ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮನ್ಮಥಸ್ವಾಮಿ

ವಿಕಿಸೋರ್ಸ್ದಿಂದ

ಮನ್ಮಥಸ್ವಾಮಿ ಮಹಾರಾಷ್ಟ್ರದ ಪ್ರಸಿದ್ಧ ವೀರಶೈವ ಸಂತ. ಈತ ಬರೆದ ಅಭಂಗಗಳು ಮಹಾರಾಷ್ಟ್ರದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಸಂಸ್ಕøತದಲ್ಲಿ ಪರಮ ರಹಸ್ಯ ಎಂಬ ಬಲುದೊಡ್ಡ ಧರ್ಮಗ್ರಂಥವನ್ನು ಬರೆದಿದ್ದಾನೆ. ಈತ ಹುಲಿಗಳನ್ನು ಪಳಗಿಸಿ ಸವಾರಿಮಾಡಿದಂತೆ ಕಥೆಗಳಿವೆ. ಈತನ ಮಠ ಪಂಢರಾಪುರದಲ್ಲಿದೆ. ಮಹಾರಾಷ್ಟ್ರದಲ್ಲಿ ಈತನಿಗೆ ಅಸಂಖ್ಯಾತ ಶಿಷ್ಯರಿದ್ದರು. ಆ ನಾಡಿನಲ್ಲಿ ಶಿವಶರಣರ ತತ್ತ್ವ ಪ್ರಚಾರದಲ್ಲಿ ಈತನ ಪಾತ್ರ ಅಧಿಕವಾದುದು. (ಬಿ.ಎಸ್.)