ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಲ್

ವಿಕಿಸೋರ್ಸ್ ಇಂದ
Jump to navigation Jump to search

ಸಾಲ್ ಡಿಪ್ಟಿರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಶೊರಿಯ ರೊಬುಸ್ಟ ಎಂಬ ಪ್ರಭೇದದ ಸಸ್ಯ. ದೊಡ್ಡ ಪ್ರಮಾಣದ, ಹೊಳಪುಳ್ಳ ದೊಡ್ಡ ತೊಗಲೆಲೆಗಳ ದುಂಡು ಹರವಿನ ನೇರಕಾಂಡದ ಸಾಮೂಹಿಕವಾಗಿ ಬೆಳೆಯುವ ಈ ಮರ ಗಂಗಾನದಿಯ ಬಯಲು ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಪಂಜಾಬ್, ಉತ್ತರಪ್ರದೇಶ, ಬಿಹಾರ, ಒರಿಸ್ಸ, ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಚೌಬೀನೆಯ ಉಪಯೋಗಗಳಿಗೆ, ದಕ್ಷಿಣದಲ್ಲಿ ಸಾಗುವಾನಿ(ತೇಗ) ಯಾವ ಸ್ಥಾನವನ್ನು ಪಡೆದಿದೆಯೋ ಆ ಸ್ಥಾನವನ್ನು ಪಡೆದಿದೆ. ಅಡ್ಡನಾರಿನ, ಕೆಂಪುಮಿಶ್ರ ಕಂದುಬಣ್ಣದ ಗಡುಸಾದ, ಹೆಚ್ಚು ಬಾಳಿಕೆಯುತ ಈ ಮರದ ಚೌಬೀನೆ ಮನೆಕಟ್ಟಡಕ್ಕೂ ರೈಲ್ವೆ ಕೋಚು ತಯಾರಿಕೆ, ಸೇತುವೆ ನಿರ್ಮಾಣ, ಆಯುಧಗಳ ಹಿಡಿಗಳ ತಯಾರಿಕೆಗೂ ಉಪಯುಕ್ತವಾಗಿದೆ. (ಎ.ಕೆ.ಎಸ್.)