ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶತ್ರುಘ್ನ

ವಿಕಿಸೋರ್ಸ್ದಿಂದ

ಶತ್ರುಘ್ನ ದಶರಥನಿಂದ ಸುಮಿತ್ರೆಯಲ್ಲಿ ಜನಿಸಿದ ಅವಳಿ ಮಕ್ಕಳಲ್ಲಿ ಕಿರಿಯವ. ಲಕ್ಷ್ಮಣನ ತಮ್ಮ. ಈತ ಕುಶಧ್ವಜ ಜನಕನ ಕಿರಿಯ ಮಗಳಾದ ಶ್ರುತಕೀರ್ತಿಯನ್ನು ಮದುವೆಯಾದ. ಈತ ಭರತನೊಂದಿಗೆ ಕೇಕಯ ರಾಜ್ಯಕ್ಕೆ ಹೋಗಿದ್ದ. ಲಕ್ಷ್ಮಣ ರಾಮನನ್ನು ಅನುಸರಿಸುತ್ತಿದ್ದಂತೆ, ಶತ್ರುಘ್ನ ಭರತನನ್ನು ಅನುಸರಿಸುತ್ತಿದ್ದ. ಈತನಿಗೆ ಪಟ್ಟಾಭಿಷೇಕ ಮಾಡಿ, ಲವಣಾಸುರನನ್ನು ಕೊಲ್ಲಲು ರಾಮ ಇವನನ್ನು ಕಳುಹಿದ. ಮಧುರಾ ಮತ್ತು ವಿದಿಶಾ ರಾಜ್ಯಗಳ ರಾಜನಾಗಿದ್ದ. ಈತ ತನ್ನ ಮಕ್ಕಳಾದ ಸುಬಾಹು ಮತ್ತು ಶತ್ರುಘಾತಿ-ಇವರಿಗೆ ಪಟ್ಟಾಭಿಷೇಕ ಮಾಡಿ ಅಯೋಧ್ಯೆಗೆ ಬಂದ. ಬರುವಾಗ ವಾಲ್ಮೀಕಿ ಆಶ್ರಮದಲ್ಲಿ ಕೆಲವು ದಿನಗಳಿದ್ದು ಅನಂತರ ಅಣ್ಣ ರಾಮನೊಂದಿಗೆ ಅಯೋಧ್ಯೆಯಲ್ಲಿ ಏಳು ರಾತ್ರಿಗಳಿದ್ದು ಮತ್ತೆ ಮಧುರಾ ನಗರಕ್ಕೆ ತೆರಳಿದ. ಈತನ ಮಗ ಸುಬಾಹು ಮಧುರಾ ನಗರದ ರಾಜನಾದರೆ, ಶತ್ರುಘಾತಿ ವಿದಿಶಾ ನಗರದ ರಾಜನಾದ. *