ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೀವಿಸ್, ಎಫ್ ಆರ್
ಲೀವಿಸ್ :- 1895-1978. ಪ್ರಸಿದ್ಧ ಇಂಗ್ಲಿಷ್ ವಿಮರ್ಶಕ. ಇವನ ಪೂರ್ಣ ಹೆಸರು ಫ್ರಾಂಕ್ ರೇಮಂಡ್ ಲೀವಿಸ್. ಈತ 1895ರಲ್ಲಿ ಕೇಂಬ್ರಿಜ್‍ನಲ್ಲಿ ಜನಿಸಿದ. 1925-64ರ ತನಕ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ದಲ್ಲಿ ಬೋಧಕನಾಗಿದ್ದ. ಸಾಹಿತ್ಯ ಮತ್ತು ಸಮಾಜದ ನಡುವಿನ ಸಂಬಂಧದ ಬಗೆಗಿನ ಈತನ ಆಲೋಚನೆ ಇಂಗ್ಲಿಷ್ ಸಾಹಿತ್ಯದ ಮೇಲೆ ಗಾಢ ಪರಿಣಾಮ ಬೀರಿತು.
ಸಮಾಜದಿಂದ ಸಾಹಿತ್ಯ ಬೆಳೆಯಿತು ಎನ್ನುವುದಕ್ಕಿಂತ, ಸಮಾಜದಲ್ಲೇ ಸಾಹಿತ್ಯವೂ ಅಡಗಿದೆ. ಸಾಹಿತ್ಯವೆನ್ನು ವುದು ಕೇವಲ ಸೃಷ್ಟಿಯಲ್ಲ, ಅದು ತನ್ನ ಕಾಲದ ಸಂಸ್ಕøತಿ ಸೃಷ್ಟಿಗೆ ಸಹಾಯ ಮಾಡುತ್ತದೆ ಎಂಬುದು ಈತನ ವಾದ. ತನ್ನ ಪತ್ನಿ ಕ್ವೀನಿರಾತ್ ಲೀವಿಸ್‍ಳೊಂದಿಗೆ “ಸ್ಕ್ರೂಟಿನಿ” ಎಂಬ ವಿಮರ್ಶಾ ನಿಯತಕಾ ಲಿಕವನ್ನು ಪ್ರಾರಂಭಿಸಿದ. ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯದ ಸಾಮಾಜಿಕ ವಿಶ್ಲೇಷಣೆ ಮಾಡುವುದರ ಮೂಲಕ, ಬ್ರಿಟಿಷ್ ಸಂಸ್ಕೃತಿ ಮೌಲ್ಯಗಳನ್ನು ರಕ್ಷಿಸಲು ಈ ಪತ್ರಿಕೆ ಮೀಸಲಾಗಿತ್ತು. ಈತ 1932-53 ರವರೆಗೆ ಇದರ ಪ್ರಧಾನ ಸಂಪಾದಕನಾಗಿದ್ದ.
ತನ್ನ ಆರಂಭಿಕ ಕೃತಿಗಳಲ್ಲಿ ಚಾಸರ್, ವಡ್ರ್ಸ್‍ವರ್ಥ್‍ರಂಥ ಸರಳ ಶೈಲಿಯ ಕವಿಗಳ ಬಗ್ಗೆ ಈತ ಒಲವು ತೋರಿದ್ದಾನೆ. ಈತ ಎಡ್ಮಂಡ್ ಸ್ಪೆನ್ಸರ್, ಜಾನ್ ಮಿಲ್ಟನ್‍ರಂತಹ ಪ್ರಸಿದ್ಧರನ್ನು ಕಟು ವಿಮರ್ಶೆಗೆ ಒಳಪಡಿಸಿದ್ದಾನೆ. ಈ ವಿಮರ್ಶೆಗಳು ನ್ಯೂ ಬೇರಿಂಗ್ಸ್ ಇನ್ ಇಂಗ್ಲಿಷ್ ಪೊಯೆಟ್ರಿ (1932) ಹಾಗೂ ರೆವಲ್ಯೂಷನ್ (1936) ನಲ್ಲಿ ಕಾಣಿಸಿ ಕೊಂಡಿವೆ. ಇವನ ಅನಂತರದ ಬರೆವಣಿಗೆಗಳಲ್ಲಿ ಸಮಾಜದಲ್ಲಿ ಇದ್ದುಕೊಂಡು, ಸಮಾಜದ ಗಾಂಭೀರ್ಯವನ್ನು ಕುರಿತು ತಮ್ಮ ಕೃತಿಗಳಲ್ಲಿ ಹೇಳಿರುವ ಲೇಖಕರಾದ ಜೇನ್ ಆಸ್ಟೆನ್, ಎಮಿಲಿಬ್ರಾಂಟೆ, ಜೋಸೆಫ್ ಕಾನ್ರಾಡ್, ಜಾರ್ಜ್ ಎಲಿಯಟ್ ಹಾಗೂ ಡಿ.ಎಚ್. ಲಾರೆನ್ಸ್‍ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದ್ದಾನೆ. ದ ಗ್ರೇಟ್ ಟ್ರೆಡಿಷನ್ (1948) ಹಾಗೂ ಡಿ.ಎಚ್. ಲಾರೆನ್ಸ್: ನಾವೆಲಿಸ್ಟ್ (1955) ಇವು ಇವನ ಮರಣಾನಂತರ ಪ್ರಕಟವಾದುವು. ಈತ 1978ರಲ್ಲಿ ನಿಧನನಾದ.
(ಸಿ.ಎಸ್.ಪಿ)