ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಮ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಯಮ ಮಾನವಕುಲಕ್ಕೆ ಮೊದಲಿಗೆ ಯಮನೆಂದು ಕೆಲವು ಋಗ್ವೇದ ಮಂತ್ರಗಳಲ್ಲಿ ತೋರುತ್ತದೆ. ಮನುಷ್ಯ ಸೃಷ್ಟಿಗೆ ಮೊದಲ ತಾಯ್ತಂದೆಗಳೆಂದರೆ ಯಮ ಮತ್ತು ಈತನ ಅವಳಿ ಸೋದರಿ ಯಮಿ. ಸೋದರಸೋದರಿಯರ ಸಂಯೋಗದಿಂದ ಮನುಕುಲ ಉತ್ಪನ್ನವಾಯಿತೆನ್ನುವ ಸೂಕ್ತಗಳಿವೆ. ಯಮವೆಂದರೆ ಹಗಲು ಯಮಿಯೆಂದರೆ ರಾತ್ರಿ; ಇವರೇ ಅವಳಿಜವಳಿಗಳು ಎಂದು ಮುಂತಾಗಿ ಸಾಂಕೇತಿಕಾರ್ಥವನ್ನು ವಿವರಿಸಿರುವ ವಿದ್ವಾಂಸರೂ ಉಂಟು. ಪುರಾಣಗಳ ಕಾಲದಲ್ಲಿ ಇವನನ್ನು ನರಕದ ಅಧಿಪತಿಯೆಮದು ಪರಿಗಣಿಸಲಾಗಿದೆ. ಮನುಷ್ಯನ ಆದಿಸೃಷ್ಟಿಯ ಬಗ್ಗೆ ಆರ್ಯರ ನಂಬಿಕೆಯನ್ನು ಯಮನ ಕಲ್ಪನೆಯಲ್ಲಿ ಕಾಣಬಹುದು.

ಪುರಾಣಶಾಸ್ತ್ರಗಳ ಪ್ರಕಾರ ಸೂರ್ಯನ ಮಗ, ತಾಯಿ ಸಂಜ್ಞಾದೇವಿ, ಶನಿ ಬಲತಾಯಿ ಮಗು ಯಮುನೆ ಇವನ ತಮಗಿ; ದಕ್ಷಿಣ ದಿಕ್ಕಿನ ಅಧಿಪತಿ ಸಂಯಮಿನಿ ಇವನ ರಾಜಧಾನಿ.

ಅಣಿಮಾಂಡವ್ಯ ಮುನಿಯನ್ನು ಶಿಕ್ಷಿಸುವುದರಿಂದ ಶಾಪಗ್ರಸ್ತವಾಗಿ ವಿದುರನಾಗಿ ಜನಿಸಿದ. ದುರ್ವಾಸ ಮುನಿಯ ವರದಂತೆ ಕುಂತಿ ಯಮನಿಂದ ಯುಧಿಷ್ಠಿರನನ್ನು ಮಗನಾಗಿ ಪಡೆದಳು. ಸತ್ಯವಾನನ ಜೀವವನ್ನು ಕೊಂಡೊಯ್ಯುವಾಗ ಸಾವಿತ್ರಿಯ ಪತಿಭಕ್ತಿ ಮತ್ತು ತಿಳಿವಳಿಕೆಗೆ ಮೆಚ್ಚಿ ವರಗಳನ್ನಿತ್ತು ಅದರಂತ ಸತ್ಯವಾನನನ್ನು ಬದುಕಿಸಿ ಬರಿಗ್ಯಯಲ್ಲಿ ಹಿಂದಿರುಗಿದ ಯಮ ಬಲತಾಯಿ ಛಾಯಾದೇವಿಗೆ ಕಾಲು ತೋರಿಸಿದ್ದರಿಂದ ಅವಳಿಂದ ಶಾಪಗ್ರಸ್ತನಾಗಿ ತರುವಾಯ ಸೂರ್ಯನ ಅನುಗ್ರಹದಿಂದ ಶಾಪವಿಮುಕ್ತವಾಗಿ ಶಿವನ ಅನುಗ್ರಹದಿಂದ, ಲೋಕಪಾಲಕತ್ವ ಮತ್ತು ಪಿತೃ ಲೋಕಾಧಿಪತ್ಯವನ್ನು ಪಡೆದ ಮಾರ್ಕ್‍ಂಡೇಯನ ಜೀವಾಪಹರಣ ಯತ್ನದಲ್ಲಿ ಶಿವನ ಮೂಲಕ ಭಂಗಗೊಂಡು ಮಾರ್ಕಂಡೇಯ ಚಿರಾಯುವಾಗುವಂತೆ ಒಪ್ಪಿಕೊಂಡ.

            									 (ಕೆ.ಕೆ)