ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾರುತ

ವಿಕಿಸೋರ್ಸ್ದಿಂದ

ಮಾರುತ - ನೆಲಕ್ಕೆ ಸಮಾನಾಂತರವಾಗಿ ಚಲಿಸುವ ಗಾಳಿ (ವಿಂಡ್) ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಂತೆಲ್ಲ ವಾಯುಮಂಡಲಸಂಮರ್ಧಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಭೂಮಿಯ ಸುತ್ತಲೂ ಮಾರುತಗಳು ಏರ್ಪಡುತ್ತವೆ. ಈ ವ್ಯತ್ಯಾಸಗಳಿಗೆ ಸಂವರ್ಧಪ್ರವಣತೆ (ಪ್ರೆಷರ್ ಗ್ರೇಡಿಯಂಟ್) ಎಂದು ಹೆಸರು. ಇಡೀ ಭೂಗೋಳಕ್ಕೆ ಸಂಬಂಧಿಸಿದಂತೆ ಹೇಳುವದಾದರೆ ಮಾರುತಗಳು ಅಧಿಕ ಸಂಮರ್ಧ ಪ್ರದೇಶದಿಂದ ಕಡಿಮೆ ಸಂಮರ್ಧ ಪ್ರದೇಶಕ್ಕೆ ಎಂದೂ ನೇರವಾಗಿ ಬೀಸವು. ಮಾರುತಗಳ ದಿಶೆಗಳನ್ನು ಕಾರಿಯೋಲಿಸ್ ಬಲ ವಿಚಲಿಸಬಲ್ಲುದು. ಗ್ರಹಾತ್ಮಕ ಮಾರುತಗಳು ತಮ್ಮ ದಿಶೆಯನ್ನು ಬದಲಿಸಿಕೊಳ್ಳುತ್ತವೆ. ಉಪೋಷ್ಣ ವಲಯದ ಔನ್ನತ್ಯಗಳಿಂದದ್ರುವಾಭಿಮುಖವಾಗಿ ಬೀಸುವ ಮಾರುತಗಳಿಗೆ ವೆಸ್ಟರ್ಲಿ ಮಾರುತಗಳೆಂದು ಹೆಸರು. ಸಮಭಾಜಕದತ್ತ ಬೀಸುವಂಥದಕ್ಕೆ ಈಸ್ಟರ್ಲಿ ವಾಣಿಜ್ಯ ಮಾರುತಗಳು (ಟ್ರೇಡ್ ವಿಂಡ್ಸ್) ಎಂದು ಹೆಸರು. ಉತ್ತರ ಅಕ್ಷಾಂಶ 30 ಮತ್ತು ದಕ್ಷಿಣ ಅಕ್ಷಾಂಶ 30 ಗಳ ನಡುವೆ, ಭೂಸಮಭಾಜಕದ ಎಡೆಗೆ. ಭೂಮಿಯ ಆವರ್ತನೆಯಿಂದ ಪಶ್ಚಿಮಕ್ಕೆ ತಿರುಗಿ, ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರದ ಮೇಲೆ ಬೀಸುಯವ ಮಾರುತಗಳಿವು. ವಾಯುಮಂಡಲದ ಹೆಚ್ಚು ಎತ್ತರದಲ್ಲಿಯ ಸಂಮರ್ದ ಪ್ರವಣತೆ ಮತ್ತು ಕಾರಿಯೋಲಿಸ್ ಬಲಗಳಿಂದ ಮಾತ್ರ ನಿರ್ಧಾರವಾಗುವ ಮಾರುತಗಳನ್ನು ಭೂವಿಕ್ಷೇಪೀ ಮಾರುತಗಳು (ಜಿಯೋ ಸ್ಟ್ರೋಫಿಕ್ ವಿಂಡ್ಸ್) ಎಂದು ಕರೆಯುವುದಿದೆ.

ಭೂತಲದ ಸಮೀಪದಲ್ಲಿ ವಾಯುಪ್ರವಾಹ ಪ್ರರೂಪಗಳು ಸಾಕಷ್ಟು ಕ್ಲಿಷ್ಟ ರೂಪದಲ್ಲಿ ಇರುತ್ತವೆ. ಇವುಗಳ ಮೇಲೆ ಆ ಭೂಭಾಗದ ಸಲುವಾಗಿ ಅಂದರೆ ಸ್ಥಳೀಯವಾಗಿ ಏರ್ಪಡುವ ಉಷ್ಣ ಮತ್ತು ಶೈತ್ಯಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ಮಾತ್ರವಲ್ಲದೆ ಭೂಭಾಗದ ಹಾಗೂ ಸಮುದ್ರ ಭಾಗದ ವಿತರಣೆ ಮತ್ತು ಭೂ ಮೇಲ್ಮೈಯಲ್ಲಿರುವ ವ್ಯತ್ಯಾಸಗಳು ತಮ್ಮ ಪ್ರಭಾವವನ್ನು ಬೀರುತ್ತವೆ ಕೂಡ. ಇದರ ಪರಿಣಾಮವಾಗಿ ಉಂಟಾಗುವ ದ್ವಿತೀಯಕ ಮಾರುತ ವ್ಯವಸ್ಥೆಗಳಲ್ಲಿ ಮಾನ್ ಸೂನ್‍ಗಳು ಪ್ರತಿ ಆವರ್ತ ಮಾರುತಗಳೂ ಸೇರಿರುವಂಥ ವಿವಿಧ ಸಾಮಥ್ರ್ಯಗಳಿಂದ ಒಡಗೂಡಿದ ಮಾರುತಗಳೂ, ಅವನಮನಗಳೂ (ಡಿಪ್ರೆಶನ್ಸ್) ಸೇರಿರುತ್ತದೆ. ಇವಲ್ಲದೆ, ಕಡಲು-ನೆಲ-ಮತ್ತು ನೆಲ-ಕಡಲುಗಳ ಮಂದಮಾರುತಗಳೂ, (ಕಡಲುಗಾಳಿ, ನೆಲಗಾಳಿ; ಬ್ರೀಸಸ್) ಕೆಲವೊಂದು ನಿರ್ದಿಷ್ಟ ನೆಲದ ಸ್ವರೂಪದಿಂದಾಗಿಯೇ ಉಂಟಾಗುವಂಥ ಚಿನೊಕ್ ಎಂಬ ಹೆಸರಿನ ಮಾರುತಗಳೂ ಸೇರಿರುತ್ತವೆ. ಪವನ ವಿಜ್ಞಾನದಲ್ಲಿ ಚಿನೊಕ್ ಮಾರುತಗಳನ್ನು ರಾಕೀ ಪರ್ವತಗಳ ಮೇಲೆ ಬೀಸುವ ಬೆಚ್ಚನೆಯ ತೇವಯುಕ್ತ ಗಾಳಿಯೆಂದೂ, ಶುಷ್ಟ, ಬೆಚ್ಚನೆಯ ಪ್ರಬಲವಾಗಿರುವ ಮತ್ತು ಬಿರುಸಿನಿಂದ ಫೋನ್ ಗಾಳಿಯೆಂದೂ ಪರಿಗಣಿಸುವುದಿದೆ. ಕಡಲು ಇಲ್ಲವಚೇ ನೆಲದ ಮೇಲೆ ಬೀಸುವ ಸ್ಥಳೀಯ ಗಾಳಿಗಳನ್ನು ಮಂಮಾರುತಗಳೂ (ಬ್ರೀಸಸ್), ಬಿರುಗಾಳಿಗಳು (ಗೇಲ್ಸ್), ಚಂಡಮಾರುತಗಳು (ಹರಿಕೇನ್ಸ್) ಎಂಬುದಾಗಿ ವರ್ಗೀಕರಿಸಲಾಗಿದೆ. ಬ್ರಿಟನ್ನಿನ ಜಲಾನ್ವೇಕ್ಷಣ ವಿಜ್ಞಾನಿ ಫ್ರಾನ್ಸಿಸ್ಭೋಫಸ (1774-1857) ಹೊಗೆ, ಮರಗಳು, ಸಮುದ್ರ ಮೇಲ್ಮೈ ಮುಂತಾದ ಕೆಲವೊಂದು ನಿರ್ದಿಷ್ಟ ವಿಷಯಗಳ ವರ್ತನೆಗಳಿಗೆ ಸಾಪೇಕ್ಷವಾಗಿ ಮಾರುತಗಳ ಬೀಸುವೇಗವನ್ನು ನಿಷ್ಕರ್ಷಿಸಲುರೂಪಿಸಿದ ಮಾನಸಿಕ ವ್ಯವಸ್ಥೆಗೆ ಅನುಗುಣವಾಗಿ ಈ ವರ್ಗೀಕರಣ ನಡೆದಿದೆ. ಹಲವು ಸಂದರ್ಭಗಳಲ್ಲಿ,ಉಷ್ಣವಲಯದ ಆವರ್ತನ ಬಿರುಗಾಳಿಗಳಲ್ಲಿಯಂತೆ ಸ್ಥಳೀಯ ಮಾರುತಗಳೂ ಚಕ್ರಾಕಾರ ಪಥದಲ್ಲಿ ಚಲಿಸುತ್ತವೆ.

ವಾಯುಮಂಡಲದಲ್ಲಿ ಉಷ್ಣತೆ ಹೆಚ್ಚಾಗಿರುವ ಪ್ರದೇಶದಲ್ಲಿ ಕಡಿಮೆ ಒತ್ತಡ ಇರುವ ಒಂದು ಕೇಂದ್ರದೆಡೆಗೆ ಎಲ್ಲ ಕಡೆಗಳಿಂದಲೂ ನುಗ್ಗುವ ಗಾಳಿಗೆ ಆವರ್ತ ಮಾರುತ (ಸೈಕ್ಲೋನ್) ಎಂದು ಹೆಸರು. ಪಶ್ಚಿಮ ಸಮುದ್ರದ ಭಾಗಗಳ ಉತ್ತರ ಗೋಳಾರ್ಧದಲ್ಲಿ ಬೇಸಗೆಯಲ್ಲೂ ದಕ್ಷಿಣ ಗೋಳಾರ್ಧದಲ್ಲಿ ಚಳಿಗಾಲ ಮತ್ತು ವಸಂತದಲ್ಲೂ ಕಾಣಿಸಿಕೊಳ್ಳುವ ಇಂಥ ಮಾರುತಕ್ಕೆ ಚಂಡಮಾರುತ, ತೂಫಾನ್ ಎಂಬ ಹೆಸರುಗಳಿವೆ.