ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯುಗ 2

ವಿಕಿಸೋರ್ಸ್ದಿಂದ

ಯುಗ 2 -

	ಭೂವೈಜ್ಞಾನಿಕ ಕಾಲದ (ಜಿಯೋಲಾಜಿಕಲ್ ಟೈಮ್) ಎರಡು ಮಹಾಕಲ್ಪಗಳ (ಈಯಾನ್ಸ್) ನಾಲ್ಕು ಕಲ್ಪಗಳ ಉಪವಿಭಾಗಗಳಿಗೆ ಇರುವ ಒಟ್ಟಾರೆ ಹೆಸರು (ಈರಾ). ಮಹಾದೃಶ್ಯಜೀವಕಲ್ಪದಲ್ಲಿ (ಫೆನೆರೋeóÉೂೀಯಿಕ್ ಈಯಾನ್-570 ದಶಲಕ್ಷ ವರ್ಷಗಳಷ್ಟು ಪ್ರಾಚೀನ) ಮೂರು ಯುಗಗಳಿವೆ: 1. ಪ್ರಾಚೀನಜೀವಿಕಲ್ಪ (ಪೇಲಿಯೋeóÉೂೀಯಿಕ್ ಈರಾ). 2. ಮಧ್ಯ ಜೀವಿಕಲ್ಪ (ಮೀಸೋeóÉೂೀಯಿಕ್ ಈರಾ) ಮತ್ತು 3. ನವೀನಜೀವಿಕಲ್ಪ (ಕೈನೋಜೋಯಿಕ್ ಈರಾ). ಇನ್ನೊಂದು ಪ್ರೀಕೇಂಬ್ರಿಯನ್  ಮಹಾಕಲ್ಪ ಇದನ್ನು ಆದಿಜೀವ ಕಲ್ಪ (ಪ್ರೊಟಿರೋeóÉೂೀಯಿಕ್) ಮತ್ತು ಆರ್ಷೇಯ ಕಲ್ಪ (ಆರ್ಕೇಯನ್) ಎಂದು ವಿಭಜಿಸಲಾಗಿದೆ.

ಬ್ರಹ್ಮಾಂಡದ ಮಹಾಕಲ್ಪ ಸೃಷ್ಟಿ ಮತ್ತು ಗ್ರಹಗಳ ವಿಕಾಸದ ಹಂತವನ್ನು ಹೇಡಿಯನ್ ಪೂರ್ವಯುಗ ಹಾಗೂ 450 ಕೋಟಿ ವರ್ಷಗಳ ತನಕದ ಅವಧಿಯನ್ನು ಹೇಡಿಯನ್ ಯುಗ ಎಂದು ಪರಿಗಣಿಸಲಾಗಿದೆ.

ಕಲ್ಪಗಳನ್ನು ಯುಗಗಳನ್ನಾಗಿ ಮತ್ತೆ ಅವಧಿ (ಪೀರಿಯಡ್) ಇಲ್ಲವೆ ಉಪಯುಗಗಳು (ಎಪೋಕ್) ಎಂಬುದಾಗಿ ವಿಭಾಗಿಸಿದೆ. ಪ್ರಾಚೀನ ಜೀವಿಕಲ್ಪದಲ್ಲಿ (ಪೇಲಿಯೋeóÉೂೀಯಿಕ್ ಈರಾ) ಕೇಂಬ್ರಿಯನ್, ಆರ್ಡೋವೀಸಿಯನ್, ಸೈಲೂರಿಯನ್, ಡಿವೋನಿಯನ್, ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಎಂಬ ಆರು ಯುಗಗಳಿವೆ.

(ನೋಡಿ- ಭೂವೈಜ್ಞಾನಿಕ-ಕಾಲ)