ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಲಕೈಟ್
ಮ್ಯಾಲಕೈಟ್ ಪ್ರಧಾನವಾಗಿ ತಾಮ್ರದ ಕಾರ್ಬೊನೇಟ್ ಇರುವ, ಗಿಳಿ ಹಸುರುಬಣ್ಣದ ಖನಿಜ [ಅu2ಅಔ3(ಔಊ)2]. ಸಾಪೇಕ್ಷ ಸಾಂದ್ರತೆ 4.05; ಕಾಠಿಣ್ಯ 3.5 - 4 (ಮೋಹ್‍ಮಾನಕದಲ್ಲಿ). ಇದು ಅಜುóರೈಟಿನಿಂದ ಒಡಗೂಡಿದ ತಾಮ್ರದ ಖನಿಜಗಳು ಹರಡಿರುವ ಉತ್ಕರ್ಷಣ ವಲಯದಲ್ಲಿ (ಅಕ್ಸಿಡೇಷನ್‍ಜೋóನ್ಸ್) ಗೊಂಚಲು ಗೊಂಚಲುಗಳ ರೂಪದಲ್ಲಿ ವಿರಳವಾಗಿ ವ್ಯಾಪಿಸಿದೆ. ಪುರಾತನ ತಾಮ್ರದ ಅದುರಿಗಾಗಿ ಗಣಿಯಿಂದ ಹೊರ ತೆಗೆದಿದ್ದ ನಿಕ್ಷೇಪಗಳಲ್ಲಿ ಮ್ಯಾಲಕೈಟು ಹಬ್ಬಿರುವುದು ಕಂಡು ಬಂದಿದೆ.
ಕರ್ನಾಟಕದ ಚಿತ್ರದುರ್ಗದಿಂದ ಸುಮಾರು 8 ಕಿಮೀ ದೂರದಲ್ಲಿರುವ ಇಂಗಳದಾಳು ಸಮೀಪದಲ್ಲಿರುವ ಬೆಳ್ಳಿಗುಡ್ಡದ ಪಶ್ಚಿಮ ಭಾಗದಲ್ಲಿ ಹಿಂದಿನವರು ತಾಮ್ರದ ಅದುರುಗಳಿಗಾಗಿ ಮಾಡಿರುವ ಗಣಿಗಳಲ್ಲಿ ಮ್ಯಾಲಕೈಟ್ ಉತ್ಕರ್ಷಣ ವಲಯದಲ್ಲಿ ಅಲ್ಲಲ್ಲಿ ಹರಡಿದೆ. ಮ್ಯಾಲಕೈಟ್ ಖನಿಜ ಅರಸೀಕೆರೆಗೆ ಸುಮಾರು 16 ಕಿಮೀ ದೂರದಲ್ಲಿ ಹಿಂದಿನ ಗಣೀಭಾಗದಲ್ಲಿರುವ ಪದರುಶಿಲೆಯಲ್ಲಿ ಶಿಲೆಗಳ ಬಿರಕುಗಳು, ಸೀಳು ಹಾಗೂ ಸಂದುಗಳಲ್ಲಿ ಅತಿ ತೆಳು ಪೊರೆಯಾಗಿ ಕಂಡುಬಂದಿದೆ. ಮ್ಯಾಲಕೈಟ್ ಎಳೆಗಳು ಮತ್ತು ಪದರುಗಳು ಹೊಳೇನರಸೀಪುರ ತಾಲ್ಲೂಕಿನ ಕಟ್ಟೆಕೆರೆ ಗ್ರಾಮ, ದಾವಣಗೆರೆಗೆ ಸುಮಾರು 16 ಕಿಮೀ ದೂರದಲ್ಲಿರುವ ಕೈದಾಳ ಗ್ರಾಮ, ಬಿಜಾಪುರ ಜಿಲ್ಲೆಯ ಕಲಾದಗಿ ಮತ್ತು ಧಾರವಾಡ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ದೊರೆಯುವುದೆಂದು ತಿಳಿದುಬಂದಿದೆ. (ಕೆ.ಜಿ.ಎಸ್.)