ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಿಂಗದೊಂಡೆ

ವಿಕಿಸೋರ್ಸ್ದಿಂದ

ಕುಕರ್‍ಬಿಟೇಸೀ ಕುಟುಂಬಕ್ಕೆ ಸೇರಿದ ಡಿಪ್ಲೊಸ್ಯೆಕ್ಲಾಸ್ ಪಾಮಾಟಿಸ್ ಪ್ರಭೇದದ ಸಸ್ಯ. ಬಳ್ಳಿಯಂತೆ ಆಸರೆ ಸುತ್ತಿ ಬೆಳೆಯುತ್ತದೆ. ಇದರ ಎಲೆಗಳು ಸಾಮಾನ್ಯವಾಗಿ, ಅಂಗೈಯಂತಿದ್ದು ಬೆರಳುಗಳಂತೆ ಸೀಳಿಕೊಂಡಿರುತ್ತವೆ. ಹೂಗೊಂಚಲುಗಳು ರೆಸಿಮ್ ಮಾದರಿಯಲ್ಲಿರುವುವು; ಅಥವಾ ಎಲೆ ಕಂಕುಳಲ್ಲಿ ಒಂದೊಂದೇ ಹೂವಿರುತ್ತದೆ. ಹೂಗಳು ಏಕಲಿಂಗಿಗಳು. ಇವನ್ನು ಗಂಡು ಮತ್ತು ಹೆಣ್ಣು ಎಂದು ವಿಂಗಡಿಸ ಬಹುದು. ಸುರುಳಿಯಂತಿರುವ ಇಬ್ಭಾಗವಾದ ಕುಡಿಬಳ್ಳಿಗಳಿವೆ. ಪುಷ್ಪ ಪಾತ್ರೆಯ ಎಸಳುಗಳು 5, ದಳಗಳು 5, ಒಟ್ಟಿಗೆ ಸೇರಿ ಗಂಟೆಯಾಕಾರದಲ್ಲಿವೆ. ಹೂವಿನ ಬಣ್ಣ ಹಸುರು ಮಿಶ್ರಿತ ಹಳದಿ.

(ಟಿ.ಎಮ್.ಆರ್.)