ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲುಬ್ಧಕ

ವಿಕಿಸೋರ್ಸ್ದಿಂದ

ದಕ್ಷಿಣಾಕಾಶದಲ್ಲಿರುವ ಮಹಾಶ್ವಾನ (ಕ್ಯಾನಿಸ್ ಮೇಜರ್) ನಕ್ಷತ್ರ ಪುಂಜಕ್ಕೆ ಸೇರಿದ ಪ್ರಥಮ ನಕ್ಷತ್ರ (ಸಿರಿಯಸ್; ಆಲ್ಫ ಕ್ಯಾನಿಸ್ ಮೆಜೋರಿಸ್). ವಿಷುವದಂಶ 6ಗಂ 44ಮಿ 11ಸೆ; ಘಂಟಾವೃತ್ತಾಂಶ 16° 41‘ 06" (ದಕ್ಷಿಣ). ಕಾಂತಿಮಾನ-1.42. ನಿರಪೇಕ್ಷ ಕಾಂತಿಮಾನ +1.45. AO ರೋಹಿತದರ್ಶಕೀಯ ಪ್ರರೂಪದ್ದು. ಸೂರ್ಯನಿಂದ 8.7 ಜ್ಯೋತಿರ್ವರ್ಷ ದೂರದಲ್ಲಿದೆ. ವ್ಯಾಸ ಸೂರ್ಯವ್ಯಾಸದ 2 ಪಟ್ಟು.

ಸರಾಸರಿ ಉಷ್ಣತೆ 10,000°C. ಗೋಚರ ನಕ್ಷತ್ರಗಳ ಪೈಕಿ ಅತ್ಯಂತ ಪ್ರಕಾಶಮಾನ ನಕ್ಷತ್ರವಿದು.

ಬರಿಯ ಕಣ್ಣಿಗೆ ಇದು ಒಂಟಿ ನಕ್ಷತ್ರದಂತೆ ಕಾಣುವುದಾದರೂ ವಾಸ್ತವವಾಗಿ ಇದೊಂದು ಯಮಳ ನಕ್ಷತ್ರ. ಇದನ್ನು ಪರಿಭ್ರಮಿಸುವ ಚಿಕ್ಕ ನಕ್ಷತ್ರದ (ಶ್ವೇತಕುಬ್ಜ, ಸಿರಿಯಸ್ B) ಪ್ರಕಾಶ ಲುಬ್ಧಕದ 1/10,000 ಪಾಲು ಮಾತ್ರ. ಸಂಗಾತಿಯ ಸಾಂದ್ರತೆ ನೀರಿನ ಸಾಂದ್ರತೆಯ 60,000ರಷ್ಟು. ಆಲ್ವಿನ್ ಗ್ರಾಹಮ್ ಕ್ಲಾರ್ಕ್ (1832-97) ಎಂಬಾತ ತನ್ನ 18.5" ವ್ಯಾಸದ ನೇತ್ರಮಸೂರವನ್ನು ಪರೀಕ್ಷಿಸುತ್ತಿದ್ದಾಗ ಲುಬ್ಧಕದ ಸಂಗಾತಿಯ ಇರವು ಪತ್ತೆಯಾಯಿತು (1862). ಇದಕ್ಕೆ ಮುಂಚೆಯೇ ಜರ್ಮನಿಯ ಖಗೋಳವಿe್ಞÁನಿ ಫ್ರೀಡ್ರಿಕ್ ವಿಲ್‍ಹೆಲ್ಮ್ ಬೆಸ್ಸೆಲ್ (1784-1846) ಮತ್ತು ಆವರ್ಸ್ ಎಂಬ ಮತ್ತೊಬ್ಬ ಖಗೋಳವಿe್ಞÁನಿ ಲುಬ್ಧಕದ ನೇರಚಲನೆಯಲ್ಲಿಯ ವೈಪರೀತ್ಯಗಳನ್ನು ಅಧ್ಯಯನ ಮಾಡುವಾಗ ಇದರ ಸಂಗಾತಿಯ ಇರವಿನ ಬಗ್ಗೆ ಮುನ್ನುಡಿದಿದ್ದರು. ಗಾತ್ರ ಭೂಮಿಗಾತ್ರದ 3 ಪಟ್ಟು. ರಾಶಿ ಭೂರಾಶಿಯ 50,000 ಪಟ್ಟು. ಸಾಂದ್ರತೆ ಸೂರ್ಯಸಾಂದ್ರ ತೆಯ 36,000ರಷ್ಟು.

(ಸಿ.ಎನ್.ಎಸ್.)