ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಘುಶ್ವಾನ

ವಿಕಿಸೋರ್ಸ್ದಿಂದ

ಖಗೋಳೀಯ ವಿಷುವದ್ವೃತ್ತದ ಮೇಲೆ, ಒರೈಯನ್ ನಕ್ಷತ್ರಪುಂಜಕ್ಕೆ ಪೂರ್ವದಲ್ಲಿ ಇರುವ (ಸನ್ನಿಹಿತ ಸ್ಥಾನ ವಿಷುವದಂಶ 8ಗಂ; ಘಂಟಾವೃತ್ತಾಂಶ 5ಲಿ ಉತ್ತರ) ಒಂದು ಚಿಕ್ಕ ನಕ್ಷತ್ರಪುಂಜ (ಕ್ಯಾನಿಸ್ ಮೈನರ್). ಆಲ್ಫ ಕ್ಯಾನಿಸ್ ಮೈನಾರಿಸ್ (ಪ್ರೊಸಿಯಾನ್) ಇದರ ಪ್ರಮುಖ ತಾರೆ. ಕಾಂತಿಮಾನ 0.37. ರೋಹಿತ ಪ್ರರೂಪ ಈ5. ಸೂರ್ಯನಿಂದ 11.3 ಬೆಳಕುವರ್ಷಗಳ ದೂರದಲ್ಲಿದೆ. ಕಾಂತಿಮಾನ 2.91ರ ತಾರೆ ಬೀಟ ಕ್ಯಾನಿಸ್ ಮೈನಾರಿಸ್ (ಗೋವೀಸ). ಸೂರ್ಯನಿಂದ 200 ಬೆಳಕುವರ್ಷಗಳ ದೂರದಲ್ಲಿದೆ. ಮಹಾಶ್ವಾನ ಮತ್ತು ಲಘುಶ್ವಾನ ನಕ್ಷತ್ರಪುಂಜಗಳನ್ನು ಕುರಿತಂತೆ ಈಜಿಪ್ಟ್, ಗ್ರೀಕ್ ಪುರಾಣಗಳಲ್ಲಿ ಹಲವಾರು ಕಥೆಗಳು ಇವೆ.