ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ
ಗೋಚರ
ಸ - ವರ್ತ್ಸ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ. ಅವರ್ಗೀಯ ವ್ಯಂಜನ ವರ್ಗದ ಏಳನೆಯ ಅಕ್ಷರ. ಅಶೋಕನ ಕಾಲದ ಈ ಅಕ್ಷರಕ್ಕೂ ಈಗಿನ ಅದೇ ಅಕ್ಷರಕ್ಕೂ ಸಾಮ್ಯವಿರುವ ಅಂಶ ಚೆನ್ನಾಗಿ ತಿಳಿದುಬರುತ್ತದೆ. ಕದಂಬ ಕಾಲದ ಚೌಕತಲೆಯು ಮುಂದೆ ತಲೆಕಟ್ಟಾಗಿ ಪರಿವರ್ತಿತವಾಗಿ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಸ್ಥಿರಗೊಳ್ಳುತ್ತದೆ. ಅದೇ ರೂಪವೇ ಹೊಯ್ಸಳ, ಕಳಚುರಿ ಮತ್ತು ಸೇವುಣರ ಕಾಲಗಳಲ್ಲಿಯೂ ಮುಂದುವರಿ ಯುತ್ತದೆ. ಆದರೆ ವಿಜಯನಗರ ಅರಸರ ಕಾಲದಲ್ಲಿ ತಲೆಕಟ್ಟಿನ ಕೆಳಗಿದ್ದ ರೇಖೆಯು ಅದೃಶ್ಯವಾಗಿ, ಅದೇ ರೂಪವೇ ಹದಿನೆಂಟನೆಯ ಶತಮಾನದಲ್ಲಿಯೂ ಮುಂದುವರಿಯುತ್ತದೆ. (ಎ.ವಿ.ಎನ್.)