ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಸ್ಕ

ವಿಕಿಸೋರ್ಸ್ದಿಂದ

ಮಸ್ಕ ಖಗೋಳದ 88 ಪ್ರಧಾನ ನಕ್ಷತ್ರಪುಂಜಗಳ ಪೈಕಿ ಒಂದು. ಪೂರ್ಣ ಹೆಸರು ಮಸ್ಕ ಆಸ್ರ್ಟಾಲಿಸ್. ಭಾರತೀಯ ನಾಮ ಮಷಕ. ಸನ್ನಿಹಿತ ವಿಷುವದಂಶ 12ಗಂ. ಘಂಟಾವೃತ್ತಾಂಶ 70 ದ. ಪ್ರತೀಕ ಒUS ಕೆಮೇಲಿಯಾನ್, ಟ್ರಯಾಂಗ್ಯುಲಮ್, ಆಸ್ರ್ಟೇಲಿ, ಕರೀನ, ಕ್ರಕ್ಸ್ ನೆರೆಹೊರೆಯ ನಕ್ಷತ್ರಪುಂಜಗಳು. ನಾಲ್ಕನೆಯ ಕಾಂತಿಮಾನಕ್ಕೆ ಮೇಲ್ಪಟ್ಟ ನಾಲ್ಕು ನಕ್ಷತ್ರಗಳು ಈ ಪುಂಜದಲ್ಲಿವೆ. ಇವುಗಳ ಪೈಕಿ ಚಿ ಚರಕಾಂತೀಯ ನಕ್ಷತ್ರ. ಐದನೆಯ ಕಾಂತಿಮಾನಕ್ಕೆ ಮೇಲ್ಪಟ್ಟ ಐದು ನಕ್ಷತ್ರಗಳಿವೆ. ಪುಂಜದ β ಮತ್ತು θ ಯುಗ್ಮ ತಾರೆಗಳು. ಚರಕಾಂತೀಯ ನಕ್ಷತ್ರಗಳು ಮೂರು (S.ಖ.ಃಔ). ಈ ಪುಂಜದಲ್ಲಿ ಕೆಲವೊಂದು ನಕ್ಷತ್ರ ಗುಚ್ಚಗಳೂ ನೀಹಾರಿಕೆಗಳೂ ಇವೆ.