸುತ್ತಲ ಪ್ರದೇಶ. ಮಂಗೋಲ್‍ಶಬ್ದ ಧೀರ ಎಂಬರ್ಥದ ಮಾಂಗ್ ಎಂಬ ಶಬ್ದದಿಂದ ಬಂದಿದೆ ಎಂದು ಹೇಳುತ್ತಾರೆ. ಇವರದು ಅಲೆಮಾರಿ ಜೀವನ. ಪಶುಪಾಲನೆ ಮುಖ್ಯ ವೈತ್ತಿ. 619ರಿಂದ 900ರ ತನಕ ಚೀನಾದೇಶ ಆಳಿದ ಟಾಂಗ್ ರಾಜಸಂತತಿಯ ಇತಿಹಾಸ ಗ್ರಂಥಗಳಲ್ಲಿ ಇವರ ಉಲ್ಲೇಖವಿದೆ. ತಮ್ಮ ದನಕರುಗಳಿಗೆ ಬೇಕಾದ ಹುಲ್ಲುಗಾವಲುಗಳನ್ನರಸುತ್ತ ನಾನಾಕಡೆ ತಿರುಗುವ ಇವರ ವಾಸ ಡೇರೆಗಳಲ್ಲಿ. ಆಹಾರಕ್ಕಾಗಿ ಬೇಟೆ. ಚಳಿಗಾಲದಲ್ಲಿ ಸಾಕಾಗುವಷ್ಟು ಆಹಾರ ಸಿಕ್ಕುತ್ತಿರಲಿಲ್ಲವಾಗಿ ಸಿಕ್ಕುವ ಆಹಾರವನ್ನು ಬಲುಕಷ್ಟದಿಂದ ದೊರಕಿಸಿಕೊಳ್ಳಬೇಕಾದ ಪರಿಸ್ಥಿತಿ ಇದ್ದುದರಿಂದ ಇವರು ಅತ್ಯಂತ ದೃಢಕಾಯರೂ ಕಷ್ಟಸಹಿಷ್ಣುಗಳೂ ಧೈರ್ಯಶಾಲಿಗಳೂ ಆದರು. ಗುಂಪು ಕಟ್ಟಿಕೊಂಡು ನಾನಾಕಡೆ ಅಲೆಯುತ್ತಿದ್ದ ಇವರಲ್ಲಿ ಪರಸ್ಪರ ಕದನಗಳೂ ಆಗುತ್ತಿದ್ದುವು. ಒಂದೊಂದು ವೇಳೆ ಅತ್ಯಂತ ಸಮರ್ಥವಾದ ಒಂದು ಗುಂಪಿನ ನಾಯಕ ಇತರ ಗುಂಪುಗಳನ್ನು ಸೋಲಿಸಿ ಅವರನ್ನು ತನ್ನ ಅಧೀನರನ್ನಾಗಿ ಮಾಡಿಕೊಂಡ ಅಧಿಕಾರ ನಡೆಸುತ್ತಿದ್ದ. ಶತ್ರುಗಳಲ್ಲಾಗಲಿ ತಮ್ಮ ಗುಂಪಿನವರಲ್ಲೇ ಆಗಲಿ ಯಾವ ರೀತಿಯ ದೌರ್ಬಲ್ಯವನ್ನೂ ಇವರು ಸಹಿಸರು.
ಹೀಗೆ ಸುತ್ತಮುತ್ತಲಿನ ಪಂಗಡಗಳನ್ನು ಸೋಲಿಸಿ ದೊಡ್ಡ ತಂಡವೊಂದನ್ನು ಕಟ್ಟಿ ದರ್ಪದಿಂದ ಬಾಳಿದ ಬುಡನ್‍ಟ್ಸಾರ್ ಎಂಬವನೇ ಮಂಗೋಲರ ಮೂಲಪುರುಷ ಎನ್ನಲಾಗಿದೆ. ತನ್ನ ಸಾಮಥ್ರ್ಯದಿಂದ ಅಧಿಕಾರವ್ಯಾಪ್ತಿ ಹೆಚ್ಚಿಸಿಕೊಂಡು ಈತ ಪ್ರಬಲ ನಾಯಕತ್ವವನ್ನು ತನ್ನ ಮಗನಿಗೆ ಬಿಟ್ಟುಹೋದ. ಇವನ ಸಂತತಿಯವನೇ ಪ್ರಸಿದ್ಧನಾದ ಚೆಂಗೀಸ್‍ಖಾನ್. ಈತ ಮಂಗೋಲರ ಗುಂಪುಗಳನ್ನೆಲ್ಲ ಒಟ್ಟುಗೂಡಿಸಿ ಮಂಗೋಲ್ ಚಕ್ರಾಧಿಪತ್ಯ ಸ್ಥಾಪಿಸಿದ.
ಹನ್ನೆರಡನೆಯ ಶತಮಾನ ಕಳೆಯುವುದಕ್ಕೆ ಮುಂಚಿತವಾಗಿಯೇ ಮಂಗೋಲರ ಸಮಾಜ ವ್ಯವಸ್ಥೆ ಕ್ರಮಗೊಳಿಸಲ್ಪಟ್ಟು ಯಸ್ಸಾ ಎಂಬ ಕಾನೂನು ಕೂಡ ನಿರ್ಮಿತವಾಗಿತ್ತು. ಇದನ್ನು ಉಕ್ಕಿನ ತಗಡುಗಳ ಮೇಲೆ ಬರೆಸಿಟ್ಟರು. ಕುದುರೆ ಕದಿಯುವುದು, ಪರಸ್ತ್ರೀ ಸಂಭೋಗ ಮತ್ತು ಶಾರೀರಿಕ ಸ್ವಚ್ಚತೆ ಇವು ಮುಖ್ಯ ಅಪರಾಧಗಳು. ಮಗು ಹುಟ್ಟಿದಾಗ ಮೈತೊಳೆಯುವುದೊಂದೇ ಅವರು ಬೇರೆ ಸ್ನಾನವನ್ನು ಕಂಡವರೇ ಅಲ್ಲ. ಹೆಚ್ಚುಕಡಿಮೆ ಊಳಿಗಮಾನ್ಯ ಪದ್ಧತಿಯ ರೀತಿಯಲ್ಲಿ ಪ್ರತಿಯೊಬ್ಬ ಮಂಗೋಲಿಯನ್ ಗಂಡಸೂ ಯೋಧನಾಗಲೇಬೇಕೆಂಬ ನಿಯಮವಿತ್ತು.
ಜೀವನ: ಒಂದೆಡೆ ನಿಲ್ಲದೆ ಅಲೆಯುತ್ತಿರುವುದು, ಪಶುಪಾಲನೆ ಇವು ಇವರ ಜೀವನದ ಪ್ರಧಾನ ಲಕ್ಷಣಗಳು. ಮಂಚೂ ದೊರೆಗಳ ಕಾಲದಿಂದ ಇವರ ಅಲೆತ ಕಡಿಮೆಯಾಗಿದೆ. ಜನರು ಕೆಲವು ಸೀಮಿತ ಪ್ರಾಂತ್ಯಗಳಲ್ಲಿ ಮಾತ್ರ ನೆಲಸಿರಬೇಕೆಂದು ಈ ದೊರೆಗಳು ಕಟ್ಟುಪಾಡು ಮಾಡಿದ್ದರು. 1924ರ ಅನಂತರ ರಷ್ಯದ ಪ್ರಭಾವ ಹೆಚ್ಚತೊಡಗಿದಾಗ ಅದರ ಸಮತಾವಾದ ತತ್ತ್ವಕ್ಕನುಗುಣವಾಗಿ ಜಾನುವಾರುಗಳ ಸಮಷ್ಟಿಸ್ವಾಮ್ಯವನ್ನು ಆಚರಣೆಗೆ ತರಬೇಕಾಯಿತು; ಇದರಿಂದ ಇವರ ಅಲೆತದ ಜೀವನ ಕೊನೆಗೊಂಡಿತು. 1924ರಿಂದ 41ರ ತನಕದ ಅವಧಿಯಲ್ಲಿ ಇವರ ಪಶು ಸಂಪತ್ತು ಪ್ರತಿಸಂಸಾರದಲ್ಲಿ 60 ರಿಂದ 130ಕ್ಕೆ ಹೆಚ್ಚಿದೆ. ಇಷ್ಟು ಪಶು ಸಂಪತ್ತು ಪ್ರಪಂಚದ ಬೇರಾವ ದೇಶದಲ್ಲೂ ಇಲ್ಲ.
ಮಂಗೋಲರ ಮೂಲಮತ ಶಾಮಿಯಾ ನಿಸಮ್ ಆದರೂ ಬಲುಹಿಂದಿನಿಂದಲೂ ಬೌದ್ಧ ಧರ್ಮಕ್ಕೆ ಮಾರುಹೋಗಿದ್ದವರು, ಇವರದು ಲಾಮಾಪ್ರಧಾನ ಧರ್ಮ. ಲಾಮಾ ಮತವಿಷಯಗಳಲ್ಲಿ ಮಾತ್ರವೇ ಅಲ್ಲ, ಐಹಿಕ ವ್ಯವಹಾರಗಳ ಹಿತಾರ್ಥಗಳಲ್ಲೂ ಸರ್ವಾಧಿಕಾರಿಯಾಗಿದ್ದ. ಜನವಸತಿ ಲಾಮಾಮಠಗಳ ಸುತ್ತಲೇ ಹೆಚ್ಚಾಗಿತ್ತು. ಬೌದ್ಧಪುರೋಹಿತನಾಗುವುದಕ್ಕೆ ಪ್ರತಿಯೊಂದು ಸಂಸಾರದಿಂದಲೂ ಒಬ್ಬ ಮಗನನ್ನು ಕಳುಹಿಸಬೇಕಾಗಿತ್ತು. ದೊಡ್ಡಭವನಗಳು, ಹೆಚ್ಚು ಸಂಖ್ಯೆಯಲ್ಲಿ ದನಕರುಗಳು, ವಿಪುಲಧನ ಎಲ್ಲವನ್ನೂ ಈ ಮಠಗಳು ಹೊಂದಿದ್ದುವು. 1924ರಲ್ಲಿ ಈ ವ್ಯವಸ್ಥೆ ಕುಸಿಯಿತು. ಮುಂದೆ ರಷ್ಯನರ ನಾಸ್ತಿಕತೆಯ ಪ್ರಭಾವ ಹೆಚ್ಚಿ ಜನರಲ್ಲಿ ಮತಧರ್ಮಗಳಲ್ಲಿಯ ಆಸಕ್ತಿ ಕಡಿಮೆಯಾಯಿತು. ಇಂದು ಮಂಗೋಲಿಯಾದಲ್ಲಿ ವಲಸೆಬಂದು ನಿಂತ ಚೀನಿಯರೂ, ಕ್ರಿಶ್ಚಿಯನರೂ ಇದ್ದಾರೆ.
1921ರಲ್ಲಿ ಸ್ಥಾಪಿತವಾದ ಹಂಗಾಮಿ ಕ್ರಾಂತಿಕಾರಿಪಕ್ಷ ಸರ್ಕಾರ ಸ್ವತಂತ್ರವಾಗಿರಲು ರಷ್ಯನರು ಅವಕಾಶವನ್ನೇ ಕೊಡಲಿಲ್ಲ. ರಷ್ಯದ ಕಮ್ಯೂನಿಸ್ಟ್ ಪಕ್ಷ ಅದರ ಮೇಲೆ ಸಂಪೂರ್ಣ ಹತೋಟಿ ಇಟ್ಟುಕೊಂಡಿತು. ಸರ್ಕಾರದ ಕೆಲವು ಮುಖ್ಯ ಹುದ್ದೆಗಳನ್ನು ರಷ್ಯನರು ಪಡೆದುಕೊಂಡಿದ್ದರು. ರಾಜಕೀಯದಲ್ಲಿ ನೀತಿ ನಿರ್ಣಯ ರಷ್ಯನರದು. ರಷ್ಯದ ಗುಪ್ತ ಪೊಲೀಸ್ ಅಧಿಕಾರಿಗಳು ದೇಶದಲ್ಲೆಲ್ಲ ಹರಡಿದ್ದರು. ಅಲ್ಲದೆ ರಷ್ಯದ ಸೈನ್ಯತುಕಡಿಗಳೂ ಅಲ್ಲಲ್ಲೆ ಇದ್ದುವು. 1946ರಲ್ಲಿ ಮಂಗೋಲರು ಪಡೆದ ರಾಜಕೀಯಸ್ವಾತಂತ್ರ್ಯದಿಂದಲೂ ಈ ಪರಿಸ್ಥಿತಿ ಉತ್ತಮಗೊಳ್ಳಲಿಲ್ಲ. ತಾತ್ವಿಕವಾಗಿ, 1960ರ ರಾಜ್ಯಾಂಗ ವ್ಯವಸ್ಥೆಗೆ ಅನುಸಾರವಾಗಿ ದೇಶದ ಆಡಳಿತ ನಡೆದಿದೆ. ಹದಿನೆಂಟು ವಯಸ್ಸು ಮೀರಿದ ಎಲ್ಲರಿಗೂ ಮತದಾನನೀಡುವ ಹಕ್ಕು ಕೊಡಲಾಗಿದೆ. (ಎ.ಎಂ.)