ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂಲಾ
ಗೋಚರ
ಮೂಲಾ - ವೃಶ್ಚಿಕರಾಶಿಯ ಪ್ರಧಾನನಕ್ಷತ್ರಗಳ ಪೈಕಿ ಒಂದು (ಷೌಲ; ಲ್ಯಾಮ್ಡ ಸ್ಕಾರ್ಪಿಯೈ). ಘಂಟಾವೃತ್ತಾಂಶ 17ಗಂ. 32ಮಿ. 17ಸೆ.; ವಿಶುವದಂಶ 37º05'21" ದಕ್ಷಿಣ. ಕಾಂತಿಮಾನ 1.60. ನಿರಪೇಕ್ಷ ಕಾಂತಿಮಾನ -3.3. ರೋಹಿತ ಪ್ರರೂಪ B2. ದಕ್ಷಿಣಾಕಾಶದ ರಾಶಿ ವೃಶ್ಚಿಕದ (ಚೇಳು)ಬಾಲದ 'ಮುಳ್ಳಿಗೆ ಈ ನಕ್ಷತ್ರ ಸೇರಿದೆ. ಇದು M.6 ಮತ್ತು M.7 ಗುಚ್ಛಗಳಿಗೆ ಮಾರ್ಗದರ್ಶಕ ನಕ್ಷತ್ರ. ಇದರ ಪ್ರಜ್ಜ್ವಲತೆ ಸೂರ್ಯಪ್ರಜ್ಜ್ವಲತೆಯ 2000 ಮಡಿ. ಸೂರ್ಯನಿಂದ 360 ಬೆಳಕುವರ್ಷಗಳ ದೂರದಲ್ಲಿದೆ.
ಭಾರತೀಯ ಜ್ಯೋತಿಷ್ಯದ ಪ್ರಕಾರ ಅಶ್ವಿನ್ಯಾದಿ 27 ನಕ್ಷತ್ರಗಳ ಪೈಕಿ ಇದು 19ನೆಯದು. ಪರಿಷ್ಕರಣೆ: ಡಾ|| ಬಿ. ಎಸ್. ಶೈಲಜಾ